HOME » NEWS » District » THE VILLAGERS WHO WON THE GOLD CROWN FOR DCM AND MLA FORGET ABOUT THE CORONA RULES HK

ಡಿಸಿಎಂ, ಶಾಸಕರಿಗೆ ಚಿನ್ನದ ಕಿರೀಟ ತೊಡಿಸಿದ ಗ್ರಾಮಸ್ಥರು: ಕೊರೋನಾ ನಿಯಮ ಪಾಲಿಸೋದನ್ನೇ ಮರೆತರು

ಡಿಸಿಎಂ ಗೋವಿಂದ ಕಾರಜೋಳ ಮತ್ತು ಕಾಂಗ್ರೆಸ್ ಶಾಸಕರಾದ ಎಂ. ಬಿ. ಪಾಟೀಲ್ ಹಾಗೂ ಶಿವಾನಂದ ಪಾಟೀಲ್​​ ಪಾಲ್ಗೊಂಡಿದ್ದ ಕಾರ್ಯಕ್ರಮಲ್ಲಿ ಗ್ರಾಮಸ್ಥರು ಸಾಮಾಜಿಕ ಅಂತರವನ್ನೇ ಮರೆತಿದ್ದರು

news18-kannada
Updated:November 23, 2020, 7:54 PM IST
ಡಿಸಿಎಂ, ಶಾಸಕರಿಗೆ ಚಿನ್ನದ ಕಿರೀಟ ತೊಡಿಸಿದ ಗ್ರಾಮಸ್ಥರು: ಕೊರೋನಾ ನಿಯಮ ಪಾಲಿಸೋದನ್ನೇ ಮರೆತರು
ಡಿಸಿಎಂ, ಶಾಸಕರಿಗೆ ಚಿನ್ನದ ಕಿರೀಟ ತೊಡಿಸಿದ ಗ್ರಾಮಸ್ಥರು
  • Share this:
ವಿಜಯಪುರ(ನವೆಂಬರ್​. 23): ಡಿಸಿಎಂ ಮತ್ತು ಇಬ್ಬರು ಕಾಂಗ್ರೆಸ್ ಶಾಸಕರಿಗೆ ಚಿನ್ನದ ಕಿರೀಟ ಹಾಕುವ ಮೂಲಕ ಗ್ರಾಮಸ್ಥರು ತಮ್ಮ ನಾಯಕರ ಕಾರ್ಯ ವೈಖರಿಗೆ ಕೃತಜ್ಞತೆ ಸಲ್ಲಿಸಿದ ಅಪರೂಪದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ನಡೆದಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಿಸಿಎಂ ಗೋವಿಂದ ಕಾರಜೋಳ ಮತ್ತು ಕಾಂಗ್ರೆಸ್ ಶಾಸಕರಾದ ಎಂ. ಬಿ. ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ಅವರಿಗೆ ಗ್ರಾಮಸ್ಥರು ತಲೆಗೆ ಚಿನ್ನದ ಕಿರೀಟ ತೊಡಿಸಿದರು. ತಲಾ 210 ಗ್ರಾಂ ನ ಮೂರು ಚಿನ್ನದ ಕಿರೀಟಗಳನ್ನು ಮೂರು ಜನ ನಾಯಕರಿಗೆ ಗ್ರಾಮಸ್ಥರು ತೊಡಿಸಿದರು. ಚಿನ್ನದ ಕಿರೀಟ ಸ್ವೀಕರಿಸಲು ಮೂರೂ ಜನ ನಾಯಕರು ನಿರಾಕರಿಸಿದರು. ಆದರೆ, ಅದಕ್ಕೆ ಒಪ್ಪದ ಗ್ರಾಮಸ್ಥರು ಒತ್ತಾಯಪೂರಕವಾಗಿ ಚಿನ್ನದ ಕಿರೀಟ ತೊಡಿಸುವ ಮೂಲಕ ಕೆಲಸ ಮಾಡಿದವರಿಗೆ ಪ್ರೀತಿಯ ಆದರ ತೋರಿಸಿದರು. ಈ ಮೂಲಕ ಪ್ರವಾಹ ಮತ್ತು ಕೋವಿಡ್ ಸಂಕಷ್ಟದ ಮಧ್ಯೆಯೂ ಚಿನ್ನದ ಕಿರೀಟ ನೀಡಿ ಮೂರು ಜನ ನಾಯಕರ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರೋನಾ ನಿಯಮ ಪಾಲನೆ ಮರೆತ ಗ್ರಾಮಸ್ಥರು

ಈ ಮಧ್ಯೆ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ ನಡೆದ ನಾನಾ ಕಾರ್ಯಕ್ರಮಗಳಲ್ಲಿ ಕೊರೋನಾ ನಿಯಮಗಳನ್ನು ಗ್ರಾಮಸ್ಥರು ಉಲ್ಲಂಘಿಸಿದ ಘಟನೆ ನಡೆಯಿತು. ಡಿಸಿಎಂ ಗೋವಿಂದ ಕಾರಜೋಳ ಮತ್ತು ಕಾಂಗ್ರೆಸ್ ಶಾಸಕರಾದ ಎಂ. ಬಿ. ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ಪಾಲ್ಗೊಂಡಿದ್ದ ಕಾರ್ಯಕ್ರಮಲ್ಲಿ ಗ್ರಾಮಸ್ಥರು ಸಾಮಾಜಿಕ ಅಂತರವನ್ನೇ ಮರೆತಿದ್ದರು. ಅಲ್ಲದೆ, ಮಾಸ್ಕ್ ಕೂಡ ಸರಿಯಾಗಿ ಧರಿಸದೇ ಕೊರೋನಾ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಕಂಡು ಬಂದಿತ್ತು.ಮೊದಲಿಗೆ ನಡೆದ ಕಾರಜೋಳ ಕೆರೆಗೆ ಬಾಗೀನ ಅರ್ಪಿಸುವ ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ತಲೆಯ ಮೇಲೆ ಪೂರ್ಣ ಕುಂಭ ಹೊತ್ತ ಮಕ್ಕಳು ಸುಮಾರು ಒಂದು ಕಿ. ಮೀ ವರೆಗೆ ಬರಿಗಾಲಲ್ಲಿಯೇ ಮೆರವಣಿಗೆಯಲ್ಲಿ ಪಾಲ್ಗೊಂಡರು.  ಸಾಮಾಜಿಕ ಅಂತರವಂತೂ ದೂರದ ಮಾತು. ಅಷ್ಟೇ ಅಲ್ಲ, ಮಾಸ್ಕ್ ಕೂಡ ಧರಿಸದೇ ಇದ್ದದ್ದು ಆತಂಕ ಮೂಡಿಸಿತ್ತು.ಕೊರೋನಾ ಭೀತಿ ಹಿನ್ನೆಲೆ ಶಾಲೆಗಳಿಗೆ ರಜೆ ನೀಡಲಾಗಿದ್ದರೂ, ಇಲ್ಲಿ ಮಕ್ಕಳು ಪಾಲ್ಗೊಂಡಿದ್ದು ಮಾತ್ರ ಮಕ್ಕಳಷ್ಚೇ ಅಲ್ಲ, ಅವರ ಪೋಷಕರು ಮತ್ತು ಕಾರ್ಯಕ್ರಮ ಸಂಘಟಕರೂ ಸರಕಾರದ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ್ದ ಕಂಡು ಬಂತು.ಇದನ್ನೂ ಓದಿ : ಗರಿಗೆದರಿದ ಸಂಪುಟ ವಿಸ್ತರಣೆ ಕಸರತ್ತು; ಸಿಎಂ ಭೇಟಿ ಮಾಡಿದ ಕಟೀಲ್​, ಬಿಎಲ್​ ಸಂತೋಷ್​​

ಆದರೆ, ನಂತರ ನಡೆದ ರಾಜ್ಯ ಹೆದ್ದಾರಿ ಸಂಖ್ಯೆ- 218 ರ ಅಗಲೀಕರಣ ಹಾಗೂ ರಸ್ತೆ ಸುಧಾರಣೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿಯೂ ಅದೇ ರಾಗ, ಅದೇ ಹಾಡು ಎಂಬಂತಾಗಿತ್ತು. ಈ ಕಾರ್ಯಕ್ರಮದಲ್ಲಿಯೂ ಸಾಮಾಜಿಕ ಅಂತರವಿರಲಿಲ್ಲ. ಮಾಸ್ಕ್ ಕೂಡ ಹಾಕಿರಲಿಲ್ಲ. ಯಾವುದೇ ಮುಂಜಾಗೃತೆ ಇಲ್ಲದೆ ನೂರಾರು ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೋಂಡರು.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 200ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯಾವುದೇ ಸಾಮಾಜಿಕ ಅಂತರವಿಲ್ಲದೆ ಮತ್ತು ಮಾಸ್ಕ್ ಬಳಸದೆ ಗ್ರಾಮಸ್ಥರು ಕುಳಿತುಕೊಂಡಿದ್ದು ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಸಾಕ್ಷಿಯಾಗಿತ್ತು.
Published by: G Hareeshkumar
First published: November 23, 2020, 7:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories