HOME » NEWS » District » THE IRREGULARITIES THAT ARE TAKING PLACE IN THE HUBLI MURUSAVIRA MATT DINGALESHWARA SWAMI RELEASE THE DOCUMENTS PTH MAK

ಹುಬ್ಬಳ್ಳಿಯ ಮೂರು ಸಾವಿರ ಮಠದ ಆಸ್ತಿ ಮಾರಾಟದಲ್ಲಿ ಅವ್ಯವಹಾರ; ದಾಖಲೆ ನೀಡಿದ ದಿಂಗಾಲೇಶ್ವರ ಸ್ವಾಮೀಜಿ

ಮೂರು ಸಾವಿರ ಮಠದ ಸ್ವಾಮೀಜಿಯವರನ್ನ ಅವರ ಕೈಗೊಂಬೆಯಾಗಿ ಮಾಡಿಕೊಂಡಿದ್ದಾರೆ. ಮೂರು ಸಾವಿರ ಮಠದ ಅವನತಿ ಆಗದಂತೆ ಹೋರಾಟ ಮಾಡಲು ನಾಡಿನ ಹಲವು ಶ್ರೀಗಳು ರೆಡಿಯಾಗಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

news18-kannada
Updated:January 28, 2021, 3:52 PM IST
ಹುಬ್ಬಳ್ಳಿಯ ಮೂರು ಸಾವಿರ ಮಠದ ಆಸ್ತಿ ಮಾರಾಟದಲ್ಲಿ ಅವ್ಯವಹಾರ; ದಾಖಲೆ ನೀಡಿದ ದಿಂಗಾಲೇಶ್ವರ ಸ್ವಾಮೀಜಿ
ಸುದ್ದಿಗೋಷ್ಠಿ ನಡೆಸಿರುವ ದಿಂಗಾಲೇಶ್ವರ ಸ್ವಾಮೀಜಿ.
  • Share this:
ಹುಬ್ಬಳ್ಳಿ: ಇಲ್ಲಿನ ಮೂರು ಸಾವಿರ ಮಠದಲ್ಲಿ ಅನೇಕ ಅವ್ಯವಹಾರಗಳು ನಡೆದಿದ್ದು, ಮಠದ ಆಸ್ತಿ ಮಾರಾಟದಲ್ಲಿ ನಡೆದಿರುವ ಅವ್ಯವಹಾರದ ದಾಖಲೆಗಳು ನನ್ನ ಬಳಿ ಇವೆ ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, "ಮೂರು ಸಾವಿರ ಮಠದ ಆಸ್ತಿಯನ್ನು ಕೆಎಲ್‌ಇ‌ ಸಂಸ್ಥೆಗೆ ದಾನ ನೀಡಿರುವ ಮಠದ ಉನ್ನತ ಮಟ್ಟದ ಸಮಿತಿಯವರು ಮೂರು ಸಾವಿರ ಮಠವನ್ನು ಸರ್ವನಾಶ ಮಾಡಲು ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ. ಮಠದ ಸ್ಥಿರಾಸ್ತಿಗಳನ್ನು ಪರಭಾರೆ ಮಾಡಬಾರದು ಅನ್ನೋ ಕಾನೂನು ಇದೆ. ಕೆಎಲ್‌ಇ ಸಂಸ್ಥೆಗೆ ಮಾತ್ರವಲ್ಲ ಇನ್ನೂ ಹಲವರಿಗೆ ಮಠದ ಆಸ್ತಿಗಳನ್ನ ಕೊಟ್ಟಿದ್ದಾರೆ. ಸಚಿವ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಸವರಾಜ ಹೊರಟ್ಟಿ, ಶಂಕ್ರಣ್ಣ ಮುನವಳ್ಳಿ, ಮೋಹನ್ ಲಿಂಬಿಕಾಯಿ ಮೂರು ಸಾವಿರ ಮಠದ ಸರ್ವನಾಶ ಮಾಡುತ್ತಿದ್ದಾರೆ" ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.

ನಾನು ಮೂರು ಸಾವಿರ ಮಠದ ಉತ್ತರಾಧಿಕಾರಿ ಆಗಲು ಹೋರಾಟ ಮಾಡುತ್ತಿಲ್ಲ. ಮಠದ ಉಳಿವಿಗಾಗಿ ನಾನು ಹೋರಾಟ ಮಾಡುತ್ತಿರುವೆ. ಉತ್ತರಾಧಿಕಾರಿ ನೇಮಕ ಮಾಡುವ ವ್ಯವಸ್ಥೆಯನ್ನ ಸಿಎಂ ಉದಾಸಿ, ಮೋಹನ ಲಿಂಬಿಕಾಯಿ, ಶಂಕ್ರಣ್ಣ ಮುನವಳ್ಳಿ ಹಾಳು ಮಾಡಿದ್ರು. ನನ್ನ‌ ದೇಹದಲ್ಲಿ ಜೀವ ಇರುವವರೆಗೂ ಹೋರಾಟ ಮಾಡುವೆ.

ಅವ್ಯವಹಾರ ಮಾಡಿದ್ರೆ ದಾಖಲಾತಿ ನೀಡಿ ಅಂತಾ ಸವಾಲು ಹಾಕಿದ್ದಾರೆ. ನಾನು ಸವಾಲು ಸ್ವೀಕರಿಸಲು ಸಿದ್ದನಿರುವೆ. ಉನ್ನತ ಸಮಿತಿ ಸದಸ್ಯರು ಮಾಡಿದ ಪಾಪದ ಕೆಲಸಗಳನ್ನ ನಾನು ಜನರ ಮುಂದೆ ಈಡುತ್ತಿರುವೆ.

ಇದನ್ನೂ ಓದಿ: ಟ್ರ್ಯಾಕ್ಟರ್​ ರ್‍ಯಾಲಿ ವೇಳೆ ನಡೆದ ಹಿಂಸಾಚಾರ ದುರದೃಷ್ಟಕರ, ಆದರೆ ರೈತ ಹೋರಾಟ ನಿಲ್ಲುವುದಿಲ್ಲ; ಅರವಿಂದ ಕೇಜ್ರಿವಾಲ್

ಸಮಿತಿಯವರು ಬಹಿರಂಗ ಸಭೆ ಕರೆದು ಸತ್ಯವನ್ನ ಭಕ್ತರಿಗೆ ತಿಳಿಸಬೇಕು. ಮೂರು ಸಾವಿರ ಮಠದ ಸ್ವಾಮೀಜಿಯವರನ್ನ ಅವರ ಕೈಗೊಂಬೆಯಾಗಿ ಮಾಡಿಕೊಂಡಿದ್ದಾರೆ. ಮೂರು ಸಾವಿರ ಮಠದ ಅವನತಿ ಆಗದಂತೆ ಹೋರಾಟ ಮಾಡಲು ನಾಡಿನ ಹಲವು ಶ್ರೀಗಳು ರೆಡಿಯಾಗಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
Youtube Video

ಸುದ್ದಿಗೋಷ್ಟಿಯಲ್ಲಿ ಸವಣೂರು ಅಡವಿಸ್ವಾಮಿ ಮಠದ ಶ್ರೀ, ಮಂಟೂರು ಅಡವಿ‌ಸಿದ್ದೇಶ್ವರ ಸ್ವಾಮೀಜಿ, ಚಿಕ್ಕಕೆರೂರು ವಿರಕ್ತಮಠದ ಸ್ವಾಮೀಜಿ, ‌ಬಂಕಾಪುರದ ಸದಾಶಿವ ಮಠದ ಶ್ರೀ, ಬೊಮ್ಮನಹಳ್ಳಿ ಸ್ವಾಮೀಜಿ, ಹನಮನಹಳ್ಳಿ‌ ಸ್ವಾಮೀಜಿ ಉಪಸ್ಥಿತರಿದ್ದರು.
Published by: MAshok Kumar
First published: January 28, 2021, 3:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories