• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Murder: ಗಂಡ-ಹೆಂಡತಿ ಜಗಳಕ್ಕೆ ಬಲಿಯಾದ ಗ್ರಾಮದ ಮುಖಂಡ, ಸಂಧಾನ ಮಾಡಲು ಹೋಗಿದ್ದೆ ತಪ್ಪಾಯ್ತಾ?

Murder: ಗಂಡ-ಹೆಂಡತಿ ಜಗಳಕ್ಕೆ ಬಲಿಯಾದ ಗ್ರಾಮದ ಮುಖಂಡ, ಸಂಧಾನ ಮಾಡಲು ಹೋಗಿದ್ದೆ ತಪ್ಪಾಯ್ತಾ?

ಕೊಲೆಯಾದ ಮುಖಂಡ

ಕೊಲೆಯಾದ ಮುಖಂಡ

ಗಂಡ-ಹೆಂಡತಿ ಮಧ್ಯೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಪಂಚಾಯ್ತಿ ಮಾಡಲು    ಹೋದ ಮುಖಂಡನೊಬ್ಬನನ್ನ ದಾರುಣವಾಗಿ ಕೊಲೆ ಮಾಡಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ನಡೆದಿದೆ

  • Share this:

ಗದಗ (ಮಾ.5): ಗಂಡ-ಹೆಂಡತಿ (Husband-Wife ) ಜಗಳ ಉಂಡು ಮಲಗೋತನಕ ಅಂತಾರೆ. ಆದ್ರೆ ಇಲ್ಲಿ ಜಗಳ ಬಗೆಹರೆಯೋದಿರಲಿ. ಗಂಡ ಹೆಂಡಿರ ಜಗಳದ ಮಧ್ಯೆ ಕೂಸು ಬಡವಾಯ್ತು ಅನ್ನೋ ಹಾಗೆ ಮೂರನೆ ವ್ಯಕ್ತಿ ಬಲಿಯಾಗಿದ್ದಾನೆ.  ಜಗಳ ಮಾಡಿಕೊಂಡಿದ್ದ ಗಂಡ-ಹೆಂಡತಿಯನ್ನು ಬಗೆಹರಿಸಲು ಹೋದ ಮುಖಂಡನ (Leader) ಹತ್ಯೆ ಮಾಡಿರೋ ಘಟನೆ. ಊರು ಬಿಟ್ಟು ಹೋದ ಹೆಂಡತಿಯನ್ನ ಮರಳಿ ಕರಿಸಿ ನನಗೆ ನ್ಯಾಯ ಕೊಡಸಿಲಿಲ್ಲ ಅಂತ ರಾಜಿ-ಪಂಚಾಯ್ತಿ (Compromise ) ಮಾಡೋ ಮುಖಂಡನನ್ನೇ ದಾರುಣವಾಗಿ ಹತ್ಯೆ ಮಾಡಿದ್ದಾನೆ. ಈ ಹತ್ಯೆ ಹಿಂದೆ ಇನ್ನೂ ಪ್ರಚೋದನೆ ಕೊಟ್ಟಿರೋ ಹಲವು ಮಂದಿ ಇದ್ದಾರೆ, ಅವರನ್ನೂ ಸಹ ಶಿಕ್ಷೆಗೊಳಪಡಿಸಬೇಕು ಅಂತ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಎಸ್ಪಿ ಆಫೀಸ್ ಮುಂದೆ ಧರಣಿ (Protest) ನಡೆಸಿದ್ದಾರೆ.


ರಾಜಿ ಪಂಚಾಯ್ತಿ ಮಾಡೋ ಮುಖಂಡನ ಹತ್ಯೆ


ಗಂಡ-ಹೆಂಡತಿ ಮಧ್ಯೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ ನ್ಯಾಯ ಹೇಳಲು    ಹೋದ ಮುಖಂಡನೊಬ್ಬನನ್ನ ದಾರುಣವಾಗಿ ಕೊಲೆ ಮಾಡಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ನಡೆದಿದೆ. ರಾಜೀ ಪಂಚಾಯತಿ ಮಾಡಿ ನನಗೆ ನ್ಯಾಯ ಒದಗಿಸಿ ಕೊಡಲಿಲ್ಲ  ಅಂತ ಕೋಪಗೊಂಡ ವಿಷ್ಣು ರೂಪಲಪ್ಪ ಪವಾರ ಎಂಬಾತ  ಕೊಲೆ ಮಾಡಿದ್ದಾನೆ. ಅತ್ತಿಕಟ್ಟಿ ತಾಂಡಾದ ಸೋಮಲಪ್ಪ ನಾಯಕ್ (50) ಎಂಬ ವ್ಯಕ್ತಿಯ ದಾರುಣವಾಗಿ ಕೊಲೆಗೀಡಾದ ಮುಖಂಡ. ಹೊಟ್ಟೆ, ಎದೆ ಹಾಗೂ ಗಂಟಲು ಭಾಗಕ್ಕೆ ಬಲವಾಗಿ ಚಾಕು ಇರಿದ ಪರಿಣಾಮ ಸೋಮಲಪ್ಪನನ್ನು ಗದಗ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ.


ತಾನೇ ಪೊಲೀಸರಿಗೆ ಶರಣಾದ ಆರೋಪಿ


ಕೊಲೆ ಮಾಡಿದ ಆರೋಪಿ ವಿಷ್ಣು ಪವಾರ್ ಸ್ವತಃ ತಾನೇ ಹೋಗಿ ಪೊಲೀಸರಿಗೆ ‌ಶರಣಾಗಿದ್ದಾನೆ. ಕಳೆದ ನಾಲ್ಕೈದು ವರ್ಷಗಳಿಂದ ವಿಷ್ಣು ಪವಾರ ಮತ್ತು ಆತನ ಹೆಂಡತಿ ಸುಮಿತ್ರಾ ಇಬ್ಬರ ಮಧ್ಯೆ ಜಗಳ ನಡೆದಿತ್ತು. ವಿಷ್ಣು ತನ್ನ ಹೆಂಡತಿಯ ಮೇಲೆ ಸಂಶಯ  ಪಡುತ್ತಿದ್ದನಂತೆ. ಸಂಶಯ ಸಂಸಾರವನ್ನೇ ಹಾಳು ಮಾಡಿದೆ. ಪತಿಯ ನಡೆಯಿಂದ ಬೇಸತ್ತಿದ್ದ ಸುಮಿತ್ರಾ ತಾಂಡಾ ಬಿಟ್ಟು ತವರು ಮನೆ ಸೇರಿದ್ದಾಳೆ. ನಾಲ್ಕು ಮಕ್ಕಳ ತುಂಬು ಸಂಸಾರ ಬಿಟ್ಟು ಸುಮಿತ್ರಾ ತವರು ಮನೆಯಲ್ಲೇ ಇದ್ದಳಂತೆ. ಇನ್ನು ರಾಜೀ ಪಂಚಾಯತಿ ಮಾಡಿ ಗಂಡ ಹೆಂಡತಿಯನ್ನು ಒಂದು ಮಾಡಲು ತಾಂಡಾದ ಮುಖಂಡರು ಮುಂದಾಗಿದ್ದರು.


ಇದನ್ನೂ ಓದಿ: Hubballi: ನಕಲಿ ಸಹಿ ಬಳಸಿ 35 ಲಕ್ಷ ಹಣ ದುರ್ಬಳಕೆ, ಬ್ಯಾಂಕ್ ಮ್ಯಾನೇಜರ್ ಸೇರಿ 8 ಜನರ ವಿರುದ್ಧ FIR


ಆದ್ರೆ, ಸುಮಿತ್ರಾ ಊರ ಜನರ ಮಾತು ಕೇಳದೆ ತವರು ಮನೆಯಲ್ಲೇ ಉಳಿದಿದ್ದಳು. ಇದರಿಂದ ತಾಂಡಾದ ಮುಖಂಡರು ಸರಿಯಾಗಿ ರಾಜೀ ಪಂಚಾಯತಿ ಮಾಡಿಲ್ಲವೆಂದು ವಿಷ್ಣು ಸಿಟ್ಟು ಮಾಡಿಕೊಂಡಿದ್ದನಂತೆ. ನಿನ್ನೆ ಗ್ರಾಮದ ಸೇವಲಾಲ್ ಉತ್ಸವದ ಕುರಿತು ಚರ್ಚಿಸಲು ಕಾರುಬಾರಿ, ನಾಯಕರುಗಳು ಸಭೆ ಸೇರಿದ್ದರು. ಈ ವೇಳೆ ಏಕಾಏಕಿ ಗಲಾಟೆ ಎಬ್ಬಿಸಿದ ವಿಷ್ಣು ಪವಾರ ತಾಂಡಾದ ನಾಯಕ ಸೋಮಲಪ್ಪನನ್ನು ಬರ್ಬರವಾಗಿ ಕೊಲೆ ಮಾಡಿ ಸ್ವತಃ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.


ಏಕಾಏಕಿ ಚಾಕುವಿನಿಂದ ಇರಿದು ಹತ್ಯೆ


ಇನ್ನು ನಿನ್ನೆ ದೇವಸ್ಥಾನದಲ್ಲಿ ಸೇವಾಲಾಲ್ ಉತ್ಸವ ಸಂಬಂಧ ಗ್ರಾಮಸ್ಥರು ಸೇರಿದ್ದರು. ಈ ವೇಳೆ ಮುಖಂಡ ಸೋಮಲಪ್ಪನನ್ನ ಒತ್ತಾಯದ ಮೂಲಕ ನಾಲ್ಕು ಜನ ಯುವಕರು ಸಭೆಗೆ ಕರೆತಂದಿದ್ದಾರೆ. ಈ ವೇಳೆ ಕೊಲೆ ಮಾಡಿದ ವಿಷ್ಣು ಬೇಕಂತಲೆ ಏಕಾಏಕಿ ಜಗಳಕ್ಕೆ ಇಳಿದಿದ್ದಾನೆ. ತನ್ನ ಗಂಡ ಹೆಂಡತಿ ಜಗಳದ ಕುರಿತು ತಕರಾರು ತೆಗೆದಿದ್ದಾನೆ. ಮೊದ ಮೊದಲು ಅಲ್ಲಿನ ಕೆಲವರು ಆತನ ಕೈಯಲ್ಲಿದ್ದ ಎರಡು ಚಾಕು ಕಸಿದುಕೊಂಡು ಜಗಳ ಬಿಡಿಸಿದ್ದಾರೆ.


ಕೊಲೆ ಮಾಡಿ ನೇರವಾಗಿ ಠಾಣೆಗೆ ಹೋದ ಆರೋಪಿ 


ಆದ್ರೆ ಮೂರನೆ ಬಾರಿಗೆ ಸಣ್ಣದೊಂದು ಚಾಕು ಯಾರಿಗೂ ಗೊತ್ತಾಗದಂತೆ ಮುಷ್ಟಿಯಲ್ಲಿ ಹಿಡಿದು ಗುದ್ದಿದ್ದಾನೆ. ಇದರಿಂದ ರಕ್ತಸಿಕ್ತವಾಗಿ ಸೋಮಲಪ್ಪ ಅಲ್ಲೇ ನೆಲದಲ್ಲಿ ನರಳಾಡಿದ್ದಾನೆ. ಚಾಕು ಚುಚ್ಚಿದ ಕೊಲೆ ಆರೋಪಿ ವಿಷ್ಣು ಅಲ್ಲಿಂದ ಪರಾರಿಯಾಗಿ ಮುಂಡರಗಿ ಪೊಲೀಸರಿಗೆ ಶರಣಾಗಿದ್ದಾನೆ. ಬಳಿಕ ತೀವ್ರ ಗಾಯಗೊಂಡಿದ್ದ ಸೋಮಲಪ್ಪನನ್ನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೊನೆಯುಸಿರೆಳೆದಿದ್ದಾನೆ ಇನ್ನು ಇದರ ಹಿಂದೆ ಇನ್ನೂ ಕೆಲವರು ಪ್ರಚದೋನೆ ನೀಡಿದ ಆರೋಪ ಕೇಳಿಬಂದಿದೆ. ಕರೆದುಕೊಂಡು ಬಂದಿದ್ದ ನಾಲ್ವರು ಕೊಲೆ ಮಾಡುವ ವೇಳೆ ಅಲ್ಲಿಂದ ಪರಾರಿಯಾಗಿದ್ದಾರೆ.  ಪಿತೂರಿಗಾರರ ಮೇಲೂ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಂತ ಎಸ್ಪಿ ಕಚೇರಿ ಬಳಿ ಪ್ರತಿಭಟನೆ ಮಾಡಿದ್ರು.


ಇದನ್ನೂ ಓದಿ: Red Corn: ರೋಗಬಾಧೆಯೇ ಇಲ್ಲದ ಕೆಂಪು ಜೋಳ ಎಲ್ಲಿ ಸಿಗುತ್ತೆ? 20 ವರ್ಷಗಳಿಂದ ಬೆಳೆಯುತ್ತಿದ್ದಾರೆ ಈ ರೈತ!


ಎಸ್ಪಿ ಕಚೇರಿ ಎದುರು ಗ್ರಾಮಸ್ಥರ ಪ್ರತಿಭಟನೆ

top videos


    ಇನ್ನು ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಕೊಲೆಯಾದ ಪಂಚಾಯ್ತಿ ಮುಖಂಡ ಸೋಮಲಪ್ಪನ ಕುಟುಂಬಸ್ಥರ ಜೊತೆಗೆ ಇಡೀ ತಾಂಡದ ಜನ ಬೆನ್ನಿಗೆ ನಿಂತಿದೆ. ಇನ್ನೂ ಕೆಲವು ಮುಖಂಡರ ಹತ್ಯೆ ಮಾಡುವ ಅನುಮಾನ ಇದೆ. ಹೀಗಾಗಿ ಇಂತಹ ಘಟನೆ ಮತ್ತೆ ಆಗಬಾರದು ಅಂತ ಊರಿನ ಜನ ಹೇಳ್ತಿದ್ದಾರೆ. ಒಟ್ಟಿನಲ್ಲಿ ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದಂತೆ ಅನ್ನೋ ಹಾಗೆ ಯಾರದ್ದೋ ಸಮಸ್ಯೆಗೆ ಇನ್ಯಾರದ್ದೋ ತಲೆದಂಡ ಆದಂತಾಗಿದೆ. ಗಂಡ ಹೆಂಡರ ಜಗಳ ನಡುವೆ ಊರ ಮುಖಂಡ ಬಲಿಯಾಗಿದ್ದು ಮಾತ್ರ ವಿಪರ್ಯಾಸ

    First published: