ದೊಡ್ಡಬಳ್ಳಾಪುರ; ವೀಲ್ಹಿಂಗ್ ಹುಚ್ಚಾಟಕ್ಕೆ ಇಬ್ಬರು ಯುವಕರ ದಾರುಣ ಸಾವು
ದೊಡ್ಡಬಳ್ಳಾಪುರ ತಾಲೂಕಿನ ಹೊಸಹುಡ್ಯ ಗೇಟ್ ಬಳಿಯ ಕಂಟ್ರಿ ಕ್ಲಬ್ ಮುಂಭಾಗದಲ್ಲಿ ನಡೆದ ಅಪಘಾತದಲ್ಲಿ ಬೈಕ್ ವೀಲ್ಹಿಂಗ್ ಕ್ರೇಜ್ ಸೈಯದ್ ಮತ್ತು ಅರ್ಬಾಸ್ ಸಾವನ್ನಪ್ಪುವ ಮೂಲಕ ಸಾವಲ್ಲೂ ಜೊತೆಯಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ದೊಡ್ಡಬಳ್ಳಾಪುರ; ಡಬಲ್ ರೈಡಿಂಗ್ ನಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ಜೋಡಿ ಅವರದ್ದು, ಹೀಗೆ ಜೊತೆ ಜೊತೆಯಾಗಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ, ಬೈಕ್ ವೀಲ್ಹಿಂಗ್ ಕ್ರೇಜ್ ಗೆ ಸಾವಲ್ಲೂ ಅವರು ಜೊತೆಯಾಗಿದ್ದಾರೆ. ಬೆಂಗಳೂರಿನ ಮತ್ತಿಕೇರಿಯ ನಿವಾಸಿಗಳಾದ ಸೈಯದ್( 20) ಅರ್ಬಾಸ್ (22) ಅವರಿಗೆ ಬೈಕ್ ರೈಡಿಂಗ್ ಹುಚ್ಚು, ತಮ್ಮ ಬಳಿ ಇದ್ದ ಬೈಕ್ ಗೆ ಅಲ್ಟ್ರೇಷನ್ ಮಾಡಿಸ್ಕೊಂಡ್ ಬೈಕ್ ರೈಡಿಂಗ್ ಹೋಗ್ತಾ ಇದ್ರು, ಎಲ್ಲಿಗೆ ಹೋದ್ರು ಜೊತೆಯಾಗಿಯೇ ಹೋಗುತ್ತಿದ್ದ ಸೈಯದ್ ಮತ್ತು ಅರ್ಬಾಸ್ ಜೊತೆ ಜೊತೆಯಾಗಿಯೇ ಬೈಕ್ ವೀಲ್ಹಿಂಗ್ ಮಾಡುತ್ತಿದ್ದರು. ಜೊತೆ ಜೊತೆಯಾಗಿಯಾಗಿ ಬೈಕ್ ವೀಲ್ಹಿಂಗ್ ಮಾಡುವ ಸಾಕಷ್ಟು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದರು. ಈ ವಿಡಿಯೋಗಳಿಗೆ ಸ್ನೇಹಿತರಿಂದ ಮತ್ತು ಬೈಕ್ ರೈಡರ್ ಗಳಿಂದ ಪ್ರಶಂಸೆಯ ಸುರಿಮಳೆಯೇ ಬರುತ್ತಿತ್ತು.
ಇದರಿಂದ ಮತ್ತಷ್ಟು ಪ್ರೇರಣೆಗೊಂಡ ಸೈಯದ್ ಮತ್ತು ಅರ್ಬಾಸ್ ದೊಡ್ಡಬಳ್ಳಾಪುರ - ಯಲಹಂಕ ರಸ್ತೆಯಲ್ಲಿ ನಿನ್ನೆ ಸಂಜೆ 5 ಗಂಟೆ ಸಮಯದಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದರು. ಬೈಕ್ ವೀಲ್ಹಿಂಗ್ ಮಾಡುತ್ತಲೇ ಮುಂದೇ ಹೋಗುತ್ತಿದ್ದ ಜೆಸಿಬಿಯನ್ನ ಓವರ್ ಟೇಕ್ ಮಾಡುವ ಯತ್ನ ನಡೆಸಿದ್ದಾರೆ. ಆದರೆ, ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಜೆಸಿಬಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಸೈಯದ್ ಮತ್ತು ಅರ್ಬಾಸ್ ಸಾವನ್ನಪ್ಪಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಹೊಸಹುಡ್ಯ ಗೇಟ್ ಬಳಿಯ ಕಂಟ್ರಿ ಕ್ಲಬ್ ಮುಂಭಾಗದಲ್ಲಿ ನಡೆದ ಅಪಘಾತದಲ್ಲಿ ಬೈಕ್ ವೀಲ್ಹಿಂಗ್ ಕ್ರೇಜ್ ಸೈಯದ್ ಮತ್ತು ಅರ್ಬಾಸ್ ಸಾವನ್ನಪ್ಪುವ ಮೂಲಕ ಸಾವಲ್ಲೂ ಜೊತೆಯಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಇವರು ವೀಲ್ಹಿಂಗ್ ಹುಚ್ಚಾಟ ಮಾಡ್ತಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ರಸ್ತೆಯಲ್ಲಿ ಸಾರ್ವಜನಿಕ ತೊಂದರೆ ನೀಡುವುದರ ಜೊತೆಗೆ ತಮ್ಮ ಪ್ರಾಣಕ್ಕು ಕುತ್ತು ತಂದುಕೊಟ್ಟಿತು. ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಭಾಗದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ನಡೆಯುತ್ತಿದ್ದ ವೀಲಿಂಗ್ ಬಗ್ಗೆ ನ್ಯೂಸ್18 ಸಾಕಷ್ಟು ಬಾರಿ ಸುದ್ದಿ ಪ್ರಸಾರ ಮಾಡಿ ಅಧಿಕಾರಿಗಳ ಗಮನ ಸೆಳಯುವ ಮೂಲಕ ಪೊಲೀಸ್ ಇಲಾಖೆ ಬ್ರೇಕ್ ಹಾಕಿದ್ದರು.
ಅಲ್ಲಿ ಇಲ್ಲಿ ಕೆಲವೊಮ್ಮೆ ಇಂತಹಾ ಘಟನೆಗಳು ಮರುಗಳಿಸ್ತಾ ಇದ್ದು ಪೊಲೀಸ್ ನಿಯಮಗಳು ಸ್ವಾರ್ಥಕ್ಕೆ ಅಲ್ಲ, ಸಾರ್ವಜನಿಕರ ಪ್ರಾಣ ರಕ್ಷಣೆಗೆ ಅನ್ನೋದು ಸಾರ್ವಜನಿಕರಿಗೆ ಮನವರಿಕೆ ಆಗೋ ವರೆಗೆ ಇಂಥಹಾ ನೋವುಗಳು ಪೋಷಕರಿಗೆ ತಪ್ಪಿದ್ದಲ್ಲ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ