ಉಕ್ಕಿ ಹರಿಯುತ್ತಿರುವ ತುಂಗಭದ್ರಾ ; ಹಮ್ಮಿಗಿ ಬ್ಯಾರೇಜ್ ಹಿನ್ನೀರಿನಲ್ಲಿ ಪಕ್ಷಿಗಳು ತತ್ತರ

ಗುಬ್ಬಿ ಸೇರಿದಂತೆ ಹಲವು ಜಾತಿಯ ಪಕ್ಷಗಳು ಗೂಡು ಕಟ್ಟಿಕೊಂಡು ಸಂತಾನೋತ್ಪತ್ತಿ ಮಾಡುತ್ತಿದ್ದವು. ಆದರೆ, ತುಂಗಭದ್ರಾ ನದಿಯ ಹಿನ್ನೀರಿನ ಪ್ರವಾಹಕ್ಕೆ ಸಿಲುಕಿ ಪಕ್ಷಿಗಳ ಗೂಡುಗಳು ಕೊಚ್ಚಿಕೊಂಡು ಹೋಗಿವೆ

ಪಕ್ಷಿಗಳು

ಪಕ್ಷಿಗಳು

  • Share this:
ಗದಗ(ಆಗಸ್ಟ್.14): ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಗದಗ ಜಿಲ್ಲೆಯಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ಹಿನ್ನೀರಿನ ವಿಶಾಲವಾದ ಪ್ರದೇಶದಲ್ಲಿ ಪಕ್ಷಿಗಳ ಸಮೂಹ ವಾಸ್ತವ್ಯ ಮಾಡುತ್ತಿದ್ದು. ಆದರೆ, ತುಂಗಭದ್ರೆಯ ಆರ್ಭಟಕ್ಕೆ ಸಿಲುಕಿ ನಲುಗಿ ಹೋಗಿವೆ.

ವಿಶಾಲವಾದ ಪ್ರದೇಶದಲ್ಲಿ ಗುಬ್ಬಿ ಸೇರಿದಂತೆ ಹಲವು ಜಾತಿಯ ಪಕ್ಷಗಳು ಗೂಡು ಕಟ್ಟಿಕೊಂಡು ಸಂತಾನೋತ್ಪತ್ತಿ ಮಾಡುತ್ತಿದ್ದವು. ಆದರೆ, ತುಂಗಭದ್ರಾ ನದಿಯ ಹಿನ್ನೀರಿನ ಪ್ರವಾಹಕ್ಕೆ ಸಿಲುಕಿ ಪಕ್ಷಿಗಳ ಗೂಡುಗಳು ಕೊಚ್ಚಿಕೊಂಡು ಹೋಗಿವೆ. ಅಳಿದು ಉಳಿದು ಪಕ್ಷಿಗಳು ಪುನಃ ಗೂಡು ಕಟ್ಟಿಕೊಂಡು ಹೊಸ ಜೀವನ ನಡೆಸುತ್ತಿವೆ. ಆದರೆ, ಮರಿಗಳನ್ನು ಕಳೆದುಕೊಂಡು ಕೆಲವು ಪಕ್ಷಿಗಳ ಸಂಕಷ್ಟ ಹೇಳತ್ತಿರದ್ದಾಗಿದೆ. ನದಿ ಉಕ್ಕಿ ಹರಿಯುತ್ತಿರುವದರಿಂದ ಸಾಕಷ್ಟು ಪ್ರಮಾಣದ ಬೆಳೆ ನಾಶವಾಗಿದ್ದು, ಹಲವು ಗ್ರಾಮಗಳಿಗೆ ಪ್ರವಾಹದ ಆತಂಕ ಆರಂಭವಾಗಿದೆ. ಪ್ರವಾಹಕ್ಕೆ ಮುಂಚೆ ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ಪಕ್ಷಿಗಳ ಸಮೂಹಕ್ಕೆ ಪ್ರವಾಹದ ಬಿಸಿ ತಟ್ಟಿದೆ.

ಹಮ್ಮಿಗಿ ಬ್ಯಾರೇಜ್ ನ ಹಿಂಭಾಗದಲ್ಲಿ ಅಪಾರ ಪ್ರಮಾಣದ ವಿಶಾಲವಾದ ಭೂ ಪ್ರದೇಶದಲ್ಲಿ ತಮ್ಮ ಗೂಡು ಕಟ್ಟಿಕೊಂಡು ಸ್ವತಂತ್ರವಾದ ಜೀವನ ನಡೆಸುತ್ತಿದ ಹಕ್ಕಿಗಳಿಗೆ ಪ್ರವಾಹ ಎಂಬ ಬರಸಿಡಿಲು ಬಡೆದ್ದು ಬಿಟ್ಟಿದೆ‌. ವಿವಿಧ ಜಾತಿಯ ಪಕ್ಷಿಗಳು ಇಲ್ಲಿ ವಾಸ ಮಾಡುತ್ತಿವೆ. ಅವುಗಳಲ್ಲಿ ಬೇಕಾಗುವ ಆಹಾರ, ನೀರು ಸಿಗುತ್ತಿರುವುದರಿಂದ ಹಕ್ಕಿ ಮತ್ತೆ ಅಲ್ಲಿಯೇ ಗೂಡು ಕಟ್ಟುತ್ತಿದೆ.ಆ ದೃಶ್ಯ ನೋಡು ಎರಡು ಕಣ್ಣುಗಳು ಸಾಲುವುದಿಲ್ಲ. ಯಾಕಂದ್ರೆ ಹಕ್ಕಿಗಳು ತರುತ್ತಿರುವ ಹುಲ್ಲು ಕಡಿಯಿಂದ ಹೇಗೆ ಗೂಡುಗಳನ್ನು ಕಟ್ಟುತ್ತೇ ಕ್ಯಾಮೆರಾದಲ್ಲಿ ಸೇರೆ ಹಿಡಿಯಲಾಗಿದೆ. ಆ ಮೂಕ ಪ್ರಾಣಿಗಳು ತಮ್ಮ ವಾಸಸ್ಥಳ ಹೇಗೆ ನಿರ್ಮಾಣ ಮಾಡಿಕೊಳ್ಳುತ್ತಿವೆ. ಈ ಗುಬ್ಬಚ್ಚಿಗಳ ಚಲನ ವಲನ ನೋಡಿ ಒಂದು ಸಲ ಎಲ್ಲರು ಸಹ ಭಾವುಕರಾಗುತ್ತೇವೆ. ಗಾಳಿ, ಮಳೆ ಲೆಕ್ಕಿಸದೆ ಇಲ್ಲಿಯ ಪಕ್ಷಿಗಳು ಗೋಳಾಡುತ್ತಿವೆ.

ಇದನ್ನೂ ಓದಿ :  ಬೆಳಗಾವಿಯಲ್ಲಿ ಈ ವರ್ಷ ಅದ್ಧೂರಿ ಗಣೇಶೋತ್ಸವ ಇಲ್ಲ ; ಸರ್ಕಾರದ ಮಾರ್ಗಸೂಚಿ ಅನ್ವಯ ಆಚರಣೆ..!

ಹಮ್ಮಿಗಿ ಬ್ಯಾರೇಜ್ 3.12 ಟಿಎಂಸಿ ನೀರಿನ ಸಾಮಾರ್ಥ್ಯವನ್ನು ಹೊಂದಿದ್ದು, ಆದರೆ, 1.98 ಟಿಎಂಸಿ ನೀರು ಮಾತ್ರ ಶೇಖರಣೆ ಮಾಡಲಾಗುತ್ತದೆ. ಹೆಚ್ಚಿನ ಪ್ರಮಾಣದ ನೀರು ಶೇಖರಣೆ ಮಾಡಿದ್ರೆ ಹಲವು ಗ್ರಾಮಗಳು ಜಲಾವೃತವಾಗುತ್ತವೆ. ತುಂಗಭದ್ರಾ ನದಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಹಮ್ಮಿಗಿ ಬ್ಯಾರೇಜ್ ಸಂಪೂರ್ಣವಾಗಿ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ದಾರೆ. ಅಷ್ಟರಲ್ಲಿ ಪಕ್ಷಿಗಳ ಸಮೂಹಕ್ಕೆ ಬಿಸಿ ಮುಟ್ಟಿದೆ. ಈ ಭಾಗದಲ್ಲಿ ನೂರಾರು ಜಾತಿ ಹಲವು ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸ್ತವ್ಯ ಮಾಡುತ್ತಿದ್ದವು.ಬ್ಯಾರೇಜ್ ಹಿನ್ನೀರಿನಲ್ಲಿ ಮೀನು, ಕಿಟಗಳನ್ನು ತಿಂದು ಬದುಕು ಸಾಗಿಸುತ್ತಿದ್ದ ಪಕ್ಷಿಗಳು ತಮ್ಮ ಮುದ್ದಾದ ಮರಿಗಳನ್ನು ಕಳೆದುಕೊಂಡು ಅನಾಥವಾಗಿವೆ. ಅಳಿದು ಉಳಿದು ಕೆಲವು ಪಕ್ಷಿಗಳು ಪುನಃ ಗೂಡುಗಳನ್ನು ಕಟ್ಟಿಕೊಂಡು ಹೋಸ ಜೀವನ ನಡೆಸಲು ಸಚ್ಚಾಗುತ್ತಿವೆ.
ಉಕ್ಕಿ ಹರಿದ ತುಂಗಭದ್ರಾ ನದಿಯಿಂದ ಸಾಕಷ್ಟು ಬೆಳೆ ನಾಶವಾಗಿದೆ. ಹಲವು ಗ್ರಾಮಗಳು ಸಹ ಪ್ರವಾಹದ ಭೀತಿ ಎದುರಿಸುತ್ತಿವೆ. ಪ್ರಾಣಿ ಪಕ್ಷಿಗಳಿಗೂ ಸಹ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿವೆ.
Published by:G Hareeshkumar
First published: