ಕೊಪ್ಪಳದಲ್ಲಿ ನಾಪತ್ತೆಯಾಗಿದ್ದ ಬಾಲಕ ಹಳ್ಳದಲ್ಲಿ ಶವವಾಗಿ ಪತ್ತೆ ; ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ಪ್ರಕರಣದ ಜಾಡು ಹಿಡಿದು ಅಣ್ಣಪ್ಪನ ಮೇಲೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದಾಗ, ಕೊಲೆ ಮಾಡಿರುವ ಸತ್ಯ ಬಾಯಿಬಿಟ್ಟು ಶವ ಹೂತಿಟ್ಟಿರುವ ಜಾಗವನ್ನು ಪೊಲೀಸರಿಗೆ ತೋರಿಸಿದ್ದಾನೆ.

news18-kannada
Updated:July 23, 2020, 9:04 AM IST
ಕೊಪ್ಪಳದಲ್ಲಿ ನಾಪತ್ತೆಯಾಗಿದ್ದ ಬಾಲಕ ಹಳ್ಳದಲ್ಲಿ ಶವವಾಗಿ ಪತ್ತೆ ; ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
ಕೊಲೆಯಾದ ಬಾಲಕ
  • Share this:
ಕೊಪ್ಪಳ(ಜುಲೈ.23): ಕಾಣೆಯಾಗಿದ್ದ ಬಾಲಕನೊಬ್ಬ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ದುರಂತ ಘಟನೆ ನಡೆದಿದ್ದು ಕೊಪ್ಪಳದ ತಾಲೂಕಿನ ಹಲಗೇರಿ ಹಳ್ಳದಲ್ಲಿ. ಆಡಿ ಬೆಳೆಯುವ ವಯಸ್ಸಿನ 4ನೇ ತರಗತಿಯಲ್ಲಿ ಓದುತ್ತಿದ್ದ ಆ ಬಾಲಕ ಮಂಜುನಾಥ ಬುರ್ಲಿ ಬದುಕಿನ ಬಗ್ಗೆ, ಹೆತ್ತವರು ಅಗಾಧ ಕನಸು ಕಂಡಿದ್ದರು. ಕೆಲ ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಈ ಬಾಲಕ ಬುಧವಾರ ಶವವಾಗಿ ಪತ್ತೆಯಾಗಿದ್ದಾನೆ.

ಮಗನ ಶವವನ್ನು ಕಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕವಯಸ್ಸಿನ ಮಗನನ್ನು ಕಳೆದುಕೊಂಡ ತಾಯಿಯ ಸಂಕಟ ಎಂಥವರ ಕರುಳು ಕಿತ್ತು ಬರುವಂತಹ ದೃಶ್ಯಗಳಿಗೆ ಕೊಪ್ಪಳ ತಾಲೂಕಿನ ಹಲಗೇರಿ ಹಳ್ಳ ಸಾಕ್ಷಿಯಾಯಿತು.

ಅಷ್ಟಕ್ಕೂ ಆಗಿದ್ದಾದರೂ ಏನು?

ಕೆಲ ದಿನಗಳ ಹಿಂದಷ್ಟೇ ಆಟ ಆಡಿ ಓಡಾಡಿಕೊಂಡಿದ್ದ ತಳಕಲ್ ಗ್ರಾಮದ ಮಂಜುನಾಥ ಬುರ್ಲಿ, ಇದ್ದಕ್ಕಿದ್ದಂತೆ ಕಾಣೆಯಾದ. ಮಗ ಕಾಣೆಯಾದಾಗಿನಿಂದ ಕೊಲೆಯಾಗಿರುವ ಅನುಮಾನವಿದ್ದ ಹೆತ್ತವರು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೊನೆಗೂ ಹೆತ್ತವರ ಅನುಮಾನ ನಿಜವಾಯ್ತು. ಮಗ ಮಂಜುನಾಥ ಶವವಾಗಿ ಪತ್ತೆಯಾಗಿದ್ದ.

ತಳಕಲ್ ಗ್ರಾಮದವನೇ ಆಗಿರುವ ಅಣ್ಣಪ್ಪ ನಡುವಲಮನಿ ಎಂಬಾತ ಕಣ್ಣು, ಕಿಡ್ನಿ ಮಾಫಿಯಾಗೆ ನಮ್ಮ ಮಗನನ್ನು ಕೊಲೆ ಮಾಡಿದ್ದಾನೆ ಎಂದು ಮೃತ ಬಾಲಕನ ಪಾಲಕರ ಆರೋಪಿಸುತ್ತಿದ್ದಾರೆ.

ಬಾಲಕ ತಳಕಲ್ ಗ್ರಾಮದವನಾಗಿದ್ದರೂ ಕೊಲೆ ಆರೋಪಿ ಅಣ್ಣಪ್ಪ ಶವವನ್ನು ಗ್ರಾಮದಿಂದ ಸುಮಾರು 8 ಕಿ.ಮೀ. ದೂರ ಇರುವ ಹಲಗೇರಿ ಹಳ್ಳದಲ್ಲಿ ಹೂತು ಹಾಕಿದ್ದ. ಜುಲೈ 19ರಂದು ಕಾಣೆಯಾಗಿದ್ದ ತಳಕಲ್​​​ ಗ್ರಾಮದ ಬಾಲಕ ಮಂಜುನಾಥ್, ಜುಲೈ 22 ರಂದು ಶವವಾಗಿ ಪತ್ತೆಯಾಗಿದ್ದಾನೆ. ಕಾಣೆಯಾದ ಪ್ರಕರಣದ ಜಾಡು ಹಿಡಿದು ಅಣ್ಣಪ್ಪನ ಮೇಲೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದಾಗ, ಕೊಲೆ ಮಾಡಿರುವ ಸತ್ಯ ಬಾಯಿ ಬಿಟ್ಟು ಶವ ಹೂತಿಟ್ಟಿರುವ ಜಾಗವನ್ನು ಪೊಲೀಸರಿಗೆ ತೋರಿಸಿದ್ದಾನೆ.

ಇದನ್ನೂ ಓದಿ : ಲಾಕ್​ಡೌನ್​​ ತೆರವು ಮಾಡಿದ್ದೇ ತಡ ತಮಿಳುನಾಡಿನಿಂದ ಕರ್ನಾಟಕದತ್ತ ಸಾವಿರಾರು ಜನ ಆಗಮನವಿಷಯ ತಿಳಿದು ಹಲಗೇರಿ ಹಳ್ಳದ ಬ್ರಿಡ್ಜ್ ಬಳಿ ಜನಸಾಗರ ಬಂದು ಸೇರಿತ್ತು. ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಜಿ.ಸಂಗೀತಾ, ಪರಿಶೀಲನೆ ನಡೆಸಿದರು.

ಬಾಲಕನ ಕೊಲೆಗೆ ನಿಖರವಾದ ಕಾರಣ ಏನು ಎಂಬುದನ್ನು ಈಗಲೇ ಹೇಳಲಾಗಲ್ಲ. ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಕೊಲೆಯ ಕಾರಣ ಗೊತ್ತಾಗಲಿದೆ ಎಂದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ತನಿಖೆ ಮುಂದುರಿಸಿದೆ.
Published by: G Hareeshkumar
First published: July 23, 2020, 8:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading