ಜ್ಯುವೆಲರಿ ಶಾಪ್​ಗೆ ವಿದೇಶಿಗರ ಸೋಗಿನಲ್ಲಿ ಬಂದು ಸಾವಿರಾರು ರೂಪಾಯಿ ಹಣ ಎಗರಿಸಿದ ಚಾಲಾಕಿ ಕಳ್ಳರು

ಅಂಗಡಿ ಮಾಲೀಕರು ಈ ನೋಟು ನಮ್ಮಲ್ಲಿ ನಡೆಯಲ್ಲ, ಭಾರತೀಯ ನೋಟು ಕೊಡಿ ಎಂದಿದ್ದಕ್ಕೆ, ನಮ್ಮಲ್ಲಿ ಭಾರತೀಯ ನೋಟು ಇಲ್ಲ, ಅದು ಹೇಗಿರುತ್ತೆ ತೋರಿಸಿ ಎಂದು ಪುಸಲಾಯಿಸಿದ್ದಾರೆ. ಆಗ ಅಂಗಡಿ ಮಾಲೀಕ, ಮೊದಲು ತನ್ನ ಬಳಿಯಿರುವ 2,000 ನೋಟು ತೋರಿಸಿದ್ದಾರೆ.

news18-kannada
Updated:July 16, 2020, 4:06 PM IST
ಜ್ಯುವೆಲರಿ ಶಾಪ್​ಗೆ ವಿದೇಶಿಗರ ಸೋಗಿನಲ್ಲಿ ಬಂದು ಸಾವಿರಾರು ರೂಪಾಯಿ ಹಣ ಎಗರಿಸಿದ ಚಾಲಾಕಿ ಕಳ್ಳರು
ಪ್ರಾತಿನಿಧಿಕ ಚಿತ್ರ
  • Share this:
ಗದಗ(ಜು.16): ಕೊರೋನಾ ಸಂಕಷ್ಟದ ಸಮಯದಲ್ಲೇ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಚಾಲಾಕಿ ಕಳ್ಳರು ಜ್ಯುವೆಲರಿ ಶಾಪ್​ನಲ್ಲಿ ಸಾವಿರಾರು ರೂಪಾಯಿ ಹಣ ಎಗರಿಸಿಕೊಂಡು ಹೋಗಿರುವ ಘಟನೆ ನಡೆದಿದೆ.

ಹೌದು.. ಬಂಗಾರದ ಮೂಗುತಿ ಖರೀದಿಗಾಗಿ ವಿದೇಶಿಗರ ಸೋಗಿನಲ್ಲಿ ಬಂದು ಬರೋಬ್ಬರಿ 18 ಸಾವಿರ ರೂಪಾಯಿ ಎಗರಿಸಿ ಎಸ್ಕೇಪ್  ಆಗಿರುವ ಘಟನೆ ರೋಣ ಪಟ್ಟಣದ ಶ್ರೀಲಕ್ಷ್ಮೀ ವೆಂಕಟೇಶ್ವರ ಜ್ಯುವೆಲರಿ ಅಂಗಡಿಯಲ್ಲಿ ನಡೆದಿದೆ. ಜ್ಯುವೆಲರಿ ಶಾಪ್​ನಲ್ಲಿ ಯುವಕ, ಯುವತಿಯರಿಬ್ಬರು ವಿದೇಶಿಗರ ಸೋಗಿನಲ್ಲಿ ಬಂದು ಇಂಗ್ಲೀಷ್ ಮಾತನಾಡಿದ್ದಾರೆ. ಗೋಲ್ಡ್ ಮೂಗುತಿ ಬೇಕೆಂದು ಹೇಳಿ ಮೂಗುತಿ ಖರೀದಿಸಿ ವಿದೇಶಿ ಕರೆನ್ಸಿ ನೀಡಿದ್ದಾರೆ.

ಅಂಗಡಿ ಮಾಲೀಕರು ಈ ನೋಟು ನಮ್ಮಲ್ಲಿ ನಡೆಯಲ್ಲ, ಭಾರತೀಯ ನೋಟು ಕೊಡಿ ಎಂದಿದ್ದಕ್ಕೆ, ನಮ್ಮಲ್ಲಿ ಭಾರತೀಯ ನೋಟು ಇಲ್ಲ, ಅದು ಹೇಗಿರುತ್ತೆ ತೋರಿಸಿ ಎಂದು ಪುಸಲಾಯಿಸಿದ್ದಾರೆ. ಆಗ ಅಂಗಡಿ ಮಾಲೀಕ, ಮೊದಲು ತನ್ನ ಬಳಿಯಿರುವ 2,000 ನೋಟು ತೋರಿಸಿದ್ದಾರೆ. ನಂತರ ಬೇರೆ ಯಾವೆಲ್ಲಾ ಇವೆ ತೋರಿಸಿ ಅಂದಿದಕ್ಕೆ, 10 ರೂಪಾಯಿನಿಂದ ಹಿಡಿದು 2 ಸಾವಿರ ರೂಪಾಯಿವರೆಗೆ ಕಂತೆ ಕಂತೆ ನೋಟು ತೋರಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್​ ಕೊಡಲೇಬೇಕು; ಸಚಿವ ಆರ್.ಅಶೋಕ್

ಆಗ ಈ ಕಳ್ಳರು ಆ ನೋಟಿನ ಕಂತೆಯನ್ನು ಹಿಡಿದು, ನಂಬರ್, ಭಾಷೆ, ಚಿತ್ರ, ಚಿಹ್ನೆ ಎಲ್ಲವನ್ನು ನೋಡುವ ರೀತಿ ನಟಿಸಿ, ಅಲ್ಲಿದ್ದ ಯುವತಿ ಮಾಲೀಕನ ಗಮನ ಬೇರೆಡೆ ಸೆಳೆದಾಗ, ಯುವಕ 18 ಸಾವಿರ ರೂಪಾಯಿ ಜೇಬಿಗೆ ಇಳಿಸಿಕೊಂಡಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ನಂತರ ಬ್ಯಾಂಕ್ ಗೆ ಹೋಗಿ ಕರೆನ್ಸಿ ಬದಲಿಸಿಕೊಂಡು ಬರುವುದಾಗಿ ಹೇಳಿ, ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಅರ್ಧಗಂಟೆ ನಂತರ ಬೇರೆಯವರಿಗೆ ಮಾಲೀಕರು ಹಣ ಕೊಡಬೇಕಾದ ವೇಳೆ ಎಣಿಸಿಕೊಂಡಾಗ ಬರೋಬ್ಬರಿ 18 ಸಾವಿರ ರೂಪಾಯಿ ಇಲ್ಲವಾಗಿದೆ. ಸಿಸಿ ಕ್ಯಾಮರಾ ಚೆಕ್ ಮಾಡಿದಾಗ ವಿದೇಶಿಗರ ಅಸಲಿಯತ್ತು ಗೊತ್ತಾಗಿದೆ.
ನಮ್ಮ ದೇಶದ ನೋಟನ್ನು ತೋರಿಸಬೇಕು ಎಂಬ ಧಾವಂತದಲ್ಲಿ ಮಾಲೀಕ ಮೋಸಕ್ಕೀಡಾಗಿರುವುದು ವಿಪರ್ಯಾಸ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by: Latha CG
First published: July 16, 2020, 4:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading