HOME » NEWS » District » THE RUSSIAN SPUTNIK CORONA VACCINE IS GETTING READY IN DHARWAD MYD MAK

Sputnik Vaccine: ರಷ್ಯಾದ ಸ್ಪುಟ್ನಿಕ್ ಕೊರೋನಾ ಲಸಿಕೆ ಇನ್ನು ಮುಂದೆ ಧಾರವಾಡದಲ್ಲೇ ತಯಾರಾಗಲಿದೆ!

ಧಾರವಾಡದ ಶಿಲ್ಪಾ ಬಯೋಲಾಜಿಕಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಲಸಿಕೆ ತಯಾರಿಕೆಗೆ ಮೂರು ವರ್ಷದ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದೆ. ಒಂದು ವರ್ಷಕ್ಕೆ 50 ಮಿಲಿಯನ್ ಸ್ಪುಟ್ನಿಕ್ ಲಸಿಕೆ‌ ತಯಾರಿಕೆ ಗುರಿಯನ್ನು ಹೊಂದಲಾಗಿದೆ.

news18-kannada
Updated:May 19, 2021, 6:56 AM IST
Sputnik Vaccine: ರಷ್ಯಾದ ಸ್ಪುಟ್ನಿಕ್ ಕೊರೋನಾ ಲಸಿಕೆ ಇನ್ನು ಮುಂದೆ ಧಾರವಾಡದಲ್ಲೇ ತಯಾರಾಗಲಿದೆ!
ಸ್ಪುಟ್ನಿಕ್​​ ಲೈಟ್​ ಲಸಿಕೆ.
  • Share this:
ಧಾರವಾಡ : ಕೊರೋನಾ ತನ್ನ ಅಟ್ಟಹಾಸ ಪ್ರದರ್ಶನ ಮಾಡುತ್ತಿರೊ ಹಿನ್ನೆಲೆ‌ ಜನರಿಗೆ ಸಂಜೀವಿನಿಯಾದದ್ದು ಕೋವಿಡ್ ಲಸಿಕೆ. ಈ ಲಸಿಕೆ ಪಡೆಯಲು ಜನರು ನಾಮುಂದು ತಾಮುಂದು ಎನ್ನುತ್ತಿದ್ದಾರೆ. ಅದರಲ್ಲಿಯೂ ರಷ್ಯಾ ಮೂಲದ ಸ್ಪುಟ್ನಿಕ್ ವ್ಯಾಕ್ಸಿನ್ ಗೆ ಎಲ್ಲಿಲ್ಲದ ಬೇಡಿಕೆ‌ ಇದೆ. ಆದ್ರೆ ಈ ಸ್ಪುಟ್ನಿಕ್ ಲಸಿಕೆ ಇನ್ನೂ ಮುಂದೆ‌ ಧಾರವಾಡದ ಕೈಗಾರಿಕೆಯೊಂದರಲ್ಲಿ ತಯಾರಾಗಲ ಸಜ್ಜಾಗಿದೆ. ಇದರಿಂದ ವಿದ್ಯಾಕಾಶಿ ಧಾರವಾಡ ಹಿರಿಮೆ ಹೆಚ್ಚುದಂತಾಗಿದೆ. ಹೌದು ಧಾರವಾಡದ ಬೇಲೂರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಶಿಲ್ಪಾ ಬಯೋಲಾಜಿಕಲ್ಸ್ ಪ್ರೈವೇಟ್ ಲಿಮಿಟೆಡ್‌ ನಲ್ಲಿ ಸ್ಪುಟ್ನಿಕ್ ಲಸಿಕೆ ತಯಾರಿಕೆ ಸಿದ್ದತೆ ನಡೆಯುತ್ತಿದೆ. ಧಾರವಾಡದಲ್ಲಿ ತಯಾರು ಆಗಲಿರುವ ವ್ಯಾಕ್ಸಿನ್ ಗೆ ರಾಜ್ಯ ಹೊರ ರಾಜ್ಯಗಳಲ್ಲಿಯೂ ಸಹ ಬೇಡಿಕೆ ಹೆಚ್ಚಾಗಲಿದೆ.

ಶಿಲ್ಪಾ ಬಯೋಲಾಜಿಕಲ್ಸ್ ಪ್ರೈವೇಟ್ ಲಿಮಿಟೆಡ್‌  12 ಎಕರೆ ವಿಸ್ತೀರ್ಣತೆಯನ್ನು ಹೊಂದಿದೆ. ಸದ್ಯ ಈ ಕಂಪನಿಯಲ್ಲಿ ಒಟ್ಟು ಐನೂರು ಸಿಬ್ಬಂದಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಮೂರು ಶಿಫ್ಟ್‌ನಲ್ಲಿ ಸಮರೋಪಾದಿಯಲ್ಲಿ ವ್ಯಾಕ್ಸಿನ್ ತಯಾರಿಕಾ ಕಾರ್ಯಕ್ಕೆ ಸಿದ್ದರಿದ್ದಾರೆ.

ಈ ಕೈಗಾರಿಯಲ್ಲಿ ಇನ್ನು‌ ಮುಂದೆ ರಷ್ಯಾದ ಸ್ಪುಟ್ನಿಕ್‌ ಲಸಿಕೆ ತಯಾರಾಗಲಿದ್ದು, ಸದ್ಯ ಹೈದ್ರಾಬಾದ್ ನ ಡಾ.ರೆಡ್ಡಿ'ಸ್ ಲ್ಯಾಬೊರೇಟರೀಸ್ ಜೊತೆ ಮಾತುಕತೆ ನಡೆದಿದೆ. ಲಸಿಕೆ ತಯಾರಿಕೆಗೆ ರಷಿಯನ್ ಡೈರೆಕ್ಟ್ ಇನ್ವೆಸ್ಟಮೆಂಟ್ ಫಂಡ್ (RDIF) 6 ಭಾರತೀಯ ಕಂಪನಿಗಳೊಂದಿಗೆ ಸಹ ಒಪ್ಪಂದ ಮಾಡಿಕೊಂಡಿದೆ.

ಧಾರವಾಡದ ಶಿಲ್ಪಾ ಬಯೋಲಾಜಿಕಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಲಸಿಕೆ ತಯಾರಿಕೆಗೆ ಮೂರು ವರ್ಷದ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದೆ. ಒಂದು ವರ್ಷಕ್ಕೆ 50 ಮಿಲಿಯನ್ ಸ್ಪುಟ್ನಿಕ್ ಲಸಿಕೆ‌ ತಯಾರಿಕೆ ಗುರಿಯನ್ನು ಹೊಂದಲಾಗಿದೆ.

ಸತತ ಪ್ರಯತ್ನ ದಿಂದ ರಷ್ಯಾದ ಸ್ಪುಟ್ನಿಕ್‌ ಲಸಿಕೆ ಮೂರು ತಿಂಗಳ ಬಳಿಕ ಸಿದ್ದವಾಗಿ ಹೊರಬರಲಿದೆ. ಅದಕ್ಕಾಗಿ ಈಗಾಗಲೇ ಶಿಲ್ಪಾ ಬಯೋಲಾಜಿಕಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಎಲ್ಲ ರೀತಿಯ ಸಿದ್ದತೆಗಳು ನಡೆದಿದೆ‌ಎನ್ನಲಾಗುತ್ತಿದೆ.

ಇದನ್ನೂ ಓದಿ: Rizwan Arshad: ಸುಧಾಕರ್​ ಓರ್ವ ಅಯೋಗ್ಯ ಮಂತ್ರಿ; ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆ!

ಈಗಾಗಲೇ ಕೋವಿಡ್ ಲಸಿಕೆಯಾಗಿ ಕೋವಿಸಿಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ಜನತೆ ಪಡೆಯುತ್ತಿದ್ದಾರೆ. ಈ ನಡುವೆ ರಷ್ಯಾದ ಸ್ಪುಟ್ನಿಕ್‌ ಲಸಿಕೆಗೂ ಸಹ ಬೇಡಿಕೆ ಇರೊದ್ರಿಂದ ಒಪ್ಪಂದದ ಮೇರೆಗೆ ಲಸಿಕೆ ತಯಾರಿಕೆ ರಷ್ಯಾ ಗ್ರೀನ್ ಸಿಗ್ನಲ್ ನೀಡಿದ್ದು, ಇನ್ನೂ ಮುಂದೆ ನಮ್ಮ ರಾಜ್ಯದಲ್ಲಿಯೇ ಸ್ಪುಟ್ನಿಕ್‌ ಲಸಿಕೆ ತಯಾರಿಕೆ ಆರಂಭವಾಗಲಿದೆ. ಅದರಲ್ಲೀಯೂ ಉತ್ತರ ಕರ್ನಾಟಕದ ಧಾರವಾಡದಲ್ಲಿ ತಯಾರಾಗುವುದು ರಾಜ್ಯದ ಜನತೆಯಲ್ಲಿ ಸಂತಸ ಮೂಡಿಸಿದೆ.
Youtube Video

ಈ ಸ್ಪುಟ್ನಿಕ್‌ ಲಸಿಕೆ ಸ್ಥಳೀಯ ಕೈಗಾರಿಕೆಯಲ್ಲಿ ತಯಾರಾದ್ರೆ ಸ್ಥಳೀಯ ಜಿಲ್ಲೆಗಳಿಗೆ ಲಸಿಕೆಯನ್ನು ನೀಡಲು ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ಬೇಡಿಕೆಗಡ ತಕ್ಕಂತೆ ಲಸಿಕೆ ತಯಾರಿಕೆ ಸಹ ನಡೆಯಲಿದೆ. ಆದ್ರೆ ರಷ್ಯಾದೊಂದಿಗೆ ನಡೆದ ಒಪ್ಪಂದದ ಪ್ರಕಾರ ಪ್ರತಿವರ್ಷ ೫೦ ಮಿಲಿಯನ್ ಸ್ಪುಟ್ನಿಕ್‌ ಲಸಿಕೆ ತಯಾರಿಸಬೇಕು. ಇದು ಸಹ ಮೂರು ವರ್ಷದ ಅಗ್ರಿಮೆಂಟ್ ಇದೆ. ಒಟ್ಟಾರೆಯಾಗಿ ಭಾರತೀಯ ಲಸಿಕೆಯೊಂದಿಗೆ ರಷ್ಯಾದ ಸ್ಪುಟ್ನಿಕ್‌ ಲಸಿಕೆ ದೊರೆಯುವ ಸುದ್ದಿ ನಾಡಿನ ಜನತೆಯಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಸಲಿದೆ.
Published by: MAshok Kumar
First published: May 19, 2021, 6:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories