HOME » NEWS » District » THE SURNAME OF THE HOUSEHOLD IS TROUBLE FOR THE FAMILY 300 ACRES OF LAND GONE TO THE GOVERNMENT HK

ಮನೆತನದ ಅಡ್ಡ ಹೆಸರೇ ಕುಟುಂಬಕ್ಕೆ ಮುಳುವು ; ಸರ್ಕಾರದ ಪಾಲಾದ 300 ಎಕರೆ ಜಮೀನು..!

ಇತ್ತೀಚೆಗೆ ಸುರಿದ ಮಳೆಯಿಂದ ಹಳ್ಳದ ಕುಟುಂಬದ ಜಮೀನಿನಲ್ಲಿ ಬೆಳೆದ ಅನೇಕ ಬೆಳೆಗಳು ಹಾನಿಯಾಗಿವೆ. ಆದರೇ ಇದಕ್ಕೆ ಪರಿಹಾರ ಸಿಗುವುದು ಅನುಮಾನವಾಗಿದೆ. ಈ ನಿಟ್ಟಿನದಲ್ಲಿ ಶೀಘ್ರದಲ್ಲಿಯೇ ಇದನ್ನು ಸರಿಪಡಿಸಬೇಕು ಎಂದು ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.

news18-kannada
Updated:November 4, 2020, 7:33 AM IST
ಮನೆತನದ ಅಡ್ಡ ಹೆಸರೇ ಕುಟುಂಬಕ್ಕೆ ಮುಳುವು ; ಸರ್ಕಾರದ ಪಾಲಾದ 300 ಎಕರೆ ಜಮೀನು..!
ಪ್ರತಿಭಟನೆ ನಡೆಸಿದ ರೈತರು
  • Share this:
ಬೆಳಗಾವಿ(ನವೆಂಬರ್. 4): ಉತ್ತರ ಕರ್ನಾಟಕ ಭಾಗದಲ್ಲಿ ಮನೆತನದ ಹೆಸರು ಅಡ್ಡ ಹೆಸರುಗಳು ಪ್ರತಿಯೊಬ್ಬರಿಗು ಸಾಮಾನ್ಯ. ಜತೆಗೆ ಅನೇಕ ಚಿತ್ರ, ವಿಚಿತ್ರ ಅಡ್ಡ ಹೆಸರಗಳನ್ನು ನಾವಿಲ್ಲ ನೋಡಬಹುದು. ಆದರೇ ಇದೀಗ ಮನೆತನದ ಹೆಸರೇ ಪುರ್ವಜನ ಆಸ್ತಿಯನ್ನು ಸರ್ಕಾರದ ಪಾಲಾಗುವಂತೆ ಮಾಡಿದೆ. ಹೌದು ಇಂತಹದೊಂದು ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದು, ಅಧಿಕಾರಿಗಳ ಯಡವಟ್ಟಿನಿಂದ ಕುಟುಂಬ ಇದೀಗ ಸಂಕಷ್ಟ ಅನುಭವಿಸುತ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕ ಉಳಿಗೇರಿ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಈ ಗ್ರಾಮದಲ್ಲಿ ಹಳ್ಳದ ಎಂಬ ದೊಡ್ಡ ಕುಟುಂಬವಿದೆ. ಕುಟುಂಬದಲ್ಲಿ 70ಕ್ಕೂ ಹೆಚ್ಚು ಸದಸ್ಯರಿದ್ದು, 300ಕ್ಕೂ ಹೆಚ್ಚು ಎಕರೆ ಆಸ್ತಿಯನ್ನು ಹೊಂದಿದ್ದಾರೆ. ಆದರೇ ಇತ್ತೀಚೆಗೆ ಬೆಳೆ ಹಾನಿ ಸಮೀಕ್ಷೆಗೆ ಹೋದ ಸಂದರ್ಭದಲ್ಲಿ ಆಗಿರುವ ಅವಾಂತರ ನೋಡಿ ಇಡೀ ಕುಟುಂಬದ ಜನ ಶಾಕ್ ಆಗಿದ್ದಾರೆ. ಇದನ್ನು ಸರಿ ಮಾಡುವಂತೆ ಇದೀಗ ಜಿಲ್ಲಾಧಿಕಾರಿ ಮೊರೆಯನ್ನು ಹೋಗಿದ್ದಾರೆ.

ಹಳ್ಳದ ಕುಟುಂಬದ ಜಮೀನು ಹಳ್ಳ ಎಂದು ಬದಲಾವಣೆಯಾಗಿದ್ದು, ಎಲ್ಲಾ ಜಮೀನು ಸರ್ಕಾರಿ ಜಮೀನು ಎಂದು ತಂತ್ರಾಶದಲ್ಲಿ ಬದಲಾವಣೆ ಆಗಿದೆ. ಇತ್ತೀಚೆಗೆ ಬೆಳೆ ಹಾನಿ ಬಗ್ಗೆ ಸಮೀಕ್ಷೆಗೆ ಹೋದ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಇದೀಗ ಹಳ್ಳದ ಕುಟುಂಬಕ್ಕೆ ಮನತನದ ಹೆಸರು ಹಳ್ಳದೇ ಅನ್ನೋದು ದೊಡ್ಡ ಸಮಸ್ಯೆಯನ್ನು ತಂದಿದೆ. ಇದೀಗ ಬದಾವಣೆಗೆ ಸರ್ಕಾರಿ ಕಚೇರಿ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ : ಮಹದೇಶ್ವರ ಬೆಟ್ಟದಲ್ಲಿ ಒಂದೇ ದಿನ 1465 ಮಂದಿಯಿಂದ ಮುಡಿಸೇವೆ

ಹಳ್ಳದ ಕುಟುಂಬದ ಸದಸ್ಯರಾದ ಮೈಲಾರ ಹಳ್ಳದ, ನಾಗಪ್ಪ ಹಳ್ಳದ, ಬಸಪ್ಪ ಹಳ್ಳದ, ವೈ ಎಸ್ ಹಳ್ಳದ ಸೇರಿ ಅನೇಕರು ಜಿಲ್ಲಾಧಿಕಾರಿಗೆ ಆಗಿರುವ ಅವಾಂತರ ಸರಿ ಮಾಡುವಂತೆ ಮನವಿ ನೀಡಿದ್ದಾರೆ. ಇನ್ನೂ ಹಳ್ಳದ ಕುಟುಂಬದ ಸದಸ್ಯರಿಗೆ ರೈತ ಸಂಘದ ಕೆಲ ಮುಖಂಡರು ಸಾಥ್ ನೀಡಿದ್ದರು. ತಾವು ಮಾಡದೇ ಇರೋ ತಪ್ಪಿಗೆ ಇದೀಗ ಈ ಸದಸ್ಯರು ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಮಾಡೊ ಸ್ಥಿತಿ ಬಂದಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹವನ್ನು ಮಾಡಿದ್ದಾರೆ.

ಇತ್ತೀಚೆಗೆ ಸುರಿದ ಮಳೆಯಿಂದ ಹಳ್ಳದ ಕುಟುಂಬದ ಜಮೀನಿನಲ್ಲಿ ಬೆಳೆದ ಅನೇಕ ಬೆಳೆಗಳು ಹಾನಿಯಾಗಿವೆ. ಆದರೇ ಇದಕ್ಕೆ ಪರಿಹಾರ ಸಿಗುವುದು ಇದೀಗ ಅನುಮಾನವಾಗಿದೆ. ಈ ನಿಟ್ಟಿನದಲ್ಲಿ ಶೀಘ್ರದಲ್ಲಿಯೇ ಇದನ್ನು ಸರಿಪಡಿಸಬೇಕು ಎಂದು ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಸಹ ಭೂ ಸಮಾಲೋಚಕರು ಬೆಳಗಾವಿ ಇವರಿಗೆ ಪತ್ರ ಬರೆದು ಸರಿ ಪಡಿಸುವಂತೆ ಮನವಿ ಮಾಡಿದ್ದಾರೆ.
Published by: G Hareeshkumar
First published: November 4, 2020, 7:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories