• Home
  • »
  • News
  • »
  • district
  • »
  • ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದಿದೆ, ಡಿ.5 ರಂದು ಬಂದ್ ಶತಸಿದ್ದ: ವಾಟಾಳ್ ನಾಗರಾಜ್

ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದಿದೆ, ಡಿ.5 ರಂದು ಬಂದ್ ಶತಸಿದ್ದ: ವಾಟಾಳ್ ನಾಗರಾಜ್

ವಾಟಾಳ್​​ ನಾಗರಾಜ್​​​

ವಾಟಾಳ್​​ ನಾಗರಾಜ್​​​

ಮರಾಠ ಅಭಿವೃದ್ಧಿ ಪ್ರಾಧಿಕಾರ ಅಥವಾ ನಿಗಮ ರಚನೆ ಮಾಡುವುದು ಅಪಾಯದ ಸಂಕೇತವಾಗಿದ್ದು, ರಾಜ್ಯದ ಇತಿಹಾಸದಲ್ಲೇ ಯಾವ ಮುಖ್ಯ ಮಂತ್ರಿಯು ಇಂತಹ ತಪ್ಪು ನಿರ್ಧಾರ ಕೈಗೊಂಡಿರಲಿಲ್ಲ

  • Share this:

ಚಾಮರಾಜನಗರ(ನವೆಂಬರ್. 29): ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದತಿಗೆ ಸರ್ಕಾರಕ್ಕೆ ಕೊಟ್ಟಿರುವ ಗಡುವು ನಾಳೆಗೆ ಮುಗಿಯುತ್ತಿದೆ, ಸರ್ಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ ಹಾಗಾಗಿ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಶತಸಿದ್ದ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಮರಾಠಿ ಪ್ರಾಧಿಕಾರ ಮಾಡಿದ ಮೇಲೆ ಉಳಿದ ಭಾಷಿಕರು ಕೇಳುತ್ತಿದ್ದಾರೆ. ಈ ಅನಾಹುತ ಕ್ಕೆಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪನವರೇ ಕಾರಣವಾಗಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ಅಥವಾ ನಿಗಮ ರಚನೆ ಮಾಡುವುದು ಅಪಾಯದ ಸಂಕೇತವಾಗಿದ್ದು, ರಾಜ್ಯದ ಇತಿಹಾಸದಲ್ಲೇ ಯಾವ ಮುಖ್ಯ ಮಂತ್ರಿಯು ಇಂತಹ ತಪ್ಪು ನಿರ್ಧಾರ ಕೈಗೊಂಡಿರಲಿಲ್ಲ ಎಂದರು. ಬಂದ್ ಗೆ 1050ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಅಂದು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಎಲ್ಲಾ ಗಡಿಗಳನ್ನು ಬಂದ್ ಮಾಡಲಾಗುತ್ತೆ, ಯಾವುದೇ ಕಾರಣಕ್ಕು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಡಿ. 5 ರಂದು ಕರ್ನಾಟಕ ಬಂದ್ ಮಾಡಿಯೇ ತೀರುತ್ತೇವೆ ನಾವೆಲ್ಲಾ ಜೈಲಿಗೆ ಹೋಗಲು ಸಿದ್ದರಿದ್ದೇವೆ ಎಂದರು


ಮುಖ್ಯಮಂತ್ರಿ ಯಡಿಯೂರಪ್ಪ ಪರಭಾಷಿಗರ ಏಜೆಂಟರಾಗಿದ್ದಾರೆ ಎಂದು ಕಿಡಿಕಾರಿದ ವಾಟಾಳ್ ನಾಗರಾಜ್ ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ನಾವು ಕರೆ ನೀಡಿರುವ ಬಂದ್ ಗೆ ಅವಕಾಶ ಕೊಡದಿರಲು ಅವರು ಯಾರು ಎಂದು ಪ್ರಶ್ನಿಸಿದರು.


ಇದನ್ನೂ ಓದಿ : ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಅನ್ನೋಕೆ ಸಿದ್ಧರಾಮಯ್ಯ ಯಾರು; ವಿಜಯೇಂದ್ರ ಕಿಡಿ


ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಡುವುದು ಒಳ್ಳೆಯದು ಯಾಕೆಂದೆರೆ, ಮಹಾರಾಷ್ಟ್ರದವರು ಬೆಳಗಾವಿ, ನಿಪ್ಪಾಣಿ, ಕಾರವಾರ ತಮ್ಮದೆಂದು ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಮರಾಠ ಅಭಿವೃದ್ಧಿ ನಿಗಮ ಮಾಡಿರುವುದು ಎಷ್ಟು ಸರಿ ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು.


ಬಂದ್ ಮಾಡಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಯತ್ನಾಳ್ ಯಾರೆಂದು ನನಗೆ ಗೊತ್ತಿಲ್ಲ ಎ‌ಂದು ಏಕವಚನದಲ್ಲೇ ಕಿಡಿಕಾರಿದರು. ನಾಳೆ ವಿಜಾಪುರಕ್ಕೂ ಹೋಗುತ್ತಿದ್ದೇನೆ, ಅದೇನಾಗುತ್ತೋ ನೋಡುತ್ತೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು