HOME » NEWS » District » THE HANGING BRIDGE OF SHIVPUR WHICH WAS LOST WITHOUT MAINTENANCE SESR DKK

ನಿರ್ವಹಣೆ ಇಲ್ಲದೆ ಕಳೆಗುಂದಿದ ಶಿವಪುರದ ತೂಗು ಸೇತುವೆ; ಬೇಕಿದೆ ಕಾಯಕಲ್ಪ

235 ಮೀಟರ್​ ಉದ್ಧದ ಈ ಸೇತುವೆ ಜೋಯಿಡಾ ಮತ್ತು ಯಲ್ಲಾಪುರ ತಾಲೂಕಿನ ಹಲವು ಗ್ರಾಮಗಳನ್ನ ಸಂಪರ್ಕಿಸುತ್ತದೆ. ಜಿಲ್ಲೆಗೆ ಮೆರುಗು ನೀಡಿದ್ದ ಈ ಸೇತುವೆಗೆ ಈಗ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. 

news18-kannada
Updated:December 1, 2020, 6:49 AM IST
ನಿರ್ವಹಣೆ ಇಲ್ಲದೆ ಕಳೆಗುಂದಿದ ಶಿವಪುರದ ತೂಗು ಸೇತುವೆ; ಬೇಕಿದೆ ಕಾಯಕಲ್ಪ
ಶಿವಪುರದ ತೂಗು ಸೇತುವೆ
  • Share this:
ಕಾರವಾರ: ಇಲ್ಲಿನ ಜೋಯಿಡಾದ ಶಿವಪುರ ಸೇತುವೆ ರಾಜ್ಯಕ್ಕೆ ಪ್ರಸಿದ್ಧಿ. ಕಳೆದ ಐದು ವರ್ಷಗಳ ಹಿಂದೆ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಸೇತುವೆ ಅತ್ಯಂತ ಉದ್ದ ತೂಗು ಸೇತುವೆ ಎಂಬ ಪ್ರಸಿದ್ಧಿಗೂ ಪಾತ್ರವಾಗಿದೆ. ಪ್ರಕೃತಿ ಸೌಂದರ್ಯದ ಮಧ್ಯೆ ಎಲ್ಲರನ್ನು ಆಕರ್ಷಿಸುವ ಈ ಸೇತುವೆ ನೋಡಲೆಂದೇ ಅನೇಕ ಪ್ರವಾಸಿಗರು ಆಗಮಿಸುವುದು ಇದೆ. 235 ಮೀಟರ್​ ಉದ್ಧದ ಈ ಸೇತುವೆ ಜೋಯಿಡಾ ಮತ್ತು ಯಲ್ಲಾಪುರ ತಾಲೂಕಿನ ಹಲವು ಗ್ರಾಮಗಳನ್ನ ಸಂಪರ್ಕಿಸುತ್ತದೆ. ಜಿಲ್ಲೆಗೆ ಮೆರುಗು ನೀಡಿದ್ದ ಈ ಸೇತುವೆಗೆ ಈಗ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಸೇತುವೆಯ  ರೋಪ್ ಗಳಿಗೆ ಮೂರು ವರ್ಷಕ್ಕೊಮ್ಮೆ ಗ್ರೀಸಿಂಗ್ ಮಾಡಬೇಕು. ಎಲ್ಲ ನಟ್ ಬೋಲ್ಟ್ ಗಳು ಸರಿಯಾಗಿವೆಯಾ ಎಂದು ಪರೀಕ್ಷೆ ಮಾಡಬೇಕು. ಆದರೆ, ಇಲ್ಲಿ ಆ ಕೆಲಸ ವಾಗುತ್ತಿಲ್ಲ ಸೇತುವೆ ನಿರ್ಮಾಣವಾಗಿ ಐದು ವರ್ಷ ಮುಗಿದರೂ ಇದುವರೆಗೂ ಯಾವುದೇ  ನಿರ್ವಹಣೆ ಮಾಡಲು ಇಲ್ಲಿನ ಗ್ರಾ.ಪಂ  ಪಂಚಾಯತಿ ಮುಂದಾಗಿಲ್ಲ. ಇದರ ಪರಿಣಾಮ ಸೇತುವೆ ತುಕ್ಕು ಹಿಡಿಯುತ್ತಿದೆ. ಇದರಿಂದಾಗಿ ಇದರ ಮೇಲೆ ಓಡಾಡಲೇ ಜನರು ಭಯಪಡುವಂತೆ ಆಗಿದೆ. 

ಶಿವಪುರದ ಈ ಸೇತುವೆ ನಿರ್ಮಾಣದಿಂದಾಗಿ ಜೋಯಿಡಾ, ಉಳವಿ, ಹೆಬ್ಬಾಳ, ನೇತುರ್ಗಾ, ಚಿಲ್ಮಿ, ಸಾತೊಡ್ಡಿ ಯಲ್ಲಾಫುರ ಸೇರಿದಂತೆ ಹತ್ತಾರು ಗ್ರಾಮಗಳ ಜನರ ಸಂಚಾರಕ್ಕೆ ಅನುಕೂಲ ಆಗಿದೆ. ಯಲ್ಲಾಪುರ ಮತ್ತು ಉಳವಿ ಪ್ರವಾಸಕ್ಕೆ ಬಂದವರು ಈ ಸೇತುವೆಯನ್ನ ನೋಡಲು ಬರುತ್ತಾರೆ. ಕಾಳಿ ನದಿಯ ಹಿನ್ನೀರಿನ ಮೇಲೆ ಮಾಡಿದ ಈ ಸೇತುವೆ ಪ್ರವಾಸಿಗರ ಆಕರ್ಷಣೆ ಕೂಡ ಆಗಿದೆ. ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚು. ಇಲ್ಲಿಗೆ ಬೈಕ್ ನಲ್ಲಿ ಬರುವ ಪ್ರವಾಸಿಗರು ಸೇತುವೆಯ ಮೇಲೆ ಮಸ್ತಿ ಮಾಡುತ್ತಾರೆ.

ಇದನ್ನು ಓದಿ: ಮಾಸ್ಕ್​ ಬಳಸಿದರೆ ಸಾಲದು, ಶುಚಿತ್ವದ ಅರಿವಿರುವುದು ಅವಶ್ಯ, ಇಲ್ಲದಿದ್ದರೆ ಸ್ಕೀನ್​ ಇನ್​ಫೆಕ್ಷನ್​ ಆದೀತು!

ಒಮ್ಮೊಮ್ಮೆ ಹತ್ತಾರು ಬೈಕ್​ಗಳು ಸೇತುವೆ ಮೇಲೆ ಇರೋದರಿಂದ ಸೇತುವೆ ಹಾಳಾಗುತ್ತಿದೆ. ಸೇತುವೆ ನಿರ್ಮಿಸಿ ಐದು ವರ್ಷ ಆಗಿರೋದರಿಂದ ಇದುವರೆಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ದಿಂದ ಗ್ರೀಸ್ ಹಚ್ಚಿಲ್ಲ. ಸೇತುವೆಯ ನಟ್ ಬೋಲ್ಟ್, ರೋಪ್​ಗಳ ನಿರ್ವಹಣೆ ಕಾರ್ಯವನ್ನು ಮಾಡಿಲ್ಲ. ಹೀಗಾಗಿ ಸೇತುವೆ ಬೀಳುತ್ತದೆ ಎಂಬ ಆತಂಕ ಹೆಚ್ಚಾಗಿದೆ. ಉಳವಿ ಜಾತ್ರೆ ಸಂದರ್ಭದಲ್ಲಿ ಪಂಚಾಯತಿಯವರು ಓಡಾಡುವ ಜನರಿಂದ ಸೇತುವೆ ಶುಲ್ಕ ವಸೂಲಿ ಮಾಡುತ್ತಾರೆ. ಆದರೆ ನಿರ್ವಹಣೆ ಮಾಡದಿರುವುದಕ್ಕೆ ಸ್ಥಳೀಯರ ಆಕ್ಷೇಪ ವ್ಯಕ್ತಪಡಿಸ್ತಾರೆ.

ಸಾಮಾನ್ಯವಾಗಿ ಮೂರು ವರ್ಷಕ್ಕೆ ಸೇತುವೆಗಳ ನಿರ್ವಹಣೆ ಮಾಡಬೇಕಾಗಿತ್ತು. ಆದರೆ ಇದುವರೆಗೆ ನಿರ್ವಹಣೆ ಕಾರ್ಯವನ್ನ ಮಾಡಲು ಸಂಬಂಧಪಟ್ಟವರು ಮನಸ್ಸು ಮಾಡಿಲ್ಲ.  ಮೂಲಭೂತ ಸೌಕರ್ಯಗಳ ಅವಶ್ಯವಿರುವ ಗ್ರಾಮೀಣ ಪ್ರದೇಶಗಳಿಗೆ ಅಲ್ಲಲ್ಲಿ ಸೇತುವೆಗಳ ಬೇಡಿಕೆ ಇದೆ. ಈ ನಡುವೆ ಜಿಲ್ಲೆಯ ಪ್ರಮುಖ ಆಕರ್ಷಣೆಯಾಗಿರುವ ಈ ತೂಗು ಸೇತುವೆಯ ಸಂರಕ್ಷಣಾ ಕಾರ್ಯ ನಡೆಯಬೇಕಿದೆ. ಇನ್ನಾದರೂ ಈ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾರಿಗಳು ಎಚ್ಚೆತ್ತು. ಇದಕ್ಕೆ ಕಾಲ ಕಾಲಕ್ಕೆ ಬಣ್ಣ ಬಳಿದು, ಹೊಸ ರೂಪ ನೀಡುವ ಮೂಲಕ ಸಂರಕ್ಷಣೆ ಮಾಡಬೇಕು ಎಂಬುದು ಇಲ್ಲಿನ ಜನರ ಮನವಿ.
Published by: Seema R
First published: December 1, 2020, 6:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories