ಗದಗ ಜಿಲ್ಲೆಯಲ್ಲಿ ಅಬ್ಬರಿಸುತ್ತಿರುವ ಮಲಪ್ರಭೆ ನದಿ; ಶಾಂತಳಾಗುವಂತೆ ಉಡಿ ತುಂಬಿ ಮಹಿಳೆಯರಿಂದ ಪ್ರಾರ್ಥನೆ

ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಮಲಪ್ರಭ ಅಚ್ಚುಕಟ್ಟು ಪ್ರದೇಶದಲ್ಲಿ ಆಗುತ್ತಿರುವ ಧಾರಾಕಾರ ಮಳೆಯಿಂದಾಗಿ ನವಿಲುತೀರ್ಥ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಇದರಿಂದಾಗಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು, ವಾಸನ ಸೇರಿದಂತೆ ವಿವಿಧ ಗ್ರಾಮಗಳಿಗೆ ನೀರು ನುಗ್ಗಿ, ಅವಾಂತರ ಸೃಷ್ಟಿ ಮಾಡಿದೆ.

ಮಲಪ್ರಭಾ ನದಿಗೆ ಪೂಜೆ ಸಲ್ಲಿಸುತ್ತಿರುವ ಮಹಿಳೆಯರು.

ಮಲಪ್ರಭಾ ನದಿಗೆ ಪೂಜೆ ಸಲ್ಲಿಸುತ್ತಿರುವ ಮಹಿಳೆಯರು.

  • Share this:
ಗದಗ: ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಗದಗ ಜಿಲ್ಲೆಯಲ್ಲಿ ಮಲಪ್ರಭೆ ನದಿ  ಅಬ್ಬರಿಸುತ್ತಿದೆ. ಈಗಾಗಲೇ ನದಿಯ ಪ್ರವಾಹದಿಂದ ಹತ್ತಾರು ಗ್ರಾಮಗಳು ಜಲಾವೃತವಾಗಿದ್ದು, ಇದು ಹೀಗೆ ಮುಂದುವರೆದರೆ ಇನ್ನೂ ಹೆಚ್ಚಿನ ಅಪಾಯ ತಂದೊಡ್ಡಲಿದೆ. ಹೀಗಾಗಿ ಅಬ್ಬರಿಸುತ್ತಿರುವ ಮಲಪ್ರಭೆ ಶಾಂತಳಾಗುವಂತೆ ಪ್ರಾರ್ಥಿಸಿ ನರಗುಂದ ತಾಲೂಕಿನ ಕೊಣ್ಣೂರು ಹಾಗೂ ಕಲ್ಲಾಪುರದ ಜನರು ಪ್ರವಾಹದ ಹೊಳೆಗೆ ಉಡಿ ತುಂಬಿ ಪೂಜೆ ಸಲ್ಲಿಸಿದರು. ಕೊಣ್ಣೂರು, ಕಲ್ಲಾಪುರ ಗ್ರಾಮದ ಹತ್ತಾರು ಮಹಿಳೆಯರು, ಮಕ್ಕಳು ತಂಡೋಪತಂಡವಾಗಿ ಬಂದು ಮಲಪ್ರಭಾ ನದಿಗೆ ಪೂಜೆ ಸಲ್ಲಿಸಿದರು. ಹಣ್ಣು, ಕಾಯಿ, ಸೀರೆ,‌ ಕಣ, ಹಾಗೂ ದವಸ ಧಾನ್ಯಗಳನ್ನು ಉಡಿ ತುಂಬಿ ಶಾಂತಳಾಗುವಂತೆ ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿದರು. ಕಳೆದ ವರ್ಷವಷ್ಟೇ ಅಬ್ಬರಿಸಿ‌ದ್ದ ಮಲಪ್ರಭೆ ಇದೀಗ ಮತ್ತೊಮ್ಮೆ‌ ಆರ್ಭಟಿಸುತ್ತಿದ್ದಾಳೆ. ಹೀಗಾಗಿ ನದಿ ಪಾತ್ರದ ಗ್ರಾಮಗಳು ಭಾಗಶಃ ಜಲಾವೃತಗೊಂಡಿದ್ದು, ಜಮೀನುಗಳಲ್ಲಿ ಬೆಳೆದಿದ್ದ ಫಸಲು ನೀರು ಪಾಲಾಗಿದೆ. ಮನೆಗಳಿಗೆ ನೀರು ನುಗ್ಗಿದ್ದು, ಬದುಕು ಬೀದಿಗೆ ಬಂದಿದೆ. ತಾಯಿ ಮಲಪ್ರಭೆ ಕೃಪೆ ತೋರು ಅಂತಾ ಮಹಿಳೆಯರು ಬೇಡಿಕೊಂಡರು.

ಇದನ್ನು ಓದಿ: Karnataka Rain: ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿ; ಬೆಳಗಾವಿಯ ಹಲವು ಗ್ರಾಮಗಳು ಜಲಾವೃತಮಲಪ್ರಭಾ ಪ್ರವಾಹಕ್ಕೆ ಸಿಲುಕಿಕೊಂಡ ಮಂಗಗಳು

ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಹಾಗೂ ಅಮರಗೋಳ ಗ್ರಾಮದ ಮಧ್ಯ ಮಲಪ್ರಭಾ ನದಿ ಪ್ರವಾಹದಲ್ಲಿ ನೂರಾರು ಕೋತಿಗಳು ಸಿಲುಕಿಕೊಂಡಿವೆ. ಕಳೆದ ಮೂರು ದಿನಗಳಿಂದ ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿರುವ ಮಂಗಗಳು, ಸಮರ್ಪಕವಾದ ಆಹಾರ ಸಿಗದೆ ನರಕಯಾತನೆ ಅನುಭವಿಸುತ್ತಿವೆ. ಮಂಗಗಳನ್ನು ರಕ್ಷಣೆ ಮಾಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಮಲಪ್ರಭ ಅಚ್ಚುಕಟ್ಟು ಪ್ರದೇಶದಲ್ಲಿ ಆಗುತ್ತಿರುವ ಧಾರಾಕಾರ ಮಳೆಯಿಂದಾಗಿ ನವಿಲುತೀರ್ಥ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಇದರಿಂದಾಗಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು, ವಾಸನ ಸೇರಿದಂತೆ ವಿವಿಧ ಗ್ರಾಮಗಳಿಗೆ ನೀರು ನುಗ್ಗಿ, ಅವಾಂತರ ಸೃಷ್ಟಿ ಮಾಡಿದೆ.
Published by:HR Ramesh
First published: