ಕೇಂದ್ರ ಮಿಲಿಟರಿ ಆಸ್ಪತ್ರೆಗಳು ಕೋವಿಡ್ ಕ್ಯಾಜುವಲ್ಟಿಗಳಾಗಿ ಪರಿವರ್ತನೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹೊರಗಡೆಯಿಂದ ಬಂದವರ ಮೂಲಕ ಸೋಂಕು ಮತ್ತಷ್ಟು ಹೆಚ್ಚಾಗೋದಕ್ಕೆ ಕಡಿವಾಣ ಹಾಕ್ತೇವೆ. ಧಾರವಾಡ ಜಿಲ್ಲೆಯಲ್ಲಿ ಟೆಸ್ಟಿಂಗ್ ಪ್ರಮಾಣವನ್ನೂ ಹೆಚ್ಚಿಸಿದ್ದೇವೆ. ಕೊರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

  • Share this:
ಹುಬ್ಬಳ್ಳಿ; ಕೇಂದ್ರ ಸರ್ಕಾರದ ಮಿಲಿಟರಿ ಆಸ್ಪತ್ರೆಗಳು ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸುವಂತೆ ಮನವಿ ಮಾಡಿರೋದಾಗಿ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಿರೊ ಮೇಕ್ ಶಿಫ್ಟ್ ಕೋವಿಡ್ ಕ್ಯಾಜುವಲ್ಟಿ ಸ್ಥಳ ಪರಿಶೀಲನೆ ನಂತರ ಅವರು ಮಾತನಾಡಿದರು. ಡಿ.ಆರ್.ಡಿ.ಒ ದಿಂದ ಮತ್ತು ಇತರೆ ಮಿಲಿಟರಿ ಏಜನ್ಸೀಗಳಿಂದ ಮೇಕ್ ಶಿಫ್ಟ್ ಕೋವಿಡ್ ಕೇರ್ ಆಸ್ಪತ್ರೆ ಆರಂಭಿಸುವಂತೆ ಕೇಂದ್ರಕ್ಕೆ ಕೋರಲಾಗಿದೆ. ಬೆಂಗಳೂರು ಸೇರಿ ರಾಜ್ಯದ ಇತರೆಡೆ ಅಗತ್ಯವಿದ್ದ ಕಡೆ ಮೇಕ್ ಶಿಫ್ಟ್ ಕೋವಿಡ್ ಕೇರ್ ಆಸ್ಪತ್ರೆಗೆ ಆರಂಭಿಸುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ಈಗಾಗ್ಲೇ ಮಾತನಾಡಿದ್ದೇನೆ.

ರಾಜ್ಯದಲ್ಲಿ ಕೊರೋನಾ ತೀವ್ರವಾಗ್ತಿರೋ ಹಿನ್ನೆಲೆ ವೈದ್ಯಕೀಯ ನೆರವು ನೀಡುವಂತೆ ಕೇಳಿದ್ದೇನೆ. ಎಲ್ಲೆಲ್ಲಿ ಮಿಲಿಟರಿ ಆಸ್ಪತ್ರೆಗಳಿವೆಯೋ ಅವುಗಳನ್ನು ಮೇಕ್ ಶಿಫ್ಟ್ ಕೊರೋನಾ ಆಸ್ಪತ್ರೆಗಳನ್ನಾಗಿ ಪರಿವರ್ತಿಸುವಂತೆ ಕೋರಿದ್ದೇನೆ. ಇದಕ್ಕೆ ರಾಜನಾಥಸಿಂಗ್ ರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.

ಧಾರವಾಡ ಜಿಲ್ಲೆಯಲ್ಲಿಯೂ ಕೋವಿಡ್ ವ್ಯಾಪಕಗೊಳ್ತಿದೆ. ಹೀಗಾಗಿ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ಮೇಕ್ ಶಿಫ್ಟ್ ಕೋವಿಡ್ ಕ್ಯಾಜುವಲ್ಟಿ ಸ್ಥಾಪನೆ ತೀರ್ಮಾನಿಸಲಾಗಿದೆ. ಆಕ್ಸೀಜನ್ ಸಹಿತ 66 ಬೆಡ್ ಗಳ ವ್ಯವಸ್ಥೆ ಮಾಡಲಾಗ್ತಿದೆ. ರಾಜ್ಯದಲ್ಲಿ ತೀವ್ರಗೊಳ್ತಿರೋ ಎರಡನೆಯ ಅಲೆಯಿಂದ ಆಗ್ತಿರೋ ತೊಂದರೆಯಿಂದ ಜನರನ್ನು ರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ 3000 ಬೆಡ್ ಗಳ ವ್ಯವಸ್ಥೆಗೆ ಕ್ರಮ ಕೈಗೊಳ್ತಿರೋದಾಗಿ ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ರೆಮಿಡಿಸಿವರ್ ಕೋವಿಡ್ ಗೆ ರಾಮ ಬಾಣವಲ್ಲ;

ರೆಮಿಡಿಸಿವರ್ ಕೋವಿಡ್ ಗೆ ರಾಮಬಾಣವಲ್ಲ. ವಿನಾಕಾರಣ ಅದರ ಹೆಸರಲ್ಲಿ ಎಕ್ಸಪ್ಲಾಯ್ಟೇಷನ್ ನಡೆದಿದೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಸರ್ಕಾರದ ಬೇಡಿಕೆಗೆ ಅನುಗುಣವಾಗಿ ಕೇಂದ್ರ ರೆಮಿಡಿಸಿವರ್ ಪೂರೈಕೆ ಮಾಡಿದೆ. ಕೇಂದ್ರದಿಂದ ಕರ್ನಾಟಕಕ್ಕೆ 1.22 ಲಕ್ಷ ವೇಲ್ಸ್ ರೆಮಿಡಿಸಿವರ್ ಕೊಟ್ಟಿದ್ದೇವೆ. ಮುಂದೆಯೂ ರಾಜ್ಯಕ್ಕೆ ಹೆಚ್ಚಿನ ಅಲೋಕೇಷನ್ ಮಾಡ್ತೇವೆ ಎಂದರು.

ಇದನ್ನೂ ಓದಿ: LockDown Effect: ಲಾಕ್​ಡೌನ್ ಮೀರಿ ರಸ್ತೆಗಿಳಿದ 1707 ವಾಹನಗಳನ್ನು ಜಪ್ತಿ ಮಾಡಿದ ಬೆಂಗಳೂರು ಪೊಲೀಸರು

ಆದರೆ ಕೊರೋನಾ ಕಟ್ಟಿಹಾಕಲು ರೆಮಿಡಿಸಿವರ್ ರಾಮಬಾಣವಲ್ಲ. ರೆಮಿಡಿಸಿವರ್ ಹೆಸರಲ್ಲಿ ದುರ್ಬಳಕೆ ನಡೆದಿದೆ. ರೆಮಿಡಿಸಿವರ್ ಅಥವಾ ವೆಂಟಿಲೇಟರ್ ಯಾರಿಗೆ ಅಗತ್ಯ ಅನ್ನೋದನ್ನು ವೈದ್ಯರು ಹೇಳ್ತಾರೆ. ಆದರೆ ಜನಾನೆ ತನಗೆ ಇದು ಬೇಕೆಂದು ಹೇಳ್ತಿದ್ದು, ಕೃತಕ ಅಭಾವದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಧಾರವಾಡ ಜಿಲ್ಲೆಗೆ ಬೇರೆ ಬೆರೆ ಕಡೆಯಿಂದ ಗುಳೆ ಹೋದವರ ಆಗಮನದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಜೋಶಿ, ಹೊರಗಡೆಯಿಂದ ಬಂದವರನ್ನು ಐಸೋಲೇಷನ್ ಮಾಡುವಂತೆ ಸೂಚಿಸಿದ್ದೇವೆ.

ಹೊರಗಡೆಯಿಂದ ಬಂದವರ ಮೂಲಕ ಸೋಂಕು ಮತ್ತಷ್ಟು ಹೆಚ್ಚಾಗೋದಕ್ಕೆ ಕಡಿವಾಣ ಹಾಕ್ತೇವೆ. ಧಾರವಾಡ ಜಿಲ್ಲೆಯಲ್ಲಿ ಟೆಸ್ಟಿಂಗ್ ಪ್ರಮಾಣವನ್ನೂ ಹೆಚ್ಚಿಸಿದ್ದೇವೆ. ಕೊರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by:MAshok Kumar
First published: