• Home
  • »
  • News
  • »
  • district
  • »
  • ಕೋಲಾರದಲ್ಲಿ ನೂರಕ್ಕೇರಿದ ಸೋಂಕಿತರ ಸಂಖ್ಯೆ; ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಲಾಕ್‌ಡೌನ್‌ಗೆ ಚಿಂತನೆ

ಕೋಲಾರದಲ್ಲಿ ನೂರಕ್ಕೇರಿದ ಸೋಂಕಿತರ ಸಂಖ್ಯೆ; ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಲಾಕ್‌ಡೌನ್‌ಗೆ ಚಿಂತನೆ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಕೋಲಾರ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸೀಮಿತ ಅವಧಿಯಲ್ಲಿ ಲಕ್‌ಡೌನ್ ಜಾರಿ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

  • Share this:

ಕೋಲಾರ; ರಾಜ್ಯದಲ್ಲಿ ಶನಿವಾರ ಕೊರೋನಾ ಪ್ರಕರಣಗಳು ಸ್ಪೋಟವಾಗಿದ್ದು ಸುಮಾರು 918 ಜನರಿಗೆ ಸೋಂಕು ತಗುಲುವ ಮೂಲಕ ದಾಖಲೆ ನಿರ್ಮಾಣವಾಗಿದೆ. ಇನ್ನೂ ಇದರ ಬೆನ್ನಲ್ಲೆ ಬಯಲುಸೀಮೆ ಕೋಲಾರ ಜಿಲ್ಲೆಯಲ್ಲು ಇದುವರೆಗು ದಾಖಲಾಗದ ಅತಿಹೆಚ್ಚು ಪ್ರಕರಣಗಳು ಕಂಡುಬಂದಿದೆ, ಒಂದೇ ದಿನ 14 ಜನರಿಗೆ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 104 ಕ್ಕೆ ಏರಿಕೆಯಾಗಿದೆ. ಇದು ಸಾಮಾನ್ಯವಾಗಿ ಜನ ಸಾಮಾನ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ.


ಜಿಲ್ಲೆಯಲ್ಲಿ ಈವರೆಗೆ 10,757 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಇವರಲ್ಲಿ 10,055 ವರದಿಗಳು ನೆಗಟಿವ್ ಆಗಿದ್ದರೆ, 104 ಪ್ರಕರಣಗಳು ಪಾಸಿಟಿವ್ ಆಗಿವೆ. ಉಳಿದಂತೆ ಇಲ್ಲಿಯವರೆಗೂ ಸೋಂಕಿತರ ಪ್ರಥಮ ಸಂಪರ್ಕಿತ 929 ಮಂದಿ, ದ್ವಿತಿಯ ಸಂಪರ್ಕಿತ 752 ಮಂದಿಗೂ ಕ್ವಾರೆಂಟೈನ್ ಮಾಡಲಾಗಿದೆ.


ಸೋಂಕಿತರ 57 ಮಂದಿ‌ ಆ್ಯಕ್ಟೀವ್ ಪ್ರಕರಣಗಳಲ್ಲಿ 9 ಜನ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದಲ್ಲದೆ, ಈವರೆಗೆ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಕೊರೋನಾದಿಂದ ಮೃತಪಟ್ಟಿದ್ದು, 46 ಜನ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.


ಸ್ವಯಂ ಲಾಕ್‌ಡೌ‌ನ್‌ಗೆ ಚಿಂತನೆ:


ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸೀಮಿತ ಅವಧಿಯಲ್ಲಿ ಲಕ್‌ಡೌನ್ ಜಾರಿ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.


ಇದನ್ನೂ ಓದಿ : Health Bulletien: ರಾಜ್ಯದಲ್ಲಿ ಕೊರೋನಾ ಬಾಂಬ್; ಒಂದೇ ದಿನ 918 ಪಾಸಿಟಿವ್ ಪ್ರಕರಣ, 11 ಸಾವು!


ಕೋಲಾರ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದ ದಿನಗಳಲ್ಲಿ ಹೊರರಾಜ್ಯದವರ  ಓಡಾಟ ಸ್ತಬ್ದವಾಗಿತ್ತು, ಇದೀಗ ಅಂತರಾಜ್ಯ ಪ್ರಯಾಣ ಆರಂಭ ಹಿನ್ನಲೆ ತಮಿಳುನಾಡು, ಆಂದ್ರದಿಂದ ಗಡಿ ತಾಲೂಕುಗಳಾದ ಮುಳಬಾಗಿಲು, ಕೆಜಿಎಫ್‌‌ಗೆ ನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಶನಿವಾರ ಕೆಜಿಎಫ್‌ನಲ್ಲಿ ದಾಖಲಾದ ಒಟ್ಟು 6 ಪ್ರಕರಣದಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು ದೃಡವಾಗಿದೆ. ಇವರೆಲ್ಲರಿಗೂ ಪ್ರಯಾಣದ ಹಿನ್ನೆಲೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಸ್ವಯಂ ಪ್ರೇರಿತ ಲಾಕ್‌ಡೌನ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

Published by:MAshok Kumar
First published: