ವಿದ್ಯಾಕಾಶಿ ಧಾರವಾಡದಲ್ಲಿ ಗೋ ಕಳ್ಳರು: ಹಸು ಕಳ್ಳತನ ಮಾಡಿ ಫಾರ್ಚ್ಯೂನರ್ ‌ಕಾರಲ್ಲಿ‌ ಕದ್ದೊಯ್ದ ಖತರ್ನಾಕ್ ಕಳ್ಳರು!

ರಾತ್ರಿ ನೀರು ಕುಡಿಸಿ, ಮೇವು ಹಾಕಿ ಮಲಗಿದ್ದೇವು. ಬೆಳಿಗ್ಗೆ ಎದ್ದಾಗ ಕೊಟ್ಟಿಗೆಯಲ್ಲಿ ಹಸುವೇ ಕಾಣಲಿಲ್ಲ. ಕರು ಒಂದೇ ಕೂಗುತ್ತಿತ್ತು. ಮಧ್ಯಾಹ್ನದವರೆಗೂ ಹುಡುಕಿದರೂ, ಸಿಗಲಿಲ್ಲ. ನಂತರ ಸಿಸಿಟಿಯಲ್ಲಿ ಕಳ್ಳತನ ನಡೆದಿದ್ದು ಗೊತ್ತಾಗಿದೆ. ತಾಯಿ ಇಲ್ಲದೆ ಕರು ಹಸಿವಿನಿಂದ ಬಳಲುತ್ತಿದೆ. ಗೋ ಕಳ್ಳರನ್ನು ಶೀಘ್ರವೇ ಬಂಧಿಸಿ, ಹಸು ಹುಡುಕಿ ಕೊಡಬೇಕು ಎಂದು ಗೋವು ಮಾಲೀಕ ಗಿರೀಶ್ ಹೇಳಿದ್ದಾರೆ.

ಕಾರಿನಲ್ಲಿ ಹಸು ಕದ್ದೊಯ್ಯುತ್ತಿರುವ ಕಳ್ಳರು.

ಕಾರಿನಲ್ಲಿ ಹಸು ಕದ್ದೊಯ್ಯುತ್ತಿರುವ ಕಳ್ಳರು.

  • Share this:
ಧಾರವಾಡ: ಒಂದೆಡೆ ಸರ್ಕಾರಗಳು ಗೋ ಹತ್ಯೆ ನಿಷೇಧಿಸಿದೆ. ಆದಾಗ್ಯೂ ಕೂಡ ಗೋವುಗಳ ಕಳ್ಳತನ ನಡೆಯುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಇದಕ್ಕೆ ಸಾಕ್ಷಿಯಾಗಿ ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ಗೋವುಗಳನ್ನು ಕಳ್ಳತನ ಹೆಚ್ಚಾಗಿದೆ. ಇತ್ತೀಚೆಗೆ ಹಸುಗಳನ್ನು ಕಾರಿನಲ್ಲಿ ಕದ್ದೊಯ್ಯುವ  ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಧಾರವಾಡ ಕೆಲಗೇರಿ ರಸ್ತೆಯ ವೈದ್ಯ ಮಠ ಕಾಂಪ್ಲೆಕ್ಸ್ ಬಳಿ ಕಳೆದ ಎರಡು ದಿನಗಳ ಹಿಂದೆ ಕಾರಿನಲ್ಲಿ ಬಂದಿದ್ದ ಗೋವು ಕಳ್ಳರ ಗುಂಪು ಗೋವುಗಳು ಕಳ್ಳತನ ಮಾಡಿರೊ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಗೋ ಮಾಲೀಕರ ನಿದ್ದೆಗಡೆಸಿದೆ.

ಗೋವು ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಾರ್ಚ್ಯೂನರ್ ಕಾರಿನಲ್ಲಿ ಬಂದಿದ್ದ ನಾಲ್ವರು ಗೋ ಕಳ್ಳರ ಗುಂಪು, ಗೋವುಗಳನ್ನು ಎಳೆದು ಕಾರಿನಲ್ಲಿ ಹಾಕಿಕೊಂಡು ಹೋಗಿರುವ ದೃಶ್ಯಗಳು ಸೆರೆಯಾಗಿವೆ. ಮೊದಲು ಒಂದು ಗೋವು ಬೇರೆ ಕಡೆಯಿಂದ ಕಾರಿನಲ್ಲಿ ತಂದಿದ್ದ ಕಳ್ಳರ ಗ್ಯಾಂಗ್, ವೈದ್ಯ ಮಠ ಕಾಂಪ್ಲೆಕ್ಸ್ ಬಳಿ ಮತ್ತೆರಡು ಗೋವು ಕಳ್ಳತನ ಮಾಡಿದೆ. ಕಳ್ಳತನದ ದೃಶ್ಯಗಳು ಪಕ್ಕದ ಕಾರ್  ಸರ್ವಿಸಿಂಗ್ ಸೆಂಟರ್ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಗೋವು ಮಾಲೀಕರು ಮೊದಲು ತಮ್ಮ ಗೋವುಗಳನ್ನು ಹುಡುಕಿದ್ದಾರೆ. ಬಳಿಕ ಗೋವು ಮಾಲೀಕರ‌ ಮನೆ ‌ಪಕ್ಕದಲ್ಲಿನ ಕಾರ್ ಸರ್ವಿಸ್ ಸೆಂಟರ್ ಸಿಸಿಟಿವಿ ವೀಕ್ಷಣೆ ಮಾಡಿದಾಗ ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರ ದಾಖಲಾಗಿದೆ. ಕಳೆದ ಎರಡು ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿ ಗೋವು ಕಳ್ಳತನ ಪ್ರಕರಣಗಳು ಹೆಚ್ಚಿವೆ. ಇದರಿಂದ ರೈತರಿಗೆ ಹಾಗೂ ಮಾಲೀಕರಿಗೆ ತಮ್ಮ ಗೋವುಗಳನ್ನು ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲಿಗೆ ಪರಣಮಿಸಿದೆ.

ಇದನ್ನು ಓದಿ: ಸದನದಲ್ಲಿ ಭುಗಿಲೆದ್ದ ಗದ್ದಲ; ಬ್ಲೂ ಬಾಯ್ಸ್ ಎಂದು ಘೋಷಣೆ ಕೂಗಿದ ಕೈ ಸದಸ್ಯರು; ನಾಳೆಗೆ ಸದನ ಮುಂದೂಡಿಕೆ

ಗೋವು ಕಳ್ಳರ ಹಾವಳಿಗೆ ಜಾನುವಾರಗಳ ಮಾಲೀಕರು ಅಕ್ಷರಶಃ ನಲುಗಿದ್ದಾರೆ. ಗೋ ಕಳ್ಳತನ ಪ್ರಕರಣ ಗಮನಿಸಿದರೆ ಧಾರವಾಡದಲ್ಲಿ ಖತರ್ನಾಕ್ ಗ್ಯಾಂಗ್ ಬೀಡುಬಿಟ್ಟಿರುವ ಬಗ್ಗೆ ಅನುಮಾನವಿದೆ. ಈ ಬಗ್ಗೆ ತನಿಖೆಯಾಗಬೇಕಿದೆ. ಸದ್ಯ ಧಾರವಾಡ ಗೋ ಕಳ್ಳತನದಿಂದ ರಾಜ್ಯದ ಗಮನ ಸೆಳೆದಿದೆ. ಹೀಗೆ ಕಳ್ಳತನ ಮಾಡಿದ ಗೋ ಸಾಗಾಟ ನಡೆಯುವುದು ಎಲ್ಲಿಗೆ? ಇದರ ಹಿಂದಿನ ರೂವಾರಿಗಳು ಯಾರು? ಎಂಬುವ ಬಗ್ಗೆ ಪೊಲೀಸ್ ತನಿಖೆಯಿಂ ಬಹಿರಂಗಪಡಿಸಬೇಕಿದೆ. ಗೋವು ಕಳ್ಳತನ ಮಾಡಿದ ಕಿರಾತಕರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಇಲ್ಲವಾದಲ್ಲಿ ಭಜರಂಗ ದಳದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಭಜರಂಗ ದಳದ ಕಾರ್ಯಕರ್ತ ಭೀಮಭಟ್ ಜೋಶಿ ಎಚ್ಚರಿಕೆ‌ ನೀಡಿದ್ದಾರೆ.

ರಾತ್ರಿ ನೀರು ಕುಡಿಸಿ, ಮೇವು ಹಾಕಿ ಮಲಗಿದ್ದೇವು. ಬೆಳಿಗ್ಗೆ ಎದ್ದಾಗ ಕೊಟ್ಟಿಗೆಯಲ್ಲಿ ಹಸುವೇ ಕಾಣಲಿಲ್ಲ. ಕರು ಒಂದೇ ಕೂಗುತ್ತಿತ್ತು. ಮಧ್ಯಾಹ್ನದವರೆಗೂ ಹುಡುಕಿದರೂ, ಸಿಗಲಿಲ್ಲ. ನಂತರ ಸಿಸಿಟಿಯಲ್ಲಿ ಕಳ್ಳತನ ನಡೆದಿದ್ದು ಗೊತ್ತಾಗಿದೆ. ತಾಯಿ ಇಲ್ಲದೆ ಕರು ಹಸಿವಿನಿಂದ ಬಳಲುತ್ತಿದೆ. ಗೋ ಕಳ್ಳರನ್ನು ಶೀಘ್ರವೇ ಬಂಧಿಸಿ, ಹಸು ಹುಡುಕಿ ಕೊಡಬೇಕು ಎಂದು ಗೋವು ಮಾಲೀಕ ಗಿರೀಶ್ ಹೇಳಿದ್ದಾರೆ.

  • ವರದಿ: ಮಂಜುನಾಥ ಯಡಳ್ಳಿ

Published by:HR Ramesh
First published: