HOME » NEWS » District » THERE IS NO EXAMINATION OF MIGRANTS RETURNING TO KOPPAL DISTRICT PEOPLE IN ANXIETY SBR MAK

CoronaVirus: ಕೊಪ್ಪಳ ಜಿಲ್ಲೆಗೆ ಹಿಂದಿರುಗುತ್ತಿರುವ ವಲಸಿಗರ ಕೋವಿಡ್​ ಪರೀಕ್ಷೆಯಾಗುತ್ತಿಲ್ಲ; ಆತಂಕದಲ್ಲಿ ಜನ ಸಾಮಾನ್ಯರು

ಮಂಗಳವಾರ ರಾತ್ರಿಯಿಂದ ಜನತಾ ಕರ್ಫ್ಯೂ ಜಾರಿಯಾಗಿದೆ. ಇದರಿಂದಾಗಿ ಬೆಂಗಳೂರು, ಮಂಗಳೂರಿನಲ್ಲಿ ದುಡಿಯಲು ಹಾಗೂ ಓದಲು ಹೋದವರು ಜಿಲ್ಲೆಗೆ ವಾಪಸ್ಸಾಗಿದ್ದಾರೆ. ಇಂದು ಮುಂಜಾನೆ ಬಸ್ ಹಾಗು ಟ್ರೈನ್ ಗಳಲ್ಲಿ ವಲಸಿಗರ ದಂಡೆ ವಾಪಸ್ಸಾಗಿದೆ.

news18-kannada
Updated:April 29, 2021, 7:35 AM IST
CoronaVirus: ಕೊಪ್ಪಳ ಜಿಲ್ಲೆಗೆ ಹಿಂದಿರುಗುತ್ತಿರುವ ವಲಸಿಗರ ಕೋವಿಡ್​ ಪರೀಕ್ಷೆಯಾಗುತ್ತಿಲ್ಲ; ಆತಂಕದಲ್ಲಿ ಜನ ಸಾಮಾನ್ಯರು
ಸಾಂದರ್ಭಿಕ ಚಿತ್ರ.
  • Share this:
ಕೊಪ್ಪಳ: ಕಳೆದ ವರ್ಷದ ಲಾಕ್​ಡೌನ್​ನಿಂಆದಾಗಿ ಜನ ಇನ್ನೂ ಚೆತರಿಸಿಕೊಳ್ಳಲು ಆಗಿಲ್ಲ. ಈ ಮಧ್ಯೆ ಕೊರೋನಾ ಎರಡನೆಯ ಅಲೆ ಹಿನ್ನಲೆಯಲ್ಲಿ ಮತ್ತೆ ಲಾಕ್​ಡೌನ್ ಮಾಡಲಾಗಿದೆ. ಇದರಿಂದ ಈಗ ಮತ್ತೆ ವಲಸೆ ಆರಂಭವಾಗಿದೆ. ಇಂದು ಮುಂಜಾನೆ ಕೊಪ್ಪಳಕ್ಕೆ ಸಾಕಷ್ಟು ಜನರು ವಾಪಸ್ಸು ಬಂದಿದ್ದಾರೆ. ಆದರೆ ಅವರನ್ನು ಕನಿಷ್ಠ ಪರೀಕ್ಷೆ ಮಾಡದೆ ತಮ್ಮ ತಮ್ಮ ಮನೆಗಡ ಹೋಗಲು ಅವಕಾಶ ನೀಡಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷ ಮಾರ್ಚ ತಿಂಗಳಿನಿಂದ ಸುಮಾರು 3 ತಿಂಗಳು ಲಾಕ್​ಡೌನ್ ಮಾಡಲಾಗುತ್ತು. ಇದರಿಂದ ದುಡಿಯಲು ಹೋದವರು, ಓದಲು ಹೋದವರು ಮತ್ತೆ ತಮ್ಮ ತಮ್ಮ ತವರಿಗೆ ಮರಳಿದ್ದರು. ಆಗ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಸೋಂಕು ಹರಡಿತ್ತು. ನಂತರ ಸೋಂಕು ಇಳಿಮುಖವಾಗಿ ಬಹುತೇಕರು ಕೊರೋನಾವನ್ನು ಮರೆತಿದ್ದರು. ಆದರೆ, ಈಗ ಎರಡನೆಯ ಅಲೆಯು ಮತ್ತೆ ಜನರನ್ನು ಆತಂಕಕ್ಕೆ ದೂಡಿದೆ.

ಮಂಗಳವಾರ ರಾತ್ರಿಯಿಂದ ಜನತಾ ಕರ್ಫ್ಯೂ ಜಾರಿಯಾಗಿದೆ. ಇದರಿಂದಾಗಿ ಬೆಂಗಳೂರು, ಮಂಗಳೂರಿನಲ್ಲಿ ದುಡಿಯಲು ಹಾಗೂ ಓದಲು ಹೋದವರು ಜಿಲ್ಲೆಗೆ ವಾಪಸ್ಸಾಗಿದ್ದಾರೆ. ಇಂದು ಮುಂಜಾನೆ ಬಸ್ ಹಾಗು ಟ್ರೈನ್ ಗಳಲ್ಲಿ ವಲಸಿಗರ ದಂಡೆ ವಾಪಸ್ಸಾಗಿದೆ. ವಾಪಸ್ಸು ಬಂದವರ ಆರೋಗ್ಯ ಪರೀಕ್ಷೆ ಮಾಡಬೇಕಿತ್ತು. ಮುಖ್ಯವಾಗಿ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣದಲ್ಲಿ ಪರೀಕ್ಷೆ ಮಾಡಿ ಅವರನ್ನು ಮನೆಗೂ ಅಥವಾ ಸೋಂಕಿನ ಲಕ್ಷಣ ವಿದ್ದರೆ ಕ್ವಾರಂಟೈನ್ ಸೂಚಿಸಬೇಕಿತ್ತು. ಆದರೆ, ಈ ನಿಯಮವನ್ನು ಪಾಲಿಸಿಲ್ಲ.

ಇದರಿಂದಾಗಿ ಇಂದು ಬಂದವರು ನೇರವಾಗಿ ತಮ್ಮ ಮನೆಗಳಿಗೆ ಹೋಗಿ ಎಂದಿನಂತೆ ಜೀವನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಲಸೆ ಬಂದವರಲ್ಲಿ ಸೋಂಕು ಕಂಡು ಬಂದು ಅವರು ಹರಡಿದರೆ ಹೇಗೆ ಎಂಬ ಚಿಂತೆ ಆತಂಕ ಕಾಡುತ್ತಿದೆ. ಕೊಪ್ಪಳ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾರಿಗೆ ಸಿಬ್ಬಂದಿಗೆ ಕೊರೋನಾ:

ಮಹಾಮಾರಿ ಕೊರೋನಾದ ಎರಡನೆಯ ಅಲೆ ಅಬ್ಬರಿಸುತ್ತಿದೆ, ಈ ಕೊರೊನಾ ಯಾರನ್ನು ಬಿಟ್ಟಿಲ್ಲ. ಈ ಮಧ್ಯೆ ಇಲ್ಲಿಯವರೆಗೂ ಕೆಲಸ ಮಾಡಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರನ್ನು ಬಿಟ್ಟಿಲ್ಲ. ಕೊಪ್ಪಳದ ಈಶಾನ್ಯ ಕರ್ನಾಟಕ ವಿಭಾಗದಲ್ಲಿ ಒಟ್ಟು 10 ಜನರಿಗೆ ಸೋಂಕು ದೃಡಪಟ್ಟಿದೆ. ಎಪ್ರಿಲ್ 7 ರಿಂದ ಸಾರಿಗೆ ಸಿಬ್ಬಂದಿಯು ಆರನೆಯ ವೇತನ ಆಯೋಗದ ವರದಿಗೆ ಆಗ್ರಹಿಸಿ ಮುಷ್ಕರ ನಡೆಸಿದ್ದರು. 15 ದಿನಗಳ ಕಾಲ ಬಸ್ ಸಂಚಾರ ಇರಲಿಲ್ಲ. ಈ ಮಧ್ಯೆ ಹೈಕೋರ್ಟ್ ಮಧ್ಯೆ ಪ್ರವೇಶಿಸಿ ಮೊದಲು ಕರ್ತವ್ಯಕ್ಕೆ ತೆರಳಿ ಎಂದು ಸೂಚನೆ ನೀಡಿತು.

ಈ ಹಿನ್ನಲೆಯಲ್ಲಿ ಒಂದು ವಾರದ ಹಿಂದೆ ಬಸ್ ಸಂಚಾರ ಆರಂಭವಾಗಿದೆ. ಆರಂಭವಾದ ಒಂದೇ ವಾರದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಸೋಂಕು ದೃಡಪಟ್ಟಿದೆ. ಒಟ್ಟು 398 ಜನರ ಗಂಟಲ ದ್ರವ ಪರೀಕ್ಷೆ ಮಡಲಾಗಿತ್ತು. ಅದರಲ್ಲಿ 10 ಜನರಿಗೆ ಸೋಂಕು ದೃಡಪಟ್ಟಿದ್ದರಿಂದ ಇತರ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದೆ. ಸೋಂಕಿತರು ಹಾಗೂ ಸೋಂಕಿತರ ಸಂಪರ್ಕಿತರನ್ನು ಪ್ರತ್ಯೇಕವಾಗಿ ಐಸೋಲೇಷನ್ ಮಾಡಲಾಗಿದೆ. ಎರಡನೆಯ ಅಲೆಯೂ ತೀವ್ರವಾಗಿರುವದರಿಂದ ಎನ್ ಈ ಕೆಎಸ್ ಆರ್ ಟಿಸಿ ಸಿಬ್ಬಂದಿಗಳು ಹಾಗೂ ಅವರ ಕುಟುಂಬದ ಸದಸ್ಯರಲ್ಲಿ ಆತಂಕ ತೀವ್ರವಾಗಿದೆ.

ಸೋಂಕಿತ ಸಿಬ್ಬಂದಿಗಳು ಬಸ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದು ಇದರಿಂದ ಪ್ರಯಾಣಿಕರಲ್ಲಿಯೂ ಆತಂಕ. ಒಟ್ಟಾರೆಯಾಗಿ ಕೊರೋನಾ ಎರಡನೆಯ ಅಲೆಯು ಕೊಪ್ಪಳದ ಜನತೆ ಯನ್ನು ಹೈರಾಣ ಮಾಡುತ್ತಿದೆ.ಇದನ್ನೂ ಓದಿ: Assembly Election Result: ಚುನಾವಣಾ ಫಲಿತಾಂಶ; ಲಸಿಕೆ ಪಡೆದವರಿಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ

ನಗರ ಸಂಪೂರ್ಣ ಸ್ತಬ್ದ: 

ಎರಡನೆಯ ಅಲೆ ತಡೆಗಾಗಿ ನಿನ್ನೆಯಿಂದ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದೆ. ಮುಂಜಾನೆ 6 ರಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಬಹುತೇಕರು ಮುಂಜಾನೆಯೇ ಖರೀದಿ ಮಾಡಿದರು, ಕೆಲವರ 10 ಗಂಟೆಯಾದರೂ ಅಂಗಡಿಗಳನ್ನು ಮುಚ್ಚಲಿಲ್ಲ ಇದರಿಂದ ತಹಸೀಲ್ದಾರ ಅಮರೇಶ ಬಿರಾದಾರ ಲಾಠಿ ಹಿಡಿದು ಅಂಗಡಿ ಬಂದ್ ಮಾಡಿಸಿದರು. ಅಲ್ಲದೆ ಒಂಬತ್ತು ಅಂಗಡಿಗಳನ್ನು ಸೀಜ್ ಮಾಡಿದರು. ನಂತರದಲ್ಲಿ ಇಡೀ ನಗರ ಬಹುತೇಕ ಸ್ತಬ್ದವಾಗಿತ್ತು.
Youtube Video

ಮುಂಜಾನೆಯೇ ತೆರೆದ ಎಣ್ಣೆ ಅಂಗಡಿ;

ಮದ್ಯದ ಅಂಗಡಿಗಳು ಮುಂಜಾನೆ 10 ಗಂಟೆಗೆ ಆರಂಭವಾಗಿ ರಾತ್ರಿ 10 ಗಂಟೆಯವರೆಗೂ ತೆರೆದಿರುತ್ತಿದ್ದವು. ಆದರೆ, ಇಂದಿನಿಂದ ಇದು ಉಲ್ಟ ಆಗಿದೆ. ಮುಂಜಾನೆಯ 6 ಗಂಟೆಯಿಂದ ಮುಂಜಾನೆ 10 ಗಂಟೆಯವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇಂದು ಮುಂಜಾನೆಯೇ ಲಿಕ್ಕರ ಅಂಗಡಿಗಳು ತೆರೆದಿದ್ದವು ಆದರೆ ಮದ್ಯ ಸೇವಿಸುವವರ ಸಂಖ್ಯೆ ಅಷ್ಟಾಗಿ ಇರಲಿಲ್ಲ, ಅಂಗಡಿ ತೆರೆದು ಗ್ರಾಹಕರಿಗಾಗಿ ಕಾಯಿಯುತಿದ್ದರೆ ಬಂದಿದ್ದು ಅತ್ಯಲ್ಪ ಜನ ಮಾತ್ರ. 
Published by: MAshok Kumar
First published: April 29, 2021, 7:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories