Crime News: ಮೊಮ್ಮಕ್ಕಳು ಆಡಿಸುವ ವಯಸ್ಸಲ್ಲಿ ಎರಡನೇ ಮದುವೆ; ಆಸ್ತಿ ವಿಚಾರದಲ್ಲಿ ಜಗಳ, ತಂದೆಯನ್ನೇ ಕೊಂದ ಮಕ್ಕಳು!

ಯಲ್ಲಪ್ಪ ಮನೆಯಿಂದ ಹೊರಬರೋದನ್ನ ಕಾದು ಕುಳಿತಿದ್ದ ಆತನ ಮಕ್ಕಳಾದ ಚಂದ್ರಪ್ಪ, ಸಿದ್ದಪ್ಪ ಹಾಗೂ ಹಾಲಪ್ಪ ತಂದೆ ಎಲ್ಲಪ್ಪನನ್ನು ನಡು ದಾರಿಯಲ್ಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾಗಿ ಆರೋಪಿಸಿ ಯಲ್ಲಪ್ಪನ ಎರಡನೇ ಹೆಂಡತಿ ಬಸವ್ವ ರಾಯಭಾಗ ಠಾಣೆ ಮೆಟ್ಟಿಲೇರಿದ್ದಾಳೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಳಗಾವಿ: ಆತನದ್ದು ಮೊಮ್ಮಕ್ಕಳನ್ನ ಆಡಿಸುವ ವಯಸ್ಸು ಆದರೂ ಸಹ ಆತ ಇರುವ ಪತ್ನಿ ನಾಲ್ವರು ಮಕ್ಕಳನ್ನ ಬಿಟ್ಟು ಬೇರೆ ಮದುವೆಯಾಗಿದ್ದ. ಎರಡನೇ ಪತ್ನಿಗೂ ಸಹ ಒಂದು ಮಗುವಾಗಿದ್ದರಿಂದ ಆಸ್ತಿಲಿ ಪಾಲುದಾರಿಕೆ ವಿಷಯಕ್ಕೆ ಮೊದಲ ಹೆಂಡತಿ ಮಕ್ಕಳಿಗೂ ಅಪ್ಪನಿಗೂ ಜಗಳವಾಗಿತ್ತು. ಆದರೆ, ಅದು ಕೇವಲ ಜಗಳವಾಗಿರದೆ ಆದ ಅಚಾತುರ್ಯದಲ್ಲಿ ತಂದೆ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ದುಡ್ಡು, ಆಸ್ತಿ, ಎಂಥವರನ್ನೂ ಸಹ ಚೇಂಜ್ ಮಾಡಿಬಿಡುತ್ತೆ ಅನ್ನೋದಕ್ಕೆ ನಾವು ಇವತ್ತು ನಿಮಗೆ ಹೇಳ್ತಿರೋ ಈ ಸ್ಟೋರಿನೇ ಸಾಕ್ಷಿ. ಅಂತ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕಣವಾಡಿ ಗ್ರಾಮದ ನಿವಾಸಿಯಾದ ಯಲ್ಲಪ್ಪ ಹರಕೆ ಕಳೆದ 30 ವರ್ಷದ ಹಿಂದೆ ಮದುವೆಯಾಗಿದ್ದ. ಒಳ್ಳೆಯ ಸಂಸಾರವೂ ಇತ್ತು. ಇವರಿಬ್ಬರ ಸಂಸಾರದ ಫಲವಾಗಿ ನಾಲ್ವರು  ಮಕ್ಕಳೂ ಸಹ ಜನಿಸಿದ್ದರು.

ಆದರೆ, ಈಗ ಅದೇ ಮಕ್ಕಳು ತಂದೆಯ ಪಾಲಿಗೆ ಯಮಕಿಂಕರರಾಗಿದ್ದು ತಂದೆಯನ್ನ ಆಸ್ತಿ ವಿಚಾರವಾಗಿ ಹೊಡೆದು ಕೊಲೆ ಮಾಡಿದ್ದಾರೆ. ಪಿತ್ರಾರ್ಜಿತವಾಗಿ ಯಲ್ಲಪ್ಪ ಗ್ರಾಮದಲ್ಲಿ 5 ಎಕರೆ ಜಮೀನು ಹೊಂದಿದ್ದ. ಮೊದಲ ಹೆಂಡತಿ ಬಾಗವ್ವಳ ಮಕ್ಕಳಾದ ಚಂದ್ರಪ್ಪ, ಸಿದ್ದಪ್ಪ, ಮತ್ತು ಹಾಲಪ್ಪ ಬೆಳೆದು ದೊಡ್ಡವರಾಗಿ ಮೂವರು ಹೆಂಡತಿ ಮಕ್ಕಳ ಜತೆ ಚನ್ನಾಗೇ ಇದ್ರು. ಮೊಮ್ಮಕ್ಕಳನ್ನು ಆಡಿಸಿಕೊಂಡು ಕಾಲ ಕಳೀಬೇಕಿದ್ದ ಯಲ್ಲಪ್ಪ ಬಸವ್ವ ಎನ್ನುವ ಇನ್ನೊಂದು ಮಹಿಳೆಯನ್ನು ಮದುವೆ ಮಾಡಿಕೊಂಡಿದ್ದ.

ಆಕೆಗೂ ಸಹ ಒಂದು ಗಂಡು ಮಗು ಕರುಣಿಸಿದ್ದ. ಯಲ್ಲಪ್ಪನಿಗಿದ್ದ 5 ಎಕರೆ ಜಮೀನು ಸಂಪೂರ್ಣವಾಗಿ ನಾನು ಎರಡನೇ ಹೆಂಡತಿ ಮತ್ತು ಮಗುವಿನ ಹೆಸರಿಗೆ ಮಾಡಿ ಬಿಡ್ತಿನಿ ಅಂತ ಅದನ್ನ ಬೇರೆಯವರ ಹೆಸರಿಗೆ ನೊಂದಣಿಯನ್ನೂ ಸಹ  ಮಾಡಿಕೊಟ್ಟಿದ್ದು, ಇದು ಮೊದಲ ಹೆಂಡತಿ ಮಕ್ಕಳ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

ಇದನ್ನೂ ಓದಿ: ಪಕ್ಷಾಂತರಿಗಳಿಗೆ ಟಿಕೆಟ್, ಬಂಗಾಳ ಬಿಜೆಪಿಯಲ್ಲಿ ಭುಗಿಲೆದ್ದ ಆಕ್ರೋಶ; ನಾಯಕರನ್ನು ಕೂಡಿ ಹಾಕಿದ ಕಾರ್ಯಕರ್ತರು!

ಹೀಗಾಗಿ ಯಲ್ಲಪ್ಪ ಮನೆಯಿಂದ ಹೊರಬರೋದನ್ನ ಕಾದು ಕುಳಿತಿದ್ದ ಆತನ ಮಕ್ಕಳಾದ ಚಂದ್ರಪ್ಪ, ಸಿದ್ದಪ್ಪ ಹಾಗೂ ಹಾಲಪ್ಪ ತಂದೆ ಎಲ್ಲಪ್ಪನನ್ನು ನಡು ದಾರಿಯಲ್ಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾಗಿ ಆರೋಪಿಸಿ ಯಲ್ಲಪ್ಪನ ಎರಡನೇ ಹೆಂಡತಿ ಬಸವ್ವ ರಾಯಭಾಗ ಠಾಣೆ ಮೆಟ್ಟಿಲೇರಿದ್ದಾಳೆ.

ಮೊದಲ‌ ಹೆಂಡತಿ ಹಾಗೂ ಆತನ ಮಕ್ಕಳಿಂದ ಯಲ್ಲಪ್ಪನಿಗೆ ಪದೇ ಪದೇ ತೊಂದರೆ ಆಗ್ತಿತ್ತು. ಆತನಿಗೆ ಸರಿಯಾಗಿ ಊಟವನ್ನು ಅಹ ಅವರು ಹಾಕ್ತಿರಲಿಲ್ಲ. ಹೀಗಾಗಿ ಆತ ನನ್ನ ಮದುವೆ ಆಗಿದ್ದ ಅಸ್ತಿ ವಿಚಾರಕ್ಕೂ ಸಹ ಅವರಿಂದ ಪದೇ ಪದೇ ತೊಂದರೆ ಆಗ್ತಿತ್ತು ಹೀಗಾಗಿ ಅವರೇ ಕೊಲೆ ಮಾಡಿದ್ದಾರೆ ಎಂದು ಎರಡನೇ ಪತ್ನಿಯ ದೂರಿನನ್ವಯ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದ್ದಾರೆ. ಆದರೆ ಆಸ್ತಿ ವಿಚಾರವಾಗಿ ತಂದೆ ಮಕ್ಕಳ ನಡುವೆಯೇ ದ್ವೇಷದ ಬಿರುಗಾಳಿ ಕೊಲೆಯಲ್ಲಿ ಅಂತ್ಯವಾಗಿದ್ದು ಮಾತ್ರ ದುರಂತ..‌‌
Published by:MAshok Kumar
First published: