• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಸೋಂಕಿತನ ಮನೆಗೆ ಕನ್ನ ಹಾಕಿದ ದುಷ್ಕರ್ಮಿಗಳು : ಹಿಂಡಲಗಾ ಜೈಲಿಗೂ ಕಾಲಿಟ್ಟ ಮಹಾಮಾರಿ ಕೊರೋನಾ

ಸೋಂಕಿತನ ಮನೆಗೆ ಕನ್ನ ಹಾಕಿದ ದುಷ್ಕರ್ಮಿಗಳು : ಹಿಂಡಲಗಾ ಜೈಲಿಗೂ ಕಾಲಿಟ್ಟ ಮಹಾಮಾರಿ ಕೊರೋನಾ

ನೇಸರಗಿ ಗ್ರಾಮ

ನೇಸರಗಿ ಗ್ರಾಮ

ಬೆಳಗಾವಿ ಹಿಂಡಲಗಾ ಜೈಲಿಗೂ ಮಹಾಮಾರಿ ಕೊರೋನಾ ವೈರಸ್ ಕಾಲಿಟ್ಟಿದೆ. ಜೈಲಿನ 11 ಜನ ಕೈದಿಗಳಿಗೆ ಸೋಂಕು ಇರುವುದು ದೃಢ ಪಟ್ಟಿದ್ದು, ಸಿಬ್ಬಂಧಿ ಹಾಗೂ ಇನ್ನುಳಿದ ಕೈದಿಗಳ ಆತಂಕಕ್ಕೆ ಕಾರಣವಾಗಿದೆ

  • Share this:

ಬೆಳಗಾವಿ(ಜುಲೈ.16): ಓರ್ವ ವ್ಯಕ್ತಿಗೆ ಕೊರೋನಾ ಸೋಂಕು ದೃಢ ಪಟ್ಟರೆ ಮನೆಯ ಸುತ್ತಮುತ್ತಲ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತದೆ. ಮನೆಯ ಬಳಿ ಯಾರೊಬ್ಬರು ಹೋಗಲು ಭಯ ಪಡೆದು ಸಹಜ. ಆದರೇ ಸೋಂಕಿತನ ಮನೆಯನ್ನು ಕಳ್ಳತನ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.


ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದಲ್ಲಿ ಸೋಂಕಿನ ಮನೆಯನ್ನು ಕಳ್ಳತನ ಮಾಡಲಾಗಿದೆ. ಗ್ರಾಮದ 55 ವರ್ಷದ ವ್ಯಕ್ತಿಗೆ ಕಳೆದ 4 ದಿನಗಳ ಹಿಂದೆ ಸೋಂಕು ಇರುವುದು ದೃಢಪಟ್ಟಿತ್ತು. ಸೋಂಕಿತನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಕುಟುಂಬದ ಇಬ್ಬರು ಸದಸ್ಯರನ್ನು ಬೈಲಹೊಂಗಲದ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿತ್ತು.


ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಸೋಂಕಿತನ ಮನೆಗೆ ಬೀಗ ಹಾಕಿ ಮನೆಯ 100 ಮೀಟರ್ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಿದ್ದರು. ಆದರೆ, ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಸೋಂಕಿನ ಮನೆಯ ಮೇಲಿನ ಹೆಂಚು ಒಡೆದು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯ ನೇಸರಗಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನೂ ಬೈಲಹೊಂಗದಲ್ಲಿ ಕ್ವಾರಂಟೈನ್ ನಲ್ಲಿ ಇರುವ ಕುಟುಂಬದ ಸದಸ್ಯರು ಮನೆಗೆ ಭೇಟಿ ನೀಡಿದ ಬಳಿಕವೇ ಏನೆಲ್ಲ ಕಳ್ಳತನವಾಗಿದೆ ಎಂಬುದು ಖಚಿತವಾಗಿ ಗೊತ್ತಾಗಲಿದೆ.


ಬೆಳಗಾವಿ ಹಿಂಡಲಗಾ ಜೈಲಿಗೆ ಕಾಲಿಟ್ಟ ಮಹಾಮಾರಿ ಕೊರೊನಾ..!


ಬೆಳಗಾವಿ ಹಿಂಡಲಗಾ ಜೈಲಿಗೂ ಮಹಾಮಾರಿ ಕೊರೋನಾ ವೈರಸ್ ಕಾಲಿಟ್ಟಿದೆ. ಜೈಲಿನ 11 ಜನ ಕೈದಿಗಳಿಗೆ ಸೋಂಕು ಇರುವುದು ದೃಢ ಪಟ್ಟಿದ್ದು, ಸಿಬ್ಬಂಧಿ ಹಾಗೂ ಇನ್ನುಳಿದ ಕೈದಿಗಳ ಆತಂಕಕ್ಕೆ ಕಾರಣವಾಗಿದೆ. ಜೈಲಿನಲ್ಲಿ ಇರೋ ಕುಖ್ಯಾತರಿಗೆ ಇದೀಗ ನಡುಕು ಹುಟ್ಟಿಸಿದೆ.


ಇದನ್ನೂ ಓದಿ : ನಿರ್ಬಂಧಿತ ಅಕೇಶಿಯಾ ಗಿಡ ನೆಡಲು ಮುಂದಾದ ಅರಣ್ಯ ಇಲಾಖೆ ; ಉತ್ತರ ಕನ್ನಡ ಜಿಲ್ಲೆಯ ಜನರ ಆಕ್ರೋಶ


ಜೈಲಿನಲ್ಲಿ ಕ್ವಾರಂಟೈನ್ ವಾರ್ಡ್ ಎಂದು ಪ್ರತ್ಯೇಕ ವಾರ್ಡ್ ಮಾಡಲಾಗಿದ್ದು, ಇಲ್ಲಿಂದ ಮುಖ್ಯ ಜೈಲಿಗೆ ಹೋದ ಕೈದಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ಆತಂಕವನ್ನು ಸೃಷ್ಠಿಸಿದೆ. ಜೈಲಿನಲ್ಲಿ 830ಕ್ಕೂ ಹೆಚ್ಚು ಕೈದಿಗಳು ಸದ್ಯ ಇದ್ದಾರೆ.


ಇನ್ನೂ ಜೈಲಿನಲ್ಲಿ ಅನೇಕ ಕುಖ್ಯಾತ ಕೈದಿಗಳು ಸಹ ಇದ್ದು ಅವರಿಗೂ ಆತಂಕ ಎದುರಾಗಿದೆ. ಪ್ರಮುಖವಾಗಿ ಉಮೇಶ್ ರೆಡ್ಡಿ, ಬನ್ನಂಜೆ ರಾಜ, ರವಿ ಪೂಜಾರಿ ಸಹಚರ ದಿನೇಶ ಶೆಟ್ಟಿ, ದಂಡುಪಾಳ್ಯ ಗ್ಯಾಂಗ್ ಗೆ ಇದೀಗ ಕೊರೋನಾ ಭೀತಿ ಎದುರಾಗಿದೆ.

Published by:G Hareeshkumar
First published: