• Home
  • »
  • News
  • »
  • district
  • »
  • Cyclone Tauktae: ಎರಡನೇ ದಿನದ ತೌಕ್ತೆ ಅಬ್ಬರ; ಮತ್ತೆ ಮೀನುಗಾರರು ಸಮುದ್ರ ತೀರದ ಜನರ ಪರದಾಟ!

Cyclone Tauktae: ಎರಡನೇ ದಿನದ ತೌಕ್ತೆ ಅಬ್ಬರ; ಮತ್ತೆ ಮೀನುಗಾರರು ಸಮುದ್ರ ತೀರದ ಜನರ ಪರದಾಟ!

ತೌಕ್ತೆ ಚಂಡಮಾರುತದ ಅಬ್ಬರ.

ತೌಕ್ತೆ ಚಂಡಮಾರುತದ ಅಬ್ಬರ.

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದ ಕಡಲತೀರದಲ್ಲಿ ಇದ್ದ ಸಣ್ಣ ಪುಟ್ಟ ಗುಡಂಗಡಿಗಳು ಸಮುದ್ರದ ರೌದ್ರ ನರ್ತನಕ್ಕೆ ಸಿಕ್ಕಿ ಆಪೋಷನವಾಗಿವೆ. ಇನ್ನು ನೋಡ ನೋಡುತ್ತಿದ್ದಂತೆ ಅಂಗಡಿಗಳು ಸಮುದ್ರ ಪಾಲಾಗುತ್ತಿದ್ದುದನ್ನು ನೋಡಿದ ಅಂಗಡಿ ಮಾಲಿಕರು ಕಂಗಾಲಾಗಿದ್ದಾರೆ.

  • Share this:

ಕಾರವಾರ (ಮೇ 16); ಉತ್ತರ ಕನ್ನಡ ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಎರಡನೇ ದಿನವೂ ಜೋರಾಗಿ ಅಬ್ಬರಿಸಿದೆ. ಸಮುದ್ರ ತೀರದ ಜನರು ಮತ್ತು ಮೀನುಗಾರರ ಸಂಕಷ್ಟ ಮುಂದುವರೆದಿದೆ. ನಿನ್ನೆಗಿಂತಲೂ ಇವತ್ತು ತೌಕ್ತೆ ಚಂಡಮಾರುತ ತನ್ನ ತೀವ್ರತೆ ಹೆಚ್ಚಿಸಿಕೊಂಡಿದ್ದು ಮೀನುಗಾರರ ನೂರಾರು ದೋಣಿಗಳು ಹಾನಿ ಆಗಿವೆ. ಹಾನಿ ಆಗಿದ್ದು ಹೊರತು ಪಡಿಸಿ ಐವತ್ತಕ್ಕೂ ಹೆಚ್ಚು ದೊಣಿಗಳು ಸಮುದ್ರ ತನ್ನ ಆಪೋಷ ಪಡೆದು ಕೊಂಡಿದೆ. ಇನ್ನು ಲಕ್ಷಾಂತರ ಮೌಲ್ಯದ ಮೀನುಗಾರಿಕಾ ಬಲೆಗಳು ಸಮುದ್ರ ಪಾಲಾಗಿದೆ.. ಸಮುದ್ರ ತೀರದಲ್ಲಿ ದೋಣಿ ರಕ್ಷಣೆಗಾಗಿ ನಿರ್ಮಿಸಿಕೊಂಡಿದ್ದ ನೂರಾರು ಮೀನುಗಾರಿಕಾ ಶೆಡ್ ಗಳನ್ನ ಸಮುದ್ರದ ರಕ್ಕಸದಂತ ಅಲೆಗಳು ಕೊಚ್ಚಿಕೊಂಡು ಹೋಗಿವೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಮುರ್ಡೆಶ್ವರದಲ್ಲಿ ಕಡಲತೀರದಲ್ಲಿ ಇದ್ದ 20ಕ್ಕೂ ಹೆಚ್ಚು ಗೂಡಂಗಡಿಗಳು ಸಮುದ್ರದ ಪಾಲಾಗಿವೆ.


ಮೀನುಗಾರರ ಜತೆ ಇನ್ನಿತರೆ ಸಣ್ಣಪುಟ್ಟ ವ್ಯಾಪಾರಿಗಳು ಕೂಡಾ ತೌಕ್ತೆ ಅಬ್ಬರಕ್ಕೆ ಬೆಚ್ಚಿ ಬಿದ್ದಿದ್ದಾರೆ. ಕಳೆದ ಮದ್ಯ ರಾತ್ರಿ ಅಪ್ಪಳಿಸದ ಸಮುದ್ರ ಅಲೆಗಳು ನೇರವಾಗಿ ಸಮುದ್ರ ತೀರದಲ್ಲಿ ಇದ್ದ ಮನೆಗಳಿಗೆ ನುಗ್ಗಿ ಸಾಕಷ್ಟು ಅವಾತಂರ ಸೃಷ್ಟಿಸಿದೆ..ಹೀಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ತೌಕ್ತೆ ಆರ್ಭಟ ಮುಂದುವರೆದಿದೆ. ಇನ್ನು ಜಿಲ್ಲೆಯಲ್ಲಿ ನೂರಾರು ಮರಗಳು ಧರಶಾಹಿಯಾಗಿವೆ. ವಿದ್ಯುತ್ ಕಂಬಗಳು ಧರಶಾಹಿಯಾಗಿವೆ. ಜತೆಗೆ ನಿರಂತರವಾಗಿ ಬೀಸುವ ಅಬ್ಬರದ ಗಾಳಿ ಜನರಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಿಸುತ್ತಿದೆ.


ಮುರುಡೇಶ್ವರ ದಲ್ಲಿ ಸಮುದ್ರದ ಪಾಲಾದ ಗೂಡಂಗಡಿಗಳು:


ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದ ಕಡಲತೀರದಲ್ಲಿ ಇದ್ದ ಸಣ್ಣ ಪುಟ್ಟ ಗುಡಂಗಡಿಗಳು ಸಮುದ್ರದ ರೌದ್ರ ನರ್ತನಕ್ಕೆ ಸಿಕ್ಕಿ ಆಪೋಷನವಾಗಿವೆ. ಇನ್ನು ನೋಡ ನೋಡುತ್ತಿದ್ದಂತೆ ಅಂಗಡಿಗಳು ಸಮುದ್ರ ಪಾಲಾಗುತ್ತಿದ್ದುದನ್ನು ನೋಡಿದ ಅಂಗಡಿ ಮಾಲಿಕರು ಕಂಗಾಲಾಗಿ ನಿಸ್ಸಾಹಯಕರಾಗಿದ್ದರು. ಸಮುದ್ರ ಅಲೆಗಳ ಮುಂದೆ ಮನುಷ್ಯನ ಜೀವನ ಶೂನ್ಯವಾಗಿದೆ. ಇನ್ನು ಕೇವಲ ಮುರುಡೇಶ್ವರ ಅಷ್ಟೆ ಅಲ್ಲದೆ ಕರಾವಳಿಯಲ್ಲಿ ಸಮುದ್ರದ ದಡದಲ್ಲಿ ಇದ್ದ ಎಲ್ಲ ಕಟ್ಟಡಕ್ಕೂ ಹಾನಿ ಆಗಿದೆ. ತೌಕ್ತೆ ಚಂಡಮಾರುತ ಸಮುದ್ರ ತೀರದ ಜನರ ಮೇಲೆ ಭಾರಿ ಪರಿಣಾಮ ಬೀರಿದೆ. ತೌಕ್ತೆ ಹೊಡೆತಕ್ಕೆ ಸಿಕ್ಕಿದ ಜರ್ಜರಿತವಾದ ಜನರು ಮತ್ತೆ ಮೇಲೆಳಲು ವರ್ಷವೇ ಬೇಕು.


ಮಳೆ ಗಾಳಿ ಅಬ್ಬರ ಜೋರು;


ನಿನ್ನೆ ಜಿಲ್ಲೆಯಲ್ಲಿ ಮಳೆ ಇಲ್ಲದಿದ್ರೂ ಗಾಳಿ ಅಬ್ಬರ ಜೋರಾಗಿತ್ತು ಇವತ್ತು ಗಾಳಿ ಮತ್ತು ಮಳೆ ಜನರನ್ನ ಬೆಚ್ಚಿ ಬೀಳಿಸಿದೆ ನಿರಂತರವಾಗಿ ಬೀಸುವ ಗಾಳಿಗೆ ಮರಗಳು ಧರಾಶಾಹಿಯಾಗಿವೆ. ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ, ಕಡಲತೀರದಲ್ಲಿ ಭಾರೀ ಗಾಳಿ ಬೀಸುತ್ತಿದ್ದು ಮೀನುಗಾರರ ಶೆಡ್ ಗಳಿಗೆ ಹಾನಿ ಆಗಿದೆ ಒಂದೆಡೆಯಿಂದ ಸಮುದ್ರದ ಅಲೆಗಳ ಹೊಡೆತ ಇನ್ನೊಂದೆಡೆ ಭಾರೀ ಗಾಳಿಯ ಹೊಡೆತದಿಂದ ಸಮುದ್ರ ತೀರದ ಜನ ಜರ್ಜರಿತರಾಗಿದ್ದಾರೆ.


ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ 7 ವಾರಗಳು ಬೇಕಾಗುತ್ತೆ; ಉಚಿತವಾಗಿ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರದ ಚಿಂತನೆ


ನಿನ್ನೆ ಮಧ್ಯರಾತ್ರಿ ಅಂಕೋಲಾ ಭಾಗದ ಗ್ರಾಮೀಣ ಭಾಗದಲ್ಲಿ ಏಕಾಏಕಿ ಅಪ್ಪಳಿಸಿದ ಸಮುದ್ರದ ಅಲೆಗಳಿಗೆ ಸಮುದ್ರ ತೀರದ ಜನರು ಕಕ್ಕಾಬಿಕ್ಕಿ ಆದ್ರು. ನೇರವಾಗಿ ಮನೆಗಳಿಗೆ ನುಗ್ಗಿದ ನೀರಿನಿಂದ ತಪ್ಪಿಸಿಕೊಳ್ಳೋದೆ ಹರಸಾಹಸವಾಯಿತು. ಮನೆ ಹೋದ್ರು ಹೋಗ್ಲಿ ಜೀವ ಉಳಿದ್ರೆ ಸಾಕು ಎಂದು ಸಮುದ್ರ ತೀರದ ಜನರು ಸಂಭಂದಿಕರ ಮನೆ ಆಶ್ರಯಿಸಿದ್ದರು. ಹೀಗೆ ಜನರ ಬದುಕಲ್ಲಿ ತೌಕ್ತೆ ಆರ್ಭಟಿಸಿದೆ.


ಕರ್ನಾಟಕದಲ್ಲಿ ಇಂದು ಮತ್ತು ನಾಳೆ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗ , ಚಿಕ್ಕಮಗಳೂರು, ಹಾಸನ, ಹಾಗೂ ಕೊಡಗು ಜಿಲ್ಲೆಗಳ ಕೆಲವು ಕಡೆ ಇಂದು ಮತ್ತು ಮೇ 17ರಂದು ಭಾರೀ ಮಳೆಯಾಗುವ ಸಾಧ್ಯತೆ‌. ನಾಳೆ ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Published by:MAshok Kumar
First published: