news18-kannada Updated:August 31, 2020, 11:16 PM IST
ಸಂತ್ರಸ್ತ ಕುಟುಂಬ
ಬೆಳಗಾವಿ(ಆಗಸ್ಟ್. 31): ಕಳೆದ ವರ್ಷದ ಭೀಕರ ಜಲಪ್ರಳಕ್ಕೆ ಇಡೀ ಬೆಳಗಾವಿ ಜಿಲ್ಲೆ ತತ್ತರಿಸಿದೆ. ಒಂದು ವರ್ಷದಿಂದ ಇನ್ನೂ ಸಂತ್ರಸ್ತರು ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಮನೆ, ಬೆಳೆಯನ್ನು ಕಳೆದುಕೊಂಡು ಬೀದಿಯಲ್ಲಿಯೇ ಸಂತ್ರಸ್ತರು ಜೀವನ ನಡೆಸುತ್ತಿದ್ದಾರೆ. ಸಮೂದಾಯ ಭವನ, ಮಠಗಳೆ ಸದ್ಯ ಆಶ್ರಯವಾಗಿವೆ. ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಮಲಪ್ರಭ ನದಿ ಪ್ರವಾಕ್ಕೆ ಸಿಕ್ಕ ಸಂತ್ರಸ್ತರ ಬದುಕು ಇಂದಿಗೂ ಅಂತ್ರವಾಗಿದೆ. ತಾಲೂಕಿನ ಅವರಾದಿ ಗ್ರಾಮದಲ್ಲಿ ನೂರಾರು ಮನೆಗಳ ಬಿದ್ದಿದ್ದು, ಕೆಲವರಿಗೆ ಮಾತ್ರ ಪರಿಹಾರ ಸಿಕ್ಕಿದೆ. ಹೀಗಾಗಿ ಇಲ್ಲಿನ ಅನೇಕ ಕುಟುಂಬಗಳು ಇನ್ನೂ ಸರ್ಕಾರದ ಭರವಸೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ.
ಈ ಗ್ರಾಮದ ಮೈಲಾರಪ್ಪ ರೋಣದ್ ಎಂಬ ವ್ಯಕ್ತಿಯ ಮನೆಗೆ ಕಳೆದ ವರ್ಷದ ಪ್ರವಾಹದಲ್ಲಿ ಬಿದ್ದು ಹೋಗಿದೆ. ಈ ವರೆಗೆ ಸರ್ಕಾರದಿಂದ ಪರಿಹಾರ ಬಂದಿಲ್ಲ, ಹೀಗಾಗಿ ರೋಣದ್ ಕುಟುಂಬ ಗ್ರಾಮದ ಫಲಹಾರೇಶ್ವರ ಮಠದಲ್ಲಿಯೇ ಜೀವನ ನಡೆಸುತ್ತಿದೆ. ಮಠದ ದನ ಕೊಠಡಿಯ ಒಂದು ಪುಟ್ಟ ಮನೆಯಲ್ಲಿ ಒಂದು ವರ್ಷದ ಮಗುವಿನ ಜತೆಗೆ ಕುಟುಂಬ ಜೀವನ ನಡೆಸುತ್ತಿದೆ.
ಮೈಲಾರಪ್ಪ ರೋಣದ್ ಕುಟುಂಬಕ್ಕೆ ಆಶ್ರಯ ಇರದೇ ಇರುವುದನ್ನು ಗಮನಿಸಿದ ಇಲ್ಲಿನ ಶ್ರೀಗಳು ಸಹ ಆತನಿಗೆ ಇರಲು ಅನಕೂಲ ನೀಡಿದ್ದಾರೆ. ಆದರೇ ಸರ್ಕಾರದಿಂದ ಮಾತ್ರ ಈ ವರೆಗೆ ಯಾವುದೇ ಪರಿಹಾರ ಬಂದಿಲ್ಲ. ಒಂದು ವರ್ಷದಿಂದ ಕೇವಲ ಸರ್ಕಾರ ಭರವಸೆಯಲ್ಲಿಯ ಕಾಲ ಕಳೆಯುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ 58, 498 ಈ ಪೈಕಿ 10ಸಾವಿರಕ್ಕೂ ಹೆಚ್ಚು ಮನೆಗಳಿಗೆ ಇನ್ನೂ ಪರಿಹಾರದ ಹಣ ಸಿಕ್ಕಿಲ್ಲ. ಹೀಗಾಗಿ ಸಂತ್ರಸ್ತರು ಒಂದು ವರ್ಷದಿಂದ ಇಂದು, ನಾಳೆ ಎಂಬ ಆಶ್ವಾಸನೇಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಸರ್ಕಾರ ರಾಜೀವ ಗಾಂಧಿ ಗ್ರಾಮೀಣ ವಸತಿ ಯೋಜನೆ ಸೈಟ್ ಬಂದ್ ಮಾಡಿದ್ದು, ಯಾವೊಬ್ಬ ಸಂತ್ರಸ್ತನಿಗೆ ಪರಿಹಾರ ಸಿಗುತ್ತಿಲ್ಲ.
ಇದನ್ನೂ ಓದಿ :
ಕಲಬುರ್ಗಿಯಲ್ಲಿ ವ್ಯಕ್ತಿಯ ರುಂಡ ಕತ್ತರಿಸಿ ಬರ್ಬರ ಹತ್ಯೆ ; ಭೀಮಾ ತೀರದಲ್ಲಿ ಮತ್ತೆ ರಕ್ತಪಾತ
ಈ ಬಗ್ಗೆ ಬೆಳಗಾವಿ ರಾಮದುರ್ಗದಲ್ಲಿ ಕಳೆದ ಕೆಲದ ದಿನಗಳ ಹಿಂದೆ ಸಂತ್ರಸ್ತರು 3 ದಿನ ಹಗಲು, ರಾತ್ರಿ ಧರಣಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ರಮೇಶ್ ಜಾರಕಿಹೊಳಿ 15 ದಿನದಲ್ಲಿ ಸೈಟ್ ಓಪನ್ ಮಾಡಿಸಿ ಸಂತ್ರಸ್ತರಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಸಂತ್ರಸ್ತರು ಪ್ರತಿಭಟನೆಯನ್ನು ವಾಪಸ್ ಪಡೆದು ಸರ್ಕಾರದ ಭರವಸೆಯ ಕಡೆಗೆ ಕಾದು ನೋಡುತ್ತಿದ್ದಾರೆ.
ಇನ್ನೂ ಈ ವರ್ಷದ ಸಹ ಪ್ರವಾಹದಿಂದ ರಾಮದುರ್ಗ ತಾಲೂಕಿನಲ್ಲಿ ಹಾನಿಯಾಗಿದ್ದು, ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಬಗ್ಗೆ ಸಹ ಸರ್ಕಾರ ಸಮೀಕ್ಷೆ ಮಾಡಿ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
Published by:
G Hareeshkumar
First published:
August 31, 2020, 11:07 PM IST