HOME » NEWS » District » THE MEKEDATU DAM WILL BE BUILT IN OUR GOVERNMENT RAMESH JARKIHOLI HOPES MAK

ಮೇಕೆದಾಟು ಅಣೆಕಟ್ಟು ನಮ್ಮ ಸರ್ಕಾರದಲ್ಲಿ ನಿರ್ಮಾಣವಾಗಲಿದೆ; ಸಚಿವ ರಮೇಶ್ ಜಾರಕಿಹೊಳಿ ಭರವಸೆ 

ಮೇಕೆದಾಟು ಪರಿಸರದಲ್ಲಿ ಜಲಾಶಯ ನಿರ್ಮಾಣಮಾಡಿ ಅಂದಾಜು 65-66 ಟಿಎಂಸಿ ಹೆಚ್ಚುವರಿ ನೀರನ್ನುಸಂಗ್ರಹಿಸಬೇಕು ಎಂಬುದು ರಾಜ್ಯ ಸರ್ಕಾರದ ಉದ್ದೇಶ. ಅಲ್ಲದೆ ಬೃಹತ್‌ ಪ್ರಮಾಣದ ವಿದ್ಯುತ್‌ ಉತ್ಪಾದನೆಗೂ ರಾಜ್ಯಸರ್ಕಾರ ಯೋಜನೆ ಹಾಕಿಕೊಂಡಿದೆ.

news18-kannada
Updated:September 14, 2020, 8:46 PM IST
ಮೇಕೆದಾಟು ಅಣೆಕಟ್ಟು ನಮ್ಮ ಸರ್ಕಾರದಲ್ಲಿ ನಿರ್ಮಾಣವಾಗಲಿದೆ; ಸಚಿವ ರಮೇಶ್ ಜಾರಕಿಹೊಳಿ ಭರವಸೆ 
ಸಚಿವ ರಮೇಶ್ ಜಾರಕಿಹೊಳಿ
  • Share this:
ರಾಮನಗರ (ಸೆಪ್ಟೆಂಬರ್‌ 14); ಕನಕಪುರದಲ್ಲಿರುವ ಮೇಕೆದಾಟಿಗೆ ಇಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದರು. ಕಳೆದ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅಣೆಕಟ್ಟು ನಿರ್ಮಾಣಕ್ಕಾಗಿ ಸರ್ಕಾರ ಯೋಜನೆಯ ಸಂಪೂರ್ಣ ವರದಿಯನ್ನ ಕೇಂದ್ರಕ್ಕೆ ನೀಡಿತ್ತು. ಆದರೆ ತಮಿಳುನಾಡು ಸರ್ಕಾರ ಸುಪ್ರಿಂಕೋರ್ಟ್ ನಲ್ಲಿ ಅರ್ಜಿಸಲ್ಲಿಸಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಆ ಯೋಜನೆ ಅಲ್ಲಿಗೆ ಸ್ಥಗಿತವಾಯ್ತು. ಆದರೆ, ಇವತ್ತು ಮತ್ತೆ ಮೇಕೆದಾಟು ಯೋಜನೆಗೆ ಮರುಜೀವ ಬಂದಿದ್ದು, ಸಚಿವ ರಮೇಶ್ ಜಾರಕಿಹೊಳಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯೋಜನೆಯ ಮಾಹಿತಿ ಪಡೆದಿದ್ದಾರೆ. ಅಲ್ಲದೆ, "ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣವಾಗುವುದು ಖಚಿತ" ಎಂದು ಭರವಸೆ ನೀಡುವ ಮೂಲಕ ಇಲ್ಲಿನ ಜನರ ಸಂತಸಕ್ಕೆ ಕಾರಣರಾಗಿದ್ದಾರೆ.

ಇಂದು ಕನಕಪುರಕ್ಕೆ ಭೇಟಿ ನೀಡಿ ಮಾತನಾಡಿರುವ ಸಚಿವ ರಮೇಶ್ ಜಾರಕಿಹೊಳಿ, "ಇದೊಂದು ಅತ್ಯಂತ ಮಹತ್ವಾಕಾಂಕ್ಷೆ ಯೋಜನೆ. ಆದರೆ, ತಮಿಳುನಾಡಿನವರು ಅಣೆಕಟ್ಟು ನಿರ್ಮಣ ವಿರೋಧಿಸಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವ ಕಾರಣ ಸ್ಥಗಿತವಾಗಿದೆ. ಆದರೆ ಈಗ ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ. ಹಾಗಾಗಿ ಕೂಡಲೇ ಈ ಯೋಜನೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಮುಂದಿನ ಎರಡು ದಿನಗಳಲ್ಲಿ ಕೇಂದ್ರ ಸಚಿವರು ಹಾಗೂ ಸಿಎಂ ಯಡಿಯೂರಪ್ಪ ನವರ ಜೊತೆಗೆ ಮಾತುಕತೆ ನಡೆಸಲಾಗುತ್ತದೆ" ಎಂದು ಭರವಸೆ ನೀಡಿದ್ದಾರೆ.

"ಇನ್ನು ಈ ಯೋಜನೆಗಾಗಿ ಸರ್ಕಾರದ 9 ಸಾವಿರ ಚಿಲ್ಲರೆ ಕೋಟಿ ರೂಪಾಯಿ ಹಣವನ್ನ ಖರ್ಚು ಮಾಡಲಿದ್ದು, ಯೋಜನೆಯ ಡಿಪಿಆರ್ ಸಹ ಕೇಂದ್ರಕ್ಕೆ ಕಳುಹಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.  ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಉಪಸ್ಥಿತಿ ಇದ್ದರು. ಆದರೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗೈರಾಗಿದ್ದರು.

ಮೇಕೆದಾಟು ಯೋಜನೆ ವಿವರ:

ಮೇಕೆದಾಟು ಪರಿಸರದಲ್ಲಿ ಜಲಾಶಯ ನಿರ್ಮಾಣಮಾಡಿ ಅಂದಾಜು 65-66 ಟಿಎಂಸಿ ಹೆಚ್ಚುವರಿ ನೀರನ್ನುಸಂಗ್ರಹಿಸಬೇಕು ಎಂಬುದು ರಾಜ್ಯ ಸರ್ಕಾರದ ಉದ್ದೇಶ. ಅಲ್ಲದೆ ಬೃಹತ್‌ ಪ್ರಮಾಣದ ವಿದ್ಯುತ್‌ ಉತ್ಪಾದನೆಗೂ ರಾಜ್ಯಸರ್ಕಾರ ಯೋಜನೆ ಹಾಕಿಕೊಂಡಿದೆ. ಮೇಕೆದಾಟುಯೋಜನೆ ಮೂಲಕ ಬೇಸಿಗೆ ಕಾಲದಲ್ಲಿ ಉಂಟಾಗುವನೀರಿನ ಕೊರತೆಯನ್ನು ನೀಗಿಸಿ, ಅಗತ್ಯಬಿದ್ದಾಗ ಕೃಷಿಗೂಬಳಸಿಕೊಳ್ಳಬಹುದು.ಜೊತೆಗೆ ಪ್ರಸ್ತುತ ಬೆಂಗಳೂರು ನಗರಕ್ಕೆ 1,350 ಮಿಲಿಯನ್‌ಲೀಟರ್‌ ಕಾವೇರಿ ನೀರನ್ನು ಪೂರೈಸಲಾಗುತ್ತಿದೆ.

ಇದನ್ನೂ ಓದಿ : ಉತ್ತರಪ್ರದೇಶದಲ್ಲಿ ಸ್ಥಾಪನೆಯಾಗಿದೆ ವಾರೆಂಟ್‌ ಇಲ್ಲದೆಯೂ ವ್ಯಕ್ತಿಯನ್ನು ಬಂಧಿಸುವ-ಶೋಧಿಸುವ ವಿಶೇಷ ಭದ್ರತಾ ಪಡೆ

2030ರವೇಳೆಗೆ 2285 ಮಿಲಿಯನ್‌ ಲೀಟರ್‌ ನೀರುಬೇಕಾಗುತ್ತದೆ. ಹಾಗಾಗಿ ಮೇಕೆದಾಟುವಿನಿಂದ 2030ರ ವೇಳೆಗೆಬೇಕಾಗುವಷ್ಟು ಪ್ರಮಾಣದ ನೀರನ್ನು ಬೆಂಗಳೂರು ನಗರಹಾಗೂ ಬಯಲುಸೀಮೆ ಜಿಲ್ಲೆಗಳಿಗೆ ಪೂರೈಸಿ ಸಮಸ್ಯೆಬಗೆಹರಿಸುವುದು. ತಮಿಳುನಾಡಿಗೆ ಅದರ ಪಾಲಿನ 177 ಟಿಎಂಸಿ ನೀರನ್ನು ನೀಡಿ, ಬಾಕಿ ಸಮುದ್ರಕ್ಕೆ ಹೋಗಿವ್ಯರ್ಥವಾಗುವ ನೀರನ್ನು ಮೇಕೆದಾಟುವಿನಲ್ಲಿಸಂಗ್ರಹಿಸಬಹುದು ಎಂದು ಕಳೆದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಲೆಕ್ಕಾಚಾರ ಮಾಡಲಾಗಿತ್ತು.

ಈ ಹಿಂದೆ 5,912 ಕೋಟಿ ಯೋಜನೆಯಾಗಿತ್ತು;

ಕುಡಿಯುವ ನೀರು, ನೀರಾವರಿ ಹಾಗೂ ವಿದ್ಯುತ್‌ಉತ್ಪಾದನೆ ಉದ್ದೇಶಕ್ಕಾಗಿ 5,912 ಕೋಟಿ ರುಪಾಯಿವೆಚ್ಚದಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡುವುದು. ಹಾಗೆಯೇ  441.2 ಮೀಟರ್‌ ಎತ್ತರದ ಅಣೆಕಟ್ಟೆಯಲ್ಲಿ 66.5 ಟಿಎಂಸಿನೀರು ಸಂಗ್ರಹಿಸುವ ಯೋಜನೆ ಇದಾಗಿದೆ. 440ಮೀ.ನಲ್ಲಿ 64 ಟಿಎಂಸಿ ನೀರು ಸಂಗ್ರಹಿಸಲುಅವಕಾಶವಿದೆ. 7.7 ಟಿಎಂಸಿ ನೀರು ಅಣೆಕಟ್ಟೆಯಲ್ಲಿಡೆಡ್‌ ಸ್ಟೋರೇಜ್‌ ಇರುತ್ತದೆ. 400 ಮೆಗಾವ್ಯಾಟ್‌ವಿದ್ಯುತ್‌ ಉತ್ಪಾದನೆಯ ಗುರಿ ಹೊಂದಲಾಗಿತ್ತು. ಆದರೆ ಯೋಜನೆಗೆ ನಿಧಾನವಾದ ಹಿನ್ನೆಲೆ ಈ 9 ಸಾವಿರ ಚಿಲ್ಲರೆ ಕೋಟಿ ಹಣ ಬೇಕಾಗಿದೆ ಎನ್ನಲಾಗುತ್ತಿದೆ.
Published by: MAshok Kumar
First published: September 14, 2020, 8:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories