ಸಹಕಾರ ಸಂಘ ಮಾಡಿ ಸಾಲ ನೀಡುವುದಾಗಿ ಹೇಳಿ 15 ಲಕ್ಷ ರೂಪಾಯಿ ವಂಚನೆ ಆರೋಪ

ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗು ಎಸ್ ಪಿ ಕ್ಷಮಾ ಮಿಶ್ರಾ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ಹೇಳಿ ಮೋಸ ಮಾಡಿರುವ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಿದ್ದರೂ, ಜನರು ಮೋಸ ಹೋಗುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸುವ ಕೆಲಸವೂ ಆಗುತ್ತಿದೆ ಎಂದಿದ್ದಾರೆ.

ಹಣ ಕಳೆದುಕೊಂಡವರು.

ಹಣ ಕಳೆದುಕೊಂಡವರು.

  • Share this:
ಕೊಡಗು : ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ಹೇಳಿ ಮೋಸ ಮಾಡುವ ಪ್ರಕರಣಗಳು ಹೊಸದೇನು ಅಲ್ಲ. ಆದರೂ ಜನ ಮಾತ್ರ ಅತಿಯಾಸೆಗೆ ಬಿದ್ದು ಮೋಸ ಹೋಗುವುದು ಮಾತ್ರ ತಪ್ಪಿಲ್ಲ. ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಇಂತಹದ್ದೇ ಪ್ರಕರಣ ನಡೆದಿದ್ದು, ಮೈಸೂರಿನ ರೆಹಮತ್‍ವುಲ್ಲಾ ಎನ್ನುವವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ನ್ಯೂ ಡೈಮಂಡ್ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿ ಶಾಖೆಯನ್ನು ಕುಶಾಲನಗರದಲ್ಲಿ ಆರಂಭಿಸುವುದಾಗಿ ಕಳೆದ ಐದು ತಿಂಗಳ ಹಿಂದೆ ಕಚೇರಿಯನ್ನು ಆರಂಭಿಸಿದ್ದರಂತೆ. ಬಳಿಕ ಸ್ಥಳೀಯ ಜನರನ್ನು ಸಿಬ್ಬಂದಿಯಾಗಿ ನೇಮಿಸಿಕೊಂಡು ಸುತ್ತಮುತ್ತಲ ಹಳ್ಳಿಗಳ 300 ಜನರಿಂದ ತಲಾ ಐದು ಸಾವಿರ ರೂಪಾಯಿಯಂತೆ 15 ಲಕ್ಷ ಹಣ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಐದು ಸಾವಿರ ಕಟ್ಟಿದರೆ, ಒಂದು ಲಕ್ಷ ಸಾಲ ಕೊಡುವುದಾಗಿ ಅದನ್ನು ಎರಡು ವರ್ಷಗಳಲ್ಲಿ ಸಾಲ ಪಡೆದವರು ತೀರಿಸಬೇಕೆಂದು ಷರತ್ತು ವಿಧಿಸಿದ್ದರಂತೆ. ಜನರು ಕೂಡ ಪ್ರತೀ ತಿಂಗಳು ಕಟ್ಟುತ್ತಲೇ ಸಾಲ ತೀರಿಸಿಕೊಳ್ಳಬಹುದು ಎಂಬ ಆಸೆಯಿಂದ ಜನರು ಐದು ಸಾವಿರ ಕಟ್ಟಿದ್ದಾರೆ. ಐದು ಸಾವಿರ ಕಟ್ಟಿ ಮೂರು ತಿಂಗಳಾದರೂ ಸಂಸ್ಥೆಯೂ ಸಾಲ ನೀಡದಿದ್ದಾಗ ಜನರು ಕಚೇರಿ ಸಿಬ್ಬಂದಿಯಾದ ನಳಿನಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನರ ಕಾಟ ತಡೆಯಲಾರದೆ ನಳಿನಿ ರೆಹಮತ್ ವುಲ್ಲಾನಿಗೆ ಕರೆಮಾಡಿ ಕಚೇರಿಗೆ ಬಂದು ಜನರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಎಷ್ಟು ಒತ್ತಾಯಿಸಿದರು ರೆಹಮತ್ ವುಲ್ಲಾ ಕಚೇರಿಗೆ ಬರದಿದ್ದಾಗ ಅನುಮಾನಗೊಂಡ ಕುಶಾಲನಗರ ಶಾಖೆಯ ಸಿಬ್ಬಂದಿ ನಳಿನಿ ಬಾಗೇಪಲ್ಲಿಗೆ ಹೋಗಿ ವಿಚಾರಿಸಿದ್ದಾರೆ. ಆದರೆ ಅಲ್ಲಿ ನ್ಯೂ ಡೈಮಂಡ್ ಕೋ ಆಪರೇಟಿವ್ ಸೊಸೈಟಿ ಶಾಖೆ ಕೊರೋನಾದಿಂದ ಲಾಕ್‍ಡೌನ್ ಆದ ಬಳಿಕ ಮುಚ್ಚಿ ಹೋಗಿರುವುದು ಬೆಳಕಿಗೆ ಬಂದಿದೆ.

ರೆಹಮತ್‍ವುಲ್ಲಾ


ಇದನ್ನು ಓದಿ: ಗುರುವಾರ ಖಾತೆ ಹಂಚಿಕೆ ಪಟ್ಟಿ ಪ್ರಕಟ; ಅತೃಪ್ತ ಶಾಸಕರ ಅಸಮಾಧಾನ ಶಮನಕ್ಕೆ ಸಿಎಂ ಕಸರತ್ತು

ವಿಷಯ ತಿಳಿದ ನಳಿನಿ ಮತ್ತು ಹಣ ಕಟ್ಟಿದ್ದ ನೂರಾರು ಜನರು ರೆಹಮತ್ತ್ ವುಲ್ಲಾ ಅವರಿಗೆ ಹತ್ತಾರು ಬಾರಿ ಫೋನ್ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಗದೆ ಹೋದಾಗ ಜನರಿಗೆ ತಾವು ಮೋಸ ಹೋಗಿರುವುದಾಗಿ ಗೊತ್ತಾಗಿದೆ. ಹೀಗಾಗಿ ಕಟ್ಟಿದ್ದ ಹಣವನ್ನು ವಾಪಸ್ ನೀಡದೆ, ಅತ್ತ ಸಾಲವನ್ನು ಕೊಡದೆ ಮೋಸ ಮಾಡುತ್ತಿರುವುದಾಗಿ ಕೊಡಗು ಎಸ್ ಪಿ ಕಚೇರಿಗೆ ನಳಿನಿ ದೂರು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ರೆಹಮತ್ ವುಲ್ಲಾ ನಾರಾಯಣ ಹೃದಯಾಲಯ ಬೆಂಗಳೂರು ಮತ್ತು ಮೈಸೂರು ಆಸ್ಪತ್ರೆಗಳಲ್ಲಿ ರಿಸೆಷ್ಪನಿಸ್ಟ್ ಕೆಲಸ ಕೊಡಿಸುವುದಾಗಿ ಮೂರು ಲಕ್ಷ ಪಡೆದು ಮೋಸ ಮಾಡಿರುವುದಾಗಿಯೂ ಹಾಸನದ ಮೂಲದ ಲತಾ ಎಂಬ ಮಹಿಳೆಯು ಆರೋಪ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗು ಎಸ್ ಪಿ ಕ್ಷಮಾ ಮಿಶ್ರಾ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ಹೇಳಿ ಮೋಸ ಮಾಡಿರುವ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಿದ್ದರೂ, ಜನರು ಮೋಸ ಹೋಗುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸುವ ಕೆಲಸವೂ ಆಗುತ್ತಿದೆ ಎಂದಿದ್ದಾರೆ.
Published by:HR Ramesh
First published: