CM Basavaraja Bommai: ಜನರ ಸುತ್ತಲೂ ಅಭಿವೃದ್ಧಿ ಆಗಬೇಕು, ಅಭಿವೃದ್ಧಿ ಸುತ್ತಲೂ ಜನರು ಓಡಾಡಬೇಕು; ಸಿಎಂ ಬಸವರಾಜ ಬೊಮ್ಮಾಯಿ

ರೈತರ ಮಕ್ಕಳಿಗೆ ಮೊದಲ ಬಾರಿಗೆ ಸ್ಕಾಲರ್​ ಶಿಪ್ ಶುರು ಮಾಡಿಸಿದ್ದೇವೆ. ಯಾವ ರಾಜ್ಯದಲ್ಲೂ ಈ ಸೇವೆ ಇಲ್ಲ. ಸಾವಿರಾರು ರೈತರ ಮಕ್ಕಳು ಇವತ್ತು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರೆಲ್ಲರಿಗೂ ಸೇವೆ ನೀಡಲಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಬಸವರಾಜ ಬೊಮ್ಮಾಯಿ.

ಬಸವರಾಜ ಬೊಮ್ಮಾಯಿ.

  • Share this:
    ಚಿಕ್ಕೋಡಿ: ಸಂಕೇಶ್ವರಕ್ಕೆ (Sankeshwara) ಬರಲು ಬಹಳ ಸಂತೋಷತ್ತದೆ. ಇಲ್ಲಿ ನಂಬಿಕೆಗೆ ಅರ್ಹ ಇರುವ ಜನರು, ಕಠಿಣ ಪರಿಶ್ರಮ‌ ಹೊಂದಿರುವ ಜನರು ಇದ್ದಾರೆ. ರಾಜಕಾರಣದಲ್ಲಿ ‌ ಬಹಳಷ್ಟು ಏಳು- ಬೀಳಗನ್ನು ನೋಡಿದ್ದೇವೆ. ಅಧಿಕಾರ ಶಾಶ್ವತ ಅಲ್ಲ ಅಂದುಕೊಂಡು ಪ್ರತಿದಿನ ‌ಕೆಲಸ ಮಾಡುತ್ತೇವೆ. ಜನ ಎಲ್ಲಿಯವರೆಗೆ ಪ್ರೀತಿ ಮಾಡುತ್ತಾರೆ ಅಲ್ಲಿಯವರೆಗೆ ನಾವು ಅಧಿಕಾರದಲ್ಲಿ ಇರ್ತೇವೆ. ಜನರ ಹೃದಯದಲ್ಲಿ ನಾವೀರಬೇಕು. ಯಾರು ಜನರ ರಾಜಕಾರಣ ಮಾಡ್ತಾರೆ ಅವರು‌ ಪ್ರಸ್ತುತವಾಗಿರುತ್ತಾರೆ. ಯಾರೂ ಅಧಿಕಾರ ರಾಜಕಾರಣ ಮಾಡ್ತಾರೆ ಅವರು ಪ್ರಸ್ತುತವಾಗಿರಲು ಸಾಧ್ಯವೇ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಹೇಳಿದರು.

    ಸಂಕೇಶ್ವರ ಪಟ್ಟಣದ ನೇಸರಿ ಗಾರ್ಡನ್ ಹಾಲ್​ನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಸರ್ಕಾರ ನಡೆಯುತ್ತಿದೆ. ಯಡಿಯೂರಪ್ಪ ಯೋಜನೆಗಳಿಗೆ ಅನುಮೋದನೆ ಕೊಟ್ಟು ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ನಾನು ರಿಬನ್ ಕಟ್ ಮಾಡಿದ್ದೇನೆ. ನಮಗೆ ಉಪಕಾರ ಮಾಡಿದವರನ್ನು ಸ್ಮರಿಸಬೇಕಿದೆ. ಜನರ ಸುತ್ತಲೂ ಅಭಿವೃದ್ಧಿ ಆಗಬೇಕು. ಅಭಿವೃದ್ಧಿ ಸುತ್ತಲೂ ಜನರು ಓಡಾಡಬೇಕು. ತಾಲೂಕು, ಜಿಲ್ಲಾ ಕಚೇರಿ ಓಡಾಡೊದನ್ನ ತಪ್ಪಿಸಬೇಕು‌. ಅದನ್ನು ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಕೊಡಲಾಗುತ್ತಿದೆ. ಜನರ ಮನೆಗೆ ಆಡಳಿತ ತರುವ ಕೆಲಸ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಾನು ಅಧಿಕಾರ ತೆಗೆದುಕೊಂಡ ಕೆಲವೆ ಗಂಟೆಗಳಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಘೋಷಣೆ ಮಾಡಿದ್ದೇನೆ. ಇದುವರೆಗೆ ಯಾವ ರಾಜ್ಯನೂ ಮಾಡದ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡಿದೆ ಎಂದರು.



    ಸಂಕೇಶ್ವರ ಪಟ್ಟಣಕ್ಕೆ ಬರಲು ಖುಷಿಯಾಗುತ್ತದೆ. ಇಲ್ಲಿಯ ಸಕ್ಕರೆ ನಾಡಿನ ಜನ ಅತ್ಯಂತ ಸಕ್ರೆ ಇರುವ ಜ‌ನ. ನಮ್ಮ ತಂದೆ ಹಾಗೂ ವಿಶ್ವನಾಥ ಕತ್ತಿ ಅವರಿಗೆ ಅತ್ಯಂತ ಪ್ರೀತಿಯ ಸಂಬಂಧ ಇದೆ. ವಿಶ್ವನಾಥ ಕತ್ತಿಯ ಸುಪುತ್ರ ಉಮೇಶ್ ಕತ್ತಿ ಹಾಗೂ ರಮೇಶ್ ಕತ್ತಿ ಕೂಡ ಮುಂದುವರಿಸಿಕೊಂಡು ಬಂದಿದ್ದಾರೆ. ರಾಜಕಾರಣದಲ್ಲಿ ಸಾಕಷ್ಟು ಏರು ಪೇರು ನೋಡಿದ್ದೇನೆ. ಪ್ರತಿ ದಿನ ಇದನ್ನ ನೆನಪು ಇಟ್ಟುಕೊಂಡೇ ಕೆಲಸ ಮಾಡುತ್ತೇನೆ. ಜನ ಎಲ್ಲಿಯವರೆಗೆ ನಮಗೆ ಪ್ರೀತಿ ಮಾಡ್ತಾರೊ‌ ಅಷ್ಟು ದಿನ ಇರ್ತೇವಿ. ಜನರ ರಾಜಕಾರಣ ಹಾಗೂ ಅಧಿಕಾರದ ರಾಜಕಾರಣದ ಗೊಂದಲ ಇತ್ತು. ಜನರ ರಾಜಕಾರಣ ಯಾರು ಮಡ್ತಾರೆ ಅವರಿಗೆ ಅಧಿಕಾರ ಕೂಡ ಸಿಗುತ್ತೆ. ಕೇವಲ ಅಧಿಕಾರದ ರಾಜಕಾರಣ ನಡೆಯಲ್ಲ ಎಂದು ಹೇಳಿದರು.



    ಜನವರಿ 26 ರಂದು 5 ಜಿಲ್ಲೆಗಳಲ್ಲಿ ಪ್ರತಿ ಗ್ರಾಮಕ್ಕೆ ಜನರಿಗೆ ಬೇಕಾಗಿರುವ ಎಲ್ಲ ಅಗತ್ಯ ಸೇವೆಗಳನ್ನು ಗ್ರಾಮ ಪಂಚಾಯಿತಿ ಮೂಖಾಂತರ ಮಾಡುತ್ತೇವೆ. ಒಂದೇ ಕಚೇರಿಯಲ್ಲಿ ಎಲ್ಲ ಸೇವೆ ನೀಡುತ್ತೇವೆ. ಜನರ ಮನೆಗೆ ಆಡಳಿತ ಸೇವೆ ಒದಗಿಸುತ್ತೇವೆ. ನಾನು ಅಧಿಕಾರ ವಹಿಸಿಕೊಂಡ ಒಂದು ಗಂಟೆಯಲ್ಲಿ ತೀರ್ಮಾನ ಮಾಡಿದ್ದೆ. ರೈತರ ಮಕ್ಕಳಿಗೆ ಮೊದಲ ಬಾರಿಗೆ ಸ್ಕಾಲರ್​ ಶಿಪ್ ಶುರು ಮಾಡಿಸಿದ್ದೇವೆ. ಯಾವ ರಾಜ್ಯದಲ್ಲೂ ಈ ಸೇವೆ ಇಲ್ಲ. ಸಾವಿರಾರು ರೈತರ ಮಕ್ಕಳು ಇವತ್ತು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರೆಲ್ಲರಿಗೂ ಸೇವೆ ನೀಡಲಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

    ಇದನ್ನು ಓದಿ: HDK Vs Siddaramaiah: ಸುಳ್ಳನ್ನು ಪದೇಪದೆ ಹೇಳುತ್ತಾ ಜನರನ್ನು ದಾರಿ ತಪ್ಪಿಸುವ ʼಸಿದ್ದಕಲೆʼ ಅವರಿಗೆ ಚೆನ್ನಾಗಿ ಸಿದ್ಧಿಸಿದೆ; ಸಿದ್ದರಾಮಯ್ಯ ವಿರುದ್ಧ ಎಚ್ಡಿಕೆ ಕಿಡಿ



    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದರು. ನೂತನ ಪುರಸಭೆ ಕಟ್ಟಡ, ಹೈ ಟೆಕ್ ಬಸ್ ನಿಲ್ದಾಣವನ್ನು ಸಿಎಂ ಬೊಮ್ಮಾಯಿ ಉದ್ಘಾಟಿಸಿದರು. ಸಿಎಂ ಬೊಮ್ಮಾಯಿ ಅವರಿಗೆ ಸಚಿವ ಉಮೇಶ್ ಕತ್ತಿ, ರಾಮುಲು, ಭೈರತಿ ಬಸವರಾಜ್, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕ ದುರ್ಯೋಧನ ಐಹೊಳೆ ಹಾಗೂ ಹಲವು ಗಣ್ಯರು ಸಾಥ್ ನೀಡಿದರು.
    Published by:HR Ramesh
    First published: