ಹಾವೇರಿಯಲ್ಲಿ 16ಕ್ಕೆ ಏರಿದ ಸೋಂಕಿತರ ಸಂಖ್ಯೆ; ಮರ್ಮಾಘಾತ ನೀಡುತ್ತಿದೆ ಮಹಾರಾಷ್ಟ್ರದ ಲಿಂಕ್

ಮೂಲತಃ ಶಿಗ್ಗಾಂವಿ ಪಟ್ಟಣದ ನಿವಾಸಿಯಾದ ಇವರು ಮುಂಬೈನಿಂದ ಆಗಮಿಸಿದ್ದರು. ಮೇ 31 ರಂದು ಯುವತಿಯ (P3730) ತಂದೆಗೆ(P-3271) ಸೋಂಕು ದೃಢಪಟ್ಟಿತ್ತು. ಇಂದಿನ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 16 ಜನರಿಗೆ ಸೋಂಕು ದೃಢಪಟ್ಟಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಹಾವೇರಿ (ಜೂನ್‌ 02); ಜಿಲ್ಲೆಯಲ್ಲಿ ಮಂಗಳವಾರ ಮತ್ತೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಮಾರಣಾಂತಿಕ ವೈರಸ್‌ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆ ಆಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಮುಂಬೈನಿಂದ ತಂದೆ-ತಾಯಿಯೊಂದಿಗೆ ಜಿಲ್ಲೆಗೆ ಆಗಮಿಸಿದ್ದ ಖಾಸಗಿ ಕಂಪನಿಯ ಉದ್ಯೋಗಿ P- 3730 24 ವರ್ಷದ ಯುವತಿಗೆ ಕರೋನಾ ಸೋಂಕು ದೃಢ ಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಮೂಲತಃ ಶಿಗ್ಗಾಂವಿ ಪಟ್ಟಣದ ನಿವಾಸಿಯಾದ ಇವರು ಮುಂಬೈನಿಂದ ಆಗಮಿಸಿದ್ದರು. ಮೇ 31 ರಂದು ಯುವತಿಯ (P3730) ತಂದೆಗೆ(P-3271) ಸೋಂಕು ದೃಢಪಟ್ಟಿತ್ತು. ಇಂದಿನ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 16 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಆರುಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.

ಮುಂಬೈನ ಸಿದ್ದಿ ವಿನಾಯಕ ಚಾಳ ಸಾಂತಾಕ್ರೂಸ್‌ನಲ್ಲಿ ತಂದೆ-ತಾಯಿಯೊಂದಿಗೆ 24 ವರ್ಷದ P-3730 ವಾಸವಾಗಿದ್ದು, ಅಂಧೇರಿಯ ಸ್ಥಳೀಯ ಖಾಸಗಿ ಕಂಪನಿಯಲ್ಲಿ ಕೆಲಸಮಾಡುತ್ತಿದ್ದರು. ಓಲಾ ಕಂಪನಿಯ ಕಾರ್‌ನ್ನು ಬಾಡಿಗೆಗೆ ಪಡೆದು ಮೇ 19 ರಂದು ಮುಂಬೈನಿಂದ ಹೊರಟು ಪೂನಾ, ನಿಪ್ಪಾಣಿ, ಬೆಳಗಾವಿ, ಹುಬ್ಬಳ್ಳಿ ಮಾರ್ಗವಾಗಿ ತಡಸ ಚೆಕ್ ಪೋಸ್ಟ್‌ಗೆ ಅಂದು ರಾತ್ರಿ 9-30ಕ್ಕೆ ಆಗಮಿಸಿದ್ದರು.

ಇವರನ್ನು ವೈದ್ಯಕೀಯ ತಪಾಸಣೆ ನಂತರ ಜಕ್ಕಿನಕಟ್ಟೆ ರಾಣಿ ಚೆನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಮೇ 24 ರಂದು ಸ್ವಾಬ್ ಪರೀಕ್ಷೆಗೆ ಕಳಹಿಸಲಾಗಿತ್ತು. ಇಂದು  ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಕ್ಕಿನಕಟ್ಟೆ ರಾಣಿ ಚೆನ್ನಮ್ಮ ವಸತಿ ಶಾಲೆಯ 100 ಮೀಟರ್ ವ್ಯಾಪ್ತಿಯನ್ನು ಈಗಾಗಲೇ ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಹಾಗೂ ಜಕಿನಕಟ್ಟಿ ಗ್ರಾಮವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಮೋದಿ-ಟ್ರಂಪ್ ಮಾತುಕತೆ; ಚೀನಾ ಗಡಿ ವಿವಾದ, ಅಮೆರಿಕದ ಹಿಂಸಾಚಾರ ಸೇರಿದಂತೆ ಮಹತ್ವದ ಚರ್ಚೆ
First published: