ಸುವರ್ಣ ಸೌಧವನ್ನು ಜಿಲ್ಲಾಡಳಿತ ಭವನ ಮಾಡಲು ಹೊರಟ ರಾಜ್ಯ ಸರ್ಕಾರ..!

ಬಾಡಿಗೆ ಕಟ್ಟಡಲ್ಲಿ ಇದ್ದ ಬಹುತೇಕ ಕಚೇರಿಯನ್ನು ಸುವರ್ಣ ಸೌಧಕ್ಕೆ ಸ್ಥಳಾಂತರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

news18-kannada
Updated:June 30, 2020, 7:20 PM IST
ಸುವರ್ಣ ಸೌಧವನ್ನು ಜಿಲ್ಲಾಡಳಿತ ಭವನ ಮಾಡಲು ಹೊರಟ ರಾಜ್ಯ ಸರ್ಕಾರ..!
ಸುವರ್ಣ ಸೌಧ
  • Share this:
ಬೆಳಗಾವಿ(ಜೂ.30): ಉತ್ತರ ಕರ್ನಾಟಕ ಭಾಗದ ಜನರಿಗೆ ಉಪಯೋಗ ಆಗುವ ದೃಷ್ಠಿಯಿಂದ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿಗೆ ರಾಜ್ಯ ಮಟ್ಟದ ಕಚೇರಿಗಳು ಶಿಫ್ಟ್ ಆಗಬೇಕು ಈ ಭಾಗದ ಜನರ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಸ್ಪಂದನೆ ಸಿಗಬೇಕು ಎನ್ನುವುದು ಮಹತ್ವದ ಉದ್ದೇಶವಾಗಿತ್ತು. ಆದರೆ, ರಾಜ್ಯ ಸರ್ಕಾರ ಮಾತ್ರ ಭವ್ಯ ಸೌಧವನ್ನು ಜಿಲ್ಲಾಡಳಿತ ಭವನ ಮಾಡಲು ಹೊರಟಿದೆ.

ಬೆಳಗಾವಿಯಲ್ಲಿ500 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯವಾದ ಸುವರ್ಣ ಸೌಧ ನಿರ್ಮಾಣ ಮಾಡಿದ 8 ವರ್ಷಗಳು ಕಳೆದಿದೆ. ವರ್ಷದಲ್ಲಿ ಒಮ್ಮೆ ಕೇವಲ ಅಧಿವೇಶನಕ್ಕೆ ಸೌಧ ಉಪಯೋಗವಾಗುತ್ತಿತ್ತು. ಸೌಧಕ್ಕೆ ಬೆಂಗಳೂರಿಗೆ ಪ್ರಮುಖ ಕಚೇರಿ ಸ್ಥಳಾಂತರ ಆಗಬೇಕು ಈ ಮೂಲಕ ಇಡೀ ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂದು ಅನೇಕ ಹೋರಾಟಗಳು ನಡೆದಿದ್ದವು. ರಾಜ್ಯ ಸರ್ಕಾರ ಸಹ ಅನೇಕ ಕಚೇರಿ ಸ್ಥಳಾಂತರ ಮಾಡುವ ಭರವಸೆ ನೀಡಿತ್ತು.

ಸದ್ಯ ರಾಜ್ಯ ಸರ್ಕಾರ ಆದೇಶವೊಂದನ್ನು ಹೊರಡಿಸಿದ್ದು ಬೆಳಗಾವಿ ನಗರದ ಖಾಸಗಿ ಕಟ್ಟಡದಲ್ಲಿ ಇದ್ದ 23 ಕಚೇರಿಗಳನ್ನು ಸುವರ್ಣ ಸೌಧಕ್ಕೆ ಶಿಫ್ಟ್ ಮಾಡಿದೆ. ಧಾರವಾಡದಲ್ಲಿ ಇದ್ದ ಕರ್ನಾಟಕ ನೀರಾವರಿ ನಿಗಮವನ್ನು ಸಹ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಬೆಳಗಾವಿಯ ಸೌಧವನ್ನು ಸರ್ಕಾರ ಜಿಲ್ಲಾಡಳಿತ ಭವನ ಮಾಡಲು ಹೊರಟಿದೇ ಎಂಬ ಅನುಮಾನಗಳು ವ್ಯಕ್ತವಾಗಿದೆ.

ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರ ಬಗ್ಗೆ ತೀವ್ರ ಹೋರಾಟ ನಡೆದ ಸಂದರ್ಭದ ಸರ್ಕಾರ ಅನೇಕ ರಾಜ್ಯ ಮಟ್ಟದ ಕಚೇರಿ ಸ್ಥಳಾಂತರ ಭರವಸೆ ನೀಡತ್ತು. ರಾಜ್ಯ ಜವಳಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ, ಸಕ್ಕರೆ ನಿರ್ದೇಶನಾಲಯ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸುವ ಭರವಸೆ ನೀಡಿತ್ತು. ಇದೀಗ ಸೌಧದಲ್ಲಿ ರಾಜ್ಯ ಮಾಹಿತಿ ಹಕ್ಕು ಕಚೇರಿ ಕಾರ್ಯಾರಂಭ ಮಾಡಿದೆ. ಉಳಿದಂತೆ ಸಕ್ಕರೆ ನಿರ್ದೇಶನಾಲಯ ಕಚೇರಿ ಸ್ಥಳಾಂತರವನ್ನು ತಡೆ ಹಿಡಿದು ಇದನ್ನು ಕೈಗಾರಿಕೆ ಇಲಾಖೆಯ ಜತೆಗೆ ವಿಲೀನಕ್ಕೆ ಸರ್ಕಾರ ನಿರ್ಧರಿಸಿದೆ.

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ, ಹಿರಿಯ ಭೂ ವಿಜ್ಞಾನ, ಜಿಲ್ಲಾ ಅಂತರ್ಜಲ ಕಚೇರಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಕಚೇರಿ, ಸಹಾಯಕ ನಿರ್ದೇಶಕರು ನಗರ, ಗ್ರಾಮಾಂತರ ಯೋಜನೆ ಇಲಾಖೆ,  ದೇವರಾಜು ಅರಸು ಹಿಂದುಳಿದ ಅಭಿವೃದ್ಧಿ ನಿಗಮ, ಭೂ ಸ್ವಾಧೀನ ಕಚೇರಿ, ವಿಶ್ವಕರ್ಮ ನಿಗಮ ನಿಯಮಿತ, ಉಪ್ಪಾರ ಅಭಿವೃದ್ಧಿ ನಿಮಗ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹೆದ್ದಾರಿ ಅಭಿವೃದ್ಧಿ ನಿಗಮ ಸೇರಿ ಇತರೇ ಕಚೇರಿಗಳು ಸೇರಿವೆ.

ಜಿಲ್ಲಾ ಮಟ್ಟದ ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರದ ಬಗ್ಗೆ ಜಿಲ್ಲಾ ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಸುವರ್ಣ ಸೌಧಕ್ಕೆ ರಾಜ್ಯ ಮಟ್ಟದ ಕಚೇರಿಗಳು ಬಂದು ಈಭಾಗಕ್ಕೆ ಅನುಕೂಲವಾಗುವ ದೃಷ್ಠಿಯಿಂದ ನಿರ್ಮಾಣ ಮಾಡಲಾಗಿದೆ. ಸರ್ಕಾರದ ಜಿಲ್ಲಾ ಮಟ್ಟದ ಕಚೇರಿ ಸ್ಥಳಾಂತರ ನಿರ್ಧಾರವನ್ನು ವಿರೋಧಿಸಿದ್ದಾರೆ.

ಇದನ್ನೂ ಓದಿ : ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಚಿರತೆ ಪ್ರತ್ಯಕ್ಷ ; ನಾಯಿ, ಆಕಳುಗಳನ್ನು ತಿಂದ ಚಿರತೆಬಾಡಿಗೆ ಕಟ್ಟಡಲ್ಲಿ ಇದ್ದ ಬಹುತೇಕ ಕಚೇರಿಯನ್ನು ಸುವರ್ಣ ಸೌಧಕ್ಕೆ ಸ್ಥಳಾಂತರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಕಚೇರಿಗಳ ಬಾಡಿಗೆ ಖರ್ಚು ಉಳಿಸಲು ನಿರ್ಧಾರ ಕೈಗೊಂಡಿದಿಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಜಿಲ್ಲಾ ಮಟ್ಟದ ಕಚೇರಿಗಳು ಸುವರ್ಣ ಸೌಧಕ್ಕೆ ಸ್ಥಳಾಂತರದಿಂದ ಬೆಳಗಾವಿ ಜನರಿಗೆ ಲಾಭಕ್ಕಿಂತ ಹೆಚ್ಚು ಕಷ್ಟವಾಗಲಿದೆ. ನಗರದಿಂದ ಸುವರ್ಣ ಸೌಧ 10ಕಿಮೀ ದೂರದಲ್ಲಿ ಇದ್ದು ಪ್ರತಿಯೊಂದಕ್ಕೂ ಅಲ್ಲಿಗೆ ಹೋಗಲು ಜನ ಮತ್ತೆ ಹಣ ಖರ್ಚು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.
First published: June 30, 2020, 7:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading