• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕೆಫೆ ಕಾಫಿ ಡೇ ಮ್ಯಾನೇಜರ್ ಮೇಲೆ ಹಲ್ಲೆ; ಸಿಗರೇಟ್ ಸೇದಬೇಡ ಅಂದಿದ್ದಕ್ಕೆ ಹಲ್ಲೆ ಮಾಡಿದೋನು ಅಂದರ್

ಕೆಫೆ ಕಾಫಿ ಡೇ ಮ್ಯಾನೇಜರ್ ಮೇಲೆ ಹಲ್ಲೆ; ಸಿಗರೇಟ್ ಸೇದಬೇಡ ಅಂದಿದ್ದಕ್ಕೆ ಹಲ್ಲೆ ಮಾಡಿದೋನು ಅಂದರ್

ಕಾಫಿ ಡೇ.

ಕಾಫಿ ಡೇ.

ರಾಮಮೂರ್ತಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದು ತೀವ್ರ ರಕ್ತಸ್ರಾವವಾಗಿದ್ದ ಮ್ಯಾನೇಜರ್ ನವೀನ್ ಕುಮಾರ್ ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • Share this:

ಬೆಂಗಳೂರು; ಕೆಫೆ ಕಾಫಿ ಡೇನ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕಸ್ತೂರಿನಗರ ಕೆಫೆ ಕಾಫಿ ಡೇನಲ್ಲಿ ನಡೆದಿದೆ. ನಿನ್ನೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ಕಿರಣ್ ಎಂಬಾತ ಕಾಫಿ ಡೇ ಗೆ ಬಂದಿದ್ದಾನೆ. ‌ಬಂದ ಕೂಡಲೇ ಆತನ ಬಳಿ ಇರೋ ಸಿಗರೇಟ್ ತೆಗೆದು ಅದ್ರಲ್ಲಿರೋ ಪುಡಿಯನ್ನು ಉದರಿಸಿ ಅದಕ್ಕೆ ಗಾಂಜಾ ಮಾದರಿಯ ಪುಡಿಯನ್ನು ತುಂಬಲು ಮುಂದಾಗಿದ್ದಾನೆ. ಇದನ್ನು ನೋಡಿದ ಮ್ಯಾನೇಜರ್ ನವೀನ್ ಕುಮಾರ್ ಏನ್ ಮಾಡ್ತಾ ಇದೀರಾ, ಇದಕ್ಕೆಲ್ಲಾ ಇಲ್ಲಿ ಯಾವುದೇ ಅನುಮತಿ‌ ಇಲ್ಲ ಅಂತೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳಿದಿದೆ. ಜಗಳ ನೋಡುತ್ತಿದ್ದಂತೆ ವಿಕೋಪಕ್ಕೆ ಹೋಗಿದ್ದು ಕಿರಣ್ ಕಾಫಿ ಡೇ ನಲ್ಲಿ ಇದ್ದ ಕಬ್ಬಿಣದ ರಾಡೊಂದನ್ನು ತಗೊಂಡು ಮ್ಯಾನೇಜರ್ ತಲೆಗೆ ಬಲವಾಗಿ ಹೊಡೆದಿದ್ದಾನೆ.‌


ನಂತರ ತೀವ್ರ ರಕ್ತಸ್ರಾವ ಆಗಿದ್ದು ಇಬ್ಬರು ಒಬ್ಬರನ್ನು ಒಬ್ಬರು ಹೊಡೆದಾಡಿಕೊಂಡಿದ್ದಾರೆ. ಕೂಡಲೇ ಕಾಫಿ ಡೇನಲ್ಲಿ ಇದ್ದ ಇತರೇ ಸಿಬ್ಬಂದಿಯವರು ರಾಮಮೂರ್ತಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದು ತೀವ್ರ ರಕ್ತಸ್ರಾವವಾಗಿದ್ದ ಮ್ಯಾನೇಜರ್ ನವೀನ್ ಕುಮಾರ್ ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದು ಕಡೆ ಘಟನೆಗೆ ಕಾರಣವಾದ ಕಿರಣ್ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು ಆತ ಸಿಗರೇಟ್ ಗೆ ತುಂಬಿಸುತ್ತಾ ಇರೋದು ಗಾಂಜಾ ಅಥವಾ ಏನು ಅನ್ನೋದ್ರ ಬಗ್ಗೆ ತನಿಖೆ ಮಾಡ್ತಾ ಇದ್ದು ಆರೋಪಿ ಕಿರಣ್ ಮೇಲೆ ಎಫ್ ಐ ಆರ್ ಸಹ ದಾಖಲು ಮಾಡಿದ್ದಾರೆ.


ಇದನ್ನೂ ಓದಿ : ಅರಣ್ಯ ಅಭಿವೃದ್ಧಿ ನಿಗಮಕ್ಕೆ ತಾರಾ ಅನುರಾಧಾ; ಇಲ್ಲಿದೆ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ


ಇದರ ಜೊತೆಗೆ ಆರೋಪಿ ಕಿರಣ್ ಬಳಿ ಒಂದು ಚಾಕು ಸಹ ಪತ್ತೆಯಾಗಿದ್ದು ಆರೋಪಿಯ ಹಿನ್ನಲೆ ಏನು ಅನ್ನೋದ್ರ ಬಗ್ಗೆಯೂ ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ. ಇದಲ್ಲದೆ, ಘಟನೆಗೆ ಪ್ರಮುಖ ವಾದ ಕಾರಣ ಏನು ಅಂತ ಕಾಫಿ ಡೇ ನಲ್ಲಿ ಕೆಲಸ ಮಾಡ್ತಾ ಇದ್ದ ಸಿಬ್ಬಂದಿಯನ್ನು ಸಹ ಠಾಣೆಗೆ ಕರೆದು ವಿಚಾರಣೆಗೊಳಪಡಿಸಿದ್ದಾರೆ.


ಸದ್ಯ ತಲೆಗೆ ತೀವ್ರ ಪೆಟ್ಟಾಗಿದ್ದು ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ಪಡೀತಿರೋ ನವೀನ್ ಸ್ಟೇಟ್ ಮೆಂಟ್ ಸಹ ಪೊಲೀಸರು ಪಡೆದಿದ್ದು , ಗಾಂಜಾ ಸೇವನೆ ಮಾಡಲು ಯತ್ನ ಮಾಡಿದ ಅದನ್ನ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿದ್ದಾಗಿ ಮಾಹಿತಿ ನೀಡಿದ್ದಾನೆ.‌ ಸದ್ಯ ರಾಮಮೂರ್ತಿನಗರ ಪೊಲೀಸರು ಆರೋಪಿ ಕಿರಣ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Published by:MAshok Kumar
First published: