ಇಂದಿನಿಂದ ಮೈಸೂರಿನಲ್ಲಿ ಕಟ್ಟುನಿಟ್ಟಿನ ಕರ್ಪ್ಯೂ; ಸಂಜೆ 6 ಗಂಟೆಗೆ ಎಲ್ಲವು ಬಂದ್

6 ಗಂಟೆಯ ನಂತರ ಅನಗತ್ಯವಾಗಿ ಹೊರಬಂದರೆ ಕ್ರಿಮಿನಲ್ ಕೇಸ್ ಹಾಕಲಾಗವುದು. ಅಗತ್ಯ ಸೇವೆ, ತುರ್ತು ಆರೋಗ್ಯ ಸೇವೆ, ಮೆಡಿಕಲ್ ಸ್ಟೋರ್ ಗಳಿಗೆ ಮಾತ್ರ ಬಾಗಿಲು ತೆರೆಯಲು ಅವಕಾಶ ನೀಡಲಾಗಿದೆ.  6 ಗಂಟೆ ಬಳಿಕ ಯಾವುದೇ ವಾಣಿಜ್ಯ ವಹಿವಾಟುಗಳು ನಡೆಯುಬಾರದು ಎಂದು ಮೈಸೂರಿನ ಡಿಸಿಪಿ ಪ್ರಕಾಶ್‌ಗೌಡ ಎಚ್ಚರಿಕೆ ನೀಡಿದ್ದಾರೆ.

news18-kannada
Updated:July 3, 2020, 8:15 PM IST
ಇಂದಿನಿಂದ ಮೈಸೂರಿನಲ್ಲಿ ಕಟ್ಟುನಿಟ್ಟಿನ ಕರ್ಪ್ಯೂ; ಸಂಜೆ 6 ಗಂಟೆಗೆ ಎಲ್ಲವು ಬಂದ್
ಸಂಜೆ ವೇಳೆಗೆ ಸ್ತಬ್ಧಗೊಂಡಿರುವ ಮೈಸೂರು.
  • Share this:
ಮೈಸೂರು (ಜುಲೈ 03);  ದಿನೇ ದಿನೇ ಕೊರೋನಾ ಪಾಸಿಟಿವ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇಂದಿನಿಂದ 6 ಗಂಟೆಯಿಂದಲೇ ಕರ್ಪ್ಯೂ ಜಾರಿ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಈ ಹಿನ್ನಲೆಯಲ್ಲಿ ಸಂಜೆ 6 ಗಂಟೆ ವೇಳೆಗೆ ಮುಚ್ಚಿದ ಅಂಗಡಿ ಮುಂಕಟ್ಟುಗಳು ನಗರದ ಪ್ರಮುಖ ರಸ್ತೆಗಳಲ್ಲಿನ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿದೆ.

ಇಂದು ಮೈಸೂರಿನ ರಸ್ತೆಗಳಲ್ಲಿ ಮೈಕ್‌ ಹಿಡಿದ ಪೊಲೀಸರು ಈ ಕುರಿತು ಘೋಷಣೆ ಮಾಡಿದ್ದಾರೆ. 6 ಗಂಟೆಯ ನಂತರ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಲಿದೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು. ಪರಿಣಾಮ ಜನ ಸಹ ಮನೆಯತ್ತ ತರಾತುರಿಯಿಂದ ಹೊರಟ ದೃಶ್ಯಗಳು ಕಂಡು ಬಂದವು.

ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಿರುವ ಮೈಸೂರು ಪೊಲೀಸರು, "6 ಗಂಟೆಯ ನಂತರ ಅನಗತ್ಯವಾಗಿ ಹೊರಬಂದರೆ ಕ್ರಿಮಿನಲ್ ಕೇಸ್ ಹಾಕಲಾಗವುದು. ಅಗತ್ಯ ಸೇವೆ, ತುರ್ತು ಆರೋಗ್ಯ ಸೇವೆ, ಮೆಡಿಕಲ್ ಸ್ಟೋರ್ ಗಳಿಗೆ ಮಾತ್ರ ಬಾಗಿಲು ತೆರೆಯಲು ಅವಕಾಶ ನೀಡಲಾಗಿದೆ.  6 ಗಂಟೆ ಬಳಿಕ ಯಾವುದೇ ವಾಣಿಜ್ಯ ವಹಿವಾಟುಗಳು ನಡೆಯುಬಾರದು" ಎಂದು ಡಿಸಿಪಿ ಪ್ರಕಾಶ್‌ಗೌಡ ಎಚ್ಚರಿಕೆ ನೀಡಿದ್ದಾರೆ.

"ರಾಜ್ಯ ಸರ್ಕಾರದ ಮುಂದಿನ ಆದೇಶ ಬರುವವರೆಗೂ ಈ ನಿಯಮ ಜಾರಿಯಲ್ಲಿರುತ್ತದೆ ಈಗಾಗಲೇ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ವಿರುದ್ಧ 44 ಪ್ರಕರಣ ದಾಖಲಾಗಿದೆ. ಇನ್ನೂ ನಗರ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಠಾಣೆಯ ಮುಂದೆ ಇರುವ ಹೆಲ್ಪ್ ಡೆಸ್ಕ್ ನಲ್ಲಿ ಒಬ್ಬರಿಗೆ ಮಾತ್ರ ದೂರು ನೀಡಲು ಅವಕಾಶ" ಇದೆ.

ಇದರ ಜೊತೆಗೆ ಮೈಸೂರಿನಲ್ಲಿ ಸಂಡೇ ಲಾಕ್‌ಡೌನ್‌ಗೆ ಆದೇಶ ಜಾರಿ ಮಾಡಿದ್ದು ಜುಲೈ 5 ರಿಂದ ಆಗಸ್ಟ್ 2 ರವರೆಗೆ ಎಲ್ಲಾ ಭಾನುವಾರ ಸಂಪೂರ್ಣ ಲಾಕ್ ಡೌನ್ ಇರಲಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತರಿಂದ ಹೇಳಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ಆದೇಶ‌ ಜಾರಿ ಮಾಡಲಾಗಿದೆ ಆದರೆ ಅಗತ್ಯ ಸರಕು ಸಾಗಾಣಿಕೆಗೆ ಯಾವುದೇ ನಿರ್ಬಂಧವಿಲ್ಲ. ಸಾರ್ವಜನಿಕ ಸ್ಥಳ, ವ್ಯಾಪಾರ ವಹಿವಾಟು ಸ್ಥಳಗಳಲ್ಲಿ 6 ಅಡಿ ಅಂತರ ಕಡ್ಡಾಯ. ಮಾಸ್ಕ್ ಧರಿಸದಿದ್ದರೆ 200 ರೂ. ದಂಡ. ಆದೇಶ ಪಾಲಿಸದ ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಲಾಗಿದೆ.

ಇದನ್ನೂ ಓದಿ : ಪಾಕಿಸ್ತಾನದಲ್ಲಿ ರೈಲು ದುರಂತ; 29ಕ್ಕೂ ಹೆಚ್ಚು ಸಿಖ್‌ ಯಾತ್ರಾರ್ಥಿಗಳು ಧಾರುಣ ಸಾವು

ಮದುವೆ ಸಮಾರಂಭಗಳಲ್ಲಿ 50 ಮಂದಿ ಅವಕಾಶ, ಅಂತ್ಯಕ್ರಿಯೆಯಲ್ಲಿ 20 ಮಂದಿ ಮೀರಬಾರದು. ಆದೇಶ ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡರುವ ಕಮಿಷನರ್ ಕೊರೋನಾ ನಿಯಂತ್ರಣಕ್ಕೆ ಸಹಾಯ ಮಾಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
Published by: MAshok Kumar
First published: July 3, 2020, 8:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading