ಸಿದ್ದರಾಮಯ್ಯ ಅವರದು ಹಿಟ್ ಆ್ಯಂಡ್ ರನ್ ಕಥೆ; ಸಚಿವ ವಿ. ಸೋಮಣ್ಣ ತಿರುಗೇಟು

ಕೋವಿಡ್- 19 ವಿವಿಧ ಪರಿಕರ ಖರೀದಿಯ ಮಾರುಕಟ್ಟೆ ಬೆಲೆ 1163.65 ಕೋಟಿ ರೂ., ಆದರೆ ಸರ್ಕಾರ 3,392 ಕೋಟಿ ರೂ. ಖರ್ಚು ಮಾಡಿ ಪರಿಕರಗಳನ್ನು ಖರೀದಿ‌ ಮಾಡಿದೆ. ಆ ಮೂಲಕ ಸರ್ಕಾರ 2,200 ಕೋಟಿ ರೂ. ‌ಲಪಟಾಯಿಸಿದೆ ಎಂದು ವಾರದ ಹಿಂದೆ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದರು.

news18-kannada
Updated:July 10, 2020, 6:15 PM IST
ಸಿದ್ದರಾಮಯ್ಯ ಅವರದು ಹಿಟ್ ಆ್ಯಂಡ್ ರನ್ ಕಥೆ; ಸಚಿವ ವಿ. ಸೋಮಣ್ಣ ತಿರುಗೇಟು
ಸಚಿವ ವಿ. ಸೋಮಣ್ಣ
  • Share this:
ಕೊಡಗು: ರಾಜ್ಯ ಸರ್ಕಾರ ಮೆಡಿಕಲ್ ಕಿಟ್‍ಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದೆ ಎಂದು ಸಿದ್ದರಾಮಯ್ಯನವರು ಹೇಳುವ ಮೂಲಕ ಹಿಟ್ ಆ್ಯಂಡ್ ರನ್ ಕೆಲಸ ಮಾಡಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಮಡಿಕೇರಿಯಲ್ಲಿ ಕೊರೋನಾ ಸಂಬಂಧ ನಡೆಸಿದ ಪ್ರಗತಿ ಪರಿಶೀಲಾ ಸಭೆಯಲ್ಲಿ ಭಾಗವಹಿಸಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ. ಸೋಮಣ್ಣ ಅವರು, ಸರ್ಕಾರ ಮೆಡಿಕಲ್ ಕಿಟ್ ಖರೀದಿಯನ್ನೇ ಮಾಡಿಲ್ಲ. ಖರೀದಿಯೇ ನಡೆದಿಲ್ಲ ಅಂದ ಮೇಲೆ ಅವ್ಯವಹಾರ ಹೇಗೆ ನಡೆಯುತ್ತದೆ. ಇದು ಸುಮ್ಮನೇ ಮಾಡಿರುವ ಆರೋಪ ಎಂದು ಟೀಕಿಸಿದರು.

ಅವ್ಯವಹಾರ ಆಗಿದೆ ಎಂದಾಗಲೇ ಸಿಎಂ ಯಡಿಯೂರಪ್ಪ ಅವರು ಸಿದ್ದರಾಮಯ್ಯನವರಿಗೆ ಸಭೆಗೆ ಬರುವಂತೆ ಆಹ್ವಾನಿಸಿದ್ದರು. ಖರೀದಿಯಲ್ಲಿ ಅವ್ಯವಹಾರ ಆಗಿದೆ ಎನ್ನೋ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎಂದು ಹೇಳಿದ್ದರು. ಆದರೆ ಸಿದ್ದರಾಮಯ್ಯನವರು ಸಭೆಗೆ ಹೋಗದೆ ಕೇವಲ ಹಿಟ್ ಆ್ಯಂಡ್ ರನ್ ಕೆಲಸ ಮಾಡುತ್ತಿದ್ದಾರೆ. ಅವ್ಯವಹಾರ ನಡೆದಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿದ್ದರೆ ತೋರಿಸಲಿ. ಸರ್ಕಾರ ಒಂದೇ ಒಂದು ರೂಪಾಯಿ ಅವ್ಯವಹಾರ ಮಾಡಿಲ್ಲ. ಆದರೂ ಹೀಗೆ ಸುಮ್ಮನೇ ಆರೋಪ ಮಾಡಿರುವುದು ಸರಿಯಲ್ಲ ಎಂದು ಸಚಿವ ಸೋಮಣ್ಣ ತಿರುಗೇಟು ನೀಡಿದರು.

ಇದನ್ನು ಓದಿ: ಕೋವಿಡ್-19 ಚಿಕಿತ್ಸಾ ಸಲಕರಣೆ ಖರೀದಿಯಲ್ಲಿ ರಾಜ್ಯ ಸರ್ಕಾರ 2,200 ಕೋಟಿ ಲೂಟಿ ಹೊಡೆದಿದೆ: ಸಿದ್ದರಾಮಯ್ಯ ಗಂಭೀರ ಆರೋಪ

ಕೋವಿಡ್-19 ಚಿಕಿತ್ಸಾ ಪರಿಕರ ಖರೀದಿಯಲ್ಲಿ ರಾಜ್ಯ ಸರ್ಕಾರ 2200 ಕೋಟಿ ರೂ.‌ ಲೂಟಿ ಹೊಡೆದಿದೆ ಎಂದು ಪ್ರತಿಪಕ್ಷ ‌ನಾಯಕ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದರು. ಕೋವಿಡ್- 19 ವಿವಿಧ ಪರಿಕರ ಖರೀದಿಯ ಮಾರುಕಟ್ಟೆ ಬೆಲೆ 1163.65 ಕೋಟಿ ರೂ., ಆದರೆ ಸರ್ಕಾರ 3,392 ಕೋಟಿ ರೂ. ಖರ್ಚು ಮಾಡಿ ಪರಿಕರಗಳನ್ನು ಖರೀದಿ‌ ಮಾಡಿದೆ. ಆ ಮೂಲಕ ಸರ್ಕಾರ 2,200 ಕೋಟಿ ರೂ. ‌ಲಪಟಾಯಿಸಿದೆ ಎಂದು ವಾರದ ಹಿಂದೆ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದರು.

 
Published by: HR Ramesh
First published: July 10, 2020, 6:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading