HOME » NEWS » District » THIEVES WHO STOLE POTS AND MACHINES IN KOLAR KVD

ಕುಂಬಾರನಿಗೆ ವರುಷ ಕಿಡಿಗೇಡಿಗೆ ನಿಮಿಷ.. ಮಡಿಕೆಗಳ ಧ್ವಂಸದಿಂದ ಕಣ್ಣೀರಿಡುತ್ತಿರುವ ಬಡ ಕುಟುಂಬ!

ನಾವು ಹಗಲು ಇರುಳು ಕಷ್ಟ ಪಟ್ಟು ಮಡಿಕೆ, ದೀಪ, ಒಲೆ ಮುಂತಾದ ವಸ್ತುಗಳನ್ನು ತಯಾರು ಮಾಡುತ್ತಿದ್ದೆವು, ಆದರೆ ಯಾರೋ ಕಿಡಿಗೇಡಿಗಳು ನಮ್ಮ ಗೋದಾಮಿಗೆ ನುಗ್ಗಿ ಕಳ್ಳತನ ಮಾಡಿದ್ದಾರೆ ಅಳಲು ತೋಡಿಕೊಂಡಿದ್ದಾರೆ.


Updated:June 15, 2021, 6:20 PM IST
ಕುಂಬಾರನಿಗೆ ವರುಷ ಕಿಡಿಗೇಡಿಗೆ ನಿಮಿಷ.. ಮಡಿಕೆಗಳ ಧ್ವಂಸದಿಂದ ಕಣ್ಣೀರಿಡುತ್ತಿರುವ ಬಡ ಕುಟುಂಬ!
ಅಜ್ಜಿಯ ಅಳಲು
  • Share this:
ಕೋಲಾರ: ನರಸಾಪುರ ಗ್ರಾಮದಲ್ಲಿನ ಮುನಿರಾಮಯ್ಯ ಅವರ ಕುಟುಂಬದವರು ಸುಮಾರು 35-40 ವರ್ಷಗಳಿಂದ ಕುಂಬಾರ ವೃತ್ತಿಯನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈಗ ಬದುಕಿನ ಆಧಾರವಾಗಿ ಯಂತ್ರವೇ ಕಳ್ಳರಪಾಲಾಗಿದೆ. ಗೋದಾಮಿನಲ್ಲಿ ಸಿದ್ಧಪಡಿಸಿ ಇಟ್ಟಿದ್ದ ಮಣ್ಣಿನ ವಸ್ತುಗಳಾದ ಒಲೆ, ಮಡಿಕೆ, ಮಣ್ಣಿನ ದೀಪಗಳು, ಪಾತ್ರಗಳು ಸೇರಿದಂತೆ ವಸ್ತುಗಳನ್ನು ತಯಾರು ಮಾಡುವ ಯಂತ್ರೋಪಕರಣಗಳನ್ನು ಕದ್ದಿದ್ದಾರೆ. ಗೋದಾಮಿನ ಕಿಟಕಿ ಒಡೆದು ಒಳಗೆ ನುಗ್ಗಿದ ಖದೀಮರು ಮಣ್ಣಿನ ವಸ್ತುಗಳನ್ನು ನಾಶ ಮಾಡಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಮಡಿಕೆಗಳನ್ನು ಸುಡುವ ಒಲೆಯ ಶೆಡ್ಡನ್ನು ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಸುಟ್ಟಿದ್ದಾರೆ.

ಮುನಿರಾಮಯ್ಯ ಪತ್ನಿ ಪಾರ್ವತಮ್ಮ ಮಾತನಾಡಿದ, ನಾವು ಹಗಲು ಇರುಳು ಕಷ್ಟ ಪಟ್ಟು ಮಡಿಕೆ, ದೀಪ, ಒಲೆ ಮುಂತಾದ ವಸ್ತುಗಳನ್ನು ತಯಾರು ಮಾಡುತ್ತಿದ್ದೆವು, ಆದರೆ ಯಾರೋ ಕಿಡಿಗೇಡಿಗಳು ನಮ್ಮ ಗೋದಾಮಿಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಇದರ ಬಗ್ಗೆ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ. ಈ ದೂರಿನ ಅನ್ವಯ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚಲು ವೇಮಗಲ್ ಪೊಲೀಸರು ತಡಮಾಡುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ನಡೆದು ಸುಮಾರು 15 ದಿನಗಳಾದರು ಪೊಲೀಸ್ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸರಿಯಾಗಿ ತನಿಖೆ ನಡೆಸುತ್ತಿಲ್ಲ. ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಮುನಿರಾಮಯ್ಯ ಹಾಗೂ ಪಾರ್ವತಮ್ಮ ಇವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಟಯರ್ ಬ್ಲಾಸ್ಟ್: ಪೈಲಟ್ ಚಾಣಾಕ್ಷತನದಿಂದ ತಪ್ಪಿದ ಅನಾಹುತ!

ನರಸಾಪುರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಕುಂಬಾರ ವೃತ್ತಿಯನ್ನು ಮಾಡಿಕೊಂಡೆ ಜೀವನ ಸಾಗಿಸುತ್ತಿರುವ ಈ ಕುಟುಂಬ ಈಗ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಕಿಡಿಗೇಡಿಗಳನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಮಣ್ಣಿನ ವಸ್ತುಗಳನ್ನ ಇಡುವ ಗೋದಾಮಿನ ಮೇಲ್ಛಾವಣಿ ಬೀಳುವ ಹಂತದಲ್ಲಿದ್ದು, ರಾಜ್ಯ ಸರ್ಕಾರ ನಮ್ಮ‌ ಸಮಸ್ಯೆಗೆ ಸ್ಪಂದಿಸಿ ಸಂಬಂದ ಪಟ್ಟ ಅಧಿಕಾರಿಗಳಿಂದ ನೆರವು ನೀಡಬೇಕೆಂದು ಮುನಿರಾಮಯ್ಯ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಲಾಕ್ ಡೌನ್ ಹಿನ್ನಲೆ ಈಗಾಗಲೇ ಎಲ್ಲಾ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಮಣ್ಣಿ‌ನ ವಸ್ತುಗಳನ್ನ ತಯಾರಿಸಿ ಮಾರಾಟ ಮಾಡುತ್ತಿದ್ದ ಕುಂಬಾರರ ಜೀವನಕ್ಕು ದೊಡ್ಡ ಹೊಡೆತ ಬಿದ್ದಿದೆ, ಇಂತಹ ವೇಳೆಯಲ್ಲು ಮಣ್ಣಿನ ವಸ್ತುಗಳ ತಯಾರಿಕಾ ಸಣ್ಣ ಕೈಗಾರಿಕೆಗೆ‌ ನುಗ್ಗಿದ ಖದೀಮರು. ಸಾವಿರಾರು ರೂಪಾಯಿ ಮೌಲ್ಯದ ಮಣ್ಣಿನ ವಸ್ತುಗಳನ್ನ ಕದ್ದು, ಜೊತೆಗೆ ವಸ್ತುಗಳನ್ನು ತಯಾರಿಸಲು ಬಳಸುವ ಯಂತ್ರಗಳನ್ನ ನಾಶ ಪಡಿಸಿ ವಿಕೃತಿ ಮೆರೆದಿದ್ದಾರೆ. ಪೊಲೀಸರು ಇದನ್ನ ಸಣ್ಣ ಪ್ರಕರಣವೆಂದು ಭಾವಿಸಿ ನಿರ್ಲಕ್ಷ್ಯ ವಹಿಸದೆ, ಕುಂಬಾರರ ಜೀವನಕ್ಕೆ ಆಧಾರವಾಗಿರುವ ಮಣ್ಣಿನ ಕೈಗಾರಿಕೆ ನಾಶ ಪಡಿಸಿದವರನ್ನ ಆದಷ್ಟು ಬೇಗ ಬಂದಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್​​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 15, 2021, 6:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories