ಕಾರವಾರ; ಕಳೆದ ವರ್ಷದ ಕೊರೋನಾ ಮೊದಲನೇ ಅಲೆಯ ಹೊಡೆತಕ್ಕೆ ಸಿಕ್ಕಿ ಬೆಂಡಾದ ಕಾರವಾರದ ಬೀದಿ ಬದಿಯ ಹೂ ಹಣ್ಣು ವ್ಯಾಪಾರಸ್ಥರು ಈ ಬಾರಿಯ ಕೊರೋನಾ ಎರಡನೇ ಅಲೆಯಲ್ಲಿ ಮತ್ತೆ ದಿಕ್ಕೆ ತೋಚದಂತಾಗಿದ್ದಾರೆ. ಸರ್ಕಾರ ನಿಗದಿ ಮಾಡಿರುವ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಹೀಗಾಗಿ ಮನೆ ಮನೆ ಹೋಗಿ ವ್ಯಾಪಾರ ಮಾಡಲು ಅವಕಾಶ ಕೇಳುತ್ತಿದ್ದಾರೆ. ಇಲ್ಲ ಅಂದ್ರೆ ಎಲ್ಲ ಹಣ್ಣು ಕೊಳೆತು ನಮ್ಮ ಬದುಕು ಬೀದಿಗೆ ಬರೊತ್ತೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕಳೆದ ವರ್ಷ ಕೊರೋನಾ ಮೊದಲನೇ ಅಲೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಪಾಸ್ ನೀಡಿ ಮನೆ ಮನೆಗೆ ಹೋಗಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಈ ಬಾರಿ ಇದಕ್ಕೆ ಅವಕಾಶ ನೀಡದೆ ಮುಂಜಾನೆ 6ರಿಂದ 10 ಗಂಟೆಯವರೆಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಿದ್ದಾರೆ. ಈ ಸಮಯದಲ್ಲಿ ವ್ಯಾಪಾರ ಆಗದೆ ಬೀದಿ ಬದಿ ವ್ಯಾಪಾರಸ್ಥರು ಆರ್ಥಿಕ ನಷ್ಟ ಎದುರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬಂದು ಅಂಗಡಿ ಇಡೋಕೆ ಎರಡು ಗಂಟೆ ತೆಗೆದುಕೊಳ್ಳುತ್ತದೆ. ಬಳಿಕ ವ್ಯಾಪಾರಕ್ಕೆ ಗ್ರಾಹಕರ ಕೊರತೆ ಕೂಡ ಉಂಟಾಗೊತ್ತೆ. ಬಂಡವಾಳ ಹಾಕಿ ತಂದ ಹಣ್ಣು ಹಂಪಲು ಮರು ದಿನ ಕೊಳೆತು ಹೋಗುತ್ತದೆ. ಇದರಿಂದ ಸಂಪೂರ್ಣ ನಷ್ಟ ಹೊಂದಬೇಕಾಗುತ್ತದೆ ಅಂತಾ ನ್ಯೂಸ್ 18 ಕನ್ನಡ ಜತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮನೆ ಮನೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ರೆ ಉತ್ತಮ ಮತ್ತು ನಮ್ಮ ಜೀವ ಉಳಿದ ಹಾಗೆ ಆಗೊತ್ತೆ ಅಂತಾರೆ ವ್ಯಾಪಾರಸ್ಥರು. ಕಳೆದ ವರ್ಷ ಮೊದಲನೇ ಅಲೆಯ ಹೊಡೆತಕ್ಕೆ ಸಿಕ್ಕಿ ಪರದಾಡಿದ್ದು ಬೀದಿ ಬದಿಯ ವ್ಯಾಪಾರಸ್ಥರೇ ಈ ನಿಟ್ಟಿನಲ್ಲಿ ಈ ಬಾರಿ ನಗರಸಭೆ ತಮ್ಮ ಬಗ್ಗೆ ಕಣ್ತೆರೆಯ ಬೇಕು ಎನ್ನುತ್ತಾರೆ.
ಇದನ್ನು ಓದಿ: ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರಕ್ಕೆ ಹಲವು ಸಲಹೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ಹತ್ತು ಗಂಟೆಯವರೆಗೆ ವ್ಯಾಪಾರ ಆಗಲ್ಲ, ಜನ ಬರದೆ ಹೇಗೆ ವ್ಯಾಪಾರ?
ಸರಕಾರ ಹದಿನಾಲ್ಕು ದಿನಗಳ ಕಾಲ ಜನತಾ ಕರ್ಫ್ಯೂ ಹೇರಿದ್ದು ಅಗತ್ಯ ವಸ್ತು ಖರೀದಿಗೆ ಮುಂಜಾನೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ಅವಕಾಶ ನೀಡಿದೆ. ಆದರೆ ಕಾರವಾರದ ಜನಜೀವನದ ಮಾದರಿಯೇ ಬೇರೆ. ಕಾರವಾರದಲ್ಲಿ ಇಷ್ಟು ಬೆಳಿಗ್ಗೆ ಎದ್ದು ಅಗತ್ಯ ವಸ್ತು ಖರೀದಿಗೆ ಬರೋದು ತುಂಬಾ ವಿರಳ. ಇನ್ನು ಸರಕಾರದ ಮಾರ್ಗಸೂಚಿ ಯಂತೆ ಮುಂಜಾನೆ ವ್ಯಾಪಾರಕ್ಕೆ ಅಣಿ ಆದ್ರೆ ಪ್ರಯೋಜನವಾಗುತ್ತಿಲ್ಲ. ಬಂದು ಎಲ್ಲ ಜೋಡಿಸಿ ಅಂಗಡಿ ಇಡೋಕೆ ಎರಡು ಗಂಟೆ ಸಮಯ ಬೇಕು. ಇನ್ನು ಹತ್ತು ಗಂಟೆ ಒಳಗಡೆ ಅಂಗಡಿ ಮತ್ತೆ ಮುಚ್ಚಬೇಕಾಗಿದ್ರಿಂದ ಎಲ್ಲವು ಅಯೋಮಯವಾಗುತ್ತದೆ. ಹೀಗೆ ಹದಿನಾಲ್ಕು ತೆಗೆಯೋದು ಕಷ್ಟ ಮತ್ತು ಆರ್ಥಿಕ ನಷ್ಟವಾಗುತ್ತದೆ ಅಂತಾರೆ ವ್ಯಾಪಾರಸ್ಥರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ