HOME » NEWS » District » THERE IS NO BILL ON LOVE JIHAD AT THIS TIME SESSION CM YEDDYURAPPA HRNS MAK

ಈ ಅಧಿವೇಶನದಲ್ಲಿ ಲವ್ ಜಿಹಾದ್ ಬಗ್ಗೆ ಯಾವುದೇ ಮಸೂದೆ ಮಂಡನೆ ಇಲ್ಲ; ಸಿಎಂ ಯಡಿಯೂರಪ್ಪ

ನಾಳೆ ಭರತ್ ಬಂದ್ ಗೆ ಕರೆ  ನೀಡಲಾಗಿದ್ದು, ಇದನ್ನು ಕೈ ಬಿಡುವಂತೆ ಸಿಎಂ ಮನವಿ ಮಾಡಿಕೊಂಡರು. ಈಗಾಗಲೇ ಭಾರತ್  ಬಂದ್ ಕೈ ಬಿಡಲು ರೈತರ ಬಳಿ ಪ್ರಧಾನಿಗಳು ಮನವಿ ಮಾಡಿದ್ದಾರೆ. ಆದರೆ, ರೈತರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಸಿಎಂ ಬಿ.ಎಸ್.​ ಯಡಿಯೂರಪ್ಪ ತಿಳಿಸಿದ್ದಾರೆ.

news18-kannada
Updated:December 8, 2020, 5:59 AM IST
ಈ ಅಧಿವೇಶನದಲ್ಲಿ ಲವ್ ಜಿಹಾದ್ ಬಗ್ಗೆ ಯಾವುದೇ ಮಸೂದೆ ಮಂಡನೆ ಇಲ್ಲ; ಸಿಎಂ ಯಡಿಯೂರಪ್ಪ
ಸಿಎಂ ಬಿಎಸ್​ ಯಡಿಯೂರಪ್ಪ.
  • Share this:
ಶಿವಮೊಗ್ಗ; ಇಂದಿನಿಂದ ಅಧಿವೇಶನ ಆರಂಭಗೊಂಡಿದೆ. ಎಲ್ಲರಿಗೂ  ನ್ಯಾಯ ಒದಗಿಸುವಂತಹ ಅಧಿವೇಶನ ಇದಾಗಬೇಕೆಂಬುದು ನಮ್ಮ ಆಶಯ. ಆದರೆ, ಲವ್ ಜಿಹಾದ್ ವಿಚಾರದ ಬಗ್ಗೆ ಈ ಬಾರಿಯ ಅಧಿವೇಶನದಲ್ಲಿ ಮಂಡನೆ ಮಾಡುವುದಿಲ್ಲ. ಮುಂದಿನ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣಕ್ಕೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು  ಈ ಬಾರಿಯ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಈ ಹಿಂದೆ ಗೋ ಹತ್ಯೆ ನಿಷೇಧ ಕಾಯ್ದೆ ಮಂಡನೆ ಮಾಡಿದ ಸಮಯದಲ್ಲಿ ರಾಜ್ಯಪಾಲರು ಅನುಮತಿಗೆ ಕಳುಹಿಸಲಾಗಿತ್ತು. ಅದರೆ ರಾಜ್ಯಪಾಲರು ಅದಕ್ಕೆ ಅನುಮತಿ ನೀಡಿರಲಿಲ್ಲ. ಅದರೆ ನಾಳೆ  ಗೋ ಹತ್ಯೆ ತಡೆ ವಿಧೇಯಕ ವಿಷಯ ಮಂಡನೆ ಮಾಡಲಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಇನ್ನು ಲವ್ ಜಿಹಾದ್ ವಿಚಾರದ ಬಗ್ಗೆ ಈ ಬಾರಿಯ ಅಧಿವೇಶನದಲ್ಲಿ ಮಂಡನೆ ಮಾಡುವುದಿಲ್ಲ. ಮುಂದಿನ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಈ ಅಧಿವೇಶನದಲ್ಲಿ ಎಲ್ಲಾ ವರ್ಗಕ್ಕೂ ನ್ಯಾಯ ಒಧಗಿಸುವ ಪ್ರಯತ್ನ ಮಾಡಲಾಗುವುದು ಎಂದರು.

ನಾಳೆ ಭರತ್ ಬಂದ್ ಗೆ ಕರೆ  ನೀಡಲಾಗಿದ್ದು, ಇದನ್ನು ಕೈ ಬಿಡುವಂತೆ ಸಿಎಂ ಮನವಿ ಮಾಡಿಕೊಂಡರು. ಈಗಾಗಲೇ ಭಾರತ್  ಬಂದ್ ಕೈ ಬಿಡಲು ರೈತರ ಬಳಿ ಪ್ರಧಾನಿಗಳು ಮನವಿ ಮಾಡಿದ್ದಾರೆ. ಆದರೆ, ರೈತರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಪದೇ, ಪದೇ ಬಂದ್ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದರು. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು.  ರೈತರು ಈ ರೀತಿಯ ಕಟು ನಿರ್ಧಾರ ತೆಗೆದುಕೊಳ್ಳುವ ಅಗತ್ಯ ಇಲ್ಲ ಎಂದರು. ಭಾರತ್ ಬಂದ್ ನಿಂದಾಗಿ ಜನರಿಗೆ ತೊಂದರೆಯಾಗಲಿದೆ. ಭಾರತ್ ಬಂದ್ ಹೋರಾಟ ಕೈ ಬಿಡಲು ನಾನು ಕೂಡ ರೈತರಲ್ಲಿ ಮನವಿ ಮಾಡುತ್ತೇನೆ ಎಂದರು. ಆದರೆ, ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದೆ ಸಿಎಂ ತೆರಳಿದರು.

ಇದನ್ನೂ ಓದಿ : ದೆಹಲಿ ಚಲೋ; ರೈತ ಹೋರಾಟವನ್ನು ಬೆಂಬಲಿಸಿ ಪ್ರಶಸ್ತಿ ಹಿಂತಿರುಗಿಸಲು ಕ್ರೀಡಾಪಟುಗಳ ರ‍್ಯಾಲಿ, ಪೊಲೀಸರಿಂದ ತಡೆ!

ಇನ್ನು  ಸಾಗರ ನಗರಸಭೆ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಎಂ ಕೋವಿಡ್ ನಿಂದಾಗಿ ರಾಜ್ಯದ ಹಣಕಾಸಿನ ಪರಿಸ್ಥಿತಿ ಹೇಗಿದೆ ಎಂಬುದು ನಿಮಗೆ ತಿಳಿದಿದೆ ಎಂದರು. ಸಾಗರ ಕುಡಿಯುವ ನೀರು ಸರಬರಾಜು ಪ್ರಸ್ತಾವನೆ ಈಡೇರಿಸುವ ಬಗ್ಗೆ ಭರವಸೆ ನೀಡಿದರು. ಬಡವರಿಗೆ ಮನೆ ಕಟ್ಟಿಸುವ  ಯೋಜನೆ ಪ್ರಸ್ತಾವನೆ ಈಡೇರಿಸಲಾಗುವುದು. ಜೋಗ ಅಭಿವೃದ್ಧಿಗಾಗಿ 120 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
Youtube Video

ಜೋಗವನ್ನು ಸಾವಿರಾರು ಪ್ರವಾಸಿಗರು ವೀಕ್ಷಿಸುವಂತೆ ಅನುಕೂಲ ಮಾಡಿಕೊಡಲಾಗುವುದು ಎಂದರು. ಜೋಗ ಅತ್ಯುತ್ತಮ ಪ್ರವಾಸಿತಾಣವನ್ನಾಗಿಸಲು ಪಣ ತೊಡಲಾಗಿದೆ. ಸಮಗ್ರ ಸಾಗರ ಅಭಿವೃದ್ಧಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಸಾಗರದ ರಸ್ತೆ ಅಭಿವೃದ್ಧಿಗೆ ತಕ್ಷಣವೇ, 30 ಕೋಟಿ ರೂ. ಬಿಡುಗಡೆ ಮಾಡುವ ಭರವಸೆ ನೀಡಿದರು.
Published by: MAshok Kumar
First published: December 8, 2020, 5:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories