ವೇಶ್ಯೆ ಮನೆಗೆ ಹೋಗಿಬಂದ ಮರು ದಿನವೇ ಅದೆ ಮನೆಯಲ್ಲಿ ದರೋಡೆ;. ಮೈಸೂರಿನಲ್ಲಿ ಖತರ್‌ನಾಕ್‌ ಗ್ಯಾಂಗ್‌ ಅರೆಸ್ಟ್‌

ಶರತ್‌ನ ಈ ಪುಡಾರಿ ಪಟಾಲಮ್‌ನಲ್ಲಿ ಬರೋಬ್ಬರಿ 30ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಒಮ್ಮೆ ವೇಶ್ಯ ಮನೆಗೆ ಹೋಗಿದ್ದ ಇವರು, ಮರು ದಿನ ಅದೇ ಮನೆಗೆ ನುಗ್ಗಿ ಧಮ್ಕಿ ಹಾಕಿದ್ದಾರೆ. ನೀವು ದುಡ್ಡು ಕೊಡದೇ ಹೋದ್ರೆ ಪೊಲೀಸರಿಗೆ ಕಂಪ್ಲೇಂಟ್ ಮಾಡುತ್ತೇವೆ ಅಂತೆಲ್ಲ ಹೆದರಿಸಿ ಹಣ ಕಸಿದು ಪರಾರಿಯಾಗಿದ್ದಾರೆ.

news18-kannada
Updated:September 16, 2020, 5:10 PM IST
ವೇಶ್ಯೆ ಮನೆಗೆ ಹೋಗಿಬಂದ ಮರು ದಿನವೇ ಅದೆ ಮನೆಯಲ್ಲಿ ದರೋಡೆ;. ಮೈಸೂರಿನಲ್ಲಿ ಖತರ್‌ನಾಕ್‌ ಗ್ಯಾಂಗ್‌ ಅರೆಸ್ಟ್‌
ಬಂಧಿತ ಆರೋಪಿಗಳು.
  • Share this:
ಮೈಸೂರು (ಸೆಪ್ಟೆಂಬರ್‌ 16);  ಅವರೆಲ್ಲ ಶಾಲಾ, ಕಾಲೇಜು ಹಂತದ ಡ್ರಾಪ್ಔಟ್ ಸ್ಟೂಡೆಂಟ್ಸು. ಓದು ತಲೆಗೆ ಅತ್ತಲಿಲ್ಲ, ಮಾಡೋದಕ್ಕೆ ಕೆಲಸ ಇಲ್ಲ. ಆದ್ರೆ ದುಷ್ಚಟ, ಶೋಕಿಗಳಿಗೇನೂ ಕಮ್ಮಿ ಇಲ್ಲ. ದುಷ್ಚಟಕ್ಕೆ ದುಡ್ಡುಬೇಕಲ್ಲ, ಆಗ ಶುರುವಾಗಿದ್ದು ರೋಡ್ ರಾಬರಿಯಂತಹ ದುಷ್ಕೃತ್ಯಗಳು. ಗುಂಪು ಕಟ್ಟಿಕೊಂಡು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಮೈಸೂರಿನಲ್ಲಿ 8 ಜನರ ಭಾರಿ ದರೋಡೆ ಗ್ಯಾಂಗ್‌ವೊಂದು ಬಲೆಗೆ ಬಿದ್ದಿದೆ . ಶರತ್, ಸುಮಂತ್, ಕಾರ್ತಿಕ್, ಮಹದೇವ್, ಸುನೀಲ್ ಕುಮಾರ್, ದಿನೇಶ್ ಅಲಿಯಾಸ್ ದಿನಿ, ಶಶಾಂಕ್ ಅಲಿಯಾಸ್ ತೇಜಸ್ ಅಲಿಯಾಸ್ ಅಫಿಷಿಯಲ್, ಧರ್ಮೇಶ್ ಅಲಿಯಾಸ್ ಕರಿಯಾ ಬಂಧಿತ ಆರೋಪಿಗಳು. ಈ ಎಲ್ಲರೂ 20 ರಿಂದ 30 ವರ್ಷದೊಳಗಿನ ಹುಡುಗರು ಎಂಬುದು ಉಲ್ಲೇಖಾರ್ಹ. ಕಳ್ಳತನ, ದರೋಡೆ, ವಸೂಲಿಯಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಬೋಗಾದಿ ಮೈಸೂರಿನ ಹೊರವಲಯದಲ್ಲಿರುವ ಗ್ರಾಮ. ಸಿಟಿಗೆ ಹೊಂದಿಕೊಂಡೇ ಇದ್ದರೂ ಹೆಸರಿಗೆ ಮಾತ್ರ ಹಳ್ಳಿ ಬೋಗಾದಿ ಅಂತಲೇ ಫೇಮಸ್ಸು. ಆರೋಪಿಗಳೆಲ್ಲರೂ ಬೋಗಾದಿ ಮತ್ತು ಆಸುಪಾಸಿನ ನಿವಾಸಿಗಳು. ಇವರೆಲ್ಲರಿಗೂ ಶರತ್ ಟೀಮ್ ಲೀಡರ್. ಇತ್ತೀಚೆಗೆ ಬೋಗಾದಿ ಬಳಿ ರೋಡ್ ರಾಬ್ರಿಗೆ ಹೊಂಚು ಹಾಕುತ್ತಿದ್ದಾಗ ಸರಸ್ವತಿಪುರಂ ಠಾಣೆಯ ಸಬ್ಇನ್ಸ್ಪೆಕ್ಟರ್ ದಿವ್ಯಾ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.

ವಿಚಾರಣೆಗೆ ಒಳಪಡಿಸಿದಾಗ ತಮ್ಮೆಲ್ಲ ಕೃತ್ಯಗಳನ್ನೂ ಒಪ್ಪಿಕೊಂಡಿದ್ದಾರೆ.
ಶರತ್‌ನ ಈ ಪುಡಾರಿ ಪಟಾಲಮ್‌ನಲ್ಲಿ ಬರೋಬ್ಬರಿ 30ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಒಮ್ಮೆ ವೇಶ್ಯ ಮನೆಗೆ ಹೋಗಿದ್ದ ಇವರು, ಮರು ದಿನ ಅದೇ ಮನೆಗೆ ನುಗ್ಗಿ ಧಮ್ಕಿ ಹಾಕಿದ್ದಾರೆ. ನೀವು ದುಡ್ಡು ಕೊಡದೇ ಹೋದ್ರೆ ಪೊಲೀಸರಿಗೆ ಕಂಪ್ಲೇಂಟ್ ಮಾಡುತ್ತೇವೆ ಅಂತೆಲ್ಲ ಹೆದರಿಸಿ ಹಣ ಕಸಿದು ಪರಾರಿಯಾಗಿದ್ದರು.

ಇದನ್ನೂ ಓದಿ; ಹಿಂದಿಯಂತೆ ಕನ್ನಡಕ್ಕೆ ಸ್ಥಾನಮಾನ ನೀಡಲಾಗದು ಎಂದ ಕೇಂದ್ರ; ಸಾಮಾಜಿಕ ಜಾಲತಾಣಗಳಲ್ಲಿ ಭುಗಿಲೆದ್ದ ಆಕ್ರೋಶ

ಇವರು ಪ್ರೇಮಿಗಳನ್ನು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ನಡು ರಸ್ತೆಯಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ. ವರ್ಷದ ಹಿಂದೆ ನವೀನ್ ಮತ್ತು ಪ್ರಸನ್ನ ಎಂಬವರ ಕೊಲೆಗೆ ಪ್ಲ್ಯಾನ್ ಮಾಡಿ ವಿಫಲರಾಗಿದ್ದರು. ಹೀಗೆ ಹೇಳುತ್ತಾ ಹೋದ್ರೆ ಕಥೆ ಮುಗಿಯೋದಿಲ್ಲ. ಆದ್ರೆ ಎಲ್ಲದಕ್ಕು ಬ್ರೇಕ್ ಹಾಕಿರುವ ಪೊಲೀಸರು ಇದೀಗ ಎಲ್ಲರನ್ನು ಜೈಲಿಗೆ ಕಳುಹಿಸಿದ್ದಾರೆ.
ಆರೋಪಿಗಳ ಬಂಧನದೊಂದಿಗೆ ಸರಸ್ವತಿಪುರಂ, ವಿದ್ಯಾರಣ್ಯಪುರಂ, ಲಕ್ಷ್ಮಿಪುರಂ, ವಿಜಯನಗರ, ಕೆ.ಆರ್. ಪೊಲೀಸ್ ಠಾಣಾ ವ್ಯಾಪ್ತಿಯ 5 ಪ್ರಕರಣಗಳು ಪತ್ತೆಯಾಗಿವೆ. 6 ಸಾವಿರ ರೂ. ನಗದು, ಮಾರುತಿ ಓಮ್ನಿ ಕಾರು, 4 ದ್ವಿಚಕ್ರ ವಾಹನ, 11 ಮೊಬೈಲ್ ಫೋನ್, 4 ಹಾಕಿ ಸ್ಟಿಕ್, 5 ಡ್ರಾಗರ್, ಲಾಂಗ್ ಮುಂತಾದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ 15ಕ್ಕೂ ಹೆಚ್ಚು ಆರೋಪಿಗಳು ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಒಟ್ಟಿನಲ್ಲಿ ಆಗಬಾರದ ವಯಸ್ಸಿನಲ್ಲಿ ಪುಡಿರೌಡಿ ಗ್ಯಾಂಗ್ ಆಗಲು ಹೊರಟಿದ್ದವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
Published by: MAshok Kumar
First published: September 16, 2020, 5:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading