• Home
  • »
  • News
  • »
  • district
  • »
  • ತಾನು ಚಿಕಿತ್ಸೆ ಪಡೆದಿದ್ದ ಕೋವಿಡ್ ಆಸ್ಪತೆ ಮುಂದೆ ಹಸಿದವರಿಗಾಗಿ ಅನ್ನದಾನ ಮಾಡುತ್ತಿರುವ ಮಾಜಿ ರೋಗಿ!

ತಾನು ಚಿಕಿತ್ಸೆ ಪಡೆದಿದ್ದ ಕೋವಿಡ್ ಆಸ್ಪತೆ ಮುಂದೆ ಹಸಿದವರಿಗಾಗಿ ಅನ್ನದಾನ ಮಾಡುತ್ತಿರುವ ಮಾಜಿ ರೋಗಿ!

ಪವನ್ ಪೆಮ್ಮಯ್ಯ ಅವರ ತಂಡದಿಂದ ಅನ್ನದಾನ.

ಪವನ್ ಪೆಮ್ಮಯ್ಯ ಅವರ ತಂಡದಿಂದ ಅನ್ನದಾನ.

ಕೋವಿಡ್ ನಿಂದ ಗುಣಮುಖರಾಗುತ್ತಿದ್ದಂತೆ ಪವನ್ ಪೆಮ್ಮಯ್ಯ ಮತ್ತು ಅವರ ತಂಡ ದಾನಿಗಳ ಸಹಾಯ ಪಡೆದು ಪ್ರತಿ ದಿನ ಕನಿಷ್ಠ 300 ಜನರಿಗೆ ತಿಂಡಿ ಊಟವನ್ನು ಒದಗಿಸುತ್ತಿದೆ.

  • Share this:

ಕೊಡಗು : ಕೊವಿಡ್ ಸೋಂಕಿನಿಂದ ತೀವ್ರ ಸ್ವರೂಪದಿಂದ ಬಳಲುತ್ತಿರುವ ವರೊಂದಿಗೆ ಆಸ್ಪತ್ರೆ ಸಮೀಪ ಬರುತ್ತಿರುವವರು ಮತ್ತು ಕೊವಿಡ್ ಪರೀಕ್ಷೆಗೆ ಬರುತ್ತಿರುವವರಿಗೆ ನಗರ ಪಟ್ಟಣ ಪ್ರದೇಶಗಳಲ್ಲಿ ಊಟ ತಿಂಡಿ ಮಾತಿರಲಿ ಕುಡಿಯೋದಕ್ಕೆ ನೀರೂ ಕೂಡ ಸಿಗುತ್ತಿಲ್ಲ. ಇದನ್ನು ಮನಗಂಡಿರುವ ಕೊಡಗು ರಕ್ಷಣಾ ವೇದಿಕೆ ಉಚಿತ ಊಟ, ತಿಂಡಿ ನೀಡಿ ಮಾನವೀಯತೆ ಮೆರೆಯುತ್ತಿದೆ. ಹೌದು ಕೊಡಗಿನಲ್ಲಿ ಕೊವಿಡ್ ಸೋಂಕು ಮತ್ತಷ್ಟು ಹರಡದಂತೆ ಜಿಲ್ಲಾಡಳಿತ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದರೆ, ಮೂರು ದಿನಗಳು ಅಗತ್ಯ ವಸ್ತುಗಳ ಕೊಳ್ಳುವುದಕ್ಕೆ ನಾಲ್ಕು ಗಂಟೆಗಳ ಕಾಲ ಅವಕಾಶ ನೀಡಿದೆ.


ಹೀಗಾಗಿ ಬಹುತೇಕ ಲೌಕ್ ಡೌನ್ ನಲ್ಲಿರುವ ಕೊಡಗು ಜಿಲ್ಲೆಯಲ್ಲಿ ಹೊಟೇಲ್, ಕ್ಯಾಂಟಿನ್ ಗಳು ಪಾರ್ಸಲ್ ಸೇವೆಯನ್ನು ಒದಿಗಸುತ್ತಿಲ್ಲ. ಇದು ಸೋಂಕಿನಿಂದ ಗಂಭೀರ ಸಮಸ್ಯೆ ಎದುರಿಸುತ್ತಿರುವವರೊಂದಿಗೆ ಬರುತ್ತಿರುವ ಮತ್ತು ಹಳ್ಳಿ ಹಳ್ಳಿಗಳಿಂದ ಕೊವಿಡ್ ಪರೀಕ್ಷೆಗೆ ಬರುತ್ತಿರುವ ನೂರಾರು ಜನರು ತಿಂಡಿ ಊಟಗಳಿಲ್ಲದೆ ಹಸಿವಿನಿಂದ ಪರದಾಡುವಂತೆ ಮಾಡಿತ್ತು. ಇಂತಹ ಸ್ಥಿತಿಯನ್ನು ಸ್ವತಃ ಅನುಭವಿಸಿದ್ದ ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ತಮ್ಮ ಸಂಘಟನೆಯ ಸದಸ್ಯರೊಂದಿಗೆ ಚರ್ಚಿಸಿ ಜನರು ಹಸಿವಿನಿಂದ ಬಳಲದಂತೆ ಮಾಡಲು ಪ್ರತೀದಿನ ‘ನಮ್ಮವರಿಗಾಗಿ ನಾವು’ ಹೆಸರಿನಲ್ಲಿ ಉಚಿತ ಊಟ ತಿಂಡಿ ವ್ಯವಸ್ಥೆ ಮಾಡುತ್ತಿದ್ದಾರೆ.


ಲಾಕ್​ಡೌನ್​​ಗೂ ಕೆಲವೇ ದಿನಗಳ ಮುನ್ನವಷ್ಟೇ ಪವನ್ ಪೆಮ್ಮಯ್ಯ ಮತ್ತು ಅವರ ನಾಲ್ಕು ವರ್ಷದ ಮಗುವಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಈ ಸಂದರ್ಭ ವಿವಿಧ ಪರೀಕ್ಷೆಗಳಿಗೆಂದು ತೆರಳಿದ್ದ ಪವನ್ ಪೆಮ್ಮಯ್ಯ ಮತ್ತವರ ಮಗ ಇಡೀ ದಿನ ಊಟವಿಲ್ಲದೆ ಕೋವಿಡ್ ವೈಯ್ಟಿಂಗ್ ಕೊಠಡಿಯಲ್ಲಿ ಪರದಾಡಿದ್ದರಂತೆ. ಇದು ತಾನು ಜನರಿಗಾಗಿ ಏನನ್ನಾದರೂ ಮಾಡಬೇಕೆಂದು ವೃತ್ತಿಯಲ್ಲಿ ವಕೀಲರಾಗಿರುವ ಪವನ್ ಪೆಮ್ಮಯ್ಯ ಅವರನ್ನು ಪ್ರೇರಿಪಸಿತ್ತಂತೆ.


ಇದನ್ನೂ ಓದಿ; ಆತ್ಮೀಯ ಪ್ರಧಾನಿಗಳೇ; ನರೇಂದ್ರ ಮೋದಿಗೆ 9 ಅಂಶಗಳೊಂದಿಗೆ ಜಂಟಿ ಪತ್ರ ಬರೆದ ವಿರೋಧ ಪಕ್ಷಗಳು


ಕೋವಿಡ್ ನಿಂದ ಗುಣಮುಖರಾಗುತ್ತಿದ್ದಂತೆ ಪವನ್ ಪೆಮ್ಮಯ್ಯ ಮತ್ತು ಅವರ ತಂಡ ದಾನಿಗಳ ಸಹಾಯ ಪಡೆದು ಪ್ರತಿ ದಿನ ಕನಿಷ್ಠ 300 ಜನರಿಗೆ ತಿಂಡಿ ಊಟವನ್ನು ಒದಗಿಸುತ್ತಿದೆ. ವೃತ್ತಿಯಿಂದ ವಕೀಲರಾಗಿರುವ ಪವನ್ ಪೆಮ್ಮಯ್ಯ ತಮ್ಮ ತಂಡದವರ ಸಹಾಯದಿಂದ ತಮ್ಮ ಮನೆಯ ಬಳಿಯೇ ಊಟ ತಿಂಡಿ ತಯಾರಿಸಿ ಪ್ಯಾಕ್ ಮಾಡಿ ಬಳಿಕ ತಾವು ಕೊವಿಡ್ ಗೆ ಚಿಕಿತ್ಸೆ ಪಡೆದಿದ್ದ ಮಡಿಕೇರಿಯ ಕೊವಿಡ್ ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿ ಜನರಿಗೆ ಉಚಿತವಾಗಿ ಕಳೆದ ಐದು ದಿನಗಳಿಂದ ವಿತರಣೆ ಮಾಡುತ್ತಿದ್ದಾರೆ.


ಇವರ ಈ ಕಾರ್ಯಕ್ಕೆ ಕೊಡಗು, ಹೊರ ಜಿಲ್ಲೆ ಮತ್ತು ದುಬೈನ ಕನ್ನಡ ಸಂಘಟನೆಗಳ ಸಾಕಷ್ಟು ದಾನಿಗಳು ಸಹಾಯಾಸ್ತ ನೀಡಿದ್ದಾರೆ. ನಮ್ಮ ಕಾರ್ಯಕ್ಕೆ ಇನ್ನಷ್ಟು ಬೆಂಬಲ ದೊರೆತಲ್ಲಿ ರಾತ್ರಿಯ ಊಟದ ವ್ಯವಸ್ಥೆಯನ್ನು ಮಾಡಲು ಚಿಂತಿಸಿರುವ ಕೊಡಗು ರಕ್ಷಣಾ ವೇದಿಕೆ, ಲಾಕ್ ಡೌನ್ ಮುಗಿಯುವವರೆಗೂ ಊಟ ತಿಂಡಿಯ ವ್ಯವಸ್ಥೆ ಮಾಡಲು ನಿರ್ಧರಿಸಿದೆ. ಕೊಡಗು ರಕ್ಷಣಾ ವೇದಿಕೆಯ ಈ ಮಹತ್ ಕಾರ್ಯಕ್ಕೆ ಜಿಲ್ಲೆಯ ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Published by:MAshok Kumar
First published: