ಮುಗಿಯಿತು ಕೊರೋನಾ ಭೀತಿ; ದಾಂಡೇಲಿಗೆ ದಾಂಗುಡಿಯಿಡುತ್ತಿದ್ದಾರೆ ಪ್ರವಾಸಿಗರು

ಈಗ ಕೊರೋನಾ ಮಹಾಮಾರಿಯಿಂದ ಲಾಕ್‌ಡೌನ್‌ ಅನ್ನು ಅನ್‌ಲಾಕ್ ಮಾಡಲಾಗಿದ್ದು, ಎಲ್ಲಾ ಸಮಸ್ಯೆ ದೂರವಾಗುವ ಲಕ್ಷಣ ಕಾಣುತ್ತಿದೆ. ಇದಕ್ಕೆ ಪ್ರವಾಸಿಗರೇ  ತಳಪಾಯವಾಗಬೇಕಾಗಿದ್ದು ರಾಜ್ಯದ ವಿವಿದೆಡೆಯಿಂದ ಪ್ರವಾಸಿಗರು ದಾಂಡೇಲಿಯತ್ತ ಆಗಮಿಸುತ್ತಿದ್ದಾರೆ. ಕಳೆದ ಆರು ತಿಂಗಳ ವನವಾಸಕ್ಕೆ ಈಗ ಮುಕ್ತಿ ಸಿಕ್ಕಿದ್ದು ಪ್ರವಾಸೋದ್ಯಮ ಚೇತರಿಕೆ ಹಳಿಗೇರುತ್ತಿದೆ.

news18-kannada
Updated:September 16, 2020, 7:21 PM IST
ಮುಗಿಯಿತು ಕೊರೋನಾ ಭೀತಿ; ದಾಂಡೇಲಿಗೆ ದಾಂಗುಡಿಯಿಡುತ್ತಿದ್ದಾರೆ ಪ್ರವಾಸಿಗರು
ದಾಂಡೇಲಿ ರೆಸಾರ್ಟ್‌.
  • Share this:
ಕಾರವಾರ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮಿನಿ ಇಂಡಿಯಾ ಎಂದೆ ಪ್ರಖ್ಯಾತಿ ಪಡೆದಿದೆ. ಪ್ರವಾಸೋದ್ಯಮದಲ್ಲಿ ಛಾಪು ಮೂಡಿಸಿರುವ ದಾಂಡೇಲಿ ಕೋವಿಡ್ ಕಾರಣದಿಂದ ತನ್ನ ಎಲ್ಲ ಪ್ರವಾಸೋದ್ಯಮ ಚಟುವಟಿಕೆಯನ್ನ ತೆರೆಮರೆಗೆ ಸರಿಸಿ ಸ್ಥಬ್ಧವಾಗಿತ್ತು. ಆದರೆ, ಈಗ ಮತ್ತೆ ಚೇತರಿಕೆ ಹಾದಿ ಕಾಣುತಿದ್ದು ಪ್ರವಾಸಿಗರ ಆಗಮನ ಶುರುವಾಗಿದೆ.  ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಜೋಯಿಡಾ ಪ್ರವಾಸೋದ್ಯಮದಲ್ಲಿ ರಾಜ್ಯ ಅಷ್ಟೆ ಅಲ್ಲದೆ ದೇಶದ ವಿವಿಧ ರಾಜ್ಯಗಳಿಂದ ಪ್ರವಾಸಿಗರನ್ನ ಸೆಳೆಯುವ ತಾಣ, ಇಲ್ಲಿರುವ ನೈಸರ್ಗಿಕ ಪರಿಸರ ಪ್ರವಾಸಿಗರ ಅಚ್ಚು ಮೆಚ್ಚು, ಹಕ್ಕಿಗಳ ಚಿಲಿಪಿಲಿ ಹಚ್ಚಹಸುರಿನ ಕಾನನನದ ನಡುವೆ ಕಾಳಿ ನದಿಯ ಜುಳು ಜಳು ನಾದ ಎಂತ ಪ್ರವಾಸಿಗರನ್ನ ಕೂಡಾ ತನ್ನತ್ತ ಸೆಳೆಯುವ ಶಕ್ತಿ ದಾಂಡೇಲಿ ಜೋಯಿಡಾಕ್ಕಿದೆ. ಇಲ್ಲಿರುವ ಹತ್ತಾರು ರೇಸಾರ್ಟ್ ಹೋಂ ಸ್ಟೇ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿವೆ. ಕಳೆದ ಆರು ತಿಂಗಳಿಂದ ಕೋವಿಡ್ ಮಹಾಮಾರಿಗೆ ಈ ಎಲ್ಲ ಪ್ರವಾಸೋದ್ಯಮ ನೆಲಕಚ್ಚಿದ್ದು ಇದನ್ನ ನಂಬಿದ್ದ ಮಾಲಿಕರು ಆಥೀಕ ಸಂಕಷ್ಟಕ್ಕೆ ಸಿಲುಕಿ ಒದ್ದಾಟ ನಡೆಸಿದ್ದರು. ಇವರ ಸಮಸ್ಯೆ ಅರಿತ ಸರ್ಕಾರ ಕಳೆದ ಜೂನ್ ಜುಲೈ ನಿಂದ ಲಾಕ್ ಡೌನ್ ನಿರ್ಭಂದ ಹಂತ ಹಂತವಾಗಿ ತೆರವು ಮಾಡಿ ಹೋಂ ಸ್ಟೇ ರೇಸಾರ್ಟ ತೆರೆಯಲು ಆವಕಾಶ ನೀಡಿದೆ,,ಈ ಬೆನ್ನಲ್ಲೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯತ್ತ ಪ್ರವಾಸಿಗರ ಸಂಖ್ಯೆ ಏರುಗತಿ ಕಾಣುತ್ತಿದೆ..

ದಾಂಡೇಲಿಯಲ್ಲಿ ಹೇಗಿದೆ ವಾತಾವರಣ?

ದಾಂಡೇಲಿ ಅಂದಾಕ್ಷಣ ನಮಗೆ ಇಲ್ಲಿ ತೋಚೋದೆ ಕಾಳಿ ನದಿಯಲ್ಲಿನ ವಾಟರ್ ರ‍್ಯಾಪ್ಟಿಂಗ್ ಮತ್ತು ವಿವಿಧ ಜಲ ಸಾಹಸ ಕ್ರೀಡೆಗಳು, ಕೋವಿಡ್ ಮಹಾಮಾರಿಗೆ ಈ ಮೋಜು ಮಸ್ತಿ ಅಡಗಿ ಹೋಗಿತ್ತು ಆದ್ರೆ ಈಗ ಚೇತರಿಕೆಯ ಹಳಿ ಹತ್ತುತಿದೆ ದಾಂಡೇಲಿ, ದಾಂಡೇಲಿಯಲ್ಲಿ ಎನಿಲ್ಲ ಅಂದ್ರು ಸುಮಾರು ಐವತ್ತಕ್ಕೂ ಹೆಚ್ಚು ರೆಸಾರ್ಟ್ಗಳಿವೆ ಈ ಎಲ್ಲ ರೇಸಾರ್ಟ್ ಮಾಲಿಕರು ಲಾಕ್ ಡೌನ್ ಸಮಯದಲ್ಲಿ ಈ ಹಿಂದೆ ಎಂದೂ ಕಾಣದಷ್ಟು ಸಮಸ್ಯೆ ಅನುಭವಿಸಿದ್ದಾರೆ.

ಈಗ ಕೊರೋನಾ ಮಹಾಮಾರಿಯಿಂದ ಲಾಕ್‌ಡೌನ್‌ ಅನ್ನು ಅನ್‌ಲಾಕ್ ಮಾಡಲಾಗಿದ್ದು, ಎಲ್ಲಾ ಸಮಸ್ಯೆ ದೂರವಾಗುವ ಲಕ್ಷಣ ಕಾಣುತ್ತಿದೆ. ಇದಕ್ಕೆ ಪ್ರವಾಸಿಗರೇ  ತಳಪಾಯವಾಗಬೇಕಾಗಿದ್ದು ರಾಜ್ಯದ ವಿವಿದೆಡೆಯಿಂದ ಪ್ರವಾಸಿಗರು ದಾಂಡೇಲಿಯತ್ತ ಆಗಮಿಸುತ್ತಿದ್ದಾರೆ. ಕಳೆದ ಆರು ತಿಂಗಳ ವನವಾಸಕ್ಕೆ ಈಗ ಮುಕ್ತಿ ಸಿಕ್ಕಿದ್ದು ಪ್ರವಾಸೋದ್ಯಮ ಚೇತರಿಕೆ ಹಳಿಗೇರುತ್ತಿದೆ.

ದಾಂಡೇಲಿ ಯ್ಯಾಕೆ ಪ್ರವಾಸಿಗರ ಫೆವರಿಟ್?

ದಾಂಡೇಲಿ ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದಿದೆ, ಸುತ್ತ ಮುತ್ತ ಹಚ್ಚಹಸುರಿನ ಖಾನನ ಖಾನನದ ಮದ್ಯೆ ಹರಿಯುವ ಶುದ್ಧ ಕಾಳಿ ನದಿ ನೀರು ಅಲ್ಲಿ ನಡೆಯುವ ವಿವಿಧ ಬಗೆಬಗೆಯ ಜಲಸಾಹಸ ಕ್ರೀಡೆಗಳು ಪ್ರವಾಸಿಗರನ್ನ ಕೈ ಬೀಸಿ ಕರೆದು ಇಲ್ಲಿನ ಪ್ರವಾಸಿ ಕ್ಷೇತ್ರವನ್ನ ವೃದ್ಧಿಸಿದೆ..ಇಲ್ಲಿ  ಆನೆ ಸಫಾರಿ, ಜಂಗಲ್ ಸಫಾರಿ, ಬರ್ಡ್ ವಾಚಿಂಗ್ ಹೀಗೆ ಹತ್ತು ಹಲವು ಪ್ರವಾಸಿಗರ ಅಚ್ಚುಮೆಚ್ಚು ಈ ದೃಷ್ಟಿಯಲ್ಲಿ ದಾಂಡೇಲಿಯನ್ನ ಹುಡುಕಿಕೊಂಡು ಪ್ರವಾಸಿಗರು ಆಗಮಿಸುತ್ತಾರೆ.

ಆದರೆ, ಲಾಕ್‌ಡೌನ್‌ ಈ ಎಲ್ಲಾ ಮೋಜು ಮಸ್ತಿಗೆ ಬ್ರೇಕ್ ಹಾಕಿ ಒಂದೆಡೆ ಪ್ರವಾಸಿಗರ ಮೋಜು ಮಸ್ತಿ ಕಸಿದುಕೊಂಡ್ರೆ ಮಾಲಿಕರ ಉದ್ಯಮವನ್ನೆ ಕಸಿದುಕೊಂಡು ಈ ಹಿಂದೆ ಇದ್ದ ನೂರಾರು ಉದ್ಯೋಗಿಗಳ ಬದುಕನ್ನೆ ಕಸಿದುಕೊಂಡಿತ್ತು, ಆದ್ರೆ ಈಗ ಈ ಎಲ್ಲ ಭಯ ಕೊಂಚ ದೂರಕ್ಕೆ ಸರಿದು ಪ್ರವಾಸಿಗರ ಆಗಮನ ಶರುವಾಗಿದೆ.ಇದನ್ನೂ ಓದಿ : Mysuru Dasara 2020: ಸೆ.18ಕ್ಕೆ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಪ್ರಕ್ರಿಯೆಗೆ ಚಾಲನೆ

ದಾಂಡೇಲಿ ರೆಸಾರ್ಟ್ ಗೋವಾಕ್ಕಿಂತಲೂ ಮುಖ್ಯವೋ?:

ಹೌದು ಗೋವಾ ಮತ್ತು ದಾಂಡೇಲಿಯನ್ನ ಪರಿಗಣನೆಗೆ ತೆಗದುಕೊಂಡ್ರೆ ಗೋವಾಕ್ಕಿಂತಲು ದಾಂಡೇಲಿಯನ್ನ ಪ್ರವಾಸಿಗರು ಮೆಚ್ಚಿಕೊಳ್ಳುತ್ತಾರೆ ಅಂತಾರೆ ಇಲ್ಲಿನ ರೇಸಾರ್ಟ್ ಮಾಲಿಕ ಇಮಾಮ್. ಇಲ್ಲಿನ ನೈಸರ್ಗಿಕ ಪರಿಸರ ಮತ್ತು ಇಲ್ಲಿನ ವಾತಾವರಣದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಡುತ್ತಾ ಮಾತಿಗಿಳಿದವರು ಪರಂಪರಾ ರೇಸಾರ್ಟ್‌ ಮಾಲೀಕ ಇಮಾಮ್, "ದಾಂಡೇಲಿಯಲ್ಲಿ ಇರುವಷ್ಟು ಪ್ರಕೃತಿ ಸೌಂದರ್ಯ ಬೇರೆಲ್ಲೂ ನೋಡಲು ಸಾದ್ಯವಿಲ್ಲ. ಹೀಗಾಗಿಯೇ ದಾಂಡೇಲಿ ಅಕ್ಕಪಕ್ಕ ನೂರಾರು ರೇಸಾರ್ಟ್ ಹೋಂ ಸ್ಟೇಗಳು ಪ್ರವಾಸಿಗರಿಗಾಗಿ ಕಾದು ತಲೆ ಎತ್ತು ನಿಂತಿವೆ" ಎಂಬುದು ಅವರ ಅಭಿಮತ.

ಕೋವಿಡ್ ಮರೆತು ಪ್ರವಾಸಕ್ಕೆ ಹಾಜರಾದ್ರು ಪ್ರವಾಸಿಗರು:

ಕೋವಿಡ್ ಮಹಾಮಾರಿ ಮರೆತು ಪರೆತು ಪ್ರವಾಸಿಗರು ತಮ್ಮ ವೈಯಕ್ತಿಕ ಎಂಜಾಯ್ ಮೋಜುಮಸ್ತಿ ಮಾಡಲು ಮುಂದಾಗಿ ವಿವಿಧ ಪ್ರವಾಸಿ ತಾಣ ಸುತ್ತಾಟ ಆರಂಭಿಸಿದ್ದಾರೆ, ಇದಕ್ಕೆ ಸಾಕಷಿಯಾಗಿ ಈಗ ದಾಂಡೇಲಿಯಲ್ಲೂ ಕೂಡಾ ರೆಸಾರ್ಟ್ ಮತ್ತು ಹೋಂ ಸ್ಟೇಗಳು ಪ್ರವಾಸಿಗರಿಂದ ತುಂಬುತ್ತಿದೆ. ಈಗಾಗಲೆ ಸರಕಾರ ನಿರ್ಬಂಧ ತೆರವು ಮಾಡಿದ ಕೂಡಲೆ ಪ್ರವಾಸಿಗರು ವಿವಿಧ ರೆಸಾರ್ಟ್ ಗಳಲ್ಲಿ ಆನ್ ಲೈನ್ ಮೂಲಖ ಮುಂಗಡವಾಗಿ ತಮ್ಮ ಕಾಟೇಜ್ ಗಳನ್ನ ಕಾಯ್ದಿರಿಸಿದ್ದಾರೆ. ಈಗಾಗಲೆ ಎಲ್ಲ ರೇಸಾರ್ಟ್‌‌ಗಳಲ್ಲಿ ಪ್ರವಾಸಿಗರ ಆಗಮನ ಶುರುವಾಗಿದೆ.
Published by: MAshok Kumar
First published: September 16, 2020, 7:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading