ಕಾರವಾರ: ಕೊರೋನಾ ಮೊದಲ ಅಲೆಯಿಂದ ಬಚಾವ್ ಆಗಿದ್ದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಜನ ಕೋವಿಡ್ ಎರಡನೇ ಅಲೆಗೆ ಬೆಚ್ಚಿಬಿದ್ದಿ ದ್ದಾರೆ. ಜೋಯಿಡಾ ತಾಲೂಕಿನಲ್ಲಿ ಹಳ್ಳಿ ಹಳ್ಳಿಗೂ ಕೋವಿಡ್ ಸೋಂಕು ವ್ಯಾಪಿಸಿದ್ದು ದಿನನಿತ್ಯಕ್ಕೂ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ಇದರಿಂದ ಇಲ್ಲಿನ ಜನ ಕಂಗಾಲಗಿದ್ದು ಕೊರೋನಾ ಮಹಾಮರಿಯಿಂದ ಬಚಾವಾಗಲು ಹೆಣಗಾಡು ತ್ತಿದ್ದಾರೆ. ಈ ಹಿಂದೆ ಕೆಲವೊಂದು ಹಳ್ಳಿ ಜನರಿಗೆ ಕೊರೋನಾ ಎಂದ್ರೆ ಏನು ಅಂತಾನೇ ತಿಳಿದಿರಲಿಲ್ಲ. ಆದರೆ, ಈಗ ಕೊರೋನಾ ಎಂದರೆ ಸಾಕು ಎಲ್ಲರೂ ಹೌಹಾರುವಂತಾಗಿದೆ.
ಈ ಬಾರಿ ಜೋಯಿಡಾ ಜನ ಎರಡನೇ ಅಲೆಯ ಹೊಡೆತಕ್ಕೆ ಸಿಕ್ಕಿ ನರಳುತ್ತಿದ್ದಾರೆ. ದಟ್ಟ ಅರಣ್ಯ ಪ್ರದೇಶದಲ್ಲಿ ಇರುವ ಹಳ್ಳಿಯಲ್ಲೂ ಕೊರೋನಾ ಸೋಂಕು ಹರಡಿರೋದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ..ಯಾಕೆಂದ್ರೆ ಇಲ್ಲಿನ ಜನ ತಮ್ಮ ತಮ್ಮ ಹಳ್ಳಿ ಬಿಟ್ಟು ಬೇರೆ ಎಲ್ಲೂ ಹೋದವರಲ್ಲ ಜತೆಗೆ ಲಾಕ್ ಡೌನ್ ಸಮಯದಲ್ಲಂತು ತಮ್ಮ ಹಳ್ಳಿ ಹೋಗ್ಲಿ ಮನೆಯ ಆವರಣ ಬಿಟ್ಟು ಹೊರಗಡೆ ಹೋಗಲ್ಲ ಆದ್ರೆ ಸೋಂಕು ಹೇಗೆ ಬಂತು ಎನ್ನೋದು ಕೆದಕುತ್ತಾ ಹೋದ್ರೆ ಉತ್ತರ ಇಲ್ಲೆ ಇದೆ.
ಉದ್ಯೋಗಕ್ಕಾಗಿ ಮುಂಬೈನಲ್ಲಿ ನೆಲೆಸಿದ ಇಲ್ಲಿನ ಜನ ಕಳೆದ ಒಂದು ತಿಂಗಳ ಹಿಂದೆ ತಮ್ಮ ತಮ್ಮ ಊರಿಗೆ ಬಂದಿದ್ದಾರೆ ಇವರಿಂದ ಸೋಂಕು ಹರಡಿಕೊಂಡಿದೆ ಅಂತಾರೆ ಇಲ್ಲಿನ ಜನ....ಹೀಗೆ ಬಹುತೇಕ ಹಳ್ಳಿಗಳಲ್ಲಿ ಮುಂಬೈ ಮತ್ತು ಬೆಂಗಳೂರಿನಲ್ಲಿ ನೆಲೆಸಿದವರು ವಾಪಾಸ್ ಆದ ಬೆನ್ನಲ್ಲೆ ಸೋಂಕಿತರ ಸಂಖ್ಯೆ ಕೂಡಾ ಏರಿಕೆಯಾಗಿದೆ...ಇದ್ರಿಂದ ಜನರು ಆತಂಕಿತರಾಗಿದ್ದಾರೆ.
ದಿನಕ್ಕೆ ನೂರರ ಗಡಿ ದಾಟುತ್ತಿರುವ ಸೋಂಕಿತರು:
ಕೊರೋನಾ ಮೊದಲ ಅಲೆಯಲ್ಲಿ ದಿನಕ್ಕೆ ಒಂದು ಪ್ರಕರಣ ನೋಡದ ಜೋಯಿಡಾ ತಾಲೂಕಿನ ಜನರು ಈಗ ದಿನಕ್ಕೆ ನೂರರ ಗಡಿ ಮತ್ತು ನೂರಕ್ಕಿಂತ ಹೆಚ್ಚು ಸೋಂಕಿಗೆ ಒಳಗಾಗುತ್ತಿದ್ದಾರೆ ಇದ್ರಿಂದ ಜೋಯಿಡಾ ದಲ್ಲಿ ಸೋಂಕು ಯಾವ ಮಟ್ಟದಲ್ಲಿ ಹಬ್ಬಿಕೊಂಡಿದೆ ಎನ್ನೋದು ಖಾತ್ರಿ ಆಗಿದೆ...ಹಳ್ಳಿ ಗಳಲ್ಲಿ ಸೋಂಕು ನಿಯಂತ್ರಣಕ್ಕೆ ತರಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ ಆದ್ರೂ ಕೂಡಾ ಮಹಾಮಾರಿ ಅಟ್ಟಹಾಸ ನಿರಂತರವಾಗಿದೆ.
ಸೋಂಕಿತರು ಮನೆಯಲ್ಲೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ತಮ್ಮನ್ನು ತಾವೆ ಆರೈಕೆ ಮಾಡಿಕೊಳ್ಳುತ್ತಿದ್ದಾರೆ..ಈ ಭಾಗದಲ್ಲಿ ಆರೋಗ್ಯ ಸೌಲಭ್ಯ ಕೊರತೆ ಇರೋದ್ರಿಂದ ತೀರಾ ತುರ್ತು ಪರಿಸ್ಥಿತಿ ಇದ್ದಲ್ಲಿ ಮಾತ್ರ ಕಾರವಾರ ಕಿಮ್ಸ್ ಗೆ ತಂದು ದಾಖಲು ಮಾಡಲಾಗುತ್ತಿದ್ದೆ ಇಲ್ಲವಾದ್ರೆ ಜೋಯಿಡಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಜೋಯಿಡಾದಲ್ಲಿ ಎರಡನೇ ಅಲೆಯ ರೌದ್ರ ನರ್ತನಕ್ಕೆ ಜೋಯಿಡಾ ಜನ ಬೆಚ್ಚಿಬಿದ್ದಿದ್ದಾರೆ. ಮುಂದೆ ಸೋಂಕು ನಿಯಂತ್ರಣಕ್ಕೆ ಬಂದರೆ ಸಾಕು ಎನ್ನುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ