ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಭಿನ್ನಾಭಿಪ್ರಾಯವಿಲ್ಲ: ಸಚಿವ ಮುರುಗೇಶ್ ನಿರಾಣಿ

ಗಣಿ ಮಾಲೀಕರು ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ 12 ಸಾವಿರ ಕೋಟಿ ರಾಯಲ್ಟಿ ಕಟ್ಡಿದ್ದಾರೆ. ಅದರ ಬಡ್ಡಿ ಸೇರಿ 18 ಸಾವಿರ ಕೋಟಿ ರೂ ಆಗಿದೆ. ಮೂರು ತಿಂಗಳಲ್ಲಿ ಹಣ ನಮ್ಮ ಕೈ ಸೇರಲಿದೆ. ಆ ಹಣದ ಕ್ರಿಯಾ ಯೋಜನೆ ರೂಪಿಸಲಿದೆ ಎಂದರು.

ಮುರುಗೇಶ್ ನಿರಾಣಿ.

ಮುರುಗೇಶ್ ನಿರಾಣಿ.

  • Share this:
ಧಾರವಾಡ: ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೂಡಲ ಸಂಗಮ ಮತ್ತು ಹರಿಹರ ಪೀಠದ ಶ್ರೀಗಳ ನೇತೃತ್ವದಲ್ಲಿ ಹೋರಾಟ ಮುಂದುವರೆದಿದೆ. ಮೀಸಲಾತಿ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಬಳಿಗೆ ಮನವಿ ಮಾಡಿದ್ದು, ಮೀಸಲಾತಿ ನೀಡಲು ಸರ್ಕಾರದ ಮಟ್ಟದಲ್ಲಿ ಎಲ್ಲ ವ್ಯವಸ್ಥೆ ನಡೆದಿದೆ. ಮೀಸಲಾತಿ ಬಂದ ನಂತರ ಕೋರ್ಟ್ ಮೊರೆ ಹೋದರೆ, ಹಾಗೆ ಉಳಿಯಲಿದೆ. ಹೀಗಾಗಿ ತ್ರಿ ಸದಸ್ಯ ಪೀಠದಿಂದ ಈ ಕೆಲಸ ನಡೆದಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ ನಿರಾಣಿ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 80 ಲಕ್ಷ ಪಂಚಮಸಾಲಿ ಸಮಾಜದ ಜನರಿದ್ದು, ಈ ಎಲ್ಲ ಜನರೂ ನಾಯಕರೇ. ಅವರವರ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದರು. ಇಷ್ಟೇ ದಿನದಲ್ಲಿ ಮೀಸಲಾತಿ ಆಗಲಿದೆಂದು ಹೇಳುವುದು ಅಸಾಧ್ಯ ಎಂದ ಅವರು, ಎಲ್ಲ ಸಮಾಜದಲ್ಲಿ ಬಡವರು, ಶ್ರೀಮಂತರು ಇದ್ದಾರೆ. ಹಾಗೆ ಪರಿಶಿಷ್ಟ ಜಾತಿ-ಪಂಗಡದಲ್ಲೂ ಶ್ರೀಮಂತರಿದ್ದಾರೆ. ಹೆಲಿಕ್ಯಾಪ್ಟರ್​ನಲ್ಲಿ ಓಡಾಡುವ ಮಲ್ಲಿಕಾರ್ಜುನ ಖರ್ಗೆ ಅಂತಹ ನಾಯಕರು ಈ ಸಮಾಜದಲ್ಲಿ ಇದ್ದಾರೆ. ಬ್ರಾಹ್ಮಣ ಮೇಲ್ವರ್ಗದ ಸಮಾಜ ಇದ್ದರೂ, ಬಡವರಿದ್ದಾರೆ. ಕಷ್ಟದಲ್ಲಿ ಇರುವ ಜನರಿಗೆ ನ್ಯಾಯ ಸಿಗಬೇಕು. ಹಾಗೇ ಉಳಿದ ಸಮಾಜಕ್ಕೂ ನ್ಯಾಯ ಸಿಗಬೇಕು ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿಡಿ ಫೇಕ್ ಅಂತ ಜಾರಕಿಹೊಳಿ ಅವರೇ ಹೇಳಿದ್ದು, ಸತ್ಯಾಸತ್ಯತೆ ಬಯಲಿಗೆ ತರಲು ತನಿಖೆಗೆ ಆದೇಶಿಸಲಾಗಿದೆ. ರಮೇಶ್ ನಿರ್ದೋಷಿಯಾಗಿ ಹೊರ ಬರಲಿದ್ದಾರೆ. ಗೃಹ‌ ಇಲಾಖೆಗೆ ತನ್ನದಾದ ಪ್ರಕ್ರಿಯೆ ಇದೆ. ಅದರಡಿ ತನಿಖೆ ನಡೆದಿದೆ. ವರದಿ ನಂತರ ಆಪಾದನೆಯಿಂದ ಹೊರೆಗೆ ಬರಲಿದ್ದಾರೆ ಎಂದರು.

ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರವಿದೆ. ಅವರೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ಇನ್ನೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೆಲ ಬದಲಾವಣೆ ತರುತ್ತಿದೆ. ಸಿಂಗಲ್ ವಿಂಡೋ ಸಿಸ್ಟಮ್ ತರುವ ಪ್ಲಾನ್ ಇದೆ. 30 ದಿನದಲ್ಲಿ ಈ ನಿಯಮ ಜಾರಿಗೆ ತರುತ್ತೆವೆ. ಡ್ರಾಫ್ಟ್ ಕೂಡಾ ತಯಾರಿದೆ. ಗಣಿ ಅನುಮತಿ ಪಡೆಯುವವರಿಗೆ ತೊಂದರೆಯಾಗದಂತೆ ಸರಳೀಕರಣ ಮಾಡಲಾಗಿದೆ. ಗಣಿ ಇಲಾಖೆ ಜತೆಯಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ಕೂಡಾ ಬರುತ್ತಿವೆ. ಗಣಿ ಲೈಸೆನ್ಸ್​ಗೆ ಆಫ್ ಲೈನ್ ಹಾಗೂ ಆನ್ ಲೈನ್ ಎರಡು ರೀತಿಯಲ್ಲಿ ಅನುಮತಿ ಪಡೆಯಬಹುದು ಎಂದರು.

ಇದನ್ನು ಓದಿ: Corona Vaccination | ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆ ಪಡೆದುಕೊಂಡ ಸಿಎಂ ಬಿಎಸ್ ಯಡಿಯೂರಪ್ಪ

ಜಿಂದಾಲ್ ಬಲ್ದೊಟಾ, ಕಿರ್ಲೊಸ್ಕರ್ ದೊಡ್ಡ ಕಂಪನಿಗಳ ಜತೆ ಸಭೆ ಮಾಡಿದ್ದೇವೆ. ಅದಿರು ಹೊರಗಿನಿಂದ ತರಲು ಬೆಲೆ ಹೆಚ್ಚುತ್ತಿದೆ. ಇದನ್ನು ಸಿಎಂ ಗಮನಕ್ಕೆ ತಂದು ನಿಯಮ ಮಾಡಿ ನಿರ್ಧಾರ ಕೈಗೊಳ್ಳುತ್ತೆವೆ. ಸ್ಕೂಲ್ ಆಫ್ ಮೈನಿಂಗ್‌ ನಿಂದ ಅಕ್ರಮ ಮೈನಿಂಗ್ ಆಗುವುದನ್ನು ಬದಲಾವಣೆ ತರಬಹುದು. ಈ ಹಿನ್ನೆಲೆ ಎಲ್ಲ ಕಡೆ ವರ್ಕಶಾಪ್ ಮಾಡಿ ಅಧಿಕಾರಿಗಳಿಗೆ ಹಾಗೂ ಮೈನಿಂಗ್ ಮಾಡುವವರಿಗೆ ತರಬೇತಿ ನೀಡಲಿದೆ ಎಂದರು.

ಗಣಿ ಮಾಲೀಕರು ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ 12 ಸಾವಿರ ಕೋಟಿ ರಾಯಲ್ಟಿ ಕಟ್ಡಿದ್ದಾರೆ. ಅದರ ಬಡ್ಡಿ ಸೇರಿ 18 ಸಾವಿರ ಕೋಟಿ ರೂ ಆಗಿದೆ. ಮೂರು ತಿಂಗಳಲ್ಲಿ ಹಣ ನಮ್ಮ ಕೈ ಸೇರಲಿದೆ. ಆ ಹಣದ ಕ್ರಿಯಾ ಯೋಜನೆ ರೂಪಿಸಲಿದೆ ಎಂದರು.

  • ವರದಿ: ಮಂಜುನಾಥ ಯಡಳ್ಳಿ

Published by:HR Ramesh
First published: