ಕಾಂಗ್ರೆಸ್ ಮೇಲೆ ದೂರು ಹೊರಿಸುವ ಪ್ರಯತ್ನ ಅತ್ಯಂತ ವಿವೇಕಹೀನ; ಶೆಟ್ಟರ್ ಹೇಳಿಕೆಗೆ ಹೆಚ್.ಕೆ.ಪಾಟೀಲ ತಿರುಗೇಟು

ಬಿಜೆಪಿ ಪಕ್ಷದಲ್ಲಿ ವೈ ಮನಸ್ಸುಗಳು ಹೆಚ್ಚಾಗಿವೆ. ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಬೇಕೋ, ಉಳಿಸಬೇಕೋ ಎಂಬ ಗೊಂದಲದಲ್ಲಿದ್ದಾರೆ. ಕಾಂಗ್ರೆಸ್ ಮೇಲೆ ದೂರು ಹೊರಿಸುವ ಪ್ರಯತ್ನ ಅತ್ಯಂತ ವಿವೇಕಹೀನವಾದದ್ದು ಎಂದು ಜಗದೀಶ ಶೆಟ್ಟರ್ ಅವರ ವಿರುದ್ಧ ಶಾಸಕ ಹೆಚ್.ಕೆ. ಪಾಟೀಲ್ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಹೆಚ್ ಕೆ ಪಾಟೀಲ​​​

ಮಾಜಿ ಸಚಿವ ಹೆಚ್ ಕೆ ಪಾಟೀಲ​​​

  • Share this:
ಗದಗ: ಬೆಂಗಳೂರಿನಲ್ಲಿ ನಡೆದ ಗಲಾಟೆ ಹಿಂದೆ ಕಾಂಗ್ರೆಸ್ ನವರ ಕುಮ್ಮಕ್ಕು ಇದೆ ಎಂಬ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆಗೆ ಶಾಸಕ ಹೆಚ್ ಕೆ ಪಾಟೀಲ್ ಗದಗದಲ್ಲಿ ಇಂದು ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್​.ಕೆ.ಪಾಟೀಲ್, ಜಗದೀಶ್ ಶೆಟ್ಟರ್ ಅವರ ಹೇಳಿಕೆ ಬೇಜವಾಬ್ದಾರಿಯಾಗಿದೆ. ಅವರು ಹಿರಿಯ ಸಚಿವರು. ಮಾಜಿ ಮುಖ್ಯಮಂತ್ರಿಗಳು. ಅವರು ಹೇಗೆ ಇಂತಹ ಅಸಂಬದ್ಧ ಹೇಳಿಕೆ ನೀಡಿದರು ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ನೀವು ಸರ್ಕಾರದಲ್ಲಿ ಇರುವಂತಹವರು, ತನಿಖೆಗೆ ವ್ಯವಸ್ಥೆ ಮಾಡಬೇಕು. ಹೈಕೋರ್ಟ್ ಸಿಟ್ಟಿಂಗ್ ಜಡ್ಙ್​ಗಳಿಂದ ತನಿಖೆ ಮಾಡಿಸಿ. ಇಲ್ಲಿ ಯಾರು ಕುಮ್ಮಕ್ಕು ಕೊಟ್ಟಿದ್ದಾರೆ, ಯಾರು ಕಾರಣ ಅವರ ಮೇಲೆ ಉಗ್ರವಾದ ಕ್ರಮ ತೆಗೆದುಕೊಳ್ಳಿ. ಕಾಂಗ್ರೆಸ್ ಶಾಸಕನೇ ಹೊಡಿಸಿಕೊಳ್ಳುವಾಗ ಅದು ಕಾಂಗ್ರೆಸ್​ ಕುಮ್ಮಕ್ಕು ಅಂತಾ ಹೇಳೋದು ಹೇಗೆ. ಈ ರೀತಿ ಬಾಲಿಷ ಹೇಳಿಕೆ ನೀಡಬಾರದು. ಕಾಂಗ್ರೆಸ್ ಪಕ್ಷ ಇಂತಹ ಯಾವುದೇ ಘಟನೆಗಳಿಗೆ ಕೈ ಹಾಕುವುದೇ ಇಲ್ಲ. ನಾವು ಆ ರೀತಿಯ ಹೆಜ್ಜೆಗಳನ್ನು ತುಳಿದವರಲ್ಲ. ಕಾಂಗ್ರೆಸ್ ಮೇಲೆ ಈ ರೀತಿ ಆಪಾದನೆ ಮಾಡೋದು ಸರಿಯಲ್ಲಾ ಎಂದು ಚಾಟಿ ಬೀಸಿದರು.

ಇದನ್ನು ಓದಿ: ಕಾವಲ್​ ಭೈರಸಂದ್ರ ಗಲಭೆಗೆ ಬಿಜೆಪಿಯವರ ಒಳತಂತ್ರವೇ ಕಾರಣ; ಡಿ.ಕೆ. ಶಿವಕುಮಾರ್ ಗಂಭೀರ ಆರೋಪ

ಎಲ್ಲ ವಿಷಯದಲ್ಲೂ ಸರ್ಕಾರ ವಿಫಲವಾಗಿದೆ. ಕೊರೋನಾ ನಿರ್ವಹಣೆಯಲ್ಲೂ ವೈಫಲವಾಗಿದೆ. ಬಿಜೆಪಿ ಪಕ್ಷದಲ್ಲಿ ವೈ ಮನಸ್ಸುಗಳು ಹೆಚ್ಚಾಗಿವೆ. ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಬೇಕೋ, ಉಳಿಸಬೇಕೋ ಎಂಬ ಗೊಂದಲದಲ್ಲಿದ್ದಾರೆ. ಕಾಂಗ್ರೆಸ್ ಮೇಲೆ ದೂರು ಹೊರಿಸುವ ಪ್ರಯತ್ನ ಅತ್ಯಂತ ವಿವೇಕಹೀನವಾದದ್ದು ಎಂದು ಜಗದೀಶ ಶೆಟ್ಟರ್ ಅವರ ವಿರುದ್ಧ ಶಾಸಕ ಹೆಚ್.ಕೆ. ಪಾಟೀಲ್ ವಾಗ್ದಾಳಿ ನಡೆಸಿದರು.
Published by:HR Ramesh
First published: