ಪಂಚಾಯತಿ ಚುನಾವಣೆ ದ್ವೇಷ; ಅಭ್ಯರ್ಥಿಯಾಗಿದ್ದಕ್ಕೆ ದಲಿತ ವ್ಯಕ್ತಿ ಅಂತ್ಯಕ್ರಿಯೆಗೆ ಜಾಗ ಕೊಡದ ಸವರ್ಣೀಯರು!

ಮೃತ ಚಂದ್ರಪ್ಪ ತಳವಾರ ಸೊಸೆ ಗಂಗವ್ವಾ ತಳವಾರ ಸ್ಪರ್ಧಿಸಿದ್ದಾರೆ. ನಮ್ಮ ವಿರುದ್ಧ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ನಿಮಗೆ ನಮ್ಮ ಜಮೀನು ಅಂತ್ಯಕ್ರಿಯೆಗೆ ಏಕೆ ಕೊಡಬೇಕು ಎನ್ನವುದು ಅವರ ವಾದ. ಕಳೆದ ಚುನಾವಣೆ ಸವರ್ಣೀಯ ಕುಟುಂಬವನ್ನು ಬೆಂಬಲಿಸಿದ್ದ‌ ದಲಿತರು ಈ ಸಲ ಪ್ರತಿಸ್ಪರ್ಧೆ ಮಾಡಿದ್ದು ದ್ವೇಷಕ್ಕೆ ಕಾಣವಾಗಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ(ಡಿ.19)- ರಾಜ್ಯದಲ್ಲಿ ಲೋಕಲ್ ಫೈಟ್ ಜೋರಾಗಿದ್ದು, ಗ್ರಾಮ ಪಂಚಾಯತಿ ಚುನಾವಣೆ ಅತ್ಯಂತ‌ ಪ್ರತಿಷ್ಠಿತ ಪೈಟ್ ಆಗಿದೆ. ಅನೇಕ ಕಡೆಗಳಲ್ಲಿ ಚುನಾವಣೆ ಹೆಸರಿನಲ್ಲಿ ದ್ವೇಷ, ಜಗಳಗಳು ಆರಂಭವಾಗಿದೆ. ತಮ್ಮ ವಿರುದ್ಧ ಅಭ್ಯರ್ಥಿ ಸ್ಪರ್ಧಿಸಿದರು ಎನ್ನುವ ಕಾರಣಕ್ಕೆ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಜಾಗದ ಕೊಡದೇ ಇರೋ ಘಟನೆ ನಡೆದಿದೆ. ಇದನ್ನು ದಲಿತ ಸಮುದಾಯದ ಜನ ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಎಚ್ಚೆತ್ತ ಅಧಿಕಾರಿಗಳು ಅಂತ್ಯಕ್ರಿಯೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದಾರೆ.

ಬೆಳಗಾವಿ ತಾಲೂಕಿನ ಕೆಕೆ ಕೊಪ್ಪ ಗ್ರಾಮದಲ್ಲಿ ಕೆಲ ದಿನಗಳ ಮೊದಲು ಎಲ್ಲ ಸಮುದಾಯದ ಜನ ಅನ್ಯೋನ್ಯವಾಗಿದ್ದರು. ಆದರೆ ಗ್ರಾಮದಲ್ಲಿ ಇದೀಗ ಲೋಕಲ್ ಫೈಟ್ ಆರಂಭವಾಗಿದ್ದ ಗ್ರಾಮದಲ್ಲಿ ಪರಸ್ಪರ ಕಿತ್ತಾಟಗಳು ಆರಂಭವಾಗಿವೆ. ಈ ಗ್ರಾಮದ ಚಂದ್ರಪ್ಪ ತಳವಾರ ಎನ್ನುವ 70 ವರ್ಷದ ವ್ಯಕ್ತಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕೆಲ ಸಮಯದ ನಂತರ ಇವರ ಸಂಬಂಧಿಕರು, ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸಲು ಸಿದ್ದತೆಯನ್ನು ಆರಂಭಿಸಿದ್ದಾರೆ. ಅನೇಕ ವರ್ಷಗಳಿಂದ ಅಂತ್ಯಕ್ರಿಯೆ ನಡೆಯುತ್ತಿದ್ದ ಸ್ಥಳದಲ್ಲಿ  ಸಮಾಧಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದನ್ನು ಸವರ್ಣೀಯ ಕುಟುಂಬವೊಂದು ವಿರೋಧಿಸಿದೆ. ಅದು ನಮ್ಮ ಜಮೀನು ಅಲ್ಲಿ ಅಂತ್ಯಕ್ರಿಯೆ ಮಾಡಬಾರದು ಎಂದು ಪಟ್ಟು ಹಿಡಿದಿದೆ.

ಇದನ್ನು ಓದಿ: ಯಾವುದೇ ಜವಾಬ್ದಾರಿ ಹೊರಲು ಸಿದ್ಧ ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷರಾಗಲು ಗ್ರೀನ್ ಸಿಗ್ನಲ್ ನೀಡಿದ ರಾಹುಲ್ ಗಾಂಧಿ

ಸವರ್ಣೀಯ ಕುಟುಂಬದ ತೀರ್ಮಾನದಿಂದ ಆಕ್ರೋಶಗೊಂಡ ದಲಿತ ಸಮುದಾಯದ ಜನ ಬಸ್ ನಿಲ್ದಾಣದ ಬಳಿ ಧರಣಿ ನಡೆಸಿದರು. ಬೇರೆ ಜಾಗ ಕೊಡದೇ ಇದ್ರೆ ಬಸ್ ನಿಲ್ದಾಣದ ಬಳಿಯೇ ಅಂತ್ಯಕ್ರಿಯೆ ಮಾಡೋ ಬಗ್ಗೆ ಎಚ್ಚರಿಕೆ ನೀಡಿದರು. ನಂತರ ಎಚ್ಚೆತ್ತ ಅಧಿಕಾರಿಗಳು ಅಂತ್ಯಕ್ರಿಯೆ ನಡೆಸಲು ಬೇರೆ‌ ಕಡೆ ವ್ಯವಸ್ಥೆ ಮಾಡಿದ್ದಾರೆ. ಗ್ರಾಮಕ್ಕೆ ಹಿರೇಬಾಗೇವಾಡಿ ಸಿಪಿಐ ಸೇರಿ ಅನೇಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅನೇಕ ವರ್ಷಗಳಿಂದ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ‌ ಅಂತ್ಯಕ್ರಿಯೆಗೆ‌ ಈಗ ವಿರುದ್ಧ ವ್ಯಕ್ತಪಡಿಸಿದರ ಹಿಂದೆ ಲೋಕಲ್ ರಾಜಕೀಯದ ನೆರಳು ಇದೆ.

ಕೆ ಕೆ ಕೊಪ್ಪ ಗ್ರಾಮದಲ್ಲಿ ವಾರ್ಡ್ ನಂಬರ್ 1ರ ಚುನಾವಣೆಯಲ್ಲಿ ಜಮೀನು ಮಾಲೀಕ ಸವರ್ಣೀಯ ಕುಟುಂಬದ ಶೋಭಾ ಸೋಮಶೇಖರ್ ಸ್ಪರ್ಧೆ ಮಾಡಿದ್ದಾರೆ. ಇವರ ವಿರುದ್ಧ ಮೃತ ಚಂದ್ರಪ್ಪ ತಳವಾರ ಸೊಸೆ ಗಂಗವ್ವಾ ತಳವಾರ ಸ್ಪರ್ಧಿಸಿದ್ದಾರೆ. ನಮ್ಮ ವಿರುದ್ಧ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ನಿಮಗೆ ನಮ್ಮ ಜಮೀನು ಅಂತ್ಯಕ್ರಿಯೆಗೆ ಏಕೆ ಕೊಡಬೇಕು ಎನ್ನವುದು ಅವರ ವಾದ. ಕಳೆದ ಚುನಾವಣೆ ಸವರ್ಣೀಯ ಕುಟುಂಬವನ್ನು ಬೆಂಬಲಿಸಿದ್ದ‌ ದಲಿತರು ಈ ಸಲ ಪ್ರತಿಸ್ಪರ್ಧೆ ಮಾಡಿದ್ದು ದ್ವೇಷಕ್ಕೆ ಕಾಣವಾಗಿದೆ.
Published by:HR Ramesh
First published: