ಮೈಸೂರು: ಕಳೆದ 5 ದಿನಗಳಿದ ಮುಷ್ಕರ ನಡೆಸುತ್ತಿರುವ ಸಾರಿಗೆ ಇಲಾಖೆಯ ಹಲವು ನಿಗಮದ ನೌಕರರು 5 ದಿನಕ್ಕೆ ಮುಷ್ಕರದ ಉತ್ಸಹ ಕಳೆದುಕೊಂಡಂತೆ ಕಾಣುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾರಿಗೆ ನೌಕರರ ಮುಷ್ಕರ 5ನೇ ದಿನಕ್ಕೆ ಮುಕ್ತಾಯವಾದಂತೆ ಭಾಸವಾಗಿದ್ದು, ಮೈಸೂರು ನಗರ ಸಾರಿಗೆಯ ಬಹುತೇಕ ನೌಕರರು ಇಂದು ಕರ್ತವ್ಯಕ್ಕೆ ಹಾಜರಾಗಿ ಬಸ್ಗಳನ್ನ ರಸ್ತೆಗಳಿಸಿದ್ದಾರೆ. ಮೈಸೂರು ನಗರ ಸಾರಿಗೆಯ ಶೇಖಡ 50% ರಷ್ಟು ಬಸ್ಗಳು ಇಂದು ರಸ್ತೆಗಿಳಿದು ಸೇವೆ ಆರಂಭಿಸಿದ್ದು, ಚಾಲಕ, ನಿರ್ವಾಹಕ ಹಾಗೂ ಮ್ಯಾಕಾನಿಕ್ಗಳು ಇಂದು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಬೆಳಗ್ಗೆಯಿಂದಲೇ ಬಸ್ ಸಂಚಾರ ಆರಂಭಿಸಿ, ನಗರದ ನಿಗದಿತ ಮಾರ್ಗಗಳಗೆ ಬಸ್ ಓಡಿಸದರು. ಇತ್ತ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಹತ್ತಾರು ಬಸ್ಗಳು ಸಂಚಾರ ಆರಂಭಿಸಿದ್ದು, ಖಾಸಗಿ ಬಸ್ಗಳ ಜೊತೆಯೇ ಜಂಟಿ ಕಾರ್ಯಚರಣೆಗೆ ಇಳಿದಿವೆ.
ಹೌದು ಮೈಸೂರಿನಲ್ಲಿ 5ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಜಂಟಿ ಕಾರ್ಯಚರಣೆಗೆ ಮುಂದಾದ ಖಾಸಗಿ ಹಾಗೂ ಸರ್ಕಾರಿ ಬಸ್ಗಳು, ಮೈಸೂರಿನ ಕೇಂದ್ರಿಯ ಬಸ್ನಿಲ್ದಾಣದಲ್ಲಿ ಒಟ್ಟೋಟ್ಟಿಗೆ ಸಂಚಾರ ಮಾಡಿದವು. ಸರ್ಕಾರಿ ಬಸ್ಗಳೊಂದಿಗೆ ಸ್ಪರ್ಧೆಗೆ ನಿಂತ ಖಾಸಗಿ ಬಸ್ ಚಾಲಕರು ಹಾಗೂ ಮಾಲೀಕರು, ಸರ್ಕಾರಿ ಬಸ್ ಪಕ್ಕದಲ್ಲೆ ಖಾಸಗಿ ಬಸ್ ನಿಲ್ಲಿಸಿಕೊಂಡು ಪ್ರಯಾಣಿಕರಿಗೆ ಆಹ್ವಾನ ನೀಡುತ್ತಿದ್ದರು. ಸರ್ಕಾರಿ ಬಸ್ ಹತ್ತಲು ಬಂದವರನ್ನ ತಮ್ಮ ಬಸ್ಗಳಿಗೆ ಹತ್ತಿಸಲು ಸ್ಪರ್ಧೆ ಮಾಡುತ್ತಿದ್ದ ಖಾಸಗಿ ಬಸ್ ಚಾಲಕರು ಹಾಗೂ ಮಾಲೀಕರು. ಸರ್ಕಾರ ಸಿಬ್ಬಂದಿಗಳ ಜೊತೆಯಲ್ಲೆ ಪೈಪೋಟಿಗೆ ನಿಂತರು.
ಇತ್ತ ಪ್ರಯಾಣಿಕರಿಲ್ಲದೆ ಸಾಲುಗಟ್ಟಿ ನಿಂತ ಸರ್ಕಾರಿ ಬಸ್ಗಳು, ಜನರನ್ನ ಕರೆಯಲು ಆಗದೆ, ಖಾಸಗಿಯವರ ಜೊತೆ ಸ್ಪರ್ಧೆಯನ್ನು ಮಾಡಲಾಗದೆ ಕಂಗಾಲಾಗಿದ್ದರು. ಸರ್ಕಾರಿ ಹಾಗೂ ಖಾಸಗಿ ಬಸ್ ಎರಡು ಇದ್ದರೂ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಮುಖ ಕಂಡಿದ್ದು ಜನರು ಬಸ್ ಬದಲು ಪರ್ಯಾಯ ಆಯ್ಕೆ ಮಾಡಿಕೊಂಡಿರುವ ಸಾಧ್ಯತೆಗಳನ್ನ ಸ್ಪಷ್ಟವಾಗಿ ಗೋಚರಿಸಿತು.
ಇದನ್ನೂ ಓದಿ: ಮಾದರಿ ನೀತಿ ಸಂಹಿತೆಯನ್ನು ಮೋದಿ ಸಂಹಿತೆ ಎಂದು ಮರುಣಾಮಕರಣಗೊಳಿಸಿ; ಚುನಾವಣಾ ಆಯೋಗಕ್ಕೆ ಮಮತಾ ಚಾಟಿ
ಆದರೆ, ಮೈಸೂರು ನಗರ ಸಾರಿಗೆಗೆ ಮುಷ್ಕರವೇ ಮುಕ್ತಾಯವಾಯ್ತಾ ಅನ್ನೋ ಮಟ್ಟಿಗಿನ ವಾತವರಣ ಸೃಷ್ಟಿಮಾಡಿದೆ. ಕರ್ತವ್ಯಕ್ಕೆ ಹಾಜರಾದ ನಗರ ಬಸ್ ಚಾಲಕರು ನಿರ್ವಹಕರು, ಮೈಸೂರು ನಗರ ಸಾರಿಗೆ ಎಂದಿನಂತೆ ಸಂಚರಿಸಿದರು. ಶೇಖಡ 50% ಕ್ಕಿಂತ ಹೆಚ್ಚಿನ ಬಸ್ಗಳು ರಸ್ತೆಗಿಳಿದು ಸೇವೆ ಆರಂಭಿಸಿ, ನಗರ ಬಸ್ ನಿಲ್ದಾಣದಿಂದ ಎಲ್ಲ ಮಾರ್ಗಗಳಿಗೆ ಬಸ್ ಸಂಚಾರ ಆರಂಭಿಸಿವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ