ಪ್ರೀತಿಸಿದ ಯುವತಿಯ ಜೊತೆಗಿದ್ದ ಖಾಸಗಿ ದೃಶ್ಯ ಸೆರೆ ಹಿಡಿದು ಬೆದರಿಕೆ; ಯುವಕ ಆತ್ಮಹತ್ಯೆ

ನಂತರ ದುಡ್ಡು ಬಿಟ್ಟು ನಿನ್ನ ಹುಡುಗಿಯ ನಂಬರ್ ಕೊಡು ಎಂದು ಪೀಡಿಸುತ್ತಿದ್ದರು. ನಂಬರ್ ಕೊಡದೆ ಹೋದರೆ ನಿಮ್ಮಿಬ್ಬರ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಾಸನ: ‌ಟೆಕ್ನಾಲಜಿ ಬೆಳೆದಂತೆ ಅಪಾಯವೂ ಹೆಚ್ಚುತ್ತಿದೆ. ಇತ್ತೀಚೆಗೆ ಮಕ್ಕಳಿಂದ ಹಿಡಿದು ವಯೋವೃದ್ದರವೆಗೂ ಎಲ್ಲರ ಕೈಯಲ್ಲೂ ಮೊಬೈಲ್, ಐಫೋನ್ ಗಳಿರುತ್ತವೆ. ಇದು ಎಷ್ಟು ಉಪಯೋಗವೂ ಅಷ್ಟೇ ಅಪಾಯಕಾರಿ ಕೂಡ. ಮೊಬೈಲ್ ನಿಂದ ಎಷ್ಟು ಕೊಲೆ, ಸಂಸಾರಗಳೇ ಹಾಳಾಗಿ ಹೋಗಿವೆ. ಇದಕ್ಕೆ ತಾಜಾ ಉಧಾಹರಣೆ ಎಂಬಂತೆ, ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಜೋಡಿಯ ಖಾಸಗಿ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದವರಿಗೆ ಹೆದರಿ ಪ್ರಿಯತಮ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೆ ಶರಣಾದ ಯುವಕನ ಹೆಸರು ಸುಪ್ರೀತ್ (32). ಹಾಸನ ಜಿಲ್ಲೆ, ಅರಸೀಕೆರೆ ಮೂಲದವನು. ಬಡ ಕುಟುಂಬದಲ್ಲಿ ಹುಟ್ಟಿದರು ಈತನ ಪೋಷಕರು ಮಗನಿಗೆ ಯಾವುದಕ್ಕು ಕೊರತೆಯಾಗದಂತೆ ಸಾಕಿ, ಸಲಹಿ, ವಿದ್ಯಾಭ್ಯಾಸ ಕೊಡಿಸಿದ್ದರು. ಸುಪ್ರೀತ್ ಗೆ ಸೆಸ್ಕಾಂನಲ್ಲಿ ಕ್ಲರ್ಕ್ ಕೆಲಸ ಸಿಕ್ಕಿತ್ತು.‌ ತಾನಾಯಿತು ತನ್ನ ಕೆಲಸವಾಯಿತು ಎಂದು ಇದ್ದವನು ಕೆಲ ವರ್ಷಗಳಿಂದ ತಮ್ಮದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆಯನ್ನು ಮದುವೆಯಾಗಲು ನಿಶ್ಚಯಿಸಿದ್ದ. ಈ ವಿಷಯ ಗ್ರಾಮದ ಕೆಲವರಿಗೆ ತಿಳಿದಿತ್ತು.‌ ಕಳೆದ ಮೂರು ತಿಂಗಳ ಹಿಂದೆ ಪ್ರೇಯಸಿಯೊಂದಿಗೆ ಅರಸೀಕೆರೆಯ ಬೆಟ್ಟವೊಂದಕ್ಕೆ ತೆರಳಿದ್ದ ಸುಪ್ರಿತ್ ಸರಸ, ಸಲ್ಲಾಪದಲ್ಲಿ ತೊಡಗಿದ್ದ ಖಾಸಗಿ ದೃಶ್ಯಗಳನ್ನು ನಾಲ್ವರು ಯುವಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ನಂತರ ಅದನ್ನು ಸುಪ್ರೀತ್‌ಗೆ ತೋರಿಸಿ ಆತನಿಂದ ಮೂರು ಸಾವಿರ ಹಣದ ಜೊತೆಗೆ ಮೊಬೈಲ್ ನಂಬರ್ ಅನ್ನು ಸಹ ಪಡೆದಿದ್ದರು. ಇದರಿಂದ ಸುಪ್ರೀತ್ ಆತಂಕಗೊಂಡಿದ್ದ.

ಇದನ್ನು ಓದಿ: Afghanistan Crisis; 126 ಭಾರತೀಯರನ್ನು ಹೊತ್ತು ಕಾಬೂಲ್​ನಿಂದ ಭಾರತಕ್ಕೆ ಹೊರಟ ಕೊನೆಯ ಏರ್ ಇಂಡಿಯಾ ವಿಮಾನ!

ಇದಾದ ಕೆಲ ದಿನಗಳ ಬಳಿಕ ಸುಪ್ರೀತ್ ವಾಟ್ಸಾಪ್‌ಗೆ ಖಾಸಗಿ ವಿಡಿಯೋ ಕಳುಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಇತರೆಡೆ ಈ ವಿಡಿಯೋ ಹರಿ ಹರಿಯಬಿಡುವುದಾಗಿ ಹೆದರಿಸಿ ಹಣ ವಸೂಲಿ ಮಾಡಿದ್ದರು. ಇದನ್ನೇ ಮುಂದುವರಿಸಿದ ಕಿರಾತಕರು ಪದೇ ಪದೇ ಫೋನ್ ಮಾಡಿ ಹಣ ಪೀಕುತ್ತಿದ್ದರು. ಇದರಿಂದ ಹೆದರಿದ್ದ ಸುಪ್ರೀತ್, ಬ್ಲಾಕ್ ಮೇಲ್ ಮಾಡುತ್ತಿದ್ದವರಿಗೆ ಮೂರು, ಐದು ಸಾವಿರ ಹೀಗೆ ಹಣ ಕೊಡುತ್ತಿದ್ದ. ಇದನ್ನೇ ಖಯಾಲಿ ಮಾಡಿಕೊಂಡ ನಾಲ್ವರು, ಇತ್ತೀಚೆಗೆ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದರು. ನಂತರ ದುಡ್ಡು ಬಿಟ್ಟು ನಿನ್ನ ಹುಡುಗಿಯ ನಂಬರ್ ಕೊಡು ಎಂದು ಪೀಡಿಸುತ್ತಿದ್ದರು. ನಂಬರ್ ಕೊಡದೆ ಹೋದರೆ ನಿಮ್ಮಿಬ್ಬರ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಇದರಿಂದ ಹೆದರಿದ ಸುಪ್ರೀತ್ ಅರಸೀಕೆರೆಯಿಂದ ಬೆಂಗಳೂರಿಗೆ ಹೋಗಿ, ಲಾಡ್ಜ್‌ವೊಂದರಲ್ಲಿ ಮಧ್ಯಾಹ್ನ ಊಟ ಮಾಡಿ ನಂತರ ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಉಪ್ಪಾರಪೇಟೆ ಪೊಲೀಸರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡಬೇಕೆಂದು ನೂರಾರು ಕನಸು ಕಂಡಿದ್ದ ಪೋಷಕರಿಗೆ ಮಗನ ಸಾವಿನ ಸುದ್ದಿ ಕೇಳಿ ಬರಸಿಡಿಲು ಬಡಿದಂತಾಗಿದೆ.‌ ಅಮಾಯಕ ಯುವಕನ ಸಾವಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆ ವಿಧಿಸುವ ಮೂಲಕ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರದಿ: ಶಶಿಧರ್ ಬಿ.ಸಿ.
Published by:HR Ramesh
First published: