ಕನಕಪುರವನ್ನು ರಾಜ್ಯ, ರಾಷ್ಟ್ರ ನೋಡುತ್ತಿದೆ, ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ: ಡಿ.ಕೆ.ಶಿವಕುಮಾರ್ ಕರೆ

ಈ ತಂತ್ರಗಾರಿಕೆಯಲ್ಲಿ ಡಿ.ಕೆ.ಸುರೇಶ್ ಪಾತ್ರ ಬಹಳಷ್ಟಿದೆ. ಕನಕಪುರದ ಜೊತೆಗೆ ಇಡೀ ಜಿಲ್ಲೆಯಲ್ಲಿಯೇ ಡಿ.ಕೆ.ಸುರೇಶ್ ಕಾರ್ಯವೈಖರಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಕಡೆಗಳಲ್ಲಿ ಜಯಗಳಿಸಿದ್ದಾರೆ. ಹಾಗಾಗಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಸಹ ಹುಮ್ಮಸ್ಸಿನಲ್ಲಿದ್ದು ಮುಂದಿನ ತಾ.ಪಂ, ಜಿ.ಪಂ ಚುನಾವಣೆಯಲ್ಲಿಯೂ ಸಹ ಗೆಲ್ಲುವ ವಿಶ್ವಾಸದಲ್ಲಿದ್ದು, ಡಿ.ಕೆ.ಬ್ರದರ್ಸ್ ಕೂಡ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.

ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್

  • Share this:
ರಾಮನಗರ : ಕನಕಪುರವನ್ನು ರಾಜ್ಯ ಹಾಗೂ ರಾಷ್ಟ್ರ ನೋಡುತ್ತಿದೆ. ಹಾಗಾಗಿ ಈ ಕ್ಷೇತ್ರದ ಗೌರವ ಉಳಿಯಬೇಕು. ಎಲ್ಲರೂ ಒಗ್ಗಟ್ಟಾಗಿ ಪಕ್ಷಕ್ಕಾಗಿ ದುಡಿಯಿರಿ. ಏನೇ ಭಿನ್ನಭಿಪ್ರಾಯವಿದ್ದರೂ ಅದೆಲ್ಲವನ್ನು ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ರಾಮನಗರ ಜಿಲ್ಲೆ ಕನಕಪುರದ ಖಾಸಗಿ ತೋಟದ ಮನೆಯಲ್ಲಿ ಗ್ರಾ.ಪಂ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಬೆಂಬಲಿತರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಆರ್.ಆರ್.ನಗರ, ಕುಂದಗೋಳ ಬೈಎಲೆಕ್ಷನ್ ನನಗೆ ಬಹಳ ಖುಷಿ ತಂದಿದೆ. ಸಾವಿರಾರು ಜನ ಕಾರ್ಯಕರ್ತರು ಹಗಲು ರಾತ್ರಿ ದುಡಿದರು. ಆದರೆ ನಾನು ಅವರಿಗೆ ಯಾವ ಅಧಿಕಾರ ಕೊಟ್ಟಿಲ್ಲ. ಆದರೆ ಪಕ್ಷದ ಮೇಲಿನ ಗೌರವಕ್ಕೆ ಎಲ್ಲರೂ ದುಡಿದ್ದಿದ್ದಾರೆ. ಹಾಗಾಗಿ ನಮಗೆ ಒಳ್ಳೆಯ ಕಾರ್ಯಕರ್ತರ ಪಡೆ ಇದೇ. ಅದಕ್ಕಾಗಿ ನನಗೆ ರಾಜ್ಯದ ಜನ ಪ್ರಶಸ್ತಿ ಕೊಟ್ಟಿದ್ದಾರೆಂದು ಅಭಿಪ್ರಾಯಪಟ್ಟರು.

ಇನ್ನು ಪಕ್ಷದಲ್ಲಿ ನಾನು ಬೆಳೆದರೆ ಸಾಲದು. ನನ್ನ ಜೊತೆ ಇರೋರು ಬೆಳೆಯಬೇಕು. ನನಗೆ ಹಿಂಬಾಲಕರು ಬೇಡ. ನಾಯಕರು ಬೇಕು. ಅದಕ್ಕಾಗಿ ಮುಂದೆ ಎಲ್ಲರೂ ಒಟ್ಟಾಗಿ ದುಡಿಯೋಣ ಎಂದು ಕರೆ ಕೊಟ್ಟರು. ಸಮಾರಂಭದಲ್ಲಿ 500ರಕ್ಕೂ ಹೆಚ್ಚು ಜನರಿಗೆ ಸನ್ಮಾನ ಮಾಡಲಾಯಿತು. ಸಂಸದ ಡಿ.ಕೆ.ಸುರೇಶ್ ಉಪಸ್ಥಿತಿ ಇದ್ದರು.

ಕನಕಪುರದಲ್ಲಿ ಡಿ.ಕೆ.ಬ್ರದರ್ಸ್ ಹವಾ ಜೋರು

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಹೋದರ, ಸಂಸದ ಡಿ.ಕೆ.ಸುರೇಶ್ ಜುಗಲ್‌ಬಂದಿ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ಮುಂದುವರೆದಿದೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಜೊತೆಗೆ ಸ್ಥಳೀಯವಾಗಿ ಯಾವುದೇ ಚುನಾವಣೆ ಬಂದರೂ ಸಹ ಕನಕಪುರಲ್ಲಿ ಕಾಂಗ್ರೆಸ್ ಬಾವುಟ ಹಾರಿಸುತ್ತಾರೆ ಡಿ.ಕೆ.ಬ್ರದರ್ಸ್. ಅದೇ ರೀತಿ ಈಗ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ಸಹ ಇಬ್ಬರು ಸೇರಿ ಕಾಂಗ್ರೆಸ್ ಬಾವುಟ ಹಾರಿಸುವ ಮೂಲಕ ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.

36 ಗ್ರಾಮ ಪಂಚಾಯತ್‌ಗಳ ಪೈಕಿ ಕಾಂಗ್ರೆಸ್ 30 ಕಡೆಗಳಲ್ಲಿ ಗೆದ್ದು ಬೀಗಿದೆ. ಜೆಡಿಎಸ್ 3 ಪಂಚಾಯತ್‌ನಲ್ಲಿ ಫೈಟ್ ಮಾಡಿದರೆ, ಬಿಜೆಪಿ ಕೊನೆಗೂ ಕನಕಪುರದಲ್ಲಿ 1 ಕಡೆ ಖಾತೆ ತೆರೆಯುವ ಸಾಧ್ಯತೆ ಇದೇ ಎನ್ನಲಾಗ್ತಿದೆ. ಇನ್ನೆರಡು ಪಂಚಾಯಿತಿ ಅತಂತ್ರ ಸ್ಥಿತಿಯಲ್ಲಿದೆ. ಆದರೆ ಪಂಚಾಯತ್‌ಗಳಲ್ಲಿ ಹೆಚ್ಚಿನ ಕಡೆ ಕಾಂಗ್ರೆಸ್ ಅಧಿಕಾರ ಪಡೆಯಲಿದೆ.
ಕಾಂಗ್ರೆಸ್ ಗೆ ಟಾಂಗ್ ಕೊಡಲು ಹಲವೆಡೆ ಜೆಡಿಎಸ್ - ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೂ ಸಹ ಕನಕಪುರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಇನ್ನು ಈ ತಂತ್ರಗಾರಿಕೆಯಲ್ಲಿ ಡಿ.ಕೆ.ಸುರೇಶ್ ಪಾತ್ರ ಬಹಳಷ್ಟಿದೆ. ಕನಕಪುರದ ಜೊತೆಗೆ ಇಡೀ ಜಿಲ್ಲೆಯಲ್ಲಿಯೇ ಡಿ.ಕೆ.ಸುರೇಶ್ ಕಾರ್ಯವೈಖರಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಕಡೆಗಳಲ್ಲಿ ಜಯಗಳಿಸಿದ್ದಾರೆ. ಹಾಗಾಗಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಸಹ ಹುಮ್ಮಸ್ಸಿನಲ್ಲಿದ್ದು ಮುಂದಿನ ತಾ.ಪಂ, ಜಿ.ಪಂ ಚುನಾವಣೆಯಲ್ಲಿಯೂ ಸಹ ಗೆಲ್ಲುವ ವಿಶ್ವಾಸದಲ್ಲಿದ್ದು, ಡಿ.ಕೆ.ಬ್ರದರ್ಸ್ ಕೂಡ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.

ವರದಿ : ಎ.ಟಿ.ವೆಂಕಟೇಶ್
Published by:HR Ramesh
First published: