HOME » NEWS » District » THERE IS NO BED CORONA PATIENT IN YADAGIRI COVID HOSPITAL NMPG MAK

ಯಾದಗಿರಿ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಫುಲ್; ಚಿಕಿತ್ಸೆ ಪಡೆಯಲು ಸೋಂಕಿತರ ಪರದಾಟ

ಯಾದಗಿರಿ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 739 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿವರಗೆ 96 ಸೋಂಕಿತರು ಬಲಿಯಾಗಿದ್ದಾರೆ.

news18-kannada
Updated:May 7, 2021, 7:21 AM IST
ಯಾದಗಿರಿ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಫುಲ್; ಚಿಕಿತ್ಸೆ ಪಡೆಯಲು ಸೋಂಕಿತರ ಪರದಾಟ
ಯಾದಗಿರಿ ಕೋವಿಡ್ ಆಸ್ಪತ್ರೆ.
  • Share this:
ಯಾದಗಿರಿ: ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇದೀಗ ಯಾದಗಿರಿ ಜಿಲ್ಲೆಯಲ್ಲಿ ಕೂಡ ಬೆಡ್ ಗಳ ಅಭಾವ ತಲೆದೊರಿದೆ. ದಿನ ನಿತ್ಯವೂ ಕೊರೋನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿರುವ ಹಿನ್ನೆಲೆ, ಸೋಂಕಿತರಿಗೆ ಬೆಡ್ ಸೌಲಭ್ಯದೊಂದಿಗೆ ಚಿಕಿತ್ಸೆ ನೀಡುವದು ಈಗ ಮರಿಚಿಕೆಯಾಗಿದೆ. ಇಷ್ಟು ಇಷ್ಟು ದಿವಸ ಯಾದಗಿರಿ ಕೋವಿಡ್ ಆಸ್ಪತ್ರೆಯಲ್ಲಿ ಬೇಡ್ ನ ಸಮಸ್ಯೆ ತಲೆದೊರಿರಲಿಲ್ಲ. ಆದರೆ, ನಿನ್ನೆ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಈಗ ಬೇಡ್ ಗಳ ಸಮಸ್ಯೆ ತಲೆದೊರಿದೆ. ಯಾದಗಿರಿ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 739 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿವರಗೆ 96 ಸೋಂಕಿತರು ಬಲಿಯಾಗಿದ್ದಾರೆ.

ಈ ವರಗೆ 16291 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದು, 3613 ಸಕ್ರಿಯ ಪ್ರಕರಣಗಳಿವೆ. ಯಾದಗಿರಿ ತಾಲೂಕಿನ ಮುದ್ನಾಳ ಕೋವಿಡ್ ಆಸ್ಪತ್ರೆಯಲ್ಲಿ 341 ಜನ ಹಾಗೂ ಶಹಾಪುರ ತಾಲೂಕಾ ಆಸ್ಪತ್ರೆಯಲ್ಲಿ 47, ಸುರಪುರ ತಾಲಾಕಾ ಆಸ್ಪತ್ರೆಯಲ್ಲಿ 43 ಜನ ಸೇರಿ 431 ಜನ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೋವಿಡ್ ಆಸ್ಪತ್ರೆಯಲ್ಲಿ ಬೇಡ್ ಫುಲ್ ರೋಗಿಗಳ ಪರದಾಟ...!

ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದ ಸಮೀಪದ ಕೋವಿಡ್ ಆಸ್ಪತ್ರೆಯು 300 ಬೇಡ್ ಆಸ್ಪತ್ರೆಯಾಗಿದ್ದು, 300 ಬೇಡ್ ಫುಲ್ ಆದ ಕಾರಣ ಮತ್ತೆ ಹೆಚ್ಚುವರಿಯಾಗಿ 41 ಬೇಡ್ ಗಳನ್ನು ಹಾಕಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 341 ಜನ ಸೋಂಕಿತರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯ 16 ಐಸಿಯು,160 ಆಕ್ಸಿಜನ್ ಸೌಲಭ್ಯ ಸೇರಿ 341 ಸೋಂಕಿತರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ ಆಸ್ಪತ್ರೆ ಈಗ ಫುಲ್ ಆಗಿದೆ.ಜಿಲ್ಲೆಯ ಹಳ್ಳಿಗಳಿಂದ ಸೋಂಕಿತರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗದೇ ಖಾಸಗಿ ಆಸ್ಪತ್ರೆ ಇಲ್ಲವೇ ಅನಿವಾರ್ಯವಾಗಿ ಊರಿಗೆ ತೆರಳುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೊರೊನಾ ಲಕ್ಷಣಗಳು ಇಲ್ಲದ ಸೋಂಕಿತರಿಗೆ ಹೋಂ ಐಸೋಲೆಷನ್ ನಲ್ಲಿ ಇರಲು ಸೂಚಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಗತ್ಯ ಔಷಧಿಗಳನ್ನು ವಿತರಣೆ ಮಾಡಿ ಕಟ್ಟುನಿಟ್ಟಿನ ಕೋವಿಡ್ ‌ನಿಯಮ ಪಾಲನೆಗೆ ಸೂಚಿಸುತ್ತಿದ್ದಾರೆ.

ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಅನಾವಶ್ಯಕವಾಗಿ ಓಡಾಡದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೂಚನೆ ನೀಡುತ್ತಿದ್ದಾರೆ.ಬಹಳಷ್ಟು ಸೋಂಕಿತರು ಬೇಡ್ ಸಿಗದೇ ಪರದಾಡುವಂತಾಗಿದೆ‌.ರೋಗಿ ಸಂಬಂಧಿಕರು ಸರಕಾರದ ವಿರುದ್ಧ ಹೀಡಿಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಜಿಲ್ಲಾಶಸ್ತ್ರ ಚಿಕಿತ್ಸಕ ಡಾ.ಬಸವರಾಜ ಹಿರೇಮಠ ಮಾತನಾಡಿ,ಯಾದಗಿರಿ ಕೋವಿಡ್ ಆಸ್ಪತ್ರೆಯಲ್ಲಿ ಸದ್ಯಕ್ಕೆ ಬೇಡ್ ಕೊರತೆಯಾಗಿದೆ ಎಂದರು.

ಇದನ್ನೂ ಓದಿ: CoronaVirus: ಲಾಕ್​ಡೌನ್ ಅಥವಾ ಜನತಾ ಕರ್ಫ್ಯೂ?; ನಾಳೆ ಸಂಜೆ ನಿರ್ಧರಿಸಲಿರುವ ಸರ್ಕಾರ!ಸರಕಾರದ ವಿರುದ್ಧ ಅಕ್ರೋಶ...!

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಸೋಂಕಿತರ ಸಂಬಂಧಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆಯಲ್ಲಿ ತಲ್ಲಿನರಾಗಿ ಸಿಎಂ ರಾಜ್ಯದ ಜನರ ಹೀತಕಾಪಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ಕೋವಿಡ್ ಕಡಿವಾಣ ಹಾಕಲು ಅಗತ್ಯ ಕ್ರಮಕೈಗೊಂಡು ಯಾವುದೇ ಸಮಸ್ಯೆಯಾಗದಂತೆ ನೋಡಿ ಕೊಳ್ಳ ಬೇಕಾಗಿತ್ತು. ಆದರೆ, ಈಗ ಕೊರೊನಾದಿಂದ ಆಕ್ಸಿಜನ್, ಚಿಕಿತ್ಸೆ ಸಿಗದೇ ಜನರು ಸಾಯುತ್ತಿದ್ದಾರೆ. ಯಾದಗಿರಿ ‌ಕೋವಿಡ್ ಆಸ್ಪತ್ರೆಯಲ್ಲಿ ಕೂಡ ಬೇಡ್ ಉಳ್ಳವರಿಗೆ ನೀಡಲಾಗುತ್ತಿದೆ.
Youtube Video

ಬಡವರಿಗೆ ಸಿಗುತ್ತಿಲ್ಲವೆಂದರು.ಸೋಂಕಿತರು ಆಸ್ಪತ್ರೆಗಳಲ್ಲಿ ಬೇಡ್ ಸಿಗದೆ ನರಳಾಡುತ್ತಿದ್ದಾರೆ .ಸರಕಾರ ಯಾದಗಿರಿ ಜಿಲ್ಲೆಯಲ್ಲಿ ಕೂಡ ಐಸಿಯು ಬೇಡ್ ಸೌಲಭ್ಯದೊಂದಿಗೆ ಉತ್ತಮ ಸೌಲಭ್ಯವುಳ್ಳ ಹೆಚ್ಚಿನ ಬೇಡ್ ನ ಆಸ್ಪತ್ರೆ ನಿರ್ಮಾಣದ ಕಾಳಜಿ ತೊರಬೇಕೆಂದರು.
Published by: MAshok Kumar
First published: May 7, 2021, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories