HOME » NEWS » District » THERE IS A CD THAT CANNOT BE SEEN BY THE EYE IT IS NOW NEAR DK SHIVAKUMAR ANOTHER EXPLOSIVE STATEMENT FROM YATNAL RHHSN RBK

ಕಣ್ಣಿನಿಂದ ನೋಡಲಾಗದ ಸಿಡಿ ಇದೆ, ಅದು ಈಗ ಡಿಕೆ ಶಿವಕುಮಾರ್ ಬಳಿ ಇದೆ; ಯತ್ನಾಳರಿಂದ ಮತ್ತೊಂದು ಸ್ಫೋಟಕ ಹೇಳಿಕೆ

ಯಡಿಯೂರಪ್ಪ ನವರೇ ನೀವು ಮೊದಲು ಕುಟುಂಬ ರಾಜಕಾರಣದಿಂದ ಹೊರಬನ್ನಿ.  ರಾತ್ರಿ ಕೆಲಸ ಮಾಡುವ ವಿಜಯೇಂದ್ರ ಚಮಚಗಳಿಗೆ ಹುದ್ದೆ ಸಿಗುತ್ತಿವೆ. ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಬಿಜೆಪಿ ನಿಮ್ಮ ಸ್ವಂತ ಮನೆಯಲ್ಲ. ವಿಜಯೇಂದ್ರನದ್ದೇ ಆಡಳಿತವಿದೆ ಎಂದು ಆರೋಪಿಸಿದರು,

news18-kannada
Updated:January 14, 2021, 8:49 PM IST
ಕಣ್ಣಿನಿಂದ ನೋಡಲಾಗದ ಸಿಡಿ ಇದೆ, ಅದು ಈಗ ಡಿಕೆ ಶಿವಕುಮಾರ್ ಬಳಿ ಇದೆ; ಯತ್ನಾಳರಿಂದ ಮತ್ತೊಂದು ಸ್ಫೋಟಕ ಹೇಳಿಕೆ
ಬಸನಗೌಡ ಪಾಟೀಲ್ ಯತ್ನಾಳ್.
  • Share this:
ಬಾಗಲಕೋಟೆ (ಜ,14): ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ರಾಜ್ಯಕಾರಣದದಲ್ಲಿ ಬಸನಗೌಡ ಪಾಟೀಲ ಯತ್ನಾಳ ಸ್ಫೋಟಿಸಿದ ಸಿಡಿ ರಹಸ್ಯ ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಬಿಚ್ಚಿಟ್ಟಿದ್ದಾರೆ. ಸಿಡಿ ಸ್ಪೋಟಕ ಹೇಳಿಕೆಯಿಂದ ಯಾವ ಸಿಡಿ ಇರಬಹುದು ಎನ್ನುವ ಚರ್ಚೆಗೆ ಇವತ್ತು ಯತ್ನಾಳ್ ಹೊಸ ಆಯಾಮ ನೀಡಿದ್ದಾರೆ. ಕಣ್ಣಿನಿಂದ ನೋಡಲಾಗದಂತಹ ಸಿಡಿ ಇದೆ. ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಆ ಸಿಡಿಯನ್ನು ಮಾಡಿದ್ದೇ ಅವರ ಮೊಮ್ಮಗ. ಹಿಂದೆ ಇದ್ದದ್ದೇ  ಆ ಸಿಡಿ, ಯಾರೊಂದಿಗೆ ಇದೆ ಅಂತ ತಮಗೆಲ್ಲಾ ಅದು ಗೊತ್ತೇ ಇದೆ. ನಾನು ಆ ಬಗ್ಗೆ ಏನು ಹೇಳಬೇಕಿಲ್ಲ ಎಂದು ಹೇಳಿದರು.

ಆ ಸಿಡಿಯನ್ನೇ ಮೂವರು ನನ್ನ ಬಳಿ ತೆಗೆದುಕೊಂಡು ಬಂದಿದ್ದರು. ಅದರಲ್ಲಿ ಇಬ್ಬರು ಈಗ ಸಚಿವರಾಗಿದ್ದಾರೆ. ನನ್ನ ಬಳಿ  ಆ ಸಿಡಿ ಇದ್ದಿದ್ದರೆ ನಾನೇ ಉಪ ಮುಖ್ಯಮಂತ್ರಿ ಆಗಿರುತ್ತಿದ್ದೆ. ಆದರೆ ಅಂತಹ ಕೆಳಮಟ್ಟಕ್ಕೆ ಹೋಗುವವನು ನಾನಲ್ಲ. ಮೌಲ್ಯಾಧಾರಿತ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಸಿಡಿಯನ್ನು ಇಟ್ಟುಕೊಂಡೇ ಕಾಂಗ್ರೆಸ್ಸಿಗರು ಅನುದಾನ ತೆಗೆದುಕೊಳ್ಳುತ್ತಿದ್ದಾರೆ‌. ಆ ಸಿಡಿ ಡಿಕೆಶಿ ಬಳಿಯೇ ಇದೆ. ನಿಜವಾಗಲೂ ರಾಜ್ಯದಲ್ಲಿ ವಿರೋಧ ಪಕ್ಷ ಆಗಿದ್ದರೆ ಸಿಡಿ ಬಿಡುಗಡೆ ಮಾಡಲಿ. ಡಿಕೆಶಿ ಮಾತನಾಡುವ ಧಾಟಿಯಲ್ಲೇ ಅವರ ಬಳಿ ಸಿಡಿ ಇದೆ ಅನ್ನೋದು ಗೊತ್ತಾಗುತ್ತೇ. ಸಿಡಿ ಕುರಿತು ಸಿಬಿಐ ತನಿಖೆ ಆಗಲಿ. ಸಿದ್ದರಾಮಯ್ಯ, ಜಾಜ್೯, ಜಮೀರ್, ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ಹೆಚ್ಚು ಅನುದಾನ ಹೋಗೋದೆ ಆ ಸಿಡಿ ಬ್ಲ್ಯಾಕ್ ಮೇಲ್ ನಿಂದ. ಸಿಡಿ ಬಗ್ಗೆ ತನಿಖೆಯಾಗಲಿ, ಸಿಬಿಐ ನನ್ನ ಬಳಿ ಬರುತ್ತಾರೋ ಆಗ ನನ್ನ ಬಳಿ ಸಿಡಿ ಬಗ್ಗೆ ಮಾತನಾಡಿದವರ ಬಗ್ಗೆ ತಿಳಿಸುತ್ತೇನೆ. ರಾಜ್ಯ ಪೊಲೀಸರಿಂದ ತನಿಖೆ ಸಾಧ್ಯವಿಲ್ಲ. ಯಡಿಯೂರಪ್ಪ ಪಾರದರ್ಶಕತೆ ಬಗ್ಗೆ ಮಾತನಾಡುತ್ತಾರೆ. ಸಿಡಿ ಬಗ್ಗೆ ತನಿಖೆ ಆಗಲಿ. ಅವರ ಮನೆಯಲ್ಲೇ ಸಿಡಿ ಆಗಿವೆ. ಹೊರಗಿನವರು ನಮ್ಮಂತಹವರು ನಿಮ್ಮಂತಹವರು ಮಾಡಿಲ್ಲ. ನೀವು  ಸ್ಟಿಂಗ್ ಮಾಡುತ್ತಿರಲ್ಲ ಹಾಗಲ್ಲ ಎಂದರು.

ಇನ್ನು ಸುಲಭವಾಗಿ ಎಲ್ಲರಿಗೂ ಬ್ಲ್ಯಾಕ್ ಮೇಲ್ ಮಾಡಲಿಕ್ಕೆ ಆಗುವುದಿಲ್ಲ. ವೀಕ್ ಸಿಎಂ ಇದ್ದರೆ ಮಾತ್ರ ಈ ರೀತಿ ಮಾಡಲು ಸಾಧ್ಯ. ತನಿಖೆ ಆಗಲಿ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಬಸನಗೌಡ ಪಾಟೀಲ್ ಯತ್ನಾಳ್, ಸಿಬಿಐ ತನಿಖೆಯಾಗಲಿ ಎಂದರು. ಹಣ ಕೊಟ್ಟು ಮಂತ್ರಿ ಸ್ಥಾನ ಪಡೆದಿದ್ದಾರೆ ಎನ್ನುವ ವಿಚಾರಕ್ಕೆ ಈ ಬಗ್ಗೆ ನಾನು ಒಬ್ಬನೇ ಅಲ್ಲ ಎಲ್ಲರೂ ಹೇಳತ್ತಿದ್ದಾರೆ. ಸಚಿವ ಸ್ಥಾನಕ್ಕೆ ಎಷ್ಟೆಷ್ಟು ಪೇಮೆಂಟ್ ಆಗಿದೆ ಅನ್ನೋದು ತನಿಖೆಯಾಗಲಿ ಎಂದರು.

ಸಿಡಿ ತೋರಿಸಿ ಯಡಿಯೂರಪ್ಪ ಬಳಿ ಕೆಲಸ‌ ಮಾಡಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ನಮಗಿಂತ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಶಾಸಕರಿಗೆ ಅನುದಾನ ಬರ್ತಿಲ್ಲ. ಆದರೆ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಅನುದಾನ ಸಿಗುತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಪಕ್ಕದ ಅಭಯ್ ಪಾಟೀಲ್ ಗಿಂತ ಹೆಚ್ಚು ಅನುದಾನ ಬರ್ತಿದೆ. ಯಾಕೆ ಬರ್ತಿದೆ ಅಂತ ಸಿಎಂ ಹೇಳಬೇಕು. ಶಿಕಾರಿಪುರ, ಶಿವಮೊಗ್ಗಕ್ಕೆ ಹೆಚ್ಚಿನ ಅನುದಾನ ಹೋಗುತ್ತಿದೆ. ಬಾದಾಮಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಸಾವಿರಾರು ಕೋಟಿ ಕೊಡ್ತಿದ್ದೀರಿ. ಜಮೀರ್ ಅಹ್ಮದ್ ಖಾನ್​ ಅವರಿಗೆ ಹೆಚ್ಚು ಅನುದಾನ ಕೊಡುತ್ತಿದ್ದಿರಿ. ಬಿಜೆಪಿ ಶಾಸಕರು ಹೋದರೆ ವಿಷ ಕುಡಿಯೋದಕ್ಕೆ ಹಣವಿಲ್ಲ. ಸಂಬಳ‌ ಮಾಡೋಕೆ ಹಣವಿಲ್ಲ ಅಂತೀರಿ. ನಾವು ಸಿದ್ದರಾಮಯ್ಯ, ಡಿಕೆಶಿ, ಜಾರ್ಜ್, ಜಮೀರ್,ಲಕ್ಷ್ಮಿ ಹೆಬ್ಬಾಳಕರ್  ಅಭಿವೃದ್ಧಿ ಮಾಡೋಕೆ ನಿಮ್ಮನ್ನು ಸಿಎಂ ಮಾಡಿದ್ದು? ಇದು ನನ್ನ ಪ್ರಶ್ನೆ. ನಾನು ಸರಕಾರದ ವಿರುದ್ಧವಲ್ಲ. ನಾನು ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ, ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಿದ್ದೇನೆ. ನೀವು ರಾಜ್ಯಕ್ಕೆ ಮುಖ್ಯ ಮಂತ್ರಿ. ವೀರಶೈವ ಲಿಂಗಾಯತರನ್ನು ತೋರಿಸಿ ಭ್ರಷ್ಟಾಚಾರ ರಹಿತವಾದ  ಪ್ರಧಾನಿ, ಗೃಹಸಚಿವ  ಅಮಿತ್ ಶಾ ಅವರನ್ನು ಅಂಜಿಸುತ್ತಿದ್ದೀರಿ ಎಂದರು.

ಬಿಎಸ್ವೈ ಕುಟುಂಬ ರಾಜಕಾರಣಕ್ಕೆ ಯತ್ನಾಳ್ ಕಿಡಿಕಿಡಿ!

ಯಡಿಯೂರಪ್ಪ, ಮೊಮ್ಮಗ ಸಂಬಂಧಿಕರೆಲ್ಲರೂ ರಾಜಕೀಯದಲ್ಲಿದ್ದಾರೆ. ಅವರ ಮಗಳು ಎರಡು ಇಲಾಖೆ ನೋಡಿಕೊಳ್ಳುತ್ತಿದ್ದಾರೆ. ಮೊಮ್ಮಕ್ಕಳು ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ಕಾವೇರಿ, ಕೃಷ್ಣಾದಲ್ಲಿ ಬಿಎಸ್ ಯಡಿಯೂರಪ್ಪ ಸಂಬಂಧಿಕರೇ ತುಂಬಿ ಹೋಗಿದ್ದಾರೆ. ಪ್ರಧಾನಿ ಮೋದಿ ಆನುವಂಶಿಕ ರಾಜಕಾರಣ ವಿರೋಧಿಸಿದ್ದಾರೆ. ಅದಕ್ಕೆ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇವತ್ತು ಅನುವಂಶಿಕ ರಾಜಕಾರಣ ಮಾಡಿದವರ ರಾಜಕೀಯ  ಅಂತ್ಯವಾಗಿದೆ. ಲಾಲು ಪ್ರಸಾದ್ ಯಾದವ್ ಅವರ  ರಾಜಕೀಯ ಅಂತ್ಯವಾಗಿದೆ ಎನ್ನುವುದು ಉಲ್ಲೇಖಿಸಿ, ಯಡಿಯೂರಪ್ಪರ ರಾಜಕೀಯ ಅಂತ್ಯವಾಗಲಿದೆ ಎಂದರು.

ಯಡಿಯೂರಪ್ಪ ನವರೇ ನೀವು ಮೊದಲು ಕುಟುಂಬ ರಾಜಕಾರಣದಿಂದ ಹೊರಬನ್ನಿ.  ರಾತ್ರಿ ಕೆಲಸ ಮಾಡುವ ವಿಜಯೇಂದ್ರ ಚಮಚಗಳಿಗೆ ಹುದ್ದೆ ಸಿಗುತ್ತಿವೆ. ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಬಿಜೆಪಿ ನಿಮ್ಮ ಸ್ವಂತ ಮನೆಯಲ್ಲ. ವಿಜಯೇಂದ್ರನದ್ದೇ ಆಡಳಿತವಿದೆ. ಇನ್ನು ಯುವರಾಜ್ ಸಿಸಿಬಿ ಪ್ರಕರಣದಲ್ಲಿ ಯುವರಾಜಂದು ತೋರಿಸಿದ್ರಿ, ಯಾಕೆ ತೋರಿಸಿದ್ರಿ. ನಿಮ್ಮ ಸಚಿವ ಸಂಪುಟ ವಿಸ್ತರಣೆ ಆದ ಮೇಲೆ ನಿಮ್ಮ ಕೆಲಸ ಆಯಿತು ಬಂದ್ ಮಾಡಿದ್ರಿ. ಇದರಲ್ಲಿ ಏನೋ ಕುತಂತ್ರವಿದೆ. ನಮ್ಮ ಕೇಂದ್ರ ನಾಯಕರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಿರಿ. ಇದು ನನ್ನ ನೇರ ಆರೋಪ. ಯಾವಾಗ ಯಾವಾಗ ಯಾರನ್ನು ಉಪಯೋಗಿಸಬೇಕು?ಎಂದು ಅವ್ರಿಗೆ ಗೊತ್ತಿದೆ. ಡ್ರಗ್ ಮಾಫಿಯಾ ಮಾಡಿದ್ರು. ಎರಡು ಸಿನೆಮಾ ಹಿರೋಯಿನ್ ಗಳನ್ನು ಹಿಡಕೊಂಡ ಹೋದ್ರು. ಈಗ ಯುವರಾಜನನ್ನು ಹಿಡ್ಕೊಂಡು ಯಾರ  ಫೋಟೊ ತೋರಿಸಬೇಕಿತ್ತು. ಅದನ್ನು ತೋರಿಸಿದ್ರಿ. ಸಿಸಿಬಿ ಅವ್ರು ಮೊಬೈಲ್ ಸೀಜ್ ಮಾಡಿದ್ರೂ, ಫೋಟೊಗಳು ಮಾಧ್ಯಮಗಳಿಗೆ ಹೊರಬಂದವು. ಸಿಸಿಬಿಯಿಂದ ಕೇಂದ್ರ ನಾಯಕರಾದ ಜೆಪಿ ನಡ್ಡಾ, ನಿರಾಣಿ, ಲಕ್ಷ್ಮಣ ಸವದಿ ಅವ್ರದ್ದು ಫೋಟೊ ಹೇಗೆ ಹೊರ ಬಂತು. ಫೋಟೊಗಳು ಹೇಗೆ ಹೊರಬಂದವು ಅಂತಾ ಮುಖ್ಯಮಂತ್ರಿ ಹಾಗೂ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಲಿ ಎಂದರು.ಇದನ್ನು ಓದಿ: ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆವರೆಗೂ ಹಸಿರು ಮಾರ್ಗದ ಮೆಟ್ರೋ ರೈಲಿಗೆ ಸಿಎಂ ಬಿಎಸ್​ವೈ ಚಾಲನೆ

ಮಾಧ್ಯಮಗಳ ಜೊತೆ ವಿಜಯೇಂದ್ರನ ದೋಸ್ತಿ ಏನಿದೆ‌!

ರಾಜಾಹುಲಿ, ರಾಜಾಹುಲಿ ಅಂತಾ ತೋರಿಸ್ತೀರಿ ಎಂದು ಮಾಧ್ಯಮಗಳ ವಿರುದ್ಧ ವ್ಯಂಗ್ಯವಾಡಿದರು. ರಾಜಾಹುಲಿಗೆ ಏನಾದ್ರೂ ಆದ್ರೆ ಬಿಜೆಪಿ ಸರ್ವನಾಶ ಅಂತಾ ತೋರಿಸ್ತಿರಿ ಎಂದರು. ಬಿಜೆಪಿ ಪಕ್ಷಕ್ಕೆ ಏನು ಆಗುವುದಿಲ್ಲ. ಅಸಮಾಧಾನಿತ ಶಾಸಕರು ರಾಜ್ಯಕ್ಕೆ ಬರೋ ಅಮಿತ್ ಶಾಗೆ ದೂರು ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಸಮಾಧಾನಿತ ಶಾಸಕರು ದೂರು ನೀಡಲಿ ಬಿಡಿ, ತಪ್ಪೇನಿದೆ. ನಾವು ಹೋಗಿ ದೂರು ಕೊಡ್ತೇವೆ. ಎಲ್ಲ ಶಾಸಕರು ರೆಡಿ ಆಗಬೇಕು. ಎಲ್ಲಾ ಶಾಸಕರಿಗೂ ಅನ್ಯಾಯವಾಗ್ತಿದೆ, ಬಹಳ ನೋವಾಗಿದೆ. ನಮಗೆಲ್ಲಾ ಧೈಯ೯ ಬಂದಿದೆ. ರಾಜಕೀಯ ಸ್ಥಾನಮಾನ ಸೇರಿ ನಮಗೆ ಅಭಿವೃದ್ಧಿಗೆ ಹಣ ಸಿಕ್ತಿಲ್ಲ. ಪಕ್ಷದ ರಾಜ್ಯಾಧ್ಯಕ್ಷರೇ ಕಿಮ್ಮತ್ ಇಲ್ಲ, ಬೇಕಾಬಿಟ್ಟಿಯಾಗಿ ನಿಗಮ ಮಂಡಳಿ ಸ್ಥಾನ ನೀಡ್ತಿದ್ದಾರೆ. ಅಂತಹ ಅಸಮಾಧಾನಿತರ ವಿರುದ್ಧ ಗರಂ ಆಗೋಕೆ ರಮೇಶ್ ಜಾರಕಿಹೊಳಿ ಯಾರು. ಅವರು ತ್ಯಾಗ ಮಾಡಿದ್ದಕ್ಕೆ ಪಕ್ಷ ಅಧಿಕಾರಕ್ಕೆ ಬಂದಿದೆ. ಅದನ್ನು ಸ್ವಾಗತಿಸುತ್ತೇನೆ. ಆದ್ರೆ ಯಾವ ಶಾಸಕರೂ ಮಾತನಾಡಬಾರದೆಂದು ಅವರ ಬಾಯಿಗೆ ಕೀಲಿ ಹಾಕೋಕೆ ಸಾಧ್ಯವಿಲ್ಲ. ಪಕ್ಷವನ್ನು ಯಡಿಯೂರಪ್ಪ ಒಬ್ಬರೇ ಕಟ್ಟಿಲ್ಲ. ಅವರ ಕಾರಿಗೆ ಡಿಸೇಲ್ ಹಾಕಿ ಪಕ್ಷ ಕಟ್ಟಿದ್ದೇವೆ. ಯಡಿಯೂರಪ್ಪ ಕುಟುಂಬದ ಸಲುವಾಗಿ ಪಕ್ಷ ಕಟ್ಟಿಲ್ಲ. ಪಕ್ಷ ಕಟ್ಟಿದ್ದು ಎಲ್ಲರ ಪರಿಶ್ರಮ ಹೋರಾಟದಿಂದ ಎಂದರು.

ಜನವರಿ 25ರವರೆಗೆ ಕಾಯಿರಿ ಏನಾಗುತ್ತೆ ಕಾದುನೋಡಿ, ಸಂಕ್ರಾಂತಿಯಂದು ನನ್ನ ಪಾತ್ರ ಏನಿದೆ ಎನ್ನುವುದನ್ನು ತೋರಿಸುತ್ತೇನೆ ಎಂದಿದ್ದೆ, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟದ ಪಾದಯಾತ್ರೆಯಲ್ಲೇ ಭಾಗಿಯಾಗಿದ್ದೇ ನನ್ನ ಪಾತ್ರ, ಸಂಕ್ರಾಂತಿಯಂದು ಬದಲಾವಣೆ ಆಗುತ್ತದೆ ಎನ್ನುವುದು ಈಗೆಲ್ಲಾ ಆಗಿದ್ದು ಎಂದರು. ಇನ್ನು ಮುಖ್ಯಮಂತ್ರಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ, 500ಕೋಟಿ, ಹಾಗೂ ಬೀದರ್ ನಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಘೋಷಿಸಿದ್ದಾರೆ. ಸುಮ್ಮನೆ ಅನುದಾನ ಘೋಷಿಸುತ್ತಾರೆ ಎಂದು ಹೇಳಿದರು.
Published by: HR Ramesh
First published: January 14, 2021, 8:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories