ಹಾವೇರಿ ಜಿಲ್ಲೆಯ ಮೊದಲ ಕರೋನಾ ರೋಗಿ ಗುಣಮುಖ, ಆಸ್ಪತ್ರೆಯಿಂದ ‌ಬಿಡುಗಡೆ

ಮೂಲತಃ ಸವಣೂರ ತಾಲೂಕಿನ ಎಸ್.ಎಮ್. ಕೃಷ್ಣ ನಗರದ ನಿವಾಸಿಯಾದ P-639 ವ್ಯಕ್ತಿಯು ಮುಂಬೈನಿಂದ ಮೇ 4 ರಂದು ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಪರೀಕ್ಷೆಗೆ ಒಳಪಡಿಸಿದ್ದಾಗ ಈತನಿಗೆ ಸೋಂಕು ದೃಢಪಟ್ಟಿತ್ತು. ಜಿಲ್ಲೆಯ ಮೊದಲ ಕೊರೊನಾ ಪ್ರಕರಣ ಇದಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಾವೇರಿ (ಮೇ 26); ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 32 ವರ್ಷದ P-639 ವ್ಯಕ್ತಿಯು ಗುಣಮುಖನಾದ ಕಾರಣ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಮೂಲತಃ ಸವಣೂರ ತಾಲೂಕಿನ ಎಸ್.ಎಮ್. ಕೃಷ್ಣ ನಗರದ ನಿವಾಸಿಯಾದ P-639 ವ್ಯಕ್ತಿಯು ಮುಂಬೈನಿಂದ ಮೇ 4 ರಂದು ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಪರೀಕ್ಷೆಗೆ ಒಳಪಡಿಸಿದ್ದಾಗ ಈತನಿಗೆ ಸೋಂಕು ದೃಢಪಟ್ಟಿತ್ತು. ಜಿಲ್ಲೆಯ ಮೊದಲ ಕೊರೊನಾ ಪ್ರಕರಣ ಇದಾಗಿತ್ತು. ಈತನೊಂದಿಗೆ ಮುಂಬೈನಿಂದ ಆಗಮಿಸಿದ್ದ 40 ವರ್ಷ ಸಹೋದರನಿಗೂ (P-672) ಸೋಂಕು ದೃಢಪಟ್ಟಿತ್ತು.

ಆದರೆ, ಆತ ಇವರಿಗಿಂತ ಮೊದಲೇ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಒಟ್ಟಾರೆ ಜಿಲ್ಲೆಯಲ್ಲಿ ಈವರೆಗೆ ಆರು ಜನರಿಗೆ ಕೋವಿಡ್ ಸೋಂಕು ದೃಢಗೊಂಡಿದ್ದು, ಈ ಪೈಕಿ ಎರಡು ಜನರು ಬಿಡುಗಡೆಗೊಂಡಿದ್ದಾರೆ. ನಾಲ್ಕು ಜನ ಸೋಂಕಿತರಿಗೆ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಬಿಡುಗಡೆಗೊಂಡ ಇಬ್ಬರನ್ನು ಗೃಹಪ್ರತ್ಯೇಕತೆಯಲ್ಲಿರಿಸಲಾಗುತ್ತಿದೆ. ಆಸ್ಪತ್ರೆಯಿಂದ ಬಿಡುಗಡೆ ಸಂದರ್ಭದಲ್ಲಿ ಕೋವಿಡ್ ಆಸ್ಪತ್ರೆಯ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ಹಾಗೂ ಗುಲಾಬಿ ಹೂ ನೀಡಿ ಸರ್ಕಾರಿ ಅಂಬ್ಯುಲೆನ್ಸ್ ಮೂಲಕ ಮನೆಗೆ ಬೀಳ್ಕೊಟ್ಟಿದ್ದಾರೆ.

ಇದನ್ನೂ ಓದಿ : ಕ್ವಾರಂಟೈನ್‌ಗೆ ಒಳಗಾಗಲು ಹಣವಿಲ್ಲದೆ ವಿಮಾನ ನಿಲ್ದಾಣದಲ್ಲೇ ಉಳಿದ 40 ಪ್ರಯಾಣಿಕರು
First published: