HOME » NEWS » District » THIS DESIGNER CONDOLENCES TO DEATH SP BALASUBRAHMANYAM THROUGH DESIGN A PORTRAIT WITH BLOOD HK

ತನ್ನ ರಕ್ತದಿಂದಲೇ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರ ರಚಿಸಿ ಶ್ರದ್ಧಾಂಜಲಿ ಸಲ್ಲಿಸಿದ ಚಿತ್ರಕಲಾವಿದ

ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನ ಹೊಂದಿದ ಸುದ್ದಿ ತಿಳಿದು, ಸಂಗಮೇಶ ಬಗಲಿ ಅವರು ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿ, ತಮ್ಮ 5 ಎಂಎಲ್ ರಕ್ತ ತೆಗೆಸಿಕೊಂಡು 1 ಗಂಟೆಯಲ್ಲೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರ ರಚಿಸಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ

news18-kannada
Updated:September 25, 2020, 11:49 PM IST
ತನ್ನ ರಕ್ತದಿಂದಲೇ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರ ರಚಿಸಿ ಶ್ರದ್ಧಾಂಜಲಿ ಸಲ್ಲಿಸಿದ ಚಿತ್ರಕಲಾವಿದ
ರಕ್ತದಲ್ಲಿ ಎಸ್​ಪಿಬಿ ಅವರ ಭಾವಚಿತ್ರ ರಚಿಸಿದ ಚಿತ್ರಕಲಾವಿದ
  • Share this:
ಬಾಗಲಕೋಟೆ(ಸೆಪ್ಟೆಂಬರ್. 25): ಭಾರತ ಕಂಡ ಸಂಗೀತ ಸಾರ್ವಭೌಮ, ಗಾನ ಗಾರುಡಿಗ, ಸಂಗೀತ ಸಾಮ್ರಾಟ್ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಕಲ್ಯಾಣ ನಗರದ ಚಿತ್ರಕಲಾ ಶಿಕ್ಷಕ ಕಲಾವಿದ ಡಾ. ಸಂಗಮೇಶ್ ಬಗಲಿ ಅವರು ತನ್ನ ರಕ್ತದಿಂದಲೇ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರ ರಚಿಸುವ ಮೂಲಕ ವಿಶಿಷ್ಠ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಗಮನ ಸೆಳೆದಿದ್ದಾರೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರಕ್ಕೆ ಚಿತ್ರ ಕಲಾಶಿಕ್ಷಕ ಕಲಾವಿದ ಡಾ. ಸಂಗಮೇಶ್ ಬಗಲಿ ಶ್ರದ್ಧಾಂಜಲಿ ಸಲ್ಲಿಸಿದರು. ಕಳೆದ 50 ವರ್ಷಗಳಿಂದ ಎಸ್ ಪಿ ಬಾಲಸುಬ್ರಹ್ಮಣ್ಯಂ 16 ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಸಂಗೀತ ಲೋಕದ ದಂತ ಕಥೆಯಾಗಿದ್ದರು. ಎಸ್.ಪಿ.ಬಿ ಅವರ ನಿಧನದಿಂದ ಸಂಗೀತ ಕ್ಷೇತ್ರ ಬಡವಾಗಿದೆ. ಅವರ ಅಗಲಿಕೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಶಿಕ್ಷಕ, ಚಿತ್ರ ಕಲಾವಿದ ಡಾ ಸಂಗಮೇಶ್ ಬಗಲಿ ತನ್ನ ರಕ್ತದಿಂದಲೇ ಬಾಲ ಸುಬ್ರಹ್ಮಣ್ಯಂ ಅವರು ಕೋಟ್ಯಂತರ ಅಭಿಮಾನಿಗಳಿಗೆ ಕೈಮುಗಿದ ಭಾವಚಿತ್ರ ರಚಿಸಿ, ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಅಭಿಮಾನ ಮೆರೆದಿದ್ದಾರೆ.

ತನ್ನ ರಕ್ತದಿಂದಲೇ ಭಾವಚಿತ್ರ ರಚಿಸಿ ಶ್ರದ್ಧಾಂಜಲಿ ಯಾಕೆ?

ಸಂಗಮೇಶ್ ಬಗಲಿ ಅವರು ಮೂಲತಃ ಚಿತ್ರಕಲಾ ಶಿಕ್ಷಕರು, ಸದ್ಯ ಜಮಖಂಡಿ ತಾಲೂಕಿನ ಹೊಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರ ಕಲಾಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 8 ವರ್ಷಗಳಿಂದ ವಾಟರ್ ಕಲರ್, ಆಯಿಲ್ ಕಲರ್,ಆಕ್ರಿಕಲ್, ತಮ್ಮ ರಕ್ತದಲ್ಲಿ ಕಲಾ ಚಿತ್ರ ರಚಿಸುವ ಹವ್ಯಾಸ ರೂಢಿಸಿಕೊಂಡು ಬಂದಿದ್ದಾರೆ. ಈಗಾಗಲೇ 319 ಈ ರೀತಿಯಾಗಿ ತನ್ನ ರಕ್ತದಿಂದಲೇ ಚಿತ್ರಬಿಡಿಸಿ ಸಾಧನೆ ಮಾಡಿದ್ದಾರೆ. ನಾಡಿನ ಹೆಸರಾಂತ ಸಾಹಿತಿಗಳು, ಕಲಾವಿದರು, ಸ್ವಾಮೀಜಿಗಳು ರಾಜಕಾರಣಿಗಳ ಭಾವಚಿತ್ರಗಳನ್ನು ತಮ್ಮ ರಕ್ತದಿಂದಲೇ ರಚಿಸಿದ್ದಾರೆ.

ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನ ಹೊಂದಿದ ಸುದ್ದಿ ತಿಳಿದು, ಸಂಗಮೇಶ ಬಗಲಿ ಅವರು ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿ, ತಮ್ಮ 5 ಎಂಎಲ್ ರಕ್ತ ತೆಗೆಸಿಕೊಂಡು 1 ಗಂಟೆಯಲ್ಲೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರ ರಚಿಸಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದು ಅವರ 320ನೇ ಚಿತ್ರವಾಗಿದೆ. ಈ ಹಿಂದೆ ನಡೆದಾಡುವ ದೇವರು ತುಮಕೂರಿನ ಸಿದ್ಧಗಂಗಾ ಮಠ ಡಾ, ಶಿವಕುಮಾರ್ ಸ್ವಾಮೀಜಿ ಲಿಂಗೈಕ್ಯರಾದಾಗಲೂ ಚಿತ್ರಕಲಾ ಶಿಕ್ಷಕ ಸಂಗಮೇಶ್ ಬಗಲಿ ಅವರು ತನ್ನ ರಕ್ತದಿಂದಲೇ ಶಿವುಕುಮಾರ ಸ್ವಾಮೀಜಿ ಅವರ ಭಾವಚಿತ್ರ ರಚಿಸಿ, ಶ್ರದ್ಧಾಂಜಲಿ ಸಲ್ಲಿಸಿದ್ದರು‌.

ತಮ್ಮ ರಕ್ತದಿಂದಲೇ ವಿಶಿಷ್ಟವಾಗಿ ಚಿತ್ರ ಕಲೆ ರಚಿಸಿದ್ದಕ್ಕೆ ಸಂಗಮೇಶ್ ಬಗಲಿ ಅವರಿಗೆ 2016ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, 2017ರಲ್ಲಿ ವರ್ಲ್ಡ್ ರೆಕಾರ್ಡ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ, ವರ್ಲ್ಡ್ ಸ್ಟೇಜ್ ವರ್ಲ್ಡ್ ರೆಕಾರ್ಡ್ ಯುನಿಯನ್ ದಿಂದ ಗೌರವಗಳು ದೊರೆತಿವೆ.

ಇದನ್ನೂ ಓದಿ:  ಹಿಮಾಲಯ ಕರಗಲ್ಲಾ ಅಂದುಕೊಂಡಿದ್ವಿ ಆದರೆ ಕರಗಿಯೇ ಬಿಟ್ಟಿತು ; ಎಸ್.ಪಿ.ಬಿ ನೆನೆಸಿಕೊಂಡು ಭಾವುಕರಾದ ಹಂಸಲೇಖ

ಇನ್ನು 2016ರಲ್ಲಿ  ಜಿಲ್ಲಾ ಮಟ್ಟದ ಮಾದರಿ ಶಿಕ್ಷಕ ಪ್ರಶಸ್ತಿ ಹೀಗೆ ಹಲವು ಪ್ರಶ್ನೆಗಳು ಚಿತ್ರಕಲಾವಿದ ಸಂಗಮೇಶ್ ಬಗಲಿ ಅವರಿಗೆ ಸಂದಿವೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಓರ್ವ ಕಲಾವಿದರು, ಕಲಾವಿದನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಓರ್ವ ಕಲಾವಿದನಾಗಿ ನನ್ನ ರಕ್ತದಿಂದಲೇ ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರ ರಚಿಸಿ, ಶ್ರದ್ಧಾಂಜಲಿ ಸಲ್ಲಿಸಿದ್ದೇನೆ, ಎಂದು ನ್ಯೂಸ್ 18 ಕನ್ನಡಕ್ಕೆ ಚಿತ್ರಕಲಾ ಶಿಕ್ಷಕ ಸಂಗಮೇಶ್ ಬಗಲಿ ತಿಳಿಸಿದರು.

ಒಟ್ಟಿನಲ್ಲಿ ದೇಶವ್ಯಾಪಿ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅಗಲಿಕೆಗೆ ಜನತೆ ಕಂಬನಿ ಮಿಡಿದು, ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ತಮ್ಮ ಕಂಠಸಿರಿಯಿಂದ ಕೋಟ್ಯಂತರ ಅಭಿಮಾನಿಗಳಿಗೆ ಇಂಪು ಕೊಡುತ್ತಿದ್ದ ಕಂಠಸಿರಿ, ನಿಲ್ಲಿಸಿದ್ದಾರೆ. ಎಸ್ ಪಿಬಿ,ಆದರೆ ಅವರ ಕಂಠಸಿರಿಯಿಂದ ಹೊರ ಹೊಮ್ಮಿದ ಹಾಡುಗಳು ಮಾತ್ರ ಎಂದೆಂದಿಗೂ ಅಜರಾಮರವಾಗಿವೆ.
Published by: G Hareeshkumar
First published: September 25, 2020, 9:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading