HOME » NEWS » District » THIS DISTRICT WILL SEE HEAVY RAIN DUE TO THOK THE STORM IN KARNATAKA KVD

ತೌಖ್ತೇ ಚಂಡಮಾರುತದ ಎಫೆಕ್ಟ್: ಇಂದಿನಿಂದ ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಇಂದು ಸಂಜೆಯಿಂದ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮಾರುತಗಳು ಬಲ ಪಡೆದುಕೊಂಡು ಕರಾವಳಿಗೆ ಅಪ್ಪಳಿಸಲಿವೆ. ಇದರಿಂದ ನಾಳೆ ಹಾಗೂ ನಾಡಿದ್ದು ಭಾರೀ ಮಳೆಯಾಗುವ ಸಾಧ್ಯತೆಗಳಿವೆ.

news18-kannada
Updated:May 15, 2021, 7:04 AM IST
ತೌಖ್ತೇ ಚಂಡಮಾರುತದ ಎಫೆಕ್ಟ್: ಇಂದಿನಿಂದ ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
ಸಾಂದರ್ಭಿಕ ಚಿತ್ರ
  • Share this:
ಕಾರವಾರ: ರಾಜ್ಯದ ಕರಾವಳಿ ಭಾಗಗಳಿಗೆ ತೌಖ್ತೇ ಚಂಡಮಾರುತ ಅಬ್ಬರದ ಭೀತಿ ಎದುರಾಗಿದೆ. ಮೇ 14 ರಿಂದ ಮೇ 16 ರವರೆಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಮೇ 17 ಮತ್ತು 18 ರಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ರೆಡ್ ಅಲರ್ಟ್ ವೇಳೆ ಕರಾವಳಿಯಲ್ಲಿ ಭಾರೀ ಗಾಳಿ, ಸಿಡಿಲು-ಮಿಂಚು ಸಹಿತ ಅತ್ಯಧಿಕ ಮಳೆಯಾಗಲಿದೆ. ಮಳೆಯ ಪ್ರಮಾಣ 204.5 ಮಿಲಿ ಮೀಟರ್ಗೂ ಅಧಿಕ ಇರಲಿದೆ ಎಂಬ ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ. ಇಂದು ಸಂಜೆಯಿಂದ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮಾರುತಗಳು ಬಲಪಡೆದುಕೊಂಡು ಕರಾವಳಿಗೆ ಅಪ್ಪಳಿಸಲಿವೆ. ಇದರಿಂದ ನಾಳೆ ಹಾಗೂ ನಾಡಿದ್ದು ಭಾರೀ ಮಳೆಯಾಗುವ ಸಾಧ್ಯತೆಗಳಿವೆ.

ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದರೆ ತಕ್ಷಣ ಜಿಲ್ಲಾಡಳಿತಕ್ಕೆ ಸೂಚಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಚಿಸಿದೆ. ಈ ಸಂಬಂಧ ಕಟ್ರೋಲ್ ರೂಂ ತೆರೆದಿದ್ದು, ತುರ್ತು ಸಂದರ್ಭದಲ್ಲಿ ಜನ 1077 ಅಥವಾ 9483908000 ನಂಬರ್ ಗೆ ಸಂಪರ್ಕ ಮಾಡುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಮನವಿ ಮಾಡಿದ್ದಾರೆ. ಅಲ್ಲದೆ, ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲೇ ಇರಬೇಕು. ಸಾರ್ವಜನಿಕರು ಸಮುದ್ರ, ನದಿ ಹಾಗೂ ತಗ್ಗು ಪ್ರದೇಶಗಳಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಚಂಡಮಾರುತದ ಪ್ರಭಾವದಿಂದ ಕಾಸರಗೋಡು, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಚಾಮರಾಜನಗರ ಉತ್ತಮ ಮಳೆಯ ಮುನ್ಸೂಚನೆ ಇದೆ. ರಾಮನಗರ, ಬೆಂಗಳೂರು, ತುಮಕೂರು,ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಗದಗ, ಉಡುಪಿ, ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆಗಳಿವೆ. ಉಳಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ತೌಖ್ತೇ ಚಂಡಮಾರುತ ಕರಾವಳಿ ಕರ್ನಾಟಕವನ್ನು ಪ್ರವೇಶಿಸಲು ಕ್ಷಣಗಣನೆ ಆರಂಭವಾಗಿದೆ. ಇದರ ಮುನ್ಸೂಚನೆಯಂತೆ ಅರಬ್ಬೀ ಸಮುದ್ರದಲ್ಲಿ ಅಬ್ಬರ ಹೆಚ್ಚಾಗಿದ್ದು, ಮಂಗಳೂರು ಭಾಗದ ಹಲವು ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರವಾಗುತ್ತಿದೆ. ಸಮುದ್ರದ ಅಲೆಗಳು ಅಬ್ಬರಿಸುತ್ತಿದ್ದು,ದಡಕ್ಕೆ ಅಪ್ಪಳಿಸುತ್ತಿದೆ. ಮಂಗಳೂರಿನ ಸೋಮೇಶ್ವರ, ಉಳ್ಳಾಲ, ಪಣಂಬೂರು, ಸುರತ್ಕಲ್ ಕಡಲ ಕಿನಾರೆಗಳಲ್ಲಿ ಭಾರೀ ಕಡಲ್ಕೊರೆತ ವಾಗುತ್ತಿದ್ದು ಹಲವು ಮನೆಗಳು ಅಪಾಯದ ಅಂಚಿನಲ್ಲಿದೆ.

ಸೋಮೇಶ್ವರದ ಸಶ್ಮಾನದ ಆವರಣಗೋಡೆ ಕಡಲ್ಕೊರೆತದಿಂದಾಗಿ ಬಿರುಕುಬಿಟ್ಟಿದ್ದು,ಸಮುದ್ರದಲ್ಲಿ ಅಬ್ಬರ ಹೆಚ್ಚಾದರೆ ಸ್ಮಶಾನವೇ ಸಮುದ್ತಪಾಲಾಗುವ ಆತಂಕ ಎದುರಾಗಿದೆ. ಇನ್ನು ಸೋಮೇಶ್ವರ ದ ಮೋಹನ್ ಉಚ್ಚಿಲ ಮತ್ತು ಯೋಗಿಶ್ ಎಂಬುವವರ ಮನೆಯೂ ಅಪಾಯದ ಅಂಚಿನಲ್ಲಿದ್ದು ,ಚಂಡಮಾರುತದ ತೀವ್ರತೆಗೆ ಜಾಸ್ತಿಯಾದಲ್ಲಿ ಮನೆಗೆ ಹಾನಿಯಾಗುವ ಆತಂಕ ಎದುರಾಗಿದೆ. ಕೇವಲ ಮಂಗಳೂರು ಮಾತ್ರವಲ್ಲದೆ ಉಡುಪಿ,ಉತ್ತರ ಕನ್ನಡದ ಕೆಲ ಕಡಲ ಕಿನಾರೆಗಳಲ್ಲಿ ಸಮುದ್ರದ ಅಬ್ಬರದಿಂದಾಗಿ ಕಡಲ್ಕೊರೆತ ತೀವ್ರವಾಗುತ್ತಿದೆ. ಬೀಚ್ ಬಳಿಯ ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಈ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಮೀನುಗಾರಿಕಾ ಮತ್ತು ಒಳನಾಡು ಜಲಸಾರಿಗೆ ಇಲಾಖಾ ಸಚಿವ ಎಸ್ ಅಂಗಾರ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಸೂಚಿಸಿದ್ದಾರೆ.

ಸೋಮೇಶ್ವರ ಭಾಗಕ್ಕೆ ಮೀನುಗಾರಿಕಾ ಇಲಾಖಾ ಮತ್ತು ಬಂದರು ಇಲಾಖೆಯ ನಿರ್ದೇಶಕರು ಭೇಟಿ ನೀಡಿದ್ದು ವರದಿ ನೀಡಿದ್ದಾರೆ. ತೌಖ್ತೆ ಚಂಡಮಾರುತ ಮೇ 15 ಮತ್ತು ಮೇ 16 ರಂದು ರಾಜ್ಯದ ಕರಾವಳಿಗೆ ಅಪ್ಪಳಿಸಲಿದ್ದು,ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
Published by: Kavya V
First published: May 15, 2021, 7:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories