ವಿಜಯಪುರ ಕಲಾವಿದರ ದೇಶಪ್ರೇಮ ; ತಮಗೆ ವೇದಿಕೆ ಒದಗಿಸಿದವರ ವಿರುದ್ಧವೇ ಜನಜಾಗೃತಿಗೆ ಮುಂದಾಗಿ ಮಾದರಿಯಾದ ಕಲಾವಿದರು
ತಮ್ಮಲ್ಲಿರುವ ಪ್ರತಿಭೆಯನ್ನು ಈಗ ಚೀನಾ ಆ್ಯಪ್ ಹೊರತು ಪಡಿಸಿ ಇತರ ಆ್ಯಪ್ ಗಳು ಮತ್ತು ಯ್ಯೂಟ್ಯೂಬ್ ಮೂಲಕ ಜನರಿಗೆ ತಲುಪಿಸಲು ನಿರ್ಧರಿಸಿದ್ದಾರೆ.
news18-kannada Updated:June 19, 2020, 6:50 PM IST

ಕಲಾವಿದರು
- News18 Kannada
- Last Updated: June 19, 2020, 6:50 PM IST
ವಿಜಯಪುರ(ಜೂ. 19): ಅವರೆಲ್ಲ ಸಣ್ಣಪುಟ್ಟ ಕಲಾವಿದರು. ಇವರಿಗೆ ಆ ಒಂದು ವೇದಿಕೆ ಇವರಲ್ಲಿರುವ ಕಲೆಯನ್ನು ಜನರಿಗೆ ತಲುಪಲು ಸಹಾಯವಾಗಿತ್ತು. ಈ ವೇದಿಕೆಯ ಮೂಲಕವೇ ಅವರು ಇತ್ತೀಚಿನ ದಿನಗಳಲ್ಲಿ ಮನೆಮಾತಾಗುತ್ತಿದ್ದರು. ಆದರೆ, ಯಾವಾಗ ಚೀನಾ ವಿರುದ್ಧ ಹೋರಾಟದಲ್ಲಿ ಭಾರತೀಯ ಸೈನಿಕರು ಹುತಾತ್ಮರಾದರೋ ಆ ಒಂದು ಘಟನೆ ಇವರಲ್ಲಿ ದೇಶಾಭಿಮಾನದ ಕಿಚ್ಚನ್ನು ಬಡಿದೆಬ್ಬಿಸಿದೆ. ತಮ್ಮಲ್ಲಿರುವ ಪ್ರತಿಭೆಯನ್ನು ಬೆಳೆಕಿಗೆ ತಂದ ವೇದಿಕೆಯಾದರೇನಂತೆ ಅದಕ್ಕೆ ಕಿಚ್ಚು ಹಚ್ಚಲು ನಿರ್ಧರಿಸಿ ಬಿಟ್ಟಿದ್ದಾರೆ.
ಬಸವನಾಡು ವಿಜಯಪುರದ ಸುಮಾರು 20ಕ್ಕೂ ಹೆಚ್ಚು ಕಲಾವಿದರು ಈಗ ಚೀನಾ ಆ್ಯಪ್ ಟಿಕ್-ಟಾಕ್ ನಿಂದ ಹೊರ ಬಂದಿದ್ದಾರೆ. ಟಿಕ್-ಟಾಕ್ ನಲ್ಲಿ ಹೊಂದಿದ್ದ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಮೊಬೈಲಿನಲ್ಲಿದ್ದ ಚೀನಾ ಆ್ಯಪ್ ನ್ನು ಅನ್ ಇನ್ಸ್ಟಾಲ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಚೀನಾ ರಾಷ್ಟ್ರದ ಎಲ್ಲ ಬಗೆಯ ವಸ್ತುಗಳನ್ನು, ಆ್ಯಪ್ ಗಳನ್ನು ಬಹಿಷ್ಕರಿಸುವಂತೆ ಜನಜಾಗೃತಿಗೆ ಮುಂದಾಗಿದ್ದಾರೆ. ಗಡಿಯಲ್ಲಿ ಭಾರತೀಯ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಚೀನಾ ವಿರುದ್ಧ ಭಾರತೀಯರು ಆರ್ಥಿಕ ಸಮರ ಸಾರಿದ್ದು, ಈಗ ಟಿಕ್-ಟಾಕ್ ಕಲಾವಿದರೂ ಕೂಡ ಇದಕ್ಕೆ ಕೈ ಜೊಡಿಸಿದ್ದಾರೆ. ಭಾರತದ ವೈರಿ ಚೀನಾ ದೇಶದ ಟಿಕ್ ಟಾಕ್ ಆ್ಯಪ್ ಇನ್ನು ಮುಂದೆ ಬಳಸುವುದಿಲ್ಲ ಎಂದು ಈ ಕಲಾವಿದರು ತಮ್ಮ ಬದ್ಧತೆಯನ್ನೂ ತಿಳಿಸಿದ್ದಾರೆ.
ವಿಜಯಪುರದ ಕಲಾವಿದರಿಂದ ಟಿಕ್ ಟಾಕ್ ಖಾತೆಗಳು ಈಗ ಕ್ಲೋಸ್ ಆಗಿವೆ. ಚೀನಾ ಮೂಲದ ಟಿಕ್ ಟಾಕ್ ನ್ನು ಬಹಿಷ್ಕಾರ ಮಾಡುತ್ತಿರುವ ಪ್ರಕಾಶ್ ಆರ್.ಕೆ, ವಿಕಾಸ್ ಕೆ, ಶ್ರೀಶೈಲ್ ಸೇರಿದಂತೆ 20ಕ್ಕೂ ಹೆಚ್ಚು ಕಲಾವಿದರು ಚೀನಾ ವಿರುದ್ಧದ ಆರ್ಥಿಕ ಸಮರದಲ್ಲಿ ಪಾಲ್ಗೋಂಡು ಚೀನಾ ಆ್ಯಪ್ ಬಹಿಷ್ಕರಿಸಲು ಇತರರಿಗೆ ಮಾದರಿಯಾಗಿದ್ದಾರೆ.
ಚೀನಾ ದೇಶದ ಆ್ಯಪ್ ಟಿಕ್-ಟಾಕ್ ಇಲ್ಲದಿದ್ದರೇ ಏನಂತೆ ಭಾರತೀಯ ಆ್ಯಪ್ ಮತ್ತು ಚೀನಾ ಹೊರತಾದ ಆ್ಯಪ್ ಗಳನ್ನು ಬಳಸಲು ನಿರ್ಧರಿಸಿದ್ದಾರೆ. ತಮ್ಮಲ್ಲಿರುವ ಪ್ರತಿಭೆಯನ್ನು ಈಗ ಚೀನಾ ಆ್ಯಪ್ ಹೊರತು ಪಡಿಸಿ ಇತರ ಆ್ಯಪ್ ಗಳು ಮತ್ತು ಯ್ಯೂಟ್ಯೂಬ್ ಮೂಲಕ ಜನರಿಗೆ ತಲುಪಿಸಲು ನಿರ್ಧರಿಸಿದ್ದಾರೆ. ಈ ಟಿಕ್-ಟಾಕ್ ಕಲಾವಿದರ ಹೋರಾಟಕ್ಕೆ ಗಾನಯೋಗಿ ಕಲಾಸಂಘದ ಕಲಾವಿದರಿಂದಲೂ ಬೆಂಬಲ ವ್ಯಕ್ತವಾಗಿದ್ದು, ಅವರೂ ಕೂಡ ಚೈನೀಸ್ ಆ್ಯಪ್ ಬಳಸದಿರಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ : ಕಡಲ್ಕೊರೆತದಿಂದ ಸಮುದ್ರ ಪಾಲಾಗುವ ಭೀತಿ ; ಊರನ್ನೇ ನುಂಗಲು ಹೊರಟ ಕಡಲಿಗೆ ತಡೆಗೋಡೆ ಕಟ್ಟಿದ ಚಿತ್ರಾಪುರ ಜನ
ಚೀನಾದ ಆ್ಯಪ್ ತಯಾರಕರು ಕಾಲಹರಣ ಮಾಡುವವರಿಗಾಗಿ ಟಿಕ್-ಟಾಕ್ ಆ್ಯಪ್ ಬಿಡುಗಡೆ ಮಾಡಿದ್ದರಂತೆ. ಆದರೆ, ಈ ಆ್ಯಪ್ ಭಾರತದಲ್ಲಿ ಇಷ್ಟೋಂದು ಜನಪ್ರಿಯವಾಗಿ ಜನ ಬಳಸುವದನ್ನು ನೋಡಿ ಇಂಡಿಯಾದಲ್ಲಿ ಎಷ್ಟೋಂದು ಜನ ಕಾಲಹರಣ ಮಾಡುತ್ತಾರಾ ಎಂದು ಕುಹಕವಾಡಿದ್ದರಂತೆ. ಈಗ ಇದೇ ಟಿಕ್-ಟಾಕ್ ಬಳಕೆದಾರರು ಮತ್ತು ಕಲಾವಿದರು ಆ ಅ್ಯಪ್ ನ್ನು ತಮ್ಮ ಮೊಬೈಲ್ಗಳಿಂದ ಅನ್ ಇನ್ಸ್ಟಾಲ್ ಮಾಡುವ ಮೂಲಕ ದೇಶದ ಹಿತಾಸಕ್ತಿಯ ಮುಂದೆ ಎಲ್ಲವೂ ನಗಣ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಇದೇ ರೀತಿ ಎಲ್ಲರೂ ಚೀನಾ ಮತ್ತು ಅದು ಉತ್ಪಾದಿಸುವ ಎಲ್ಲ ಬಗೆಯ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ವೈರಿ ರಾಷ್ಟ್ರಕ್ಕೆ ತಕ್ಕಪಾಠ ಕಲಿಸಬೇಕು ಎಂಬ ಜಾಗೃತಿ ಈಗ ಜನರಲ್ಲಿ ಈ ಹಿಂದೆಂದಿಗಂತಲೂ ಹೆಚ್ಚಾಗಿದೆ.
ಬಸವನಾಡು ವಿಜಯಪುರದ ಸುಮಾರು 20ಕ್ಕೂ ಹೆಚ್ಚು ಕಲಾವಿದರು ಈಗ ಚೀನಾ ಆ್ಯಪ್ ಟಿಕ್-ಟಾಕ್ ನಿಂದ ಹೊರ ಬಂದಿದ್ದಾರೆ. ಟಿಕ್-ಟಾಕ್ ನಲ್ಲಿ ಹೊಂದಿದ್ದ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಮೊಬೈಲಿನಲ್ಲಿದ್ದ ಚೀನಾ ಆ್ಯಪ್ ನ್ನು ಅನ್ ಇನ್ಸ್ಟಾಲ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಚೀನಾ ರಾಷ್ಟ್ರದ ಎಲ್ಲ ಬಗೆಯ ವಸ್ತುಗಳನ್ನು, ಆ್ಯಪ್ ಗಳನ್ನು ಬಹಿಷ್ಕರಿಸುವಂತೆ ಜನಜಾಗೃತಿಗೆ ಮುಂದಾಗಿದ್ದಾರೆ. ಗಡಿಯಲ್ಲಿ ಭಾರತೀಯ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಚೀನಾ ವಿರುದ್ಧ ಭಾರತೀಯರು ಆರ್ಥಿಕ ಸಮರ ಸಾರಿದ್ದು, ಈಗ ಟಿಕ್-ಟಾಕ್ ಕಲಾವಿದರೂ ಕೂಡ ಇದಕ್ಕೆ ಕೈ ಜೊಡಿಸಿದ್ದಾರೆ.