HOME » NEWS » District » THE COVID VACCINATION SUCCESSFULLY DELIVERY PROCESS IN KALABURGI RHHSN SAKLB

ದೇಶದ ಮೊದಲ ಸಾವಿಗೆ ಸಾಕ್ಷಿಯಾಗಿದ್ದ ಕಲಬುರ್ಗಿಯಲ್ಲಿ ಕೋವಿಡ್ ಲಸಿಕೆ ವಿತರಣೆ ಪ್ರಕ್ರಿಯೆ ಯಶಸ್ವಿ

ಜಿಲ್ಲೆಯಲ್ಲಿ 21774 ಕೊರೋನಾ ವಾರಿಯರ್ಸ್ ನೋಂದಣಿ ಮಾಡಿಕೊಂಡಿದ್ದಾರೆ. ಜನವರಿ 18 ರಿಂದ ಜಿಲ್ಲೆಯ ಇತರೆಡೆಯೂ ಕೋವಿಡ್ ಲಸಿಕೆ ಹಾಕುವ ಪ್ರಕ್ರಿಯೆ ನಡೆಯಲಿದೆ. ಲಸಿಕೆ ಕಡಿಮೆ ಬಂದಿರುವ ಹಿನ್ನೆಲೆಯಲ್ಲಿ ಜನವರಿ 18 ರಂದು 137 ಕೇಂದ್ರಗಳಲ್ಲಿ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. 155 ಲಸಿಕಾ ತಂಡಗಳನ್ನು ರಚಿಸಲಾಗಿದ್ದು, 775 ಜನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. 

news18-kannada
Updated:January 16, 2021, 5:21 PM IST
ದೇಶದ ಮೊದಲ ಸಾವಿಗೆ ಸಾಕ್ಷಿಯಾಗಿದ್ದ ಕಲಬುರ್ಗಿಯಲ್ಲಿ ಕೋವಿಡ್ ಲಸಿಕೆ ವಿತರಣೆ ಪ್ರಕ್ರಿಯೆ ಯಶಸ್ವಿ
ಕಲಬುರ್ಗಿಯಲ್ಲಿ ಕೊರೋನಾ ಲಸಿಕೆ ನೀಡುತ್ತಿರುವುದು.
  • Share this:
ಕಲಬುರ್ಗಿ; ಕಲಬುರ್ಗಿ ಕೊರೋನಾ ಹಾಟ್ ಸ್ಪಾಟ್ ಎನಿಸಿಕೊಂಡ ನಗರ. ದೇಶದ ಮೊದಲ ಕೊರೋನಾ ಸಾವು ಸಂಭವಿಸಿದ್ದರಿಂದ, ಕಲಬುರ್ಗಿ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇಂತಹ ಕಲಬುರ್ಗಿ ನಗರದಲ್ಲಿ ಕೊರೋನಾ ಲಸಿಕೆ ಹಾಕೋ ಪ್ರಕ್ರಿಯೆ ಯಶಸ್ವಿಯಾಗಿ ಆರಂಭಗೊಂಡಿದೆ. ಡಿ ಗ್ರೂಪ್ ನೌಕರ ಅನಂತರಾಜು ಎಂಬಾತನಿಗೆ ಮೊದಲ ಲಸಿಕೆ ಹಾಕಲಾಗಿದೆ. ಕೊರೋನಾ ಹಾಟ್ ಸ್ಪಾಟ್ ಕಲಬುರ್ಗಿಯ ಜಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಸಂಸದ ಉಮೇಶ್ ಜಾಧವ್, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೋಡ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಡಿಸಿ ವಿ.ವಿ.ಜ್ಯೋತ್ಸ್ನಾ ಮತ್ತಿತರರು ಉಪಸ್ಥಿತರಿದ್ದರು. ಜಿಮ್ಸ್ ನಲ್ಲಿ ಡಿ. ಗ್ರೂಪ್ ನೌಕರ ಅನಂತರಾಜು ಮೊದಲ ಲಸಿಕೆ ಪಡೆದುಕೊಂಡಿದ್ದಾರೆ. ನಂತರ ಇತರರಿಗೆ ಕೋವಿಡ್ ಲಸಿಕೆ ನೀಡಲಾಯಿತು. ಲಸಿಕೆಗೆ ಚಾಲನೆ ಸಿಕ್ಕ ನಂತರ ಮಾತನಾಡಿದ ಸಂಸದ ಉಮೇಶ್ ಜಾಧವ್, ಕಲಬುರ್ಗಿ ಜಿಲ್ಲೆಗೆ ಕೇವಲ 12 ಸಾವಿರ ಡೋಸ್ ಲಸಿಕೆ ಮಾತ್ರ ಲಭ್ಯವಾಗಿದೆ. 21 ಸಾವಿರಕ್ಕೂ ಅಧಿಕ ಕೊರೋನಾ ವಾರಿಯರ್ಸ್ ನೋಂದಣಿ ಮಾಡಿಕೊಂಡಿದ್ದಾರೆ. 12 ಸಾವಿರ ಜನರಿಗೆ ವ್ಯಾಕ್ಸಿನ್ ಹಾಕೋ ಪ್ರಕ್ರಿಯೆ ಪೂರ್ಣಗೊಂಡ ನಂತರ ಉಳಿದವರಿಗೆ ಲಸಿಕೆ ತರಿಸಲು ಕ್ರಮ ಕೈಗೊಳ್ಳಲಾಗುವುದು. ಆದ್ಯತೆಯ ಮೇರೆಗೆ ಕಲಬುರ್ಗಿ ಜಿಲ್ಲೆಗೆ ಲಸಿಕೆ ತರಿಸಲಾಗುವುದು ಎಂದರು.

ಇದನ್ನು ಓದಿ: ಯೋಗೇಶ್ವರ್ 9 ಕೋಟಿ ಸಾಲ ಮಾಡಿದ್ದಾರೆ ಎಂಬ ಜಾರಕಿಹೊಳಿ ಹೇಳಿಕೆ ಬಗ್ಗೆ ತನಿಖೆಯಾಗಲಿ; ಸಿದ್ದರಾಮಯ್ಯ ಆಗ್ರಹ

ಕಲಬುರ್ಗಿ ಜಿಲ್ಲೆಯಲ್ಲಿ ನಡೆದ ಕೊರೋನಾ ಲಸಿಕೆ ಪ್ರಕ್ರಿಯೆಯಲ್ಲಿ ಡಿ ಗ್ರೂಪ್ ನೌಕರ ಮೊದಲ ಲಸಿಕೆ ಹಾಕಿಸಿಕೊಂಡಿದ್ದಾರೆ. ಕಲಬುರ್ಗಿಯ ಜಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಲಸಿಕಾ ಕೇಂದ್ರದಲ್ಲಿ ಅನಂತರಾಜು ಎಂಬಾತನಿಗೆ ಮೊದಲ ಲಸಿಕೆ ನೀಡಲಾಗಿದೆ. ಅನಂತ್ ಜಿಮ್ಸ್ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿಯಾಗಿದ್ದಾನೆ. ಮೊದಲ ಲಸಿಕೆ ಹಾಕಿಸಿಕೊಂಡ ಬಗ್ಗೆ ಹೆಮ್ಮೆ ಅನಿಸುತ್ತದೆ. ಕಲಬುರ್ಗಿಯಲ್ಲಿಯೇ ಮೊದಲ ಕೊರೋನಾ ಸಾವು ಸಂಭವಿಸಿತ್ತು. ಇದೀಗ ದೇಶದಲ್ಲಿ ಲಸಿಕೆ ಹಾಕಲಾಗುತ್ತಿದೆ. ಮೊದಲ ಡೋಸ್ ಹಾಕಿಸಿಕೊಂಡಿದ್ದೇನೆ. ಲಸಿಕೆ ಹಾಕಿಸಿಕೊಂಡ ನಂತರ ಹಲವು ಗಂಟೆಗಳಾದರೂ ಏನೂ ಆಗಿಲ್ಲ. ಯಾರಿಗೂ ಏನೂ ಆಗೋದಿಲ್ಲ. ನಿರ್ಭಯವಾಗಿ ಲಸಿಕೆ ಹಾಕಿಸಿಕೊಳ್ಳಬಹುದೆಂದು ಅನಂತರಾಜು ಧೈರ್ಯ ಹೇಳಿದ್ದಾರೆ. ಇದೇ ವೇಳೆ ಡೋಸ್ ತೆಗೆದುಕೊಂಡ 2 ನೇ ವ್ಯಕ್ತಿ ಜಿಮ್ಸ್ ಗ್ರೂಪ್ ಸಿಬ್ಬಂದಿ ಅಂಜಲಿ ಖುಷಿ ವ್ಯಕ್ತಪಡಿಸಿದ್ದಾರೆ. ವ್ಯಾಕ್ಸಿನ್ ತೆಗೆದುಕೊಂಡಿದ್ದು, ಏನೂ ಆಗಲ್ಲ ಅನ್ನೋ ವಿಶ್ವಾಸವಿದೆ ಎಂದು ಅಂಜಲಿ ತಿಳಿಸಿದ್ದಾರೆ.

ಇಂದು ಜಿಲ್ಲೆಯ ಎಂಟು ಕಡೆ ಕೋವಿಡ್ ವ್ಯಾಕ್ಸಿನ್ ಆರಂಭಗೊಂಡಿದೆ. ಜನವರಿ 18 ರಂದು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ 21774 ಕೊರೋನಾ ವಾರಿಯರ್ಸ್ ನೋಂದಣಿ ಮಾಡಿಕೊಂಡಿದ್ದಾರೆ. ಜನವರಿ 18 ರಿಂದ ಜಿಲ್ಲೆಯ ಇತರೆಡೆಯೂ ಕೋವಿಡ್ ಲಸಿಕೆ ಹಾಕುವ ಪ್ರಕ್ರಿಯೆ ನಡೆಯಲಿದೆ. ಲಸಿಕೆ ಕಡಿಮೆ ಬಂದಿರುವ ಹಿನ್ನೆಲೆಯಲ್ಲಿ ಜನವರಿ 18 ರಂದು 137 ಕೇಂದ್ರಗಳಲ್ಲಿ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. 155 ಲಸಿಕಾ ತಂಡಗಳನ್ನು ರಚಿಸಲಾಗಿದ್ದು, 775 ಜನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. 
Published by: HR Ramesh
First published: January 16, 2021, 5:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories