Chikkamagaluru: ‘ಕಾಂಗ್ರೆಸ್​ಗೆ ಕ್ಯಾನ್ಸರ್ ಬಂದಿದೆ ಅದಕ್ಕೆ ಔಷಧಿ ಇಲ್ಲ‘, ಕೈ ನಾಯಕರ ಬಗ್ಗೆ ಶಾಸಕ ಸಿ.ಟಿ ರವಿ ವ್ಯಂಗ್ಯ

ಕಾಂಗ್ರೆಸ್​ ಪಕ್ಷದಲ್ಲಿ ಯಾರೂ ಉಳೀತಾರೆ ಹೇಳಿ, ಎಲ್ಲರನ್ನೂ ಕಳುಹಿಸಿ ಕೊನೆಗೆ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಬಿಟ್ರು ಆಶ್ಚರ್ಯವಿಲ್ಲ ಎಂದು ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ, ಸಿಟಿ ರವಿ

ಸಿದ್ದರಾಮಯ್ಯ, ಸಿಟಿ ರವಿ

  • Share this:
ಚಿಕ್ಕಮಗಳೂರು (ಮಾ.12): ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತ್ತಿದ್ದು, ಬಿಜೆಪಿ ನಾಯಕರು (BJP Leaders) ಆಳಿಗೊಂದು ಕಲ್ಲು ಎಂಬಂತೆ ರಾಜ್ಯ ಕಾಂಗ್ರೆಸ್​ ನಾಯಕರ (Congress Leaders) ಕಾಲೆಳೆಯೋಕೆ ಶುರು ಮಾಡಿದ್ದಾರೆ.  ಮುಂದಿನ ವರ್ಷ ರಾಜ್ಯದಲ್ಲೂ ವಿಧಾನಸಭೆ ಚುನಾವಣೆ (Assembly Elections) ನಡೆಯಲಿದ್ದು, ಎಲ್ಲಾ ಪಕ್ಷಗಳಲ್ಲೂ ಚುನಾವಣಾ ಪ್ಲ್ಯಾನ್​ ಜೋರಾಗಿದೆ. ಈ ನಡುವೆ ರಾಜೀನಾಮೆ (Resignation) ಪರ್ವ ಕೂಡು ಶುರುವಾದಂತೆ ಕಾಣ್ತಿದೆ. ಹಿರಿಯ ನಾಯಕ ಸಿಎಂ ಇಬ್ರಾಹಿಂ  ಕಾಂಗ್ರೆಸ್​ ಪಕ್ಷ ತೊರೆದಿರೋ ಬಗ್ಗೆ ಮಾತಾಡಿದ ಬಿಜೆಪಿ ಶಾಸಕ ಸಿ.ಟಿ ರವಿ (C.T Ravi), ಈಗ ಕಾಂಗ್ರೆಸ್ಸಿಗೆ ಕ್ಯಾನ್ಸರ್ ವ್ಯಾಪಿಸಿದೆ, ಅದಕ್ಕೆ ಚಿಕಿತ್ಸೆ ಇಲ್ಲ. ಕ್ಯಾನ್ಸರ್ ವ್ಯಾಪಿಸಿದ ಮೇಲೆ ಇಡೀ ದೇಹವನ್ನ ಕೊಲ್ಲುತ್ತೆ ಅಂತ ಕಾಂಗ್ರೆಸ್​ ಪಕ್ಷದ ಬಗ್ಗೆ ವ್ಯಂಗ್ಯವಾಗಿ ಮಾತಾಡಿದ್ದಾರೆ.

 ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟರೂ ಆಶ್ಚರ್ಯವಿಲ್ಲ

ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ ರವಿ, ಕಾಂಗ್ರಸ್​ ಪಕ್ಷ ಎಲ್ಲಿವರೆಗೆ ಜಾತಿವಾದ, ಪರಿವಾರವಾದ, ಭ್ರಷ್ಟಾಚಾರದಲ್ಲೇ ಮುಳುಗಿರುತ್ತೋ ಅಲ್ಲಿವರೆಗೂ ಇವರ ಕಾಯಿಲೆಗೆ ಚಿಕಿತ್ಸೆ ಇಲ್ಲ ಅಂತ ಹೇಳಿದ್ರು. ಕಾಂಗ್ರೆಸ್​ ಪಕ್ಷದಲ್ಲಿ ಯಾರೂ ಉಳೀತಾರೆ ಹೇಳಿ ಕೊನೆಗೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಬಿಟ್ರು ಆಶ್ಚರ್ಯವಿಲ್ಲ ಎಂದ್ರು. ಸಿದ್ದರಾಮಯ್ಯ ಅವರ ಆಪ್ತ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಬಿಟ್ಟಿದ್ದಾರೆ, ಅವರಿಬ್ಬರು ಎಂಥಾ ದೋಸ್ತ್ ಎಂದು ರಾಜ್ಯಕ್ಕೆ ಗೊತ್ತು.

‘ಚೆಡ್ಡಿ ದೋಸ್ತ್, ಕ್ಲಾಸು-ಗ್ಲಾಸು ದೋಸ್ತ್​’

ಸಿದ್ದರಾಮಯ್ಯ ಅವರ ಆಪ್ತ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಬಿಟ್ಟಿದ್ದಾರೆ. ಅವರಿಬ್ರು ಎಂಥಾ ದೋಸ್ತ್​,  ‘ಚೆಡ್ಡಿ ದೋಸ್ತ್, ಕ್ಲಾಸು-ಗ್ಲಾಸು ದೊಸ್ತ್​’ ಅವರೇ ಇದೀಗ ಸಿದ್ದರಾಮಯ್ಯ ಬಗ್ಗೆ ಅಸಮಾಧಾನ ಹೊರಹಾಕಿ ಪಕ್ಷ ಬಿಡ್ತಿದ್ದಾರೆ. ಕಾಂಗ್ರೆಸ್​ನಲ್ಲಿ ನಡೀತಿರೋ ಒಳಜಗಳಗಳು ಎಲ್ಲರಿಗೂ ಗೊತ್ತೇ ಇದೆ. ಎಲ್ಲರನ್ನೂ ಮುಂದೆ ಕಳಿಸಿ ನಾಳೆ ಅವರು ಬಿಟ್ಟು ಬಂದರೂ ಅಶ್ಚರ್ಯವೇನಿಲ್ಲ ಅಂತ ಸಿ.ಟಿ ರವಿ ಹೇಳಿದ್ದಾರೆ.

‘ರಾಜ್ಯದಲ್ಲಿ ಗುಟುಕು ಜೀವ ಇಟ್ಟುಕೊಂಡಿದೆ’

ಪಂಚರಾಜ್ಯ ಚುನಾವಣೆಯಲ್ಲಿ ಈಗಾಗಲೇ ಹೀನಾಯ ಸೋಲು ಅನುಭವಿಸೋ ಕಾಂಗ್ರೆಸ್​ ಪಕ್ಷ ಮತ್ತೆ ಮೇಲೇಳಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಕರ್ನಾಟಕ ಸೇರಿ ಅಲ್ಲಲ್ಲೇ ಗುಟುಕು ಜೀವ ಇಟ್ಟುಕೊಂಡಿದೆ ಎಂದ್ರು ಸಿ.ಟಿ ರವಿ, ಪಕ್ಷದ ಬೆಳವಣಿಗೆಗೆ ನೇತೃತ್ವ-ನೀತಿ ಕಾರಣವಾಗುತ್ತೆ. ಇಂದು ಕಾಂಗ್ರೆಸ್ ನೇತೃತ್ವ-ನೀತಿ ಹೀನವಾಗಿದೆ. ಇಂತಹ ಪಕ್ಷದ ಮೇಲೆ ಜನ ಹೇಗೆ ವಿಶ್ವಾಸವಿಡುತ್ತಾರೆ. ಹೀಗಾಗಿ ಅವರಿಗೆ ಸೋಲಾಗಿದೆ ಅಂತ ಸಿ.ಟಿ ರವಿ ಹೇಳಿದ್ದಾರೆ.

ಇದನ್ನೂ ಓದಿ: C.M Ibrahim Resignation: ಕಾಂಗ್ರೆಸ್​ಗೆ ಗುಡ್ ಬೈ ಹೇಳಿದ ಸಿ.ಎಂ ಇಬ್ರಾಹಿಂ, ‘ಇನ್ಮುಂದೆ ನಾನು ಫ್ರೀ ಮ್ಯಾನ್, JDS ಸೇರೋದು ಫಿಕ್ಸ್’

‘ಕಾಂಗ್ರೆಸ್ ದೇಶದಲ್ಲಿ ಧೂಳೀಪಟವಾಗಿದೆ’

ಇನ್ನೂ ಮೈಸೂರಿನಲ್ಲಿ ಮಾತಾಡಿದ ಸಚಿವ ಶ್ರೀರಾಮುಲು, ಕಾಂಗ್ರೆಸ್ ದೇಶದಲ್ಲಿ ಧೂಳೀಪಟವಾಗಿದೆ ಎಂದ್ರು. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ಗೆ ಅದೇ ಸ್ಥಿತಿ ಬರಲಿದೆ. ಕಾಂಗ್ರೆಸ್ ನಲ್ಲಿ ಮೊದಲು ಪಾರ್ಟ್ ಟೈಂ ಲೀಡರ್ ಗಳು ಇದ್ದರು. ಈಗ ಆ ಪಾರ್ಟಿಯೇ ಪಾರ್ಟ್ ಟೈಂ ಪಾರ್ಟಿ ಆಗಲಿದೆ. ಪಂಚರಾಜ್ಯಗಳ ಫಲಿತಾಂಶ ನೋಡಿ ರಾಜ್ಯದ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ. ಆದರೂ ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದಾರೆ ಅದು ಎಂದಿಗೂ ಸಾಧ್ಯವಿಲ್ಲ ಅಂತ ಸಚಿವ ಶ್ರೀರಾಮುಲು ಹೇಳಿದ್ದಾರೆ. ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದ್ದು, ರಾಜ್ಯದಲ್ಲಿ ಕಾಂಗ್ರೆಸ್​ಗೆ ಸೋಲು ಪಕ್ಕಾ ಅಂತ ಶ್ರೀರಾಮುಲು ಹೇಳಿದ್ದಾರೆ

ಇದನ್ನೂ ಓದಿ: ಯಾವುದೇ ಮೈತ್ರಿ ಇಲ್ಲ; ಪಕ್ಷ ಉಳಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ; HD Devegowda

‘ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸ್ಪರ್ಧೆ’

ಅಸೆಂಬ್ಲಿ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಶ್ರೀರಾಮುಲು, ಜನಾರ್ದನ ರೆಡ್ಡಿ ವಿಚಾರದಲ್ಲಿ ಪಕ್ಷ ಖಂಡಿತಾ ತೀರ್ಮಾನ ಕೈಗೊಳ್ಳುತ್ತೆ. ಅವರು ಯಾವತ್ತು ರಾಜಕಾರಣಕ್ಕೆ ಬರಬೇಕೆಂದು ಬಂದವರಲ್ಲ. ಅವರ ಸ್ಪರ್ಧೆ ಕುರಿತಂತೆ ಪಕ್ಷ ತೀರ್ಮಾನ ಮಾಡುತ್ತೆ ಎಂದ್ರು
Published by:Pavana HS
First published: