125 ಕೋಟಿ ವೆಚ್ಚದ ಬಹುಮಹಡಿಯ ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಅಗ್ನಿ ನಿಯಂತ್ರಿತ ಸಲಕರಣೆಗಳೇ ಇಲ್ಲ!
ಬೆಂಕಿ ಆರಿಸಲು ಪ್ರಮುಖವಾಗಿ ನೀರು ಬೇಕು, ಅದಕ್ಕಾಗಿ ವ್ಯವಸ್ಥೆಯಿದ್ದರೂ ಅದರಲ್ಲಿ 24 ಗಂಟೆಗಳ ಕಾಲ ನೀರಿನ ಸರಬರಾಜು ಇಲ್ಲ. ನಿರ್ವಹಣೆಗೆ ಅಗತ್ಯವಾದ ಸಿಬ್ಬಂದಿಯಿಲ್ಲ, ಬೆಂಕಿ ನಂದಿಸಲು ಬಳಸಿರುವ ಉಪಕರಣಗಳ ಗುಣಮಟ್ಟದ ಕುರಿತು ಸಂಶಯವೂ ಕೂಡ ಶುರುವಾಗಿದ್ದು ಒಟ್ಟಿನಲ್ಲಿ ಆಸ್ಪತ್ರೆಯ ಕಟ್ಟಡ ಅವ್ಯಸ್ಥೆಯ ಆಗರವಾಗಿದೆ.
news18-kannada Updated:November 20, 2020, 7:19 PM IST

ಬೀದರ್ ನ ಬ್ರೀಮ್ಸ್ ಆಸ್ಪತ್ರೆ
- News18 Kannada
- Last Updated: November 20, 2020, 7:19 PM IST
ಬೀದರ್; ಬಹುಕೋಟಿ ವೆಚ್ಚದ ಬೀದರ್ ನ ಬ್ರೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಹೋದವರ ಜೀವಕ್ಕೆ ಸುರಕ್ಷತೆಯೇ ಇಲ್ಲದಂತಾಗಿದೆ. ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅನಾಹುತಗಳು ನಡೆದರೇ ಅಗ್ನಿ ನಂದಿಸುವ ಸಲಕರಣೆಗಳು ಸಹ ಇಲ್ಲದಂತಾಗಿವೆ. ಅಗ್ನಿ ಅನಾಹುತ ಸಂಭವಿಸಿದರೇ ಬೆಂಕಿ ಆರಿಸಲು ಸಲಕರಣೆಗಳೇ ಇಲ್ಲದಂತಾಗಿದೆ. ಇದು ಸಹಜವಾಗಿಯೇ ರೋಗಿಗಳ ಆತಂಕಕ್ಕೆ ಕಾರಣವಾಗಿದೆ.
ಬೀದರ್ ನ ವೈದ್ಯಕೀಯ ವಿಜ್ಜಾನ ಸಂಸ್ಥೆ ಮೆಡಿಕಲ್ ಕಾಲೇಜು ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ ಸುರಕ್ಷತಾ ಕ್ರಮಗಳೇ ಇಲ್ಲ ಎನ್ನುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಸುಮಾರು ಎಂಟು ಅಂತಸ್ತಿನ ಬೃಹತ್ ಕಟ್ಟಡವಿದ್ದು, ಕಟ್ಟಡದಲ್ಲಿ ಅಗ್ನಿ ಸುರಕ್ಷತೆಗೆ ಅಳವಡಿಸಿರುವ ಸಾಧನ ಮತ್ತು ಪರಿಕರಗಳನ್ನ ಬಳಕೆ ಮಾಡುವ ಸಿಬ್ಬಂದಿ ಅಥವಾ ಅಗ್ನಿ ಸುರಕ್ಷತಾ ಅಧಿಕಾರಿಗಳು ಮಾತ್ರ ಇಲ್ಲದಂತಾಗಿದೆ. ಇದರ ಜೊತೆಗೆ ಇನ್ನೂ ಅಗ್ನಿ ಅವಘಡಗಳು ಸಂಭವಿಸಿದಂತಹ ಸಂದರ್ಭದಲ್ಲಿ ಬೆಂಕಿ ನಂದಿಸಲು ಬೇಕಾದ ಸಿದ್ದತೆಯ ಕಾರ್ಯ ಇನ್ನೂ ಮುಗಿದಿಲ್ಲ. ಇದನ್ನು ಓದಿ: ಸಂಪುಟ ಸರ್ಕಸ್ನಲ್ಲಿ ದಿಕೆಟ್ಟ ಆಡಳಿತ; ಸರ್ಕಾರದ ಕಾರ್ಯವೈಖರಿ ಬಗ್ಗೆ ಸಿದ್ದರಾಮಯ್ಯ ಟೀಕೆ
ಸುಮಾರು 125 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿಷ್ಠಿತ ಬೀದರ್ ಬ್ರೀಮ್ಸ್ ಆಸ್ಪತ್ರೆ ಕಟ್ಟಲಾಗಿದ್ದು, ಬಹುಮಹಡಿ ಕಟ್ಟಡದ ಆಸ್ಪತ್ರೆಯಲ್ಲಿ ಅಗ್ನಿ ನಂದಿಸಲು ಬೇಕಾದ ಅತ್ಯಾಧುನಿಕ ಉಪಕರಣಗಳು, ಅಲಾರಂ, ಅಗ್ನಿನಂದಕಗಳು, ಕೆಂಪು ಬಣ್ಣದ ಫೈಪ್ ಗಳನ್ನ ಅಳವಡಿಸಲಾಗಿದ್ದು ಎಲ್ಲವೂ ಅರ್ಧಂಬರ್ಧ ಕಾಮಗಾರಿಯಾಗಿದೆ. ಕೊಟ್ಯಂತರ ರೂಪಾಯಿ ವೆಚ್ಚ ಮಾಡಿದರೂ ಇದ್ದು ಇಲ್ಲದಂತಾಗಿದೆ. ಇದರ ಜೊತೆಗೆ ಅಗ್ನಿ ಅನಾಹುತಗಗಳು ನಡೆದಾಗ ಬೆಂಕಿ ನಂದಿಸಲು ಒಬ್ಬನೇ ಒಬ್ಬ ನುರಿತ ಸಿಬ್ಬಂದಿಯೂ ಇಲ್ಲ. ಅದರ ಜೊತೆಗೆ ಇಡೀ ಆಸ್ಪತ್ರೆಯಲ್ಲಿ ಬೆಂಕಿ ಹತ್ತಿದರೇ ತಾತ್ಕಾಲಿಕವಾಗಿ ಬೆಂಕಿ ನಂದಿಸಲು ಇಂಗಾಲ ಡೈಆಕ್ಸಡ್ ಇರುವ ಗ್ಯಾಸ್ ಗಳನ್ನ ಕೂಡಾ ಎಲ್ಲಿಯೂ ಅಳವಡಿಸದಿರುವುದು ದುರಂತದ ವಿಷಯವಾಗಿದೆ.
ಇನ್ನು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ನಿಯಮಾವಳಿಯಂತೆ ಬೆಂಕಿ ಸೇರಿದಂತೆ ಇತರ ಆಕಸ್ಮಿಕಗಳು ನಡೆದರೆ ಜೀವ ಉಳಿಸಿಕೊಳ್ಳುವ ಸಲುವಾಗಿ ಕಟ್ಟಡ ಆಯಕಟ್ಟಿನ ಸ್ಥಳಗಳಲ್ಲಿ ರ್ಯಾಂಪ್ ಗಳನ್ನು ಕೂಡಾ ನಿರ್ಮಾಣ ಮಾಡಿಲ್ಲ. ಬೆಂಕಿ ಆರಿಸಲು ಪ್ರಮುಖವಾಗಿ ನೀರು ಬೇಕು, ಅದಕ್ಕಾಗಿ ವ್ಯವಸ್ಥೆಯಿದ್ದರೂ ಅದರಲ್ಲಿ 24 ಗಂಟೆಗಳ ಕಾಲ ನೀರಿನ ಸರಬರಾಜು ಇಲ್ಲ. ನಿರ್ವಹಣೆಗೆ ಅಗತ್ಯವಾದ ಸಿಬ್ಬಂದಿಯಿಲ್ಲ, ಬೆಂಕಿ ನಂದಿಸಲು ಬಳಸಿರುವ ಉಪಕರಣಗಳ ಗುಣಮಟ್ಟದ ಕುರಿತು ಸಂಶಯವೂ ಕೂಡ ಶುರುವಾಗಿದ್ದು ಒಟ್ಟಿನಲ್ಲಿ ಆಸ್ಪತ್ರೆಯ ಕಟ್ಟಡ ಅವ್ಯಸ್ಥೆಯ ಆಗರವಾಗಿದೆ.
ಬೀದರ್ ನ ವೈದ್ಯಕೀಯ ವಿಜ್ಜಾನ ಸಂಸ್ಥೆ ಮೆಡಿಕಲ್ ಕಾಲೇಜು ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ ಸುರಕ್ಷತಾ ಕ್ರಮಗಳೇ ಇಲ್ಲ ಎನ್ನುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಸುಮಾರು ಎಂಟು ಅಂತಸ್ತಿನ ಬೃಹತ್ ಕಟ್ಟಡವಿದ್ದು, ಕಟ್ಟಡದಲ್ಲಿ ಅಗ್ನಿ ಸುರಕ್ಷತೆಗೆ ಅಳವಡಿಸಿರುವ ಸಾಧನ ಮತ್ತು ಪರಿಕರಗಳನ್ನ ಬಳಕೆ ಮಾಡುವ ಸಿಬ್ಬಂದಿ ಅಥವಾ ಅಗ್ನಿ ಸುರಕ್ಷತಾ ಅಧಿಕಾರಿಗಳು ಮಾತ್ರ ಇಲ್ಲದಂತಾಗಿದೆ. ಇದರ ಜೊತೆಗೆ ಇನ್ನೂ ಅಗ್ನಿ ಅವಘಡಗಳು ಸಂಭವಿಸಿದಂತಹ ಸಂದರ್ಭದಲ್ಲಿ ಬೆಂಕಿ ನಂದಿಸಲು ಬೇಕಾದ ಸಿದ್ದತೆಯ ಕಾರ್ಯ ಇನ್ನೂ ಮುಗಿದಿಲ್ಲ.